Weird Jobs: ಹಿಂಗೂ ಇರುತ್ತೆ ಕೆಲಸ….ಹಣ ಕೊಟ್ಟು ಮಕ್ಕಳನ್ನು ನೋಡಿಕೊಳ್ಬೇಕು!

By Suvarna News  |  First Published Mar 1, 2024, 2:50 PM IST

ಕೆಲಸ ಮಾಡಿದ್ಮೇಲೆ ಸಂಬಳ ಕೊಡ್ಬೇಕು. ಪುಕ್ಕಟ್ಟೆ ಕೆಲಸ ಮಾಡೋಕೆ ನಮಗೇನು ತಲೆಕೆಟ್ಟಿದ್ಯಾ ಅಂತಾ ನೀವು ಕೇಳ್ಬಹುದು. ಆದ್ರೆ ಇಲ್ಲೊಬ್ಬಳು ಅಂಥದ್ದೇ ಜಾಹೀರಾತು ನೀಡಿ ಸುದ್ದಿಯಾಗಿದ್ದಾಳೆ. ಕೆಲಸ ಕೊಡೊ ಆಕೆಗೆ ನೀವೇ ಹಣ ನೀಡ್ಬೇಕು. 
 


ನೌಕರಿ ಮಾಡೋದೆ ಸಂಬಳಕ್ಕಾಗಿ. ತಿಂಗಳ ಮೊದಲ ದಿನ ಎಲ್ಲರೂ ಸಂಬಳಕ್ಕೆ ಕಾದು ಕುಳಿತಿರ್ತಾರೆ. ಹೆಚ್ಚಿನ ಸಂಬಳ ಬರುವ ಉದ್ಯೋಗದ ಹುಡುಕಾಟ ನಿರಂತರವಾಗಿ ನಡೆಯುತ್ತಿರುತ್ತದೆ. ಒಳ್ಳೆ ಸಂಬಳ, ಹೆಚ್ಚಿನ ಸೌಲಭ್ಯ ನೀಡುವ ಕಂಪನಿಗಳಲ್ಲಿ ಕೆಲಸ ಗಿಟ್ಟಿಸಿಕೊಳ್ಳೋದು ಎಲ್ಲರ ಗುರಿಯಾಗಿರುತ್ತದೆ. ಕೆಲಸ ಮಾಡಿ, ಸಂಬಳ ತೆಗೆದುಕೊಳ್ಳದ ಉದ್ಯೋಗ ಯಾವುದೂ ಇರಲಿಕ್ಕಿಲ್ಲ. ಗೃಹಿಣಿಯರು ಮತ್ತು ಸಮಾಜ ಸೇವನೆ ಮಾಡುವವರು ಹಣವಿಲ್ಲದೆ ಕೆಲಸ ಮಾಡ್ತಾರೆ. ಉದ್ಯೋಗ ಕೊಡ್ತೇವೆ, ಸಂಬಳ ನೀಡಲ್ಲ ಅನ್ನೋದು ಮಾತ್ರವಲ್ಲ ಕೆಲಸ ನೀಡಿದ್ದಕ್ಕೆ ನೀವೇ ನಮಗೆ ತಿಂಗಳಿಗೆ ಇಷ್ಟು ಹಣವನ್ನು ನೀಡ್ಬೇಕು ಅಂದ್ರೆ..! ಅಚ್ಚರಿಯಾಗೋದು ಸಹಜ. ಈಗ ಇಂಥ ಕೆಲಸದ ಜಾಹೀರಾತೊಂದು ಸುದ್ದಿ ಮಾಡಿದೆ. ಸಾಮಾಜಿಕ ಜಾಲತಾಣದಲ್ಲಿ ಈ ಸುದ್ದಿ ಓದಿದ ಜನರು ಬಿದ್ದು ಬಿದ್ದು ನಗ್ತಿದ್ದಾರೆ. ಇಂಥ ಕೆಲಸವನ್ನು ಮೂರ್ಖರೂ ಮಾಡೋದಿಲ್ಲ ಎನ್ನುತ್ತಿದ್ದಾರೆ. ಜನರಿಂದ ನಿರಂತರ ಪ್ರತಿಕ್ರಿಯೆ ಬರ್ತಿದ್ದಂತೆ ಜಾಹೀರಾತು ಪ್ರಕಟಿಸಿದ್ದ ಕಂಪನಿ ಅದನ್ನು ತೆಗೆದುಹಾಕಿದೆ. ಅಲ್ಲದೆ ಇದ್ರ ಬಗ್ಗೆ ತನ್ನದೇ ಹೇಳಿಕೆ ನೀಡಿದೆ.

ಸ್ಪೇರ್ ರೂಮ್ (Spare Room) ಹೆಸರಿನ ವೆಬ್ ಸೈಟ್ ಇತ್ತೀಚಿಗೆ ಜಾಹೀರಾತನ್ನು ನೀಡಿದೆ. ಇದು ದಾದಿಗೆ ಸಂಬಂಧಿಸಿದ ಜಾಹೀರಾತಾ (Advertisement)ಗಿದೆ. ದಾದಿ ಕೆಲಸ ಮಕ್ಕಳ ಜೊತೆ ಇರುವುದು. ಸಾವಿರಾರು ರೂಪಾಯಿ ಹಣ ನೀಡಿ ಮಕ್ಕಳನ್ನು ನೋಡಿಕೊಳ್ಳಲು ಜನರು ದಾದಿ (Nanny) ಯನ್ನು ನೇಮಿಸಿಕೊಳ್ತಾರೆ. ಕೆಲ ಶ್ರೀಮಂತರ ಮನೆಯಲ್ಲಿ ದಾದಿ ಕೆಲಸ ಮಾಡೋದು ಪ್ರತಿಷ್ಠೆ. ಈಗಿನ ಕಾಲದಲ್ಲಿ ಪತಿ – ಪತ್ನಿ ಇಬ್ಬರೂ ದುಡಿಯೋದು ಅನಿವಾರ್ಯವಾದ ಕಾರಣ ಮಕ್ಕಳನ್ನು ನೋಡಿಕೊಳ್ಳಲು ಇನ್ನೊಬ್ಬರ ಅವಶ್ಯಕತೆ ಇರುತ್ತದೆ. ಹಾಗಾಗಿ ಮಕ್ಕಳ ಪಾಲನೆ ಮಾಡಬಲ್ಲ ಮಹಿಳೆಯರನ್ನು ದಾದಿ ರೂಪದಲ್ಲಿ ಕೆಲಸಕ್ಕೆ ಇಟ್ಟುಕೊಳ್ತಾರೆ. ಮಾಲೀಕರು ಹೇಳಿದ ಸಮಯಕ್ಕೆ ಮನೆಗೆ ಹಾಜರಾಗುವ ದಾದಿಯರು ದಿನಪೂರ್ತಿ ಅವರ ಜೊತೆ ಇರ್ತಾರೆ. ಇದಕ್ಕೆ ಸಂಬಳವನ್ನು ಪಡೆಯುತ್ತಾರೆ.

Tap to resize

Latest Videos

Costly Watch: ವಿಶ್ವದ ಅತಿ ದುಬಾರಿ ವಾಚುಗಳ ಕತೆ, ದರ ಕೇಳಿದ್ರೆ ತಲೆ ತಿರುಗುತ್ತೆ!

ಸ್ಪೇರ್ ರೂಮ್ ನಲ್ಲಿ ಪ್ರಕಟವಾದ ಜಾಹೀರಾತಿನ ಪ್ರಕಾರ, ಸೌತ್ ವೆಸ್ಟ್ ಲಂಡನ್‌ನ ಕ್ಲಾಫಮ್‌ನಲ್ಲಿರುವ ಮನೆಯೊಂದಕ್ಕೆ ದಾದಿ ಅವಶ್ಯಕತೆ ಇದೆ. 9 ಚದರ ಅಡಿಯ ಸಣ್ಣ ಮನೆಯಲ್ಲಿ ಕೆಲಸ ಮಾಡಬೇಕು. ಇದಕ್ಕೆ ಯುವಕರ ಅವಶ್ಯಕತೆ ಇದೆ ಎಂದು ಜಾಹೀರಾತಿನಲ್ಲಿ ಹೇಳಲಾಗಿದೆ. ಒಂದರಿಂದ ಮೂರು ವರ್ಷದ ಮಕ್ಕಳನ್ನು ಅವರು ನೋಡಿಕೊಳ್ಳಬೇಕು. ಸೋಮವಾರದಿಂದ ಶುಕ್ರವಾರದವರೆಗೆ 21 ಗಂಟೆಗಳ ಕಾಲ ಕೆಲಸ ಮಾಡಬೇಕು. ಮೃದು, ಶಾಂತ, ಸ್ವಚ್ಛತೆ ಕಾಪಾಡಿಕೊಳ್ಳುವವರಾಗಿರಬೇಕು. ಪಾರ್ಟಿ ಮಾಡಬಾರದು ಎಂಬ ಷರತ್ತು ವಿಧಿಸಲಾಗಿದೆ. 

ಸಿಕ್ಕ ಫೋನನ್ನು ಪ್ರಾಮಾಣಿಕವಾಗಿ ವಾಪಸ್ ಮಾಡಿದವಳಿಗೆ ಫೇಕ್ ನೋಟ್ ಗಿಫ್ಟ್! ಠಾಣೆ ಮೆಟ್ಟಿಲೇರಿದ ನಾರಿ

ಮಗು ನೋಡಿಕೊಳ್ಳೋದಲ್ಲದೆ ಹಣ ನೀಡಬೇಕು : ಜಾಹೀರಾತಿನಲ್ಲಿ ಹಣದ ವಿಷ್ಯವನ್ನೂ ಬರೆಯಲಾಗಿದೆ. ಅದ್ರ ಪ್ರಕಾರ, ಮಕ್ಕಳನ್ನು ನೋಡಿಕೊಳ್ಳುವವರು, ಜಾಹೀರಾತು ನೀಡಿದ ಮಹಿಳೆಗೆ ಪ್ರತಿ ತಿಂಗಳು 42 ಸಾವಿರ ರೂಪಾಯಿ ನೀಡಬೇಕು. ಕೆಲಸ ಮಾಡೋದಲ್ಲದೆ ಹಣವನ್ನೂ ನೀಡ್ಬೇಕು ಎಂಬ ಜಾಹೀರಾತು ಜನರಿಗೆ ನಗುತರಿಸಿದೆ. ಕೆಲವರು ಕೋಪ ವ್ಯಕ್ತಪಡಿಸಿದ್ರೆ ಮತ್ತೆ ಕೆಲವರು ಇದನ್ನು ತಮಾಷೆಯಾಗಿ ತೆಗೆದುಕೊಂಡಿದ್ದಾರೆ. ಜನರಿಂದ ನಿರಂತರ ಪ್ರತಿಕ್ರಿಯೆ ಬರ್ತಿದ್ದಂತೆ ವೆಬ್ಸೈಟ್ ಜಾಹೀರಾತನ್ನು ತೆಗೆದಿದೆ. ಮಹಿಳೆ ಬೇಡಿಕೆ ಸ್ಪಷ್ಟವಾಗಿರದ ಕಾರಣ ಹೀಗೆ ಮಾಡಿದ್ದಾಗಿ ಹೇಳಿದೆ. ಇಲ್ಲಿ ರೂಮ್ ಬಾಡಿಗೆ 1000 ಪೌಂಡ್  ಅಂದ್ರೆ 1 ಲಕ್ಷ ರೂಪಾಯಿವರೆಗೆ ಇರುತ್ತದೆ. ಆಕೆ 42 ಸಾವಿರ ರೂಪಾಯಿ ಕೇಳ್ತಿದ್ದಾಳೆ ಅಂದ್ರೆ ಅದು ಮನೆ ಬಾಡಿಗೆಗೆ ಇರಬಹುದು. ಉಳಿದ ಹಣವನ್ನು ಆಕೆ ದಾದಿಗೆ ಸಂಬಳ ರೂಪದಲ್ಲಿ ನೀಡಬಹುದು ಎಂದು ವೆಬ್ಸೈಟ್ ಹೇಳಿದೆ. ಇದ್ರ ಬಗ್ಗೆ ಸ್ಪಷ್ಟತೆ ಇಲ್ಲದ ಕಾರಣ ಜಾಹೀರಾತನ್ನು ಡಿಲಿಟ್ ಮಾಡೋದಾಗಿ ಹೇಳಿದೆ. 

click me!