ಜಗತ್ತಿನಲ್ಲಿ ಕೆಲಸಕ್ಕೆ ಸಂಬಂಧಿಸಿದಂತೆ ಅಚ್ಚರಿ ಹುಟ್ಟಿಸುವಂತಹ ನಿಯಮಗಳಿವೆ. ಕೆಲವೊಂದು ಅತೀ ಎನ್ನಿಸಿದ್ರೆ ಮತ್ತೆ ಕೆಲವು ಹೀಗೂ ಇದ್ಯಾ ಅಂತ ಪ್ರಶ್ನೆ ಹುಟ್ಟಿ ಹಾಕುತ್ತದೆ. ಕೆಲ ಆಶ್ಚರ್ಯಕರ ಜಾಬ್ ರೂಲ್ಸ್ ಬಗ್ಗೆ ಮಾಹಿತಿ ಇಲ್ಲಿದೆ.
ಆಫೀಸ್ (Office) ನಲ್ಲಿ ಸಣ್ಣ ಪುಟ್ಟ ಹೊಸ ನಿಯಮ (new rule) ಜಾರಿಗೆ ತಂದ್ರೆ ನಮಗೆ ಕಿರಿಕಿರಿಯಾಗುತ್ತೆ. ಇದೇನ್ ಹೊಸ ರೂಲ್ಸ್, ಸಾಕು ಮಾಡ್ತಾರೆ ಈ ಬಾಸ್ ಅಂತ ಬೈಕೊಳ್ತೇವೆ. ಆದ್ರೆ ಬರೀ ನಮ್ಮಲ್ಲಿ ಮಾತ್ರವಲ್ಲ ಪ್ರತಿಯೊಂದು ಕಚೇರಿಯೂ ಅದರದೇ ಆದ ನಿಯಮಗಳನ್ನು ಹೊಂದಿರುತ್ತದೆ. ಕೆಲ ಕಚೇರಿ ನಿಯಮಗಳು ತೀರಾ ಅಚ್ಚರಿ ಹುಟ್ಟಿಸುವಂತಿರುತ್ತವೆ. ಇಂಥ ನಿಯಮ ಕೂಡ ಇರುತ್ತಾ ಎಂಬ ಪ್ರಶ್ನೆಯನ್ನು ಮೂಡಿಸುತ್ತೆ. ನಾವಿಂದು ಚಿತ್ರವಿಚಿತ್ರ ನಿಯಮ ಪಾಲಿಸುವ ಕೆಲ ಆಫೀಸ್ ಬಗ್ಗೆ ನಿಮಗೆ ಮಾಹಿತಿಯನ್ನು ನೀಡ್ತೇವೆ.
ಕ್ಯಾಪ್ (cap) ಧರಿಸಿದ್ರೆ ಸಂಬಳ ಕಟ್ : ಕಚೇರಿಗೆ ಬರುವ ಉದ್ಯೋಗಿಗಳು ಕ್ಯಾಪ್ ಧರಿಸುವಂತಿಲ್ಲ ಎನ್ನುವ ನಿಯಮ ನ್ಯೂಜಿಲ್ಯಾಂಡ್ ಆಫೀಸ್ನಲ್ಲಿ ಇದೆ. ಹಾಸ್ಯಮಯ ಅಥವಾ ತಮಾಷೆಯ ಟೋಪಿ ಧರಿಸುವುದನ್ನು ನಿಷೇಧಿಸಲಾಗಿದೆ. ಒಂದ್ವೇಳೆ ಉದ್ಯೋಗಿ ನಿಯಮ ಮುರಿದ್ರೆ, ಆತನ ಸಂಬಳವನ್ನು ಕಡಿತ ಮಾಡಲಾಗುತ್ತದೆ. ಇದನ್ನು ಏಕರೂಪ್ ಕೋಡ್ ಉಲ್ಲಂಘನೆ ಎಂದು ಪರಿಗಣಿಸಿ ದಂಡದ ಜೊತೆ ಶೇಕಡಾ 10ರಷ್ಟು ಸಂಬಳವನ್ನು ಕಟ್ ಮಾಡಲಾಗುತ್ತದೆ.
ಅಮೆರಿಕದ ಕಂಪನಿಯಿಂದ ವಾರ್ಷಿಕ 4.3 ಕೋಟಿ ಪ್ಯಾಕೇಜ್ ಪಡೆದ ಐಐಟಿ ವಿದ್ಯಾರ್ಥಿ!
ಹೆಚ್ಚುವರಿ ಕೆಲಸ ಮಾಡೋದು ಅಪರಾಧ : ಕೆಲ ಕಂಪನಿಗಳು ಉದ್ಯೋಗಿ ಹೆಚ್ಚೆಚ್ಚು ಸಮಯ ಕೆಲಸ ಮಾಡಿದ್ರೆ ಖುಷಿಪಡುತ್ತದೆ. ಆದ್ರೆ ಜರ್ಮನಿಯಲ್ಲಿ ಅಧಿಕಾವಧಿಗೆ ಸಂಬಂಧಿಸಿದಂತೆ ನಿಯಮವೊಂದು ಕಟ್ಟುನಿಟ್ಟಾಗಿದೆ. ನಿಗದಿತ ಅವಧಿ ಮೀರಿ ಕೆಲಸ ಮಾಡಿದರೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಬೆಳಿಗ್ಗೆ 9 ರಿಂದ ಸಂಜೆ 5 ಗಂಟೆ ನಂತ್ರ ನೀವು ಕಚೇರಿ ಸಿಬ್ಬಂದಿಯನ್ನು ಸಂಪರ್ಕಿಸಲು ಸಾಧ್ಯವಿಲ್ಲ. ತುರ್ತು ಸಂದರ್ಭ ಹೊರತುಪಡಿಸಿ ಉಳಿದ ಯಾವುದೇ ಸಮಯದಲ್ಲಿ ಸಿಬ್ಬಂದಿ ನಿಮ್ಮ ಕೆಲಸ ಮಾಡೋದಿಲ್ಲ.ಕಚೇರಿ ಸಮಯ ಮುಗಿದ ನಂತರ ಉದ್ಯೋಗಿಯನ್ನು ಸಂಪರ್ಕಿಸಲು ನಿಷೇಧವಿದೆ.
ಆಫೀಸ್ ನಲ್ಲಿ ನಿದ್ರೆ ಮಾಡೋದು ಅನಿವಾರ್ಯ : ಕಚೇರಿಗೆ ಬಂದು ನಿದ್ರೆ ಮಾಡಿದ್ರೆ ಭಾರತದಲ್ಲಿ ಉದ್ಯೋಗಿಗಳು ಕೆಲಸ ಕಳೆದುಕೊಳ್ಬೇಕಾಗುತ್ತದೆ. ಅನಾರೋಗ್ಯ ಹೊರತುಪಡಿಸಿ ಮತ್ತ್ಯಾವ ಸಮಯದಲ್ಲೂ ಅವರು ನಿದ್ರೆ ಮಾಡುವಂತಿಲ್ಲ. ಆದ್ರೆ ಜಪಾನ್‌ನಲ್ಲಿ ಹಾಗಲ್ಲ. ಉದ್ಯೋಗಿಗಳು ನಿದ್ರೆ ಮಾಡೋದು ಕಡ್ಡಾಯ. ಕೆಲಸಕ್ಕೆ ಬಂದ ಉದ್ಯೋಗಿಗಳು ಅಲ್ಲಿಯೇ ನಿದ್ರೆ ಮಾಡುವ ಅವಕಾಶವನ್ನು ಕಂಪನಿಗಳು ನೀಡುತ್ತವೆ. ನಿದ್ರೆ ನಂತ್ರ ಅವರು ರಿಫ್ರೆಶ್ ಆಗ್ತಾರೆ ಎಂಬುದು ಅವರ ನಂಬಿಕೆ.
ಮೆಟ್ರೋದಲ್ಲಿ ₹2.8 ಲಕ್ಷ ಸಂಬಳದ ಕೆಲಸಕ್ಕೆ ಅರ್ಜಿ ಆಹ್ವಾನ
ಸೊಂಟ ತೋರಿಸಿದ್ರೆ ಸಿಗುತ್ತೆ ಕೆಲಸ : ಜಪಾನ್‌ನಲ್ಲಿ ಮೆಟಾಬೊ ಕಾನೂನು (Metabo Law) ಜಾರಿಯಲ್ಲಿದೆ. ಸ್ಥೂಲಕಾಯ ಕಡಿಮೆ ಮಾಡುವುದು ಇಲ್ಲಿನ ಉದ್ದೇಶವಾಗಿದೆ. ಹಾಗಾಗಿ ಜನರ ಸೊಂಟ ನೋಡಿ ಉದ್ಯೋಗಕ್ಕೆ ಆಯ್ಕೆ ಮಾಡಲಾಗುತ್ತದೆ. ತೆಳ್ಳಗಿನ ಸೊಂಟ ಹೊಂದಿರುವ ಜನರು ಬೇಗ ಉದ್ಯೋಗ ಗಿಟ್ಟಿಸಿಕೊಳ್ಳುತ್ತಾರೆ. 40 ರಿಂದ 75 ವರ್ಷದೊಳಗಿನ ಎಲ್ಲಾ ಉದ್ಯೋಗಿಗಳಿಗೆ ಸೊಂಟದ ಅಳತೆ ಮಿತಿ ನಿಗದಿಪಡಿಸಲಾಗಿದೆ. ಅದರೊಳಗೆ ಬರುವವರಿಗೆ ಮಾತ್ರ ಕೆಲಸ ನೀಡಲಾಗುತ್ತದೆ. ಮಹಿಳೆಯರ ಸೊಂಟ 35.4 ಇಂಚುಗಳವರೆಗೆ ಇರಬೇಕು. ಪುರುಷರ ಸೊಂಟವು 33.5 ಇಂಚುಗಳಷ್ಟು ಇರಬೇಕು. ಇದಕ್ಕಿಂತ ದೊಡ್ಡ ಸೊಂಟ ಹೊಂದಿರುವ ಜನರಿಗೆ ಕೆಲಸ ಸಿಗೋದು ಕಷ್ಟ. ಒಂದ್ವೇಳೆ ಉದ್ಯೋಗ ಸಿಕ್ಕಿದ್ರೂ ಅವರಿಗೆ ಷರತ್ತು ವಿಧಿಸಲಾಗುತ್ತದೆ. ಅವರು 3 ತಿಂಗಳೊಳಗೆ ತೂಕ ಇಳಿಸೋದು ಅನಿವಾರ್ಯ. ಇದ್ರಲ್ಲೂ ಉದ್ಯೋಗಿ ವಿಫಲವಾದ್ರೆ ಕಂಪನಿ, ಡಯಟ್ ತರಬೇತಿ ಮತ್ತು ಆಹಾರದ ಬಗ್ಗೆ ಮಾಹಿತಿ ನೀಡುತ್ತದೆ.
ವಜಾ ನಿಯಮ : ಬ್ರಿಟನ್‌ನಲ್ಲಿ ಕಂಪನಿ ಉದ್ಯೋಗಿಗಳ ಸಂಖ್ಯೆ 100ಕ್ಕಿಂತ ಹೆಚ್ಚಿದ್ದರೆ ಆ ಕಂಪನಿ ತನ್ನ ಉದ್ಯೋಗಿಗಳನ್ನು ಕೆಲಸದಿಂದ ತೆಗೆಯುವಂತಿಲ್ಲ. ಒಂದ್ವೇಳೆ ಕೆಲಸದಿಂದ ತೆಗೆಯುವ ಸಂದರ್ಭ ಬಂದ್ರೆ ಅದನ್ನು ಸರ್ಕಾರಕ್ಕೆ ತಿಳಿಸಬೇಕು. ಉದ್ಯೋಗಿಗೆ ಕೂಡ ಒಂದರಿಂದ ಮೂರು ತಿಂಗಳ ಮೊದಲೇ ಮಾಹಿತಿ ನೀಡಬೇಕು.