ಡಾನ್ಸ್ ಮಾಡಿ ಫಾರಿನ್ ಕ್ಲೈಂಟ್‌ ಸ್ವಾಗತಿಸಿದ ಉದ್ಯೋಗಿಗಳು: ಅಧುನಿಕ ಗುಲಾಮಗಿರಿ ಎಂದ ನೆಟ್ಟಿಗರು

Published : Jul 23, 2025, 03:57 PM ISTUpdated : Jul 23, 2025, 04:05 PM IST
Indian office workers dance video sparks outrage

ಸಾರಾಂಶ

ತಮ್ಮ ಸಂಸ್ಥೆಯ ವಿದೇಶಿ ಗ್ರಾಹಕನನ್ನು ಸಂಸ್ಥೆಯ ಉದ್ಯೋಗಿಗಳು ಬಿಂದಾಸ್ ಆಗಿ ಡಾನ್ಸ್ ಮಾಡುವ ಮೂಲಕ ಸ್ವಾಗತಿಸಿದ್ದು, ಈ ಘಟನೆಗೆ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದೆ.

ತಮ್ಮ ಸಂಸ್ಥೆಯ ವಿದೇಶಿ ಗ್ರಾಹಕನನ್ನು ಸಂಸ್ಥೆಯ ಉದ್ಯೋಗಿಗಳು ಬಿಂದಾಸ್ ಆಗಿ ಡಾನ್ಸ್ ಮಾಡುವ ಮೂಲಕ ಸ್ವಾಗತಿಸಿದ್ದು, ಈ ಘಟನೆಗೆ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದೆ. ಆದರೆ ಯಾವ ಸಂಸ್ಥೆಯ ಕಚೇರಿಯಲ್ಲಿ ಈ ಘಟನೆ ನಡೆದಿದೆ ಎಂಬ ಬಗ್ಗೆ ಮಾಹಿತಿ ಇಲ್ಲ. ವೀಡಿಯೋದಲ್ಲಿ ಕಾಣುವಂತೆ ಬಾಲಿವುಡ್ ಹಾಗೂ ತೆಲುಗು ಸಿನಿಮಾದ ಹಾಡುಗಳಿಗೆ ಇಡೀ ಕಚೇರಿಯ ಉದ್ಯೋಗಿಗಳೇ ತಾವು ಇದ್ದಲ್ಲೇ ಬಿಂದಾಸ್ ಆಗಿ ಡಾನ್ಸ್‌ ಮಾಡಿದ್ದಾರೆ. ಆದರ ಈ ವೀಡಿಯೋ ವೈರಲ್ ಆಗುತ್ತಿದ್ದಂತೆ ಇದೊಂದು ಆಧುನಿಕ ಗುಲಾಮಗಿರಿ ಎಂದು ಜನ ಟೀಕೆ ಮಾಡಿದ್ದಾರೆ.

ರೆಡಿಟ್ ಸೇರಿದಂತೆ ಹಲವು ಸಾಮಾಜಿಕ ಜಾಲತಾಣದಲ್ಲಿ ಈ ವೀಡಿಯೋ ಪೋಸ್ಟ್ ಆಗಿದೆ. ವೀಡಿಯೋದಲ್ಲಿ ತೆಲುಗಿನ ಪವನ್ ಕಲ್ಯಾಣ್ ನಟನೆಯ ಗುಂಡುಬ ಶಂಕರ್ ಸಿನಿಮಾದ ಕಿಲ್ಲಿ ಕಿಲ್ಲಿ ಹಾಡಿಗೆ ಸಂಸ್ಥೆಯ ಉದ್ಯೋಗಿಗಳು ನೃತ್ಯ ಮಾಡಿದ್ದಾರೆ. ಇದರ ಜೊತೆಗೆ ಬಾಲಿವುಡ್‌ನ ಸುಶಾಂತ್ ಸಿಂಗ್ ಹಾಗೂ ಕೃತಿ ಸನನ್ ಅವರು ನಟಿಸಿರುವ 2017ರ ಸಿನಿಮಾ ರಬ್ತಾದ ಮೇ ತೆರ ಬಾಯ್‌ಫ್ರೆಂಡ್ ತು ಮೆರಿ ಗರ್ಲ್‌ಫ್ರೆಂಡ್ ಹಾಡಿಗೆ ಡಾನ್ಸ್ ಮಾಡಿದ್ದಾರೆ. ವೈರಲ್ ಆದ ವೀಡಿಯೋದಲ್ಲಿ ಫಾರಿನ್ ಗೆಸ್ಟ್ ಇವರ ಡಾನ್ಸ್ ಖುಷಿಯಾಗಿದ್ದು, ಹಾಡಿಗೆ ತಲೆ ಅಲ್ಲಾಡಿಸುವುದನ್ನು ಕೂಡ ವೀಡಿಯೋದಲ್ಲಿ ನೋಡಬಹುದಾಗಿದೆ.

@WokePandemic ಎಂಬ ಟ್ವಿಟ್ಟರ್‌ ಪೇಜ್‌ನಿಂದ ಈ ವೀಡಿಯೋ ಪೋಸ್ಟ್ ಆಗಿದೆ. 3 ಮಿಲಿಯನ್‌ಗೂ ಹೆಚ್ಚು ಜನ ಈ ವೀಡಿಯೋವನ್ನು ವೀಕ್ಷಿಸಿದ್ದಾರೆ. ಭಾರತವು ಕಾರ್ಪೊರೇಟ್ ಕಚೇರಿಗಳನ್ನು ಕೀಳಾಗಿ ನೋಡುವುದನ್ನು ನಿಲ್ಲಿಸಬೇಕು. ಭಾರತೀಯ ಹುಡುಗಿಯರು ಕಚೇರಿಯಲ್ಲಿ ನೃತ್ಯ ಮಾಡುತ್ತಾ ವಿದೇಶಿ ಕ್ಲೈಂಟ್‌ಗಳನ್ನು ಸ್ವಾಗತಿಸುವುದನ್ನು ನೋಡುವುದು ತುಂಬಾ ಅಸಹನೀಯವಾಗುದೆ. ಇಲ್ಲಿ ಫಾರಿನ್ ಕ್ಲೈಂಟ್‌ಗಳನ್ನು ಸಹ ನೃತ್ಯ ಮಾಡುವಂತೆ ಒತ್ತಾಯಿಸಲಾಗುತ್ತದೆ. ಇಂತಹ ನೃತ್ಯ ಪ್ರದರ್ಶನವು ಭಾರತದ ಕಚೇರಿಗಳನ್ನು ಇತರ ದೇಶಗಳು ಕೆಲಸಕ್ಕೆ ಯೋಗ್ಯವಾದ ಸ್ಥಳ ಅಲ್ಲ ಎಂದು ಭಾವಿಸುವಂತೆ ಮಾಡುತ್ತದೆ ಎಂದು ಬರೆದುಕೊಂಡಿದ್ದಾರೆ.

ಈ ವೀಡಿಯೋ ಕೆಲವೇ ಕ್ಷಣದಲ್ಲಿ ವೈರಲ್ ಆಗಿದ್ದು, ಅನೇಕರು ಇದನ್ನು ಅಧುನಿಕ ಗುಲಾಮಗಿರಿ ಎಂದು ಕರೆದಿದ್ದಾರೆ. ಹಾಗೆಯೇ ಇನ್ನು ಅನೇಕರು ಇದು ಕೆಲಸಕ್ಕೆ ಯೋಗ್ಯವಲ್ಲದ ವರ್ತನೆ ಎಂದು ಹೇಳಿದ್ದಾರೆ. ಇದೊಂದು ತರ ಮುಜುಗರ ತರಿಸುವ ಘಟನೆ ಈ ಸಂಸ್ಥೆಯವರು ಕೂಡಲೇ ಈ ರೀತಿಯ ನೃತ್ಯದ ಭಾಗವನ್ನು ನಿಲ್ಲಿಸಿ ಬಿಡಬೇಕು.

ತಮ್ಮ ಬಾಸ್ ಮುಂದೆ ಸೇವಕರಾಗುವ ಸ್ಥಿತಿ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಇದೊಂತರ ತುಂಬ ಕೀಳು ಹಾಗೂ ಕೊಳಕಾದ ಮನಸ್ಥಿತಿ ಎಂದು ಮತ್ತೆ ಕೆಲವರು ಕಾಮೆಂಟ್ ಮಾಡಿದ್ದಾರೆ. ಈ ಘಟನೆ ಬಗ್ಗೆ ನಿಮಗೇನನಿಸಿತು ನೀವೂ ಕಾರ್ಪೋರೇಟ್ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದರೆ, ನಿಮ್ಮ ಕಚೇರಿಯಲ್ಲೂ ಈ ರೀತಿಯ ಘಟನೆ ಏನಾದರೂ ನಡೆದ ಅನುಭವ ಆಗಿದ್ಯಾ? ಕಾಮೆಂಟ್ ಮಾಡಿ.

 

 

PREV
Read more Articles on
click me!

Recommended Stories

ಬೆಂಗಳೂರಿನ ಅಮರ್‌ ಸುಬ್ರಹ್ಮಣ್ಯ ಆಪಲ್‌ ಎಐ ಟೀಮ್‌ಗೆ ಉಪಾಧ್ಯಕ್ಷ!
ಸರಾಸರಿ ಮಾಸಿಕ ವೇತನ: ದೇಶದಲ್ಲಿಯೇ 2ನೇ ಸ್ಥಾನದಲ್ಲಿ ಕರ್ನಾಟಕ, ಸಿಗೋ ಸ್ಯಾಲರಿ ಎಷ್ಟು?