ಇಂಟೆಲ್ ಕಂಪನಿ ಬರೋಬ್ಬರಿ 15,000 ಉದ್ಯೋಗಿಯನ್ನು ಕಡಿತಗೊಳಿಸಿದ ಬಳಿಕ ಇದೀಗ ಬಾಕಿ ಉಳಿದ ಉದ್ಯೋಗಿಗಳ ಆತ್ಮಸ್ಥೈರ್ಯ ಹೆಚ್ಚಿಸಲು ಉಚಿತ ಟಿ, ಕಾಫಿ ಘೋಷಿಸಿದೆ.
ಐಟಿ ಕಂಪನಿ ಸೇರಿದಂತೆ ಹಲವು ಕಂಪನಿಗಳಿಲ್ಲಿ ಉದ್ಯೋಗ ಕಡಿತ ಇತ್ತೀಚೆಗಿನ ದಿನಗಳಲ್ಲಿ ಸಾಮಾನ್ಯವಾಗಿದೆ. ಕೊರೋನಾ ಬಳಿಕ ವೆಚ್ಚ ನಿರ್ವಹಣೆ, ನಷ್ಟ ಸೇರಿದಂತೆ ಹಲವು ಕಾರಣಗಳಿಂದ ಉದ್ಯೋಗ ಕಡಿತ ಮಾಡಿದೆ. ಇತ್ತೀಚೆಗೆ ಜನಪ್ರಿಯ ಟೆಕ್ ಕಂಪನಿ ಇಂಟೆಲ್ ಬರೋಬ್ಬರಿ 15,000 ಉದ್ಯೋಗಿಗಳನ್ನು ತೆಗೆದುಹಾಕಿತ್ತು. ಕಳೆದ ವರ್ಷದಿಂದ ಇಂಟೆಲ್ ನಿರ್ವಹಣಾ ವೆಚ್ಚ ಕಡಿತ ಮಾಡುತ್ತಿರುವ ಇಂಟೆಲ್ ಭಾರಿ ಉದ್ಯೋಗ ಕಡಿತ ಮಾಡಿತ್ತು. ಆದರೆ ಈ ಉದ್ಯೋಗ ಕಡಿತ, ಬಾಕಿ ಉಳಿದುಕೊಂಡ ಉದ್ಯೋಗಿಗಳ ಮೇಲೆ ಪರಿಣಾಮ ಬೀರಿತ್ತು. ಉದ್ಯೋಗದಲ್ಲಿ ಅಭದ್ರತೆ ಕಾಡತೊಡಗಿತ್ತು. ಇದೀಗ ಇಂಟೆಲ್ ಉದ್ಯೋಗಿಗಳ ಆತ್ಮಸ್ಥೈರ್ಯ ಹೆಚ್ಚಿಸಲು ಇದೀಗ ಕಚೇರಿಯಲ್ಲಿ ಉದ್ಯೋಗಿಗಳಿಗೆ ಕಾಫಿ, ಟೀ ಉಚಿತವಾಗಿ ನೀಡಲು ಇಂಟೆಲ್ ನಿರ್ಧರಿಸಿದೆ.
ಮಲ್ಟಿನ್ಯಾಶನಲ್ ಕಂಪನಿಯಾದರೂ ಇಂಟೆಲ್ ಕಂಪನಿಯಲ್ಲಿ ಉದ್ಯೋಗಿಗಳಿಗೆ ಕಾಫಿ, ಟೀ ಉಚಿತವಾಗಿರಲಿಲ್ಲ. ಕಾಫಿ ಅಥವಾ ಟೀ ಬೇಕಿದ್ದರೆ ದುಡ್ಡು ಕೊಟ್ಟೆ ಕುಡಿಯಬೇಕಿತ್ತು. ಇದೀಗ ಉದ್ಯೋಗ ಕಡಿತದ ಬಳಿಕ ನಡೆದ ಘಟನೆಗಳಿಂದ ಇಂಟೆಲ್ ಎಚ್ಚೆತ್ತುಕೊಂಡಿದ್ದು, ಉಚಿತ ಕಾಫಿ, ಟಿ ಘೋಷಿಸಿದೆ.
ಕಂಗಾಲಾದ ಬೆಂಗಳೂರು ಸಿಇಒ: ಬಾಸ್ ಪಾಸ್‌ಪೋರ್ಟ್ ಕದ್ದೊಯ್ದ ಕೆಲಸ ಕಳೆದುಕೊಂಡ ಉದ್ಯೋಗಿ!
2023ರಲ್ಲಿ ಇಂಟೆಲ್ ಕಚೇರಿಯಲ್ಲಿ ಹೆಚ್ಚಾಗಿದ್ದ ವೆಚ್ಚ ಕಡಿತ ಮಾಡಲು ಕಠಿಣ ನಿರ್ಧಾರ ಕೈಗೊಂಡಿತ್ತು. ವಾರ್ಷಿಕ ವೆಚ್ಚ ಕಡಿತಗೊಳಿಸಲು ಕಾಫಿ, ಟೀ ಉಚಿತವಾಗಿ ನೀಡುತ್ತಿದ್ದ ಪ್ರಕ್ರಿಯೆಗೆ ಬ್ರೇಕ್ ಹಾಕಿತ್ತು. ಇದರ ಜೊತೆಗೆ ಇತರ ಕೆಲ ಸೌಲಭ್ಯಗಳನ್ನೂ ಇಂಟೆಲ್ ಕಡಿತಗೊಳಿಸಿತ್ತು. ಇದೀಗ ಉದ್ಯೋಗ ಕಡಿತದ ಬಳಿಕ ಇಂಟೆಲ್ ಮತ್ತೆ ಕಾಫಿ, ಟಿ ಉಚಿತ ಸೇವೆಯನ್ನು ಮತ್ತೆ ಜಾರಿಗೊಳಿಸಿದೆ.
ಕಚೇರಿಯಲ್ಲಿನ ವೆಚ್ಚ ಕಡಿತಗೊಳಿಸಲು ಕೆಲ ನಿರ್ಧಾರಗಳನ್ನು ಕಂಪನಿ ತೆಗೆದುಕೊಂಡಿದೆ. ಇದರ ಜೊತೆಗೆ ಸ್ಥಗಿತಗೊಳಿಸಿದ್ದ ಉಚಿತ ಕಾಫಿ, ಟೀ ವ್ಯವಸ್ಥೆಯನ್ನು ಮತ್ತೆ ಜಾರಿಗೊಳಿಸಲಾಗಿದೆ.ಈ ಮೂಲಕ ಕಚೇರಿ ಸಂಸ್ಕೃತಿ ಹಾಗೂ ಉದ್ಯೋಗಗಳ ಆತ್ಮಸ್ಥೈರ್ಯ ಹೆಚ್ಚಿಸಲು ಈ ಸಣ್ಣ ಬದಲಾವಣೆ ನೆರವಾಗಲಿದೆ ಎಂದು ಕಂಪನಿ ಹೇಳಿದೆ. ಉದ್ಯೋಗ ಕಡಿತ ಸೇರಿದಂತೆ ಹಲವು ನಿರ್ಧಾರಗಳ ಬಳಿಕವೂ ಇಂಟೆಲ್ ನಿರ್ವಹಣಾ ವೆಚ್ಚದ ಸವಾಲು ಎದುರಾಗಿದೆ. ಆದರೆ ಈ ಬದಲಾವಣೆ ಅನಿವಾರ್ಯವಾಗಿತ್ತು ಎಂದು ಕಂಪನಿ ಹೇಳಿದೆ.
ಇಂಟೆಲ್ ಹಂತ ಹಂತವಾಗಿ ಉದ್ಯೋಗ ಕಡಿತ ಮಾಡುತ್ತಾ ಬಂದಿದೆ. 2023ರಿಂದ 2024ರ ಆಗಸ್ಟ್ ತಿಂಗಳ ವರೆಗೆ 15,000 ಉದ್ಯೋಗಿಗಳನ್ನು ಕಡಿತ ಮಾಡಿದೆ. ಇದೀಗ ಅಮೆರಿಕದಲ್ಲಿ ಮತ್ತೆ 2,000 ಉದ್ಯೋಗ ಕಡಿತಕ್ಕೆ ಮುಂದಾಗಿದೆ. ಕಳೆದ ವರ್ಷದಿಂದ ಕಂಪನಿ ಹಲವು ಗಂಭೀರ ಸವಾಲು ಎದುರಿಸುತ್ತಿದೆ. ಹೀಗಾಗಿ ಹಲವು ಕಡಿತ ಮಾಡಿದೆ. ಸದ್ಯ ಸ್ಥಗಿತಗೊಳಿಸಿದ್ದ ಕಾಫಿ, ಟೀ ಮಾತ್ರ ಮರು ಜಾರಿಗೊಳಿಸಲಾಗಿದೆ. ಆದರೆ ಉದ್ಯೋಗಿಗಳಿಗೆ ನೀಡುತ್ತಿದ್ದ ಮರುಪಾವತಿ ಸೌಲಭ್ಯ, ಇಂಟರ್ನೆಲ್ ಬಿಲ್, ಫೋನ್ ಬಿಲ್, ಪ್ರಯಾಣ ವೆಚ್ಚ ಸೇರಿದಂತೆ ಹಲವು ಭತ್ಯೆಗಳನ್ನು ಕಡಿತ ಮಾಡಲಾಗಿದೆ.
ಯೆಸ್ ಬ್ಯಾಂಕ್ ಉದ್ಯೋಗ ಕಡಿತಕ್ಕೆ 500 ನೌಕರರು ಬೀದಿಪಾಲು, ಮತ್ತಷ್ಟು ಶೀಘ್ರದಲ್ಲಿ ಎನ್ನುತ್ತಿದೆ ಸಂಸ್ಥೆ!