ವಿಶಿಷ್ಟ ಒಪ್ಪಂದಗಳ ಮೂಲಕ ‘ಸುಶಾಸನ ಮಾಸಾಚರಣೆ’: ಸಚಿವ ಅಶ್ವತ್ಥನಾರಾಯಣ

By Kannadaprabha NewsFirst Published Dec 2, 2022, 10:00 AM IST
Highlights

5 ಕಂಪನಿಗಳ ಜತೆ ಉದ್ಯೋಗ ಸೃಷ್ಟಿ ಒಪ್ಪಂದ, ಉದ್ಯೋಗಾಕಾಂಕ್ಷಿ- ಉದ್ಯೋಗದಾತರ ಬೆಸೆವ ‘ಸ್ಕಿಲ್‌ ಕನೆಕ್ಟ್’ ಪೋರ್ಟಲ್‌ ಉದ್ಘಾಟನೆ, ಶಿಕ್ಷಣ ಇಲಾಖೆಯಲ್ಲಿ ಸುಧಾರಣೆ ಸಂಕಲ್ಪ ಪತ್ರಕ್ಕೆ ಪಣ, ಒಳ್ಳೇ ಆಡಳಿತದ ಮಾಸಕ್ಕೆ ಸಚಿವ ಡಾ. ಅಶ್ವತ್ಥ ಚಾಲನೆ

ಬೆಂಗಳೂರು(ಡಿ.02):  ‘ಉದ್ಯೋಗಾಕಾಂಕ್ಷಿಗಳು ಹಾಗೂ ಉದ್ಯೋಗದಾತರನ್ನು ಬೆಸೆಯುವ ಸ್ಕಿಲ್‌ ಕನೆಕ್ಟ್ ಪೋರ್ಟಲ್‌ ಉದ್ಘಾಟನೆ. ಐದು ಕಂಪೆನಿಗಳೊಂದಿಗೆ ಉದ್ಯೋಗ ಸೃಷ್ಟಿ ಕುರಿತು ಒಡಂಬಡಿಕೆ ಹಾಗೂ ತಮ್ಮ ಇಲಾಖೆಯಲ್ಲಿ ತರಲಿರುವ ಸುಧಾರಣೆಗಳ ಕುರಿತ ಸಂಕಲ್ಪ ಪತ್ರಗಳ ಬಿಡುಗಡೆ’ ಮೂಲಕ ಡಿಸೆಂಬರ್‌ ತಿಂಗಳಿಡೀ ನಡೆಯಲಿರುವ ‘ಸುಶಾಸನ ಮಾಸಾಚರಣೆ’ ಗೆ ಸಚಿವ ಡಾ.ಸಿ.ಎನ್‌. ಅಶ್ವತ್ಥನಾರಾಯಣ ಚಾಲನೆ ನೀಡಿದರು. ವಿಧಾನಸೌಧದಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ದಿವಂಗತ ಮಾಜಿ ಪ್ರಧಾನಮಂತ್ರಿ ಎ.ಬಿ. ವಾಜಪೇಯಿ ಜನ್ಮದಿನದ ಅಂಗವಾಗಿ ನಡೆಯುವ ‘ಸುಶಾಸನ ಮಾಸಾಚರಣೆ’ (ಡಿ.1 ರಿಂದ ಡಿ.31) ಹೆಸರಿನಲ್ಲಿ ತಮ್ಮ ವ್ಯಾಪ್ತಿಗೆ ಬರುವ ಉನ್ನತ ಶಿಕ್ಷಣ, ಐಟಿ-ಬಿಟಿ, ವಿಜ್ಞಾನ-ತಂತ್ರಜ್ಞಾನ, ಕೌಶಲ್ಯಾಭಿವೃದ್ಧಿ ಮತ್ತು ಜೀವನೋಪಾಯ ಇಲಾಖೆಗಳ ಉದ್ದೇಶ ಹಾಗೂ ಇಲಾಖೆಯ ಸಂಕಲ್ಪಗಳನ್ನು ಪ್ರಕಟಿಸಿದರು.

ಈ ವೇಳೆ ಮಾತನಾಡಿದ ಅವರು, ‘ಸುಶಾಸನ ಎನ್ನುವುದು ಹೊಸ ರಾಜಕೀಯ ಸಂಸ್ಕೃತಿ. ಇದು ಕೇವಲ ಒಂದು ದಿನಕ್ಕೆ ಸೀಮಿತವಾಗದೆ ನಿರಂತರವಾಗಿ ನಡೆಯಬೇಕು. ತಂತ್ರಜ್ಞಾನದ ಅಳವಡಿಕೆ ಮೂಲಕ ಆಡಳಿತದಲ್ಲಿ ಪಾರದರ್ಶಕತೆ ಬರಬೇಕು. ಸುಶಾಸನ ಆಗಬೇಕೆಂದರೆ ಗುಣಮಟ್ಟದ ಶಿಕ್ಷಣ ಅಗತ್ಯ. ಹೀಗಾಗಿ ಎನ್‌ಇಪಿ ಅನುಷ್ಠಾನದ ಮೂಲಕ ಉನ್ನತ ಶಿಕ್ಷಣದಲ್ಲಿ ಸುಧಾರಣೆ ತರುತ್ತೇವೆ. ಪದವಿ ಕಾಲೇಜು, ಪಾಲಿಟೆಕ್ನಿಕ್‌ ಹಾಗೂ ಎಂಜಿನಿಯರಿಂಗ್‌ ಕಾಲೇಜುಗಳಲ್ಲಿ ಸರಣಿ ನೇರ ಸಂವಾದಗಳನ್ನು ನಡೆಸುತ್ತೇವೆ’ ಎಂದು ಹೇಳಿದರು.

ಉದ್ಯೋಗ ಕಡಿತ: ಅಮೆಜಾನ್‌ಗೆ ಕಾರ್ಮಿಕ ಇಲಾಖೆಯಿಂದ ನೋಟಿಸ್

ಆನ್‌ಲೈನ್‌ ರೂಪದಲ್ಲಿ ಪದವಿ ಕೋರ್ಸ್‌:

ವಿಶ್ವವಿದ್ಯಾಲಯಗಳಲ್ಲಿ ಆನ್‌ಲೈನ್‌ ಡಿಜಿಟಲ್‌ ಕಲಿಕೆ ಮತ್ತು ಕಾರ್ಯಕ್ರಮ ಜಾರಿಗೆ ತರಲಾಗುವುದು. 2023ರ ಮಾಚ್‌ರ್‍ ವೇಳೆಗೆ ಪ್ರತಿ ವಿಶ್ವವಿದ್ಯಾಲಯದಲ್ಲಿ ಕನಿಷ್ಠ ಒಂದು ಪದವಿ ಕೋರ್ಸ್‌ ಆನ್‌ಲೈನ್‌ ರೂಪದಲ್ಲಿ ಆರಂಭವಾಗಲಿದೆ. ಹಾಗೆಯೇ, ತಿಂಗಳ ಕೊನೆಯ ವೇಳೆಗೆ ಪ್ರತಿ ವಿಶ್ವವಿದ್ಯಾಲಯವೂ ಅಕಾಡೆಮಿಕ್‌ ಬ್ಯಾಂಕ್‌ ಆಫ್‌ ಕ್ರೆಡಿಟ್‌ನಲ್ಲಿ ತಮ್ಮನ್ನು ನೋಂದಾಯಿಸಿಕೊಳ್ಳಬೇಕು. ಜತೆಗೆ 3 ತಿಂಗಳಲ್ಲಿ ಕನಿಷ್ಠ ಪಕ್ಷ 5 ಉದ್ಯಮ ಸಂಸ್ಥೆಗಳೊಂದಿಗೆ ಒಡಂಬಡಿಕೆ ಮಾಡಿಕೊಂಡು ವಿದ್ಯಾರ್ಥಿಗಳಿಗೆ ಉತ್ತಮ ಭವಿಷ್ಯ ಕಲ್ಪಿಸುವುದು ಕಡ್ಡಾಯ ಮಾಡುತ್ತೇವೆ ಎಂದರು.

ಕೌಶಲ್ಯ ಕಲಿಕೆಗೆ ಮತ್ತಷ್ಟು ಬಲ:

ಆಧುನಿಕ ಜಗತ್ತಿನಲ್ಲಿ ಕೌಶಲ್ಯ ಕಲಿಕೆ ಮುಖ್ಯ. ಹೀಗಾಗಿ ಕೌಶಲ್ಯಾಭಿವೃದ್ಧಿ ಇಲಾಖೆಯ ಸ್ಕಿಲ್‌ ಕನೆಕ್ಟ್ ಪೋರ್ಟಲ್‌ಗೆ ಹೊಸ ರೂಪ ಕೊಡಲಾಗಿದೆ. ಐಟಿಐ ಅಂಕಪಟ್ಟಿಗಳ ಡಿಜಿಟಲೀಕರಣ, 60 ಸಾವಿರ ಐಟಿಐ ವಿದ್ಯಾರ್ಥಿಗಳಿಗೆ ಮೈಕ್ರೋಸಾಫ್‌್ಟಕಂಪೆನಿಯಿಂದ ಉತ್ಕೃಷ್ಟತರಬೇತಿ ಕೊಡಿಸುವ ಗುರಿ ಹೊಂದಿದ್ದೇವೆ. ಇದರಡಿ ಇಂಗ್ಲಿಷ್‌ ಕಲಿಕೆ ಲ್ಯಾಬ್‌ ಸ್ಥಾಪನೆ, ಜಪಾನಿ ಭಾಷೆ ಕಲಿಸುವ ವ್ಯವಸ್ಥೆ ಸೇರಿದಂತೆ ವಿವಿಧ ತರಬೇತಿ ನೀಡಲಾಗುವುದು ಎಂದು ಹೇಳಿದರು.

ಬೀದಿಬದಿ ವ್ಯಾಪಾರಿಗಳಿಗೆ ಗುರುತಿನ ಚೀಟಿ:

ಬೀದಿಬದಿ ವ್ಯಾಪಾರಿಗಳಿಗೆ ಗುರುತಿನ ಚೀಟಿ ಮತ್ತು ಮಾರಾಟ ಪ್ರಮಾಣಪತ್ರಗಳನ್ನು ವಿತರಿಸಲಾಗುವುದು. 13,500 ಮಹಿಳಾ ಉದ್ಯಮಿಗಳಿಗೆ ಸಿ-ಡಾಲ್‌ ಮೂಲಕ ಪ್ರೇರಣಾ ಶಿಬಿರ ಆಯೋಜಿಸಿ 10 ಸಾವಿರ ಜನರಿಗೆ ಏಕಕಾಲದಲ್ಲಿ ನೇಮಕಾತಿ ಪತ್ರ ನೀಡಲಾಗುವುದು. ಕಿಯೋನಿಕ್ಸ್‌ ಸಂಸ್ಥೆಯಲ್ಲಿ 1976ರಿಂದಲೂ ಇರುವ ದಾಖಲೆಗಳನ್ನು ಸಂಪೂರ್ಣವಾಗಿ ಡಿಜಿಟಲೀಕರಣಗೊಳಿಸಲಾಗುವುದು ಎಂದು ಮಾಹಿತಿ ನೀಡಿದರು.

ಕೆಇಎಗೆ ಸುಶಾಸನದ ಸ್ಪರ್ಶ:

ಸುಶಾಸನ ಮಾಸಾಚರಣೆ ಅಂಗವಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ (ಕೆಇಎ) ಹೊಸ ರೂಪ ಕೊಡಲಾಗಿದೆ. ಇಲ್ಲಿ ನೇಮಕಾತಿ ವಿಭಾಗ ಮತ್ತು ಸೀಟು ಹಂಚಿಕೆ ವಿಭಾಗಗಳನ್ನು ಸೃಷ್ಟಿಸಿ, 20 ಹೊಸ ಹುದ್ದೆಗಳನ್ನು ಮಂಜೂರು ಮಾಡಲಾಗಿದೆ. ನೀಟ್‌ ಪರೀಕ್ಷೆ ಬಂದ ನಂತರ ಉಂಟಾಗಿರುವ ಗೊಂದಲಗಳನ್ನು ನಿವಾರಿಸುವ ಗುರಿ ಇಟ್ಟುಕೊಳ್ಳಲಾಗಿದೆ. ಜತೆಗೆ ವೃತ್ತಿಪರ ಕೋರ್ಸುಗಳ ಸೀಟು ಹಂಚಿಕೆಯನ್ನು ಇನ್ನಷ್ಟುವಿದ್ಯಾರ್ಥಿಸ್ನೇಹಿಯನ್ನಾಗಿ ಮಾಡುತ್ತೇವೆ ಎಂದರು.
ಉನ್ನತ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಶ್ಮಿ ಮಹೇಶ್‌, ಕೌಶಲ್ಯ ಅಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್‌, ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಆಯುಕ್ತ ಪಿ. ಪ್ರಭಾಕರ್‌, ಐಟಿ-ಬಿಟಿ ನಿರ್ದೇಶಕಿ ಮೀನಾ ನಾಗರಾಜ್‌ ಸೇರಿದಂತೆ ಹಲವು ಅಧಿಕಾರಿಗಳು ಹಾಜರಿದ್ದರು.

HP Layoffs: ಇನ್ನು ಮೂರೇ ವರ್ಷದಲ್ಲಿ 6 ಸಾವಿರ ಎಚ್‌ಪಿ ಉದ್ಯೋಗಿಗಳ ವಜಾ!

5 ಸಂಸ್ಥೆಗಳೊಂದಿಗೆ ಒಡಂಬಡಿಕೆ

ಕಾರ್ಯಕ್ರಮದಲ್ಲಿ ಟ್ಯಾಲೆನ್ಷೀಯಾ ಗ್ಲೋಬಲ್‌, ಇನ್ನೋವ್‌ಸೋರ್ಸ್‌, ಫ್ಯುಯೆಲ್‌, ಎಐಎಸ್‌ಇಸಿಟಿ ಮತ್ತು ಇನ್ಫಿಕ್ವಿಟಿ ಆಟೋ ಟೆಕ್ನಾಲಜೀಸ್‌ ಕಂಪನಿಗಳ ಮುಖ್ಯಸ್ಥರೊಂದಿಗೆ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಆಯುಕ್ತ ಪಿ.ಪ್ರದೀಪ ಅವರು ಹಲವು ಒಪ್ಪಂದಗಳಿಗೆ ಸಹಿ ಹಾಕಿದರು.

ಈ ಬಗ್ಗೆ ವಿವರಿಸಿದ ಪ್ರದೀಪ ಅವರು, ಟ್ಯಾಲೆನ್ಷೀಯಾ ಕಂಪನಿ ಕಳೆದ ಮೂರು ವರ್ಷಗಳಲ್ಲಿ ತಾಂತ್ರಿಕ ಕ್ಷೇತ್ರದಲ್ಲಿ 1,500 ಜನರಿಗೆ ಉದ್ಯೋಗ ತರಬೇತಿ ನೀಡಿ, ಅಷ್ಟೇ ಮಂದಿಗೆ ಉದ್ಯೋಗ ನೀಡಿದೆ. ಇನ್ನೋವ್‌ಸೋರ್ಸ್‌ ಕಂಪನಿಯು ರಾಜ್ಯದ 1.20 ಲಕ್ಷ ಅರ್ಹರಿಗೆ, ಫ್ಯುಯೆಲ್‌ ಕಂಪನಿಯು 19 ಸಾವಿರ ತಂತ್ರಜ್ಞರಿಗೆ ಮತ್ತು ಮಿಕ್ಕ ಕ್ಷೇತ್ರಗಳ 6 ಸಾವಿರ ಜನರಿಗೆ (ಒಟ್ಟು 25 ಸಾವಿರ ಮಂದಿಗೆ), ಎಐಎಸ್‌ಇಸಿಟಿ ಕಂಪನಿಯು ರಾಜ್ಯದ 6 ಸಾವಿರ ಅಭ್ಯರ್ಥಿಗಳಿಗೆ ಮತ್ತು ಇನ್ಫಿಕ್ವಿಟಿ ಕಂಪನಿಯು 250 ಜನರಿಗೆ ಉದ್ಯೋಗಾವಕಾಶ ನೀಡಿದೆ. ಈ ಪರಂಪರೆ ಮುಂದುವರೆಸಲು ಒಡಂಬಡಿಕೆ ಮಾಡಿಕೊಳ್ಳಲಾಗಿದೆ ಎಂದರು.
 

click me!