ಭಾರತದಲ್ಲಿ ಅದ್ರಲ್ಲೂ ಮೆಟ್ರೋ ಸಿಟಿಗಳಲ್ಲಿ ಜೀವನ ನಡೆಸೋದು ಸುಲಭವಲ್ಲ. ಲಕ್ಷ ಲಕ್ಷ ಸಂಬಳ ಬಂದ್ರೂ ಉಳಿತಾಯ ಶೂನ್ಯವಾಗಿರುತ್ತದೆ. ಈ ವಿಷ್ಯವನ್ನು ಹೂಡಿಕೆದಾರರೊಬ್ಬರು ಪೋಸ್ಟ್ ಮಾಡಿದ್ದಾರೆ. ಐಟಿ ವೇತನದ ಬಗ್ಗೆಯೂ ಅವರು ಪ್ರಶ್ನೆ ಮಾಡಿದ್ದು, ಅದೀಗ ತೀವ್ರ ಚರ್ಚೆಗೆ ಕಾರಣವಾಗಿದೆ.
ಕೇಂದ್ರ ಬಜೆಟ್ (Central Budget) ನಂತ್ರ ಮಧ್ಯಮ ವರ್ಗ ಮತ್ತು ತೆರಿಗೆ (tax) ವ್ಯವಸ್ಥೆ ಬಗ್ಗೆ ನಿರಂತರ ಚರ್ಚೆ ನಡೆಯುತ್ತಿದೆ. ಈ ವಿಚಾರವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಜನರು ಪ್ರಶ್ನೆಗಳನ್ನು ಎತ್ತುತ್ತಲೇ ಇದ್ದಾರೆ. ಈಗ ಅದಕ್ಕೆ ಸಂಬಂಧಿಸಿದ ಇನ್ನೊಂದು ಪೋಸ್ಟ್ ಚರ್ಚೆಗೆ ಬಂದಿದೆ. ಇಂದಿನ ಕಾಲದಲ್ಲಿ ವಾರ್ಷಿಕ 25 ಲಕ್ಷ ಸಂಬಳ (salary) ಪಡೆಯುವುದ್ರಿಂದಲೂ ಏನೂ ಪ್ರಯೋಜನವಿಲ್ಲ. ಈ ಸಂಬಳದಿಂದ ಯಾವುದೇ ಮಹಾನ್ ಕೆಲಸ ಮಾಡಲು ಸಾಧ್ಯವಿಲ್ಲ ಎಂದು ಹೂಡಿಕೆದಾರ (Investor) ರೊಬ್ಬರು ಅಭಿಪ್ರಾಯಪಟ್ಟಿದ್ದಾರೆ.
ಹೂಡಿಕೆದಾರರೊಬ್ಬರು ಪ್ರಸ್ತುತ ಸಂಬಳದ ಬಗ್ಗೆ ಚರ್ಚೆ ಶುರು ಮಾಡಿದ್ದಾರೆ. ಅವರ ಹೆಸರು ಸೌರವ್ ದತ್ತಾ. ಅವರು ಷೇರು ಮಾರುಕಟ್ಟೆ ವ್ಯಾಪಾರಿ ಮತ್ತು ಹೂಡಿಕೆದಾರರಾಗಿದ್ದಾರೆ. ಅವರ ಪ್ರಕಾರಮ ಇಂದಿನ ಕಾಲಘಟ್ಟದಲ್ಲಿ ವಾರ್ಷಿಕ 25 ಲಕ್ಷ ರೂಪಾಯಿ ಸಂಬಳ ಏನೂ ಇಲ್ಲ.ಇಂದಿನ ಕಾಲದಲ್ಲಿ, 25 ಎಲ್‌ಪಿಎ ಸಂಬಳ ಏನೂ ಅಲ್ಲ. 3-5 ವರ್ಷಗಳ ಅನುಭವವಿರುವ ಸಾಫ್ಟ್‌ವೇರ್ ಇಂಜಿನಿಯರ್ ಕೂಡ ಇದಕ್ಕಿಂತ ಹೆಚ್ಚು ಸಂಪಾದಿಸುತ್ತಾನೆ. ಟೆಕ್ ಸಂಬಳವು ಮಾರುಕಟ್ಟೆಯ ಮೇಲೆ ಪರಿಣಾಮ ಬೀರುತ್ತಿದೆಯೇ? ಎಂದು ಅವರು ತಮ್ಮ ಪೋಸ್ಟ್ ಗೆ ಶೀರ್ಷಿಕೆ ಹಾಕಿದ್ದಾರೆ.
undefined
ಜಾಬ್ ಕಟ್ ನಡುವೆ ಭಾರತದಲ್ಲಿ 20 ಸಾವಿರ ಉದ್ಯೋಗಿಗಳ ನೇಮಕ ಘೋಷಿಸಿದ ಟೆಕ್ ದೈತ್ಯ ಒರಾಕಲ್!
ಟೆಕ್ ಕಂಪನಿಗಳು ನೀಡುವ ಹೆಚ್ಚಿನ ಸಂಬಳವು ಮಾರುಕಟ್ಟೆಗೆ ಸರಿಯಾಗಿಲ್ಲ ಎಂದು ದತ್ತಾ ಅಭಿಪ್ರಾಯಪಟ್ಟಿದ್ದಾರೆ. 5 ವರ್ಷಗಳ ಅನುಭವದ ನಂತರ ವಾರ್ಷಿಕ 30 ಲಕ್ಷ ರೂಪಾಯಿ ಸಂಬಳ ಸಾಮಾನ್ಯವಾಗಿದೆ. ಈ ಐಟಿ ಜನರು ಎಷ್ಟು ಸಂಪಾದಿಸಲು ಪ್ರಾರಂಭಿಸಿದ್ದಾರೆ ಎಂದು ತಿಳಿದರೆ ನಿಮಗೆ ಆಶ್ಚರ್ಯವಾಗುತ್ತದೆ. 5 ವರ್ಷ 30 ಲಕ್ಷ ಸಂಪಾದನೆ ಅವರಿಗೆ ಸಾಮಾನ್ಯವಾಗಿದೆ ಎಂದು ಸೌರವ್ ದತ್ತಾ ಬರೆದಿದ್ದಾರೆ.
ಸೌರವ್ ದತ್ತಾ ಈ ಪೋಸ್ಟ್ ವೈರಲ್ ಆಗಿದೆ. ಇದಕ್ಕೆ ಸಾಕಷ್ಟು ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ ಬಂದಿದೆ. ಟೆಕ್ ಮಹೀಂದ್ರಾ, ಟಿಸಿಎಸ್ ಮತ್ತು ಇನ್ಫೋಸಿಸ್‌ನಂತಹ ಭಾರತದ ಪ್ರಮುಖ ಐಟಿ ಕಂಪನಿಗಳಲ್ಲಿನ ಅನೇಕ ಟೆಕ್ ಉದ್ಯೋಗಿಗಳು ಸಂಬಳ ಸ್ಥಗಿತದ ಸಮಸ್ಯೆ ಎದುರಿಸುತ್ತಿದ್ದಾರೆ. ಕೋವಿಡ್ ನಂತ್ರ ಐಟಿ ಕ್ಷೇತ್ರದ ಸ್ಥಿತಿ ಬಿಗಡಾಯಿಸಿದೆ. ಐಟಿ ಕಂಪನಿಗಳ ನೇಮಕಾತಿ ಫ್ರೀಜ್ ನಲ್ಲಿದ್ದು, ಅನೇಕ ಕಂಪನಿ ಉದ್ಯೋಗಿಗಳನ್ನು ವಜಾಗೊಳಿಸಿದೆ. ಈ ಸಮಯದಲ್ಲಿ ಸೌರವ್ ದತ್ತಾ ಪೋಸ್ಟ್ ಮತ್ತಷ್ಟು ಜನರನ್ನು ಕೆರಳಿಸಿದೆ.
ಕೇವಾಲ್ ಎಂಬ ಎಕ್ಸ್ ಖಾತೆ ಬಳಕೆದಾರರೊಬ್ಬರು ದತ್ತಾ ಈ ಪೋಸ್ಟ್ ಗೆ ಸವಾಲು ಹಾಕಿದ್ದಾರೆ. 10 ವರ್ಷದಲ್ಲಿ ಟೆಕ್ಕಿ ಉದ್ಯೋಗಿಗಳು 25 ಲಕ್ಷ ಪ್ಯಾಕೇಜ್ ಪಡೆಯುತ್ತಾರೆ. 3-5 ವರ್ಷದಲ್ಲಿ 30 ಲಕ್ಷ ಪ್ಯಾಕೇಜ್ ಪಡೆಯುವ ಉದ್ಯೋಗಿಗಳು ಯಾರಿದ್ದಾರೆ? ನಾನು ಐಟಿ ಕಂಪನಿಯಲ್ಲಿ ಕೆಲಸ ಮಾಡುವ ಅನೇಕ ಸ್ನೇಹಿತರನ್ನು ಹೊಂದಿದ್ದೇನೆ. ಕೆಲ ಸ್ಟಾರ್ಟ್ ಅಪ್ ಕಂಪನಿಯಲ್ಲಿ ಇಷ್ಟು ದೊಡ್ಡ ಮಟ್ಟದ ಸಂಬಳ ನೀಡ್ಬಹುದೇ ವಿನಃ ದೊಡ್ಡ ಐಟಿ ಕಂಪನಿಯಲ್ಲಿ ಇದು ಸಾಧ್ಯವಿಲ್ಲ ಎಂದು ಬರೆದಿದ್ದಾರೆ.
AI ಮೇಲೆ ಹೆಚ್ಚಿನ ಗಮನ, 12,500 ಉದ್ಯೋಗಿಗಳ ವಜಾ ಮಾಡಿದ ಡೆಲ್!
ಸ್ಟಾರ್ಟ್‌ಅಪ್‌ಗಳು ಮತ್ತು ಅಮೇರಿಕನ್ ಕಂಪನಿಗಳು ಇಷ್ಟು ಹಣವನ್ನು ಪಾವತಿಸಬಹುದು, ಆದರೆ ಭಾರತೀಯ ಎಂಎನ್ಸಿಯಲ್ಲಿ ಇದು ಸಾಧ್ಯವಿಲ್ಲ. 5 ವರ್ಷಗಳ ಅನುಭವದೊಂದಿಗೆ ಶೇಕಡಾ 20ರಷ್ಟು ಜನರು 25 ಲಕ್ಷ ಗಳಿಸುತ್ತಾರೆ. ಹೆಚ್ಚಿನ ಶೇಕಡಾ 80ರಷ್ಟು ಜನರು ಇನ್ನೂ 5 ವರ್ಷಗಳಲ್ಲಿ 10 ಲಕ್ಷದವರೆಗೆ ಹೋಗಿರೋದಿಲ್ಲ ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ. ಈಗಿನ ಪರಿಸ್ಥಿತಿ ಮೊದಲಿನಂತಿಲ್ಲ. ಭಾರತದ ಟಾಪ್ ಐದು ಕಂಪನಿಗಳು ಮೊದಲಿನಂತೆ ಈಗ ಸಂಬಳ ಹೆಚ್ಚಿಸುತ್ತಿಲ್ಲ. ನಿಮ್ಮ ಮಾತನ್ನು ನಾನು ಒಪ್ಪುತ್ತೇನೆ. ಮುಂಬೈ ಅಥವಾ ಬೆಂಗಳೂರಿನಂತಹ ನಗರದಲ್ಲಿ 3 ಅಥವಾ 4 ಜನರ ಕುಟುಂಬಕ್ಕೆ 25 ಲಕ್ಷ ರೂಪಾಯಿ ಸಾಲದು ಎಂದು ಇನ್ನೊಬ್ಬರು ಬರೆದಿದ್ದಾರೆ.