ಹೊಸೂರು ಐಫೋನ್ ಕಾರ್ಖಾನೆಯಲ್ಲಿ 45 ಸಾವಿರ ಕಾರ್ಮಿಕರ ನೇಮಕಕ್ಕೆ Tata Group ತಯಾರಿ

By Gowthami KFirst Published Nov 5, 2022, 7:18 PM IST
Highlights

ಟಾಟಾ ಗ್ರೂಪ್ ಬಹುದೊಡ್ಡ ಮಟ್ಟದಲ್ಲಿ ಅಂದರೆ ಬರೋಬ್ಬರಿ 45 ಸಾವಿರ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳಲು ತಯಾರಿ ನಡೆಸುತ್ತಿದೆ ಎಂದು ತಿಳಿದುಬಂದಿದೆ.

ಬೆಂಗಳೂರು (ನ.5): ಟಾಟಾ ಗ್ರೂಪ್ ಬಹುದೊಡ್ಡ ಮಟ್ಟದಲ್ಲಿ ಅಂದರೆ ಬರೋಬ್ಬರಿ 45 ಸಾವಿರ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳಲು ತಯಾರಿ ನಡೆಸುತ್ತಿದೆ ಎಂದು ತಿಳಿದುಬಂದಿದೆ. ತಮಿಳುನಾಡಿನ ಹೊಸೂರಿನ ತನ್ನ ಎಲೆಕ್ಟ್ರಾನಿಕ್ ಫ್ಯಾಕ್ಟರಿಯಲ್ಲಿ  ಐಫೋನ್ ಘಟಕದಲ್ಲಿ ಬಿಡಿ ಭಾಗಗಳನ್ನು ತಯಾರಿಸುವ ಉದ್ಯೋಗಿಗಳ ಸಂಖ್ಯೆಯನ್ನು ಹೆಚ್ಚಿಸಲು ಯೋಜಿಸುತ್ತಿದೆ ಎನ್ನಲಾಗಿದೆ.  ಟಾಟಾ ಗ್ರೂಪ್ ಆಪಲ್ ಇಂಕ್‌ನಿಂದ ಹೆಚ್ಚಿನ ಆದೇಶಗಳನ್ನು ನೋಡುತ್ತಿರುವುದರಿಂದ ಇದು ಮಹತ್ವವನ್ನು ಪಡೆದುಕೊಳ್ಳುತ್ತದೆ. ಟಾಟಾ ಗ್ರೂಪ್ 45 ಸಾವಿರ ಉದ್ಯೋಗಿಗಳ ನೇಮಮಕ್ಕೆ ಮುಂದಾಗಿರುವ ಬಗ್ಗೆ ಪ್ರತಿಷ್ಠಿತ ಬ್ಲೂಮ್‌ಬರ್ಗ್‌ನಲ್ಲಿ ವರದಿ ಮಾಡಲಾಗಿದೆ. ವರದಿ ಪ್ರಕಾರ ಹೊಸೂರು ಕಾರ್ಖಾನೆಯಲ್ಲಿ ಹೊಸ ಉತ್ಪಾದನಾ  ಘಟಕ ಸ್ಥಾಪನೆ ಹಿನ್ನೆಲೆ 18-24 ತಿಂಗಳೊಳಗೆ  ಈ ನೇಮಕಾತಿಯನ್ನು ಪೂರ್ಣಗೊಳಿಸಲಿದೆ. ಕಾರ್ಖಾನೆಯು ಈಗಾಗಲೇ 10,000 ಕಾರ್ಮಿಕರನ್ನು ನೇಮಿಸಿಕೊಂಡಿದ್ದು, ಅದರಲ್ಲಿ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. 

ಕಾರ್ಖಾನೆಯು 500 ಎಕರೆಗೂ ಹೆಚ್ಚು ವಿಸ್ತಾರವಾಗಿದ್ದು,  ಸೆಪ್ಟೆಂಬರ್‌ನಲ್ಲಿ ಇದು ಸುಮಾರು 5,000 ಮಹಿಳೆಯರನ್ನು ನೇಮಿಸಿಕೊಂಡಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಈ ಎಲ್ಲಾ ಸುದ್ದಿಗಳು ಹಬ್ಬಿದರೂ ಟಾಟಾ ಮತ್ತು ಆಪಲ್ ಹೊಸೂರಿನ ತಮ್ಮ ಘಟಕದಲ್ಲಿ ನೇಮಕಾತಿ ಯೋಜನೆ ಹಾಕಿಕೊಂಡಿರುವ ಬಗ್ಗೆ ಯಾವುದೇ ವಿಷಯ ಬಹಿರಂಗಪಡಿಸಿಲ್ಲ.

India Post Office Recruitment: ಬರೋಬ್ಬರಿ 98083 ಹುದ್ದೆಗಳ ಭರ್ತಿಗೆ ಅಧಿಸೂಚನೆ

ಹೊಸೂರು ಕಾರ್ಖಾನೆಯಲ್ಲಿ ಮಹಿಳಾ ಕಾರ್ಮಿಕರು 16,000 ರೂ.ಗಳ ಒಟ್ಟು ವೇತನವನ್ನು ಪಡೆಯುತ್ತಾರೆ, ಇದು ಉದ್ಯಮದ ಸರಾಸರಿಗಿಂತ ಹೆಚ್ಚು ಎಂದು ವರದಿಯಲ್ಲಿ ಸೇರಿಸಲಾಗಿದೆ. ಕಾರ್ಮಿಕರು ಕ್ಯಾಂಪಸ್‌ನಲ್ಲಿ ಊಟ ಮತ್ತು ವಸತಿಯನ್ನು ಸಹ ಪಡೆಯುತ್ತಾರೆ. ಇದಲ್ಲದೆ, ಟಾಟಾ ಕಾರ್ಮಿಕರಿಗೆ ತರಬೇತಿ ಮತ್ತು ಶಿಕ್ಷಣವನ್ನು ನೀಡಲು ಕೂಡ ಯೋಜನೆ ಹಾಕಿಕೊಳ್ಳಲಾಗಿದೆ.  ಭಾರತದಲ್ಲಿ ಐಫೋನ್‌ಗಳನ್ನು ಹೆಚ್ಚು ಉತ್ಪಾದನೆ ಮಾಡಲು, ಎಲೆಕ್ಟ್ರಾನಿಕ್ಸ್ ಉತ್ಪಾದನಾ ಜಂಟಿ ಉದ್ಯಮವನ್ನು ಸ್ಥಾಪಿಸಲು ಟಾಟಾ ಗ್ರೂಪ್ ವಿಸ್ಟ್ರಾನ್‌ನೊಂದಿಗೆ ಮಾತುಕತೆ ನಡೆಸುತ್ತಿದೆ ಎಂಬುದು ಗಮನಾರ್ಹ ಸಂಗತಿಯಾಗಿದೆ.

IISC RECRUITMENT 2022: ಬೆಂಗಳೂರಿನಲ್ಲಿ ಬಂಪರ್ ಆಫರ್

COVID ಲಾಕ್‌ಡೌನ್‌ಗಳು ಮತ್ತು ಯುಎಸ್‌ನೊಂದಿಗಿನ ರಾಜಕೀಯ ಉದ್ವಿಗ್ನತೆಗಳಿಂದ ಜರ್ಜರಿತವಾಗಿರುವ ಚೀನಾದಿಂದ ಹೊರಗೆ ತನ್ನ ಉತ್ಪಾದನಾ ನೆಲೆಯನ್ನು ಬದಲಾಯಿಸಲು ಆಪಲ್ ನೋಡುತ್ತಿದೆ. ಕಂಪನಿಯು ಚೀನಾದಿಂದ ತನ್ನ ಉತ್ಪಾದನೆಯನ್ನು ವೈವಿಧ್ಯಗೊಳಿಸಲು ಮತ್ತು ಭಾರತದಲ್ಲಿ ತನ್ನ ಪೂರೈಕೆ ಸರಪಳಿಯನ್ನು ಆಳಗೊಳಿಸಲು ಬಯಸಿದೆ.

SAIL Recruitment 2022: ವಿವಿಧ 245 ಮ್ಯಾನೇಜ್ ಮೆಂಟ್ ಟ್ರೈನಿ ಹುದ್ದೆಗಳ ನೇಮಕಾತಿ

click me!