ವಿಧಾನಸಭೆ ಮಾಜಿ ಅಧ್ಯಕ್ಷ ಕೆ.ಬಿ. ಕೋಳಿವಾಡ ಅವರ 79ನೇ ಜನ್ಮ ದಿನದ ಅಂಗವಾಗಿ ನ. 1ರಂದು ನಗರದ ಬಿ.ಕೆ. ಗುಪ್ತಾ ಹೈಸ್ಕೂಲ್‌ನಲ್ಲಿ ಉದ್ಯೋಗ ಮೇಳ ಹಮ್ಮಿಕೊಳ್ಳಲಾಗಿದೆ. ಸೋದರಿ ನಿವೇದಿತಾ ಹಾಗೂ ಸರ್ದಾರ ವಲ್ಲಭಭಾಯಿ ಪಟೇಲ್ ಜಯಂತಿ ನಿಮಿತ್ತವಾಗಿ ಬೆಳಗಾವಿಯಲ್ಲಿ ಅ.31ರಂದು ಉದ್ಯೋಗ ಮೇಳ ಹಮ್ಮಿಕೊಳ್ಳಲಾಗಿದೆ.
ರಾಣಿಬೆನ್ನೂರು (ಅ.29): ವಿಧಾನಸಭೆ ಮಾಜಿ ಅಧ್ಯಕ್ಷ ಕೆ.ಬಿ. ಕೋಳಿವಾಡ ಅವರ 79ನೇ ಜನ್ಮ ದಿನದ ಅಂಗವಾಗಿ ನಮ್ಮ ಸಂಸ್ಥೆ ವತಿಯಿಂದ ನ. 1ರಂದು ನಗರದ ಬಿ.ಕೆ. ಗುಪ್ತಾ ಹೈಸ್ಕೂಲ್‌ನಲ್ಲಿ ಉದ್ಯೋಗ ಮೇಳ ಹಮ್ಮಿಕೊಳ್ಳಲಾಗಿದೆ ಎಂದು ಪಿಕೆಕೆ (ಪಕ್ಷಾತೀತ ಕಾಯಕದ ಕನಸು) ಇನಿಷಿಯೇಟಿವ್‌್ಸ ಅಧ್ಯಕ್ಷ ಪ್ರಕಾಶ ಕೋಳಿವಾಡ ಹೇಳಿದರು. ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 79 ಕಂಪನಿಗಳ ವತಿಯಿಂದ 5 ಸಾವಿರ ಹುದ್ದೆಗಳನ್ನು ಭರ್ತಿ ಮಾಡಲಾಗುವುದು. ಕಂಪನಿಗಳು ಅರ್ಹತೆ ಆಧಾರದ ಮೇಲೆ ಕೆಲಸ ನೀಡುತ್ತವೆ. ಸಂದರ್ಶನ ಎದುರಿಸುವ ಕೌಶಲ್ಯಗಳ ಕುರಿತು ನೋಂದಾಯಿತ ಅಭ್ಯರ್ಥಿಗಳಿಗೆ ಅ. 31ರಂದು ನಗರದ ಬಳ್ಳಾರಿ ಕಲ್ಯಾಣಮಂಟಪದಲ್ಲಿ ವೃತ್ತಿ ನಿರತರಿಂದ ತರಬೇತಿ ನೀಡಲಾಗುವುದು. ಆಸಕ್ತರು ಆನ್‌ಲೈನ್ ಮೂಲಕ ನೋಂದಣಿ ಮಾಡಿಕೊಳ್ಳಬೇಕು. ಆಫ್‌ಲೈನ್ ಮೂಲಕವೂ ನೋಂದಣಿಗೆ ಅವಕಾಶ ಕಲ್ಪಿಸಲಾಗಿದ್ದು, ಇಲ್ಲಿನ ವಿನಾಯಕನಗರದ ಕೆ.ಬಿ. ಕೋಳಿವಾಡ ಸಭಾಭವನದಲ್ಲಿ ಇದಕ್ಕಾಗಿ ವ್ಯವಸ್ಥೆ ಮಾಡಲಾಗಿದೆ. 7ನೇ ಬೃಹತ್ ಉದ್ಯೋಗ ಮೇಳ ಇದಾಗಿದ್ದು ಪ್ರತಿಯೊಂದು ಬೂತ್ ಮಟ್ಟಕ್ಕೆ ಈಗಾಗಲೇ ಮಾಹಿತಿ ನೀಡಲಾಗಿದೆ. ಈ ಬಾರಿ ನೂರು ಜನರ ಅಂಗವಿಕಲರಿಗೆ ಉದ್ಯೋಗ ನೀಡುವ ಉದ್ದೇಶ ಹೊಂದಲಾಗಿದ್ದು ಅದಕ್ಕಾಗಿಯೇ ಕೆಲವೊಂದು ಕಂಪನಿಗಳು ನೇಮಕಾತಿ ಮಾಡಿಕೊಳ್ಳಲು ಆಗಮಿಸುತ್ತಿವೆ. ಹೆಚ್ಚಿನ ಮಾಹಿತಿಗೆ 9731568854, 9922447088ಗೆ ಸಂಪರ್ಕಿಸಬಹುದು ಎಂದರು. ಗಂಗಾಧರ ಬಣಕಾರ, ಇರ್ಫಾನ ದಿಡಗೂರ, ವೆಂಕಟೇಶ ಬಣಕಾರ, ವಸಂತ ಲಮಾಣಿ ಸುದ್ದಿಗೋಷ್ಠಿಯಲ್ಲಿದ್ದರು.
ಅಕ್ಟೋಬರ್ 31ರಂದು ಗೊಡಚಿಯಲ್ಲಿ ಉದ್ಯೋಗ ಮೇಳ
ಬೆಳಗಾವಿ: ಸೋದರಿ ನಿವೇದಿತಾ ಹಾಗೂ ಸರ್ದಾರ ವಲ್ಲಭಭಾಯಿ ಪಟೇಲ್ ಜಯಂತಿ ನಿಮಿತ್ತವಾಗಿ ರಾಮದುರ್ಗದ ಗೊಡಚಿ ಶ್ರೀ ವೀರಭದ್ರೇಶ್ವರ ದೇವಸ್ಥಾನದ ಹತ್ತಿರ ಇರುವ ಶಿವಾನುಭವ ಕಲ್ಯಾಣ ಮಂಟಪದಲ್ಲಿ ಅ.31ರಂದು ಬೆಳಿಗ್ಗೆ 9 ಗಂಟೆಯಿಂದ ಸಂಜೆ 4ರವರೆಗೆ ಇದೇ ಮೊದಲ ಬಾರಿಗೆ ರಾಮದುರ್ಗದಲ್ಲಿ ಬಹೃತ್ ಉದ್ಯೋಗ ಮೇಳ ನಡೆಯಲಿದೆ ಎಂದು ಜಿ.ಎಂ. ಇಂಡಸ್ಟ್ರಿ ಅಧ್ಯಕ್ಷೆ ಡಾ. ರೇಖಾ ಚಿನ್ನಾಕಟ್ಟಿಹೇಳಿದರು.
undefined
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಸಾಕಷ್ಟುವಿದ್ಯಾರ್ಥಿಗಳು ಶಿಕ್ಷಣ ಪಡೆದು ಉದ್ಯೋಗ ಇಲ್ಲದೆ ಮನೆಯಲ್ಲಿ ಇದ್ದಾರೆ. ಆ ಯುವಕರನ್ನು ಗುರುತಿಸಿ ಅವರಿಗೆ ಉದ್ಯೋಗಾವಕಾಶ ಕಲ್ಪಿಸುವ ನಿಟ್ಟಿನಲ್ಲಿ ಉದ್ಯೋಗ ಮೇಳ ಆಯೋಜಿಸಲಾಗಿದೆ ಎಂದರು.
Central Silk Board Recruitment 2022: ಸೈಂಟಿಸ್ಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ
7ನೇ ತರಗತಿಯಿಂದ ಸ್ನಾತಕೋತ್ತರ ಪದವಿ ಪಡೆದಿರುವ ಯುವಕ, ಯುವತಿಯರು ಈ ಉದ್ಯೋಗ ಮೇಳದಲ್ಲಿ ಭಾಗವಹಿಸಬಹುದಾಗಿದೆ. ರಾಜ್ಯದ ಪ್ರಮುಖ 50ಕ್ಕೂ ಅಧಿಕ ಸಂಸ್ಥೆಗಳು ಈ ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳಲಿವೆ. ಈ ಮೇಳದಲ್ಲಿ ಭಾಗವಹಿಸುವ ಅಭ್ಯರ್ಥಿಗಳು ತಮ್ಮ ಶೈಕ್ಷಣಿಕ ದಾಖಲೆಗಳ ಝರಾಕ್ಸ್ ಪ್ರತಿ ಹಾಗೂ ಪಾಸ್‌ಫೋರ್ಚ್ ಸೈಜ್ ಫೋಟೋ ಜತೆಗೆ ಆಧಾರ್ ಕಾರ್ಡ್‌ನೊಂದಿಗೆ ನೇರ ಸಂದರ್ಶನದಲ್ಲಿ ಹಾಜರಾಗಬೇಕೆಂದರು.
ಬಳ್ಳಾರಿ ಸಮುದಾಯ ಆರೋಗ್ಯ ಅಧಿಕಾರಿಗಳ ಹುದ್ದೆಗೆ ಅರ್ಜಿ ಆಹ್ವಾನ
ಯುವಕರಿಗೆ ಉದ್ಯೋಗಾವಕಾಶ ಹಾಗೂ ಸ್ವಾವಲಂಭಿ ಜೀವನ ನಡೆಸುವ ಉದ್ದೇಶದಿಂದ ಈ ಉದ್ಯೋಗ ಮೇಳವನ್ನು ಆಯೋಜಿಸಲಾಗಿದ್ದು, ಏಳನೇ ತರಗತಿಯಿಂದ ಪಿಯುಸಿ, ಡಿಗ್ರಿ, ಪಿಜಿ, ಬಿಇ, ಎಂಜನಿಯರಿಂಗ್, ಡಿಪ್ಲೋಮಾ, ಬಿಎಸ್ಸಿ, ಫಾರ್ಮಾಸಿ, ಬಿಸಿಎ, ಬಿಬಿಎ, ಎಂಬಿಎ, ಎಂಸಿಎ ವಿದ್ಯಾರ್ಥಿಗಳಿಗೆ ಸುವರ್ಣಾವಕಾಶವಿದ್ದು ಇದರ ಲಾಭವನ್ನು ಪಡೆದುಕೊಳ್ಳಬೇಕೆಂದು ಕರೆ ನೀಡಿದರು. ಈ ಸುದ್ದಿಗೋಷ್ಠಿಯಲ್ಲಿ ವಿಠ್ಠಲ ನಾಯಕ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.