Twitterನ ಶೇ. 50 ರಷ್ಟು ಸಿಬ್ಬಂದಿ ಕಿತ್ತೊಗೆಯಲು ಎಲಾನ್‌ ಮಸ್ಕ್‌ ಪ್ಲ್ಯಾನ್‌..!

Published : Nov 03, 2022, 12:17 PM IST
Twitterನ ಶೇ. 50 ರಷ್ಟು ಸಿಬ್ಬಂದಿ ಕಿತ್ತೊಗೆಯಲು ಎಲಾನ್‌ ಮಸ್ಕ್‌ ಪ್ಲ್ಯಾನ್‌..!

ಸಾರಾಂಶ

ಉದ್ಯೋಗಿಗಳನ್ನು ವಜಾಗೊಳಿಸುವುದು ಮಾತ್ರವಲ್ಲ, ಟ್ವಿಟ್ಟರ್‌ನ ಪ್ರಸ್ತುತ ವರ್ಕ್‌ ಫ್ರಮ್‌ ಎನಿವೇರ್‌ (ಎಲ್ಲಿಂದ ಬೇಕಾದರೂ ಕೆಲಸ ಮಾಡಬಹುದು) ನೀತಿಯನ್ನು ಸಹ ಎಲಾನ್‌ ಮಸ್ಕ್‌ ಬದಲಾವಣೆ ಮಾಡಲಿದ್ದಾರೆ ಎಂದೂ ಬ್ಲೂಮ್‌ಬರ್ಗ್‌ ವರದಿ ಹೇಳುತ್ತದೆ. ಮೈಕ್ರೋ ಬ್ಲಾಗಿಂಗ್‌ ಜಾಲತಾಣದ ಈ ನೀತಿಯನ್ನು ತೆಗೆದು ಉದ್ಯೋಗಿಗಳಿಗೆ ಕಚೇರಿಗೆ ಬರುವಂತೆ ತಿಳಿಸಲಾಗುವುದು ಎಂದೂ ವರದಿ ಹೇಳುತ್ತದೆ. ಆದರೂ, ಕೆಲವು ವಿನಾಯಿತಿಗಳನ್ನು ನೀಡುತ್ತಾರೆ ಎಂದು ಹೇಳಲಾಗಿದೆ.   

ಎಲಾನ್‌ ಮಸ್ಕ್‌ (Elon Musk) ಟ್ವಿಟ್ಟರ್‌ನ (Twitter) ಅಧಿಪತಿಯಾಗಿದ್ದು, ಅವರು ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ಸಂಸ್ಥೆಯ ಸಿಇಒ (CEO) ಹಾಗೂ ಪ್ರಮುಖ ಕಾನೂನು ಅಧಿಕಾರಿಯನ್ನು (Chief Legal Officer) ಕಿತ್ತೊಗೆದಿದ್ದರು. ಈಗ, ಅವರು ಸಂಸ್ಥೆಯ ಸುಮಾರು ಅರ್ಧದಷ್ಟು ಉದ್ಯೋಗಿಗಳನ್ನು ಕಿತ್ತೊಗೆಯಲು ಪ್ಲ್ಯಾನ್‌ ಮಾಡುತ್ತಿದ್ದಾರೆ ಎಂದು ವರದಿಯಾಗಿದೆ. ಕಂಪನಿಯ ವೆಚ್ಚ ಕಡಿತ (Cost Cut) ಮಾಡಲು ಸಂಸ್ಥೆಯ ಸುಮಾರು 3,700 ಉದ್ಯೋಗಿಗಳನ್ನು ಕೆಲಸದಿಂದ ವಜಾ ಮಾಡಲಾಗುತ್ತದೆ (Lay Off) ಎಂದು ಬ್ಲೂಮ್‌ಬರ್ಗ್‌ (Bloomberg) ವರದಿ ಮಾಡಿದೆ. ಶುಕ್ರವಾರ ಈ ಬಗ್ಗೆ ಸಿಬ್ಬಂದಿಗೆ ಎಲಾನ್‌ ಮಸ್ಕ್‌ ಮಾಹಿತಿ ನೀಡಲಿದ್ದಾರೆ ಎಂದೂ ಈ ವರದಿ ಹೇಳುತ್ತದೆ. 
 
ಉದ್ಯೋಗಿಗಳನ್ನು ವಜಾಗೊಳಿಸುವುದು ಮಾತ್ರವಲ್ಲ, ಟ್ವಿಟ್ಟರ್‌ನ ಪ್ರಸ್ತುತ ವರ್ಕ್‌ ಫ್ರಮ್‌ ಎನಿವೇರ್‌ (ಎಲ್ಲಿಂದ ಬೇಕಾದರೂ ಕೆಲಸ ಮಾಡಬಹುದು) ನೀತಿಯನ್ನು (Work From Anywhere Policy) ಸಹ ಎಲಾನ್‌ ಮಸ್ಕ್‌ ಬದಲಾವಣೆ ಮಾಡಲಿದ್ದಾರೆ ಎಂದೂ ಬ್ಲೂಮ್‌ಬರ್ಗ್‌ ವರದಿ ಹೇಳುತ್ತದೆ. ಮೈಕ್ರೋ ಬ್ಲಾಗಿಂಗ್‌ ಜಾಲತಾಣದ ಈ ನೀತಿಯನ್ನು ತೆಗೆದು ಉದ್ಯೋಗಿಗಳಿಗೆ ಕಚೇರಿಗೆ ಬರುವಂತೆ ತಿಳಿಸಲಾಗುವುದು ಎಂದೂ ವರದಿ ಹೇಳುತ್ತದೆ. ಆದರೂ, ಕೆಲವು ವಿನಾಯಿತಿಗಳನ್ನು ನೀಡುತ್ತಾರೆ ಎಂದು ಹೇಳಲಾಗಿದೆ. 

ಇದನ್ನು ಓದಿ: Twitter ಭಾಗವಾಗಿಲ್ಲ ಎಂದು ಪರಾಗ್‌ ಅಗರ್ವಾಲ್‌ ಸ್ಪಷ್ಟನೆ : ಭಾರತೀಯ ಮೂಲದವರಿಗೆ ಸಿಗುವ ಪರಿಹಾರ ಎಷ್ಟು ಗೊತ್ತಾ..?
 
ಇದಕ್ಕೂ ಮುನ್ನ, ಷೇರು ಅನುದಾನವನ್ನು ನೀಡುವುದನ್ನು ತಪ್ಪಿಸಲು ನವೆಂಬರ್‌ 1 ರೊಳಗೆ ಹಲವು ಟ್ವಿಟ್ಟರ್‌ ಕಂಪನಿಯ ಸಿಬ್ಬಂದಿಯನ್ನು ತೆಗೆದುಹಾಕಲಾಗುತ್ತದೆ ಎಂಬ ನ್ಯೂಯಾರ್ಕ್‌ ಟೈಮ್ಸ್‌ ವರದಿಯನ್ನು ಎಲಾನ್‌ ಮಸ್ಕ್‌ ಟ್ವೀಟ್‌ ಮೂಲಕ ತಳ್ಳಿಹಾಕಿದ್ದರು. ಆದರೆ, ಟ್ವಿಟ್ಟರ್‌ ಅನ್ನು ಖಾಸಗಿಯಾಗಿ ಮಾಡಲು ಹಾಗೂ ಸಿಬ್ಬಂದಿಯನ್ನು ಕಡಿಮೆ ಮಾಡಲು, ಕಂಟೆಂಟ್‌ ಮಾಡರೇಷನ್‌ ನಿಯಮಗಳನ್ನು ಹಿಂಪಡೆಯಲು ಹಾಗೂ ಹೊಸ ಆದಾಯದ ಮೂಲಗಳನ್ನು ಹುಡುಕುವುದಾಗಿ ಎಲಾನ್‌ ಮಸ್ಕ್‌ ಟ್ವಿಟ್ಟರ್‌ ಕಂಪನಿಯ ಹೂಡಿಕೆದಾರರಿಗೆ ತಿಳಿಸಿದ್ದರು ಎಂದೂ ಮಾಧ್ಯಮಗಳ ವರದಿಗಳು ಹೇಳುತ್ತವೆ. 
 
ಹಕ್ಕಿ ಮುಕ್ತವಾಗಿದೆ ಎಂದಿದ್ದ ಎಲಾನ್‌ ಮಸ್ಕ್..!
ಇನ್ನು, ಹಲವು ತಿಂಗಳ ಹಗ್ಗ ಜಗ್ಗಾಟದ ಬಳಿಕ ಎಲಾನ್‌ ಮಸ್ಕ್‌ ಟ್ವಿಟ್ಟರ್‌ ಒಪ್ಪಂದವನ್ನು ಅಂತಿಮಗೊಳಿಸಿದ್ದಾರೆ. ಈ ವೇಳೆ, ಅವರು ಹಕ್ಕಿ ಮಕ್ತವಾಗಿದೆ ಎಂಬ ಟ್ವೀಟ್‌ ಅನ್ನು ಮಾಡಿದ್ದರು. 44 ಮಿಲಿಯನ್‌ ಡಾಲರ್‌ಗೆ ಸಂಸ್ಥೆ ಖರೀದಿ ಮಾಡುವುದಾಗಿ ಎಲಾನ್‌ ಮಸ್ಕ್‌ ಹೇಳಿದ್ದರು, ಆದರೆ, ನಂತರ ಈ ಒಪ್ಪಂದದಿಂದ ಹೊರಬರುವುದಾಗಿ ಅವರು ಘೋಷಿಸಿದ್ದರು. ಸ್ಪ್ಯಾಮ್‌ ಖಾತೆಗಳ ಬಗ್ಗೆ ವಿವರ ನೀಡದ ಕಾರಣ ಒಪ್ಪಂದ ಕಡಿತಗೊಳಿಸುವುದಾಗಿ ಹೇಳಿಕೊಂಡಿದ್ದರು. 

ಇದನ್ನೂ ಓದಿ: ಬ್ಲೂ ಟಿಕ್ ಪರಿಶೀಲಿಸಿದ Twitter ಖಾತೆಗಳಿಗೆ ತಿಂಗಳಿಗೆ 662 ರೂ. ಶುಲ್ಕ: ಎಲಾನ್‌ ಮಸ್ಕ್‌ ಘೋಷಣೆ
 
ನಂತರ ಟ್ವಿಟ್ಟರ್ ಕಂಪನಿ ಕಾನೂನು ಮೊಕದ್ದಮೆ ಹೂಡಿದ ಬಳಿಕ ಕಂಪನಿಯನ್ನು ಖರೀದಿ ಮಾಡೋದಾಗಿ ಹಾಗೂ ಒಪ್ಪಂದವನ್ನು ಮುಂದುವರಿಸೋದಾಗಿ ಹೇಳಿದ್ದರು. ಅಲ್ಲದೆ, ಡೆಲಾವೇರ್‌ ಚಾನ್ಸೆರಿ ಕೋರ್ಟ್‌ನ ಜಡ್ಜ್‌ ಕೂಡ ಅಕ್ಟೋಬರ್‌ ರೊಳಗೆ ಟ್ವಿಟ್ಟರ್‌ ಒಪ್ಪಂದವನ್ನು ಅಂತ್ಯಗೊಳಿಸಬೇಕು, ಇಲ್ಲದಿದ್ದರೆ ವಿಚಾರಣೆ ಎದುರಿಸಬೇಕು ಎಂದು ಸೂಚನೆ ನೀಡಿತ್ತು. ಈ ಹಿನ್ನೆಲೆ ಮಸ್ಕ್‌ ಅಂತಿಮವಾಗಿ ಟ್ವಿಟ್ಟರ್‌ನ ಅಧಿಪತಿಯಾಗಿದ್ದು, ಈಗ ಸಂಸ್ಥೆಯಲ್ಲಿ ಸಾಕಷ್ಟು ಬದಲಾವಣೆ ಮಾಡುತ್ತಿದ್ದಾರೆ. 

ಇದನ್ನೂ ಓದಿ: Twitter ಸ್ಥಾಪಕನಿಂದ ಶೀಘ್ರ ಹೊಸ App ಸ್ಥಾಪನೆ: ಎಲಾನ್‌ ಮಸ್ಕ್‌ಗೆ ಸಡ್ಡು?

PREV
Read more Articles on
click me!

Recommended Stories

ಬೆಂಗಳೂರಿನ ಅಮರ್‌ ಸುಬ್ರಹ್ಮಣ್ಯ ಆಪಲ್‌ ಎಐ ಟೀಮ್‌ಗೆ ಉಪಾಧ್ಯಕ್ಷ!
ಸರಾಸರಿ ಮಾಸಿಕ ವೇತನ: ದೇಶದಲ್ಲಿಯೇ 2ನೇ ಸ್ಥಾನದಲ್ಲಿ ಕರ್ನಾಟಕ, ಸಿಗೋ ಸ್ಯಾಲರಿ ಎಷ್ಟು?