ಉದ್ಯೋಗದ ನಿರೀಕ್ಷೆಯಲ್ಲಿದ್ದವರಿಗೆ ಬಂಪರ್: 4000 ಹುದ್ದೆಗಳಿಗೆ ನೇಮಕಾತಿ

By Suvarna News  |  First Published Aug 11, 2020, 6:57 PM IST

ಆಯಿಲ್ ಮತ್ತು ನ್ಯಾಚುರಲ್ ಗ್ಯಾಸ್ ಕಾರ್ಪೊರೇಶನ್ ಲಿಮಿಟೆಡ್ (ಒಎನ್‌ಜಿಸಿ) ಉದ್ಯೋಗದ ನಿರೀಕ್ಷೆಯಲ್ಲಿದ್ದವರಿಗೆ ಭರ್ಜರಿ ಬಂಪರ್ ನೀಡಿದೆ. 4000 ಕ್ಕೂ ಹೆಚ್ಚು ಹುದ್ದೆಗಳ ನೇಮಕಕ್ಕೆ ಅರ್ಜಿ ಆಹ್ವಾನಿಸಿದೆ.


ನವದೆಹಲಿ, (ಆ.11): ಆಯಿಲ್ ಮತ್ತು ನ್ಯಾಚುರಲ್ ಗ್ಯಾಸ್ ಕಾರ್ಪೊರೇಶನ್ ಲಿಮಿಟೆಡ್ (ಒಎನ್‌ಜಿಸಿ) 4000 ಕ್ಕೂ ಹೆಚ್ಚು ಹುದ್ದೆಗಳ ನೇಮಕಕ್ಕೆ ಅರ್ಜಿ ಆಹ್ವಾನಿಸಿದೆ.

ಪದವೀಧರ ಮತ್ತು ಡಿಪ್ಲೊಮಾ ಮುಗಿಸಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಆಸಕ್ತ ಮತ್ತು ಅರ್ಹರು ಆಗಸ್ಟ್ 17,2020ರೊಳಗೆ ಅರ್ಜಿ ಸಲ್ಲಿಸಲು ಕೋರಲಾಗಿದೆ.

Tap to resize

Latest Videos

undefined

ಜಾಬ್ಸ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಹುದ್ದೆಗಳ ವಿವರ
* ಉತ್ತರ ಪ್ರದೇಶ (ಉತ್ತರ ವಲಯ- ಡೆಹ್ರಾಡೂನ್, ದೆಹಲಿ, ಜೋಧ್‌ಪುರ) 228 ಹುದ್ದೆ
* ಮುಂಬೈ ಸೆಕ್ಟರ್ (ಮುಂಬೈ ಸೆಕ್ಟರ್- ಮುಂಬೈ, ಗೋವಾ, ಹಜೀರಾ, ಯುರಾನ್) 764 ಹುದ್ದೆಗಳು
* ಪಶ್ಚಿಮ ವಲಯ (ಪಶ್ಚಿಮ ವಲಯ- ಕಾಂಬೆ, ವಡೋದರಾ, ಅಂಕಲೇಶ್ವರ, ಅಹಮದಾಬಾದ್, ಮೆಹ್ಸಾನಾ) 1579 ಹುದ್ದೆ
* ಪೂರ್ವ ಪ್ರದೇಶ (ಈಸ್ಟರ್ನ್ ಸೆಕ್ಟರ್- ಜೋರ್ಹತ್, ಸಿಲ್ಚಾರ್, ನಜೀರಾ ಮತ್ತು ಶಿವಸಾಗರ್) 716 ಹುದ್ದೆ
* ದಕ್ಷಿಣ ವಲಯ (ದಕ್ಷಿಣ ವಲಯ- ಚೆನ್ನೈ, ಕಾಕಿನಾಡ, ರಾಜಮಂಡ್ರಿ, ಕಾರೈಕಲ್) 674 ಹುದ್ದೆಗಳು
* ಕೇಂದ್ರ ವಲಯ (ಸೆಂಟ್ರಲ್ ಸೆಕ್ಟರ್- ಅಗರ್ತಲಾ, ಕೋಲ್ಕತಾ) 221 ಹುದ್ದೆಗಳ ಭರ್ತಿ ನಡೆಯಲಿದೆ.

ವಿದ್ಯಾರ್ಹತೆ:
ಅಕೌಂಟೆಂಟ್ ಹುದ್ದೆಗೆ ವಾಣಿಜ್ಯ ಪದವಿ ಪಡೆದಿರಬೇಕು. ಸಹಾಯಕ ಎಚ್‌ಆರ್‌ಗಾಗಿ ಬಿ.ಎ. ಮತ್ತು ಬಿ.ಬಿ.ಎ. ಪದವಿ ಪಡೆದಿರಬೇಕು. ಸೆಕ್ರೆಟರಿಯಲ್ ಅಸಿಸ್ಟೆಂಟ್‌ಗಾಗಿ, ಸೆಕ್ರೆಟರಿಯಲ್ ಅಸಿಸ್ಟೆಂಟ್ ಟ್ರೇಡ್‌ನಲ್ಲಿ ಐಟಿಐ ಪೂರ್ಣಗೊಳಿಸಿರಬೇಕು.

ಪ್ರಯೋಗಾಲಯದ ಸಹಾಯಕರ ಹುದ್ದೆಗೆ ಪಿಸಿಎಂ ಮತ್ತು ಪಿಸಿಬಿಯಿಂದ ಬಿ.ಎಸ್ಸಿ. ಪದವಿಯೊಂದಿಗೆ ಲ್ಯಾಬ್ ಅಸಿಸ್ಟೆಂಟ್ ಗೆ ಐಟಿಐ ಮುಗಿಸಿರಬೇಕು. 

ವಯೋಮಿತಿ: ಗರಿಷ್ಠ 24 ವರ್ಷ ವಯಸ್ಸಿನವರು ಹುದ್ದೆಗೆ ಅರ್ಜಿ ಸಲ್ಲಿಸಬಹುದು.

ಆಯ್ಕೆ ಪ್ರಕ್ರಿಯೆ: ಅರ್ಹತಾ ಪಟ್ಟಿಯ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಯಾವುದೇ ಅಭ್ಯರ್ಥಿಯು ಯಾವುದೇ ಅರ್ಜಿ ಶುಲ್ಕವನ್ನು ಪಾವತಿಸಬೇಕಾಗಿಲ್ಲ.

ongcapprentices.ongc.co.in ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬೇಕು. ಅಪ್ಲಿಕೇಷನ್ ಪ್ರಕ್ರಿಯೆ ಈಗಾಗಲೇ ಶುರುವಾಗಿದ್ದು, ಆಗಸ್ಟ್ 17 ಕೊನೆ ದಿನವಾಗಿದೆ.

click me!