Patna Abhishek Amazon Offer ಪಾಟ್ನಾ ವಿದ್ಯಾರ್ಥಿಗೆ ದಾಖಲೆಯ ₹1.8 ಕೋ ಆಫರ್!

By Suvarna News  |  First Published Apr 25, 2022, 3:08 PM IST

ಇದು ಪಾಟ್ನಾದ ದಾಖಲೆಯ ನೇಮಕಾತಿಯಾಗಿದ್ದು, ಈ ಹಿಂದಿನ ಎಲ್ಲಾ ದಾಖಲೆಯನ್ನು ಹಿಂದಿಕ್ಕಿ 1.8 ಕೋಟಿ ವಾರ್ಷಿಕ ವೇತನದ ಪ್ಯಾಕೇಜ್‌ನೊಂದಿಗೆ ಅಮೆಜಾನ್  ಅಭಿಷೇಕ್ ಕುಮಾರ್ ಅವರನ್ನು  ನೇಮಿಸಿಕೊಂಡಿದೆ.


ಬಿಹಾರ(ಏ.25): ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉದ್ಯೋಗದ ಆಫರ್‌ಗಳು ಹುಡುಕಿಕೊಂಡು ಬರುತ್ತವೆ. ಅದರಲ್ಲೂ ಕಾಲೇಜ್‌ಗಳು ನಡೆಸುವ ಕ್ಯಾಂಪಸ್‌ ಸಂದರ್ಶನಗಳು ಪ್ರತಿಭಾವಂತರಿಗೆ ವರದಾನಗಳಾಗಿವೆ. ಸಾಕಷ್ಟು ವಿದ್ಯಾರ್ಥಿಗಳು ದೊಡ್ಡ ಮಟ್ಟದ ಸಂಬಳ ಪ್ಯಾಕೇಜ್‌ನೊಂದಿಗೆ ನೌಕರಿಯನ್ನು ಗಿಟ್ಟಿಸಿಕೊಂಡಿದ್ದನ್ನು ಕೇಳಿದ್ದೀರಿ. ಆ ಸಾಲಿಗೆ ಈಗ ಅಭಿಷೇಕ್ ಸೇರಿದ್ದಾನೆ.

ಪಾಟ್ನಾದ ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆ-ಎನ್‌ಐಟಿ (National Institute of Technology -NIT) ವಿದ್ಯಾರ್ಥಿ ಅಭಿಷೇಕ್ ಕುಮಾರ್ (Abhishek Kumar) ಅಮೆಜಾನ್‌ನಿಂದ ( Amazon) ದಾಖಲೆಯ ಪ್ಯಾಕೇಜ್ ಪಡೆದಿದ್ದಾರೆ. ಈ ಬಗ್ಗೆ ಎನ್‌ಐಟಿ (NIT)  ತನ್ನ ಟ್ವಿಟ್ಟರ್‌ ನಲ್ಲಿ " ನಾವು ನಿಮ್ಮ ಬಗ್ಗೆ ನಂಬಲಾಗದಷ್ಟು ಹೆಮ್ಮೆಪಡುತ್ತೇವೆ. ಅಭಿನಂದನೆಗಳು! ನಿಮ್ಮ ಪ್ರಾಮಾಣಿಕ ಪ್ರಯತ್ನವು ಈ ಯಶಸ್ಸಿಗೆ ಅರ್ಹವಾಗಿದೆ, ಭವಿಷ್ಯಕ್ಕಾಗಿ ಶುಭವಾಗಲಿ" ಎಂದು ಬರೆದುಕೊಂಡಿದೆ.

Latest Videos

undefined

 

pic.twitter.com/oAPfyvnIZb

— NIT Patna (@NITPatna1)

ಇದು ಪಾಟ್ನಾದ ದಾಖಲೆಯ ನೇಮಕಾತಿಯಾಗಿದ್ದು, ಈ ಹಿಂದಿನ ಎಲ್ಲಾ ದಾಖಲೆಯನ್ನು ಮುರಿದಿದೆ. 1.8 ಕೋಟಿ ವಾರ್ಷಿಕ ವೇತನದ ಪ್ಯಾಕೇಜ್‌ನೊಂದಿಗೆ ಅಮೆಜಾನ್  ಅಭಿಷೇಕ್ ಕುಮಾರ್ ಅವರನ್ನು  ನೇಮಿಸಿಕೊಂಡಿದೆ. ಇದಕ್ಕೂ ಮುನ್ನ, ಎನ್‌ಐಟಿ ಪಾಟ್ನಾದ ಅದಿತಿ ತಿವಾರಿ (Aditi Tiwari) ಹೆಸರಿನಲ್ಲಿ ಈ ದಾಖಲೆ ಇತ್ತು. ಫೇಸ್‌ಬುಕ್‌ನಿಂದ ವಾರ್ಷಿಕ 1.6 ಕೋಟಿ ರೂಪಾಯಿ ವೇತನದ ಆಫರ್ ಅದಿತಿ ಪಡೆದಿದ್ದರು. ಅದಿತಿಗಿಂತ ಮೊದಲು, ಪಾಟ್ನಾದ ಹುಡುಗಿ ಸಂಪ್ರೀತಿ ಯಾದವ್ (sampriti yadav) ಟೆಕ್ ದೈತ್ಯ ಗೂಗಲ್‌ನಲ್ಲಿ ₹ 1.11 ಕೋಟಿ ಪ್ಯಾಕೇಜ್ ಪಡೆಯುವ ಮೂಲಕ  ಪಾಟ್ನಾ ರಾಜ್ಯಕ್ಕೆ ಹೆಮ್ಮೆ ತಂದಿದ್ದರು.

BANK OF INDIA RECRUITMENT 2022 ವಿವಿಧ 696 ಅಧಿಕಾರಿ ಹುದ್ದೆಗಳಿಗೆ ನೇಮಕಾತಿ

ಕೋವಿಡ್ -19 ಸಾಂಕ್ರಾಮಿಕವು ಹಿಂದಿನ ಎರಡು ವರ್ಷಗಳಲ್ಲಿ ಪದವಿ ಪಡೆಯುವ ವಿದ್ಯಾರ್ಥಿಗಳ ಮೇಲೆ ಹೆಚ್ಚಿನ ಒತ್ತಡವನ್ನು ಉಂಟುಮಾಡಿದೆ. ಈ ಮೊದಲು NIT ಪಾಟ್ನಾ ವಿದ್ಯಾರ್ಥಿ ಪಡೆದ ಅತಿ ಹೆಚ್ಚು ಪ್ಯಾಕೇಜ್ 50-60 ಲಕ್ಷ ರೂ. ಆಗಿತ್ತು. ಆದ್ರೀಗ 2022ರ ಪ್ಲೇಸ್‌ಮೆಂಟ್ ಸೀಸನ್, ಕಳೆದ ಐದು ವರ್ಷಗಳ ದಾಖಲೆಗಳನ್ನು ಮುರಿದಿದೆ. ಕೋವಿಡ್ -19 ಸಾಂಕ್ರಾಮಿಕದಿಂದಾಗಿ‌ಕಳೆದ ಎರಡು ವರ್ಷಗಳಲ್ಲಿ ಕ್ಯಾಂಪಸ್ ಉದ್ಯೋಗಗಳು ಹೆಚ್ಚಾಗಿ ಸಿಗದೇ,   ಪದವಿ ವಿದ್ಯಾರ್ಥಿಗಳಿಗೆ ಸಾಕಷ್ಟು ಒತ್ತಡ ಸೃಷ್ಟಿಯಾಗಿದ್ದವು. 

ಇದೀಗ ಸಹಜ ಸ್ಥಿತಿಗೆ ನಿಧಾನವಾಗಿ ಮರಳುತ್ತಿರುವಂತೆ, ಕ್ಯಾಂಪಸ್ ಪ್ಲೇಸ್‌ಮೆಂಟ್‌ಗಳ ಸ್ಥಿತಿಯು ಸಹ ಕೋವಿಡ್ ಪೂರ್ವದ ಮಟ್ಟಕ್ಕೆ ಮರಳುತ್ತಿದೆ. ವಿದ್ಯಾರ್ಥಿಗಳಿಗೆ ಮೊದಲಿಗಿಂತ ತಮ್ಮ ಆಯ್ಕೆಯ ಉದ್ಯೋಗಗಳನ್ನು ಪಡೆಯುವ ಉತ್ತಮ ಅವಕಾಶಗಳು ಸಿಗುತ್ತಿವೆ. Adobe, Amazon, Linkedin, Paytm, Oracle ಮತ್ತು ಇತರ ಕಂಪನಿಗಳು NIT ಸಂಸ್ಥೆಯಲ್ಲಿನ ಕ್ಯಾಂಪಸ್ ಪ್ಲೇಸ್‌ಮೆಂಟ್‌ಗಳಲ್ಲಿ ಭಾಗವಹಿಸುತ್ತಿದೆ.

ಇದೇ ಮೊದಲ ಬಾರಿಗೆ ಅಮೆಜಾನ್‌ನಲ್ಲಿ ಎನ್‌ಐಟಿ ಪಾಟ್ನಾ ವಿದ್ಯಾರ್ಥಿಯೊಬ್ಬ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ಥಾನ ಪಡೆದಿದ್ದಾನೆ. ಅಭಿಷೇಕ್  ಕಂಪ್ಯೂಟರ್ ಸೈನ್ಸ್ ವಿಭಾಗದ ವಿದ್ಯಾರ್ಥಿಯಾಗಿದ್ದಾರೆ. ಅಭಿಷೇಕ್  ಕಳೆದ ವರ್ಷ ಡಿಸೆಂಬರ್ 14 ರಂದು ಕೋಡಿಂಗ್ ಪರೀಕ್ಷೆಯನ್ನು ಬರೆದಿದ್ದರು. ಅದರಲ್ಲಿ ಉತ್ತೀರ್ಣರಾದ ಬಳಿಕ ಏಪ್ರಿಲ್ 21, 2022 ರಂದು ಈ ಆಯ್ಕೆ ಬಗ್ಗೆ ದೃಢೀಕರಣವನ್ನು ಪಡೆದರು.  ನೇಮಕಾತಿ ಪರೀಕ್ಷೆ ಅವಧಿಯಲ್ಲಿ, ಅಭಿಷೇಕ್ ಏಪ್ರಿಲ್ 13, 2022 ರಂದು ಒಂದು ಗಂಟೆಯ ಮೂರು ಸುತ್ತಿನ ಸಂದರ್ಶನಗಳನ್ನು ತೆಗೆದುಕೊಳ್ಳಬೇಕಾಗಿತ್ತು. 

ICAR RECRUITMENT 2022 ಕೃಷಿ ವಿಜ್ಞಾನ ಕೇಂದ್ರದಲ್ಲಿ IT ವೃತ್ತಿಪರ ಹುದ್ದೆಗೆ ನೇಮಕಾತಿ

ಜರ್ಮನಿ ಮತ್ತು ಐರ್ಲೆಂಡ್‌ನ ವೃತ್ತಿಪರ ತಜ್ಞರು ಅಭಿಷೇಕ್ ಅವರನ್ನು ಸಂದರ್ಶನ ನಡೆಸಿದ್ದಾರೆ. ಅಭಿಷೇಕ್ ಅವರ ಪ್ರಕಾರ, ಬ್ಲಾಕ್‌ಚೈನ್‌ನಲ್ಲಿನ ಅವರ ಪ್ರಾಜೆಕ್ಟ್ ಮತ್ತು ಅವರ ಕೋಡಿಂಗ್ ವೇಗದಿಂದ ಸಂದರ್ಶನ ಫಲಕವು ಪ್ರಭಾವಿತವಾಗಿದೆ.

 

click me!