* ಹರಮಠದಲ್ಲಿ ಬೃಹತ್ ಉದ್ಯೋಗ ಮೇಳಕ್ಕೆ ಉತ್ತಮ ಪ್ರತಿಕ್ರಿಯೆ
* ಉದ್ಯೋಗ ದಾಸೋಹ ಕಲ್ಪನೆ ಯಶಸ್ವಿ
* ದಾವಣಗೆರೆ ಜಿಲ್ಲೆಯ ಹರಿಹರದ ಪಂಚಮಸಾಲಿ ಗುರುಪೀಠದಲ್ಲಿ ನಿರಾಣಿ ಹೇಳಿಕೆ
ವರದಿ - ವರದರಾಜ್, ಏಷ್ಯಾನೆಟ್ ಸುವರ್ಣ ನ್ಯೂಸ್
ದಾವಣಗೆರೆ (ಏಪ್ರೀಲ್ 24): ರಾಜ್ಯದ ಪ್ರತಿಷ್ಠಿತ ಕಂಪನಿಗಳು ಉದ್ಯೋಗ ಮೇಳದಲ್ಲಿ ಸ್ಟಾಲ್ ಹಾಕಿವೆ. ಎಸ್ ಎಸ್ ಎಲ್ ಸಿಯಿಂದ ಪಿಹೆಚ್ ಡಿ ವರೆಗು ಉದ್ಯೋಗ ಆಕಾಂಕ್ಷಿಗಳು ಬಂದಿದ್ದಾರೆ. ಗ್ರಾಮೀಣ ಭಾಗದ ಉದ್ಯೋಗ ಆಕಾಂಕ್ಷಿಗಳು ಬೆಂಗಳೂರಿನಂತಹ ನಗರಗಳಲ್ಲಿ ಪ್ರತಿಷ್ಠಿತ ಕಂಪನಿಗಳು ಬಾಗಿಲುಗಳ ಬಳಿ ದಿನಗಟ್ಟಲೆ ನಿಂತರು ಎಂಟ್ರಿ ಸಿಗುವುದು ಕಷ್ಟ. ಅಂತಹ ಸಂದರ್ಭದಲ್ಲಿ ಗ್ರಾಮೀಣ ಪ್ರದೇಶದ ಆಕಾಂಕ್ಷಿಗಳು ಉದ್ಯೋಗ ಮೇಳದಲ್ಲಿ ಖುಷಿಯಿಂದ ಪಾಲ್ಗೊಂಡಿದ್ದಾರೆ ಎಂದು ಸಚಿವ
ದಾವಣಗೆರೆ ಜಿಲ್ಲೆಯ ಹರಿಹರದ ಪಂಚಮಸಾಲಿ ಗುರುಪೀಠದಲ್ಲಿ ಬೃಹತ್ ಉದ್ಯೋಗ ಮೇಳ ಉದ್ಘಾಟಿಸಿ ಮಾತನಾಡಿದ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ,115 ಕಂಪನಿಗಳು ಬಂದಿದ್ದು, ಡಿಪ್ಲೋಮೋ ಪಿಯು ಡಿಗ್ರಿ ಪಿಹೆಚ್ ಡಿ ,ತಾಂತ್ರಿಕ , ಜನರಲ್ ಡಿಗ್ರಿಯ ವಿದ್ಯಾರ್ಥಿಗಳು ಮೇಳದಲ್ಲಿ ಪಾಲ್ಗೊಂಡಿದ್ದಾರೆ. ಜಾತಿ ಮತ ಬೇಧ ವಿಲ್ಲದೇ ಉದ್ಯೋಗ ಆಕಾಂಕ್ಷಿಗಳು ಪಾಲ್ಗೊಂಡಿದ್ದ ಆನ್ ಸ್ಪಾಟ್ 2000 ನೊಂದಣಿಯಾಗಿದ್ದು, ಆನ್ ಲೈನ್ ನಲ್ಲಿ 6 ಸಾವಿರ ನೊಂದಣಿಯಾಗಿದೆ. ಇದೊಂದು ಯಶಸ್ವಿ ಕಾರ್ಯಕ್ರಮ ಇದರ ಕೀರ್ತಿ ಸ್ವಾಮೀಜಿಗೆ ಸಲ್ಲಬೇಕು ಎಂದರು.
ಪಂಚಮಸಾಲಿ ಮಠದಲ್ಲಿ ಹೊಸ ಮನ್ವಂತರ: ಅನ್ನ ಶಿಕ್ಷಣದ ಜತೆ ಉದ್ಯೋಗ ದಾಸೋಹಕ್ಕೆ ಮುನ್ನಡಿ..!
ವಚನಾನಂದ ಶ್ರೀ ಹುಟ್ಟುಹಬ್ಬಕ್ಕೆ ಶುಭಕೋರಿದ ನಿರಾಣಿ
ವಚನಾನಂದ ಸ್ವಾಮೀಜಿ ಹುಟ್ಟುಹಬ್ಬ ಕರ್ನಾಟಕದ ಏಳು ಕೋಟಿಜನತೆ ಪರವಾಗಿ ಹುಟ್ಟುಹಬ್ಬದ ಶುಭಾಶಯಗಳು.ಇಂದು ಹುಟ್ಟುಹಬ್ಬದ ಪ್ರಯುಕ್ತ ಉದ್ಯೋಗ ಮೇಳ ಆಯೋಜಿಸಿದ್ದೇವೆ.ಮುಂದಿನ ದಿನಗಳಲ್ಲಿ ಒಂದು ಆರೋಗ್ಯ ಮೇಳ ಆಯೋಜಿಸಿ ಸೂಪರ್ ಸ್ಪೆಶಾಲಿಟಿ ಚಿಕಿತ್ಸೆ ಎಲ್ಲರಿಗು ದೊರೆಯುವಂತೆ ಮಾಡಬೇಕು,ಶಸ್ತ್ರ ಚಿಕಿತ್ಸೆಯು ಉಚಿತವಾಗಿ ಸಿಗಬೇಕೆನ್ನುವ ಆಶಯವನ್ನು ಸ್ವಾಮೀಜಿ ಹೊಂದಿದ್ದಾರೆ ಎಂದು ಮುರಗೇಶ್ ನಿರಾಣಿ ತಿಳಿಸಿದರು.
ವರದಿ ಬಂದ ನಂತರ ಮೀಸಲಾತಿ ಫೈನಲ್
ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ವಿಚಾರವಾಗಿ ಈಗಾಗಲೇ ಸಮೀಕ್ಷೆ ಆರಂಭವಾಗಿದೆ. ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ ಹೆಗ್ಡೆ ವರದಿ ನೀಡಲಿದ್ದಾರೆ. ಈ ವರದಿ ಬಂದ ಬಳಿಕ ಇದರ ಬಗ್ಗೆ ಸಿಎಂ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತಾರೆ. ರಾಜ್ಯದ ಬಹುತೇಕ ಭಾಗಗಳಲ್ಲಿ ಸಮೀಕ್ಷೆ ನಡೆಯುತ್ತಿದೆ.ಕರಾವಳಿ ಮಲೆನಾಡು ಮಧ್ಯ ಕರ್ನಾಟಕ , ಉತ್ತರ ಕರ್ನಾಟಕ ಹೀಗೆ ಸಮೀಕ್ಷೆ ನಡೆಯುತ್ತಿದೆ.ಎಲ್ಲ ಲಿಂಗಾಯತ ಒಳಪಂಗಡಗಳ ಬಗ್ಗೆ ಸಮೀಕ್ಷೆ ಆಗುತ್ತಿದೆ. ಎಲ್ಲಾ ಲಿಂಗಾಯತರಿಗೆ ಕೇಂದ್ರ ಸರ್ಕಾರದಲ್ಲಿ ಓಬಿಸಿಗೆ ಸೇರ್ಪಡೆ ಆಗಬೇಕು ಎಂದರು.
ಮೀಸಲಾತಿ ಹೋರಾಟ ವಿಚಾರದಲ್ಲಿ ಕೋ ಕೋ ಕಬ್ಬಡ್ಡಿ- ಚೆಸ್
ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ವಿಚಾರದಲ್ಲಿ ಒಬ್ಬೊಬ್ಬ ನಾಯಕರು ಒಂದೊಂದು ರೀತಿಯಲ್ಲಿ ಹೋರಾಟದಲ್ಲಿ ತೊಡಗಿದ್ದಾರೆ.
ಕೆಲವರು ಕೋಕೋ ಕಬಡ್ಡಿ ಆಡುತ್ತಿದ್ದಾರೆ ಇನ್ನು ಕೆಲವರು ಚೆಸ್ ಆಡುತ್ತಿದ್ದಾರೆ ಎನ್ನುವ ಮೂಲಕ ಶಾಸಕ ಯತ್ನಾಳ್ ಗೆ ನಿರಾಣಿ ಟಾಂಗ್ ಕೊಟ್ಟಿದ್ದಾರೆ. ಸದನದಲ್ಲಿ ಮೀಸಲಾತಿ ವಿಚಾರದಲ್ಲಿ ಯತ್ನಾಳ್ ಮಾತಾಡಿದಂತೆ ನಾನು ಮಾತಾಡಲು ಬರಲ್ಲ. ನಾನು ಸರ್ಕಾರದ ಭಾಗ ನಿರ್ಧಾರ ತೆಗೆದುಕೊಳ್ಳುವ ಸ್ಥಾನದಲ್ಲಿ ಇದ್ದೇನೆ. ಆ ರೀತಿ ಬೀದಿಗಿಳಿದು ಹೋರಾಟ ಮಾಡಲು ಸಾದ್ಯವಿಲ್ಲ. ಎಲ್ಲಾ ಲಿಂಗಾಯತರು ಒಂದಾಗ ಬೇಕು ಎಂಬುದು ನಮ್ಮ ಆಶಯ ಕೂಡಾ ಇದೆ ಎಂದು ನಿರಾಣಿ ಹೇಳಿದರು.
PSI ಹಗರಣದ ತನಿಖೆ ನಡೆಯುತ್ತಿದೆ
ಪಿಎಸ್ ಐ ನೇಮಕಾತಿಯಲ್ಲಿ ಗೋಲ್ ವಿಚಾರದಲ್ಲಿ ಸರ್ಕಾರ ಸ್ಪಷ್ಟವಾಗಿದೆ. ಯಾವುದೇ ಹಸ್ತಕ್ಷೇಪವಿಲ್ಲದೇ ತನಿಖೆ ನಡೆಯಿತ್ತಿದೆ. ಇದರಲ್ಲಿ ಯಾವುದೇ ಪಕ್ಷ ಯಾವುದೇ ಜಾತಿ ವ್ಯಕ್ತಿಗಳು ಇದ್ದರು ಸಹ ಅವರನ್ನ ಬಿಡುವ ಪ್ರಶ್ನೆಯೇ ಇಲ್ಲ ಎಂದು ಸಚಿವ ಮುರಗೇಶ ನಿರಾಣಿ ತಿಳಿಸಿದರು.
ಇಂತಹ ವಿಚಾರ ಇಟ್ಟುಕೊಂಡು ಗೃಹ ಸಚಿವರನ್ನ ಬದಲಾಯಿಸಬೇಕು ಎಂಬುದು ಸರಿಯಲ್ಲ.ಮೇಲಾಗಿ ಅರಗಜ್ಞಾನೇಂದ್ರ ಅವರು ಅನುಭವಿ ಶಾಸಕ ಹಾಗು ನಾಯಕರು.ಯಡಿಯೂರಪ್ಪ ಅನಂತಕುಮಾರ ಜೊತೆ ಇದ್ದವರು.ಸಮರ್ಥವಾಗಿ ಗೃಹ ಖಾತೆ ನಿರ್ವಹಣೆ ಮಾಡುತ್ತಿದ್ದಾರೆ ಇಷ್ಟಕ್ಕೂ ಸಚಿವ ಬದಲಾವಣೆ ಮುಖ್ಯಮಂತ್ರಿ ಪರಮಾಧಿಕಾರ ಎಂದರು. ಅವಧಿಗೂ ಮುನ್ನ ಚುನಾವಣೆ ನಡೆಯುವುದು ಸಾದ್ಯತೆ ಇಲ್ಲ. 2023ಕ್ಕೆ ವಿಧಾನ ಸಭೆ ಚುನಾವಣೆ ನಡೆಯಲಿದೆ. ಸಚಿವ ಸಂಪುಟ ವಿಸ್ತರಣೆ ವಿಚಾರ ಸಿಎಂ ಹಾಗೂ ಹೈಕಮಾಂಡ ತಿರ್ಮಾನ ತೆಗೆದುಕೊಳ್ಳುತ್ತದೆ ಎಂದರು.
ಎಲ್ಲಾ ಲಿಂಗಾಯತ ಒಳಪಂಗಡಗಳು ಒಂದೇ ಮೀಸಲಾತಿಯಡಿಯಲ್ಲಿ ಬರಬೇಕು
ಲಿಂಗಾಯತರಲ್ಲಿ ಒಬ್ಬೊಬ್ಬರು ಒಂದೊಂದು ಮೀಸಲಾತಿಯಲ್ಲಿ ಇದ್ದಾರೆ.ಜಾತಿಗೊಂದು ಮೀಸಲಾತಿ ಆದ್ರೆ ಸಮಾಜ ಇಬ್ಬಾಗವಾಗುತ್ತದೆ
ಎಲ್ಲಾ ಲಿಂಗಾಯತ ಪಂಗಡಗಳು ಒಂದುಗೂಡಬೇಕೆಂದು ಆಶಯ ನಮ್ಮದು. ನಾವು ಮುಂದಾಳತ್ವ ವಹಿಸುತ್ತೇವೆ ಎಲ್ಲಾ ಲಿಂಗಾಯತರು ಒಂದೇ ಮೀಸಲಾತಿಯಡಿ ಬರಬೇಕು.ಕೇಂದ್ರದ ಮೀಸಲಾತಿಯಲ್ಲಿ ಓಬಿಸಿ ಕೋಟಾ ಬರಬೇಕು ಅದಕ್ಕೆ ನಾವು ಜಯಪ್ರಕಾಶ್ ಹೆಗ್ಡೆ ನೇತೃತ್ವದಲ್ಲಿ ಸರ್ವೇ ನಡೆಯುತ್ತದೆ. ಆ ಕಮಿಟಿಗೆ ನಾವು ಮನವರಿಕೆ ಮಾಡಿಕೊಟ್ಟಿದ್ದೇವೆ ಎಂದರು.