* ಹರಮಠದಲ್ಲಿ ನಡೆದ ಉದ್ಯೋಗ ಮೇಳಕ್ಕೆ ಉತ್ತಮ ಪ್ರತಿಕ್ರಿಯೆ
* 6540 ಉದ್ಯೋಗ ಆಕಾಂಕ್ಷಿಗಳಿಗೆ ನೇಮಕಾತಿ ಆದೇಶ
* ಇದಕ್ಕಿಂತ ದೊಡ್ಡ ಸಾಧನೆ ಇನ್ನೊಂದಿಲ್ಲ ಎಂದ ವಚನಾನಂದ ಶ್ರೀ
ವರದಿ - ವರದರಾಜ್
ದಾವಣಗೆರೆ, (ಏ.24): ಉದ್ಯಮಿಯಾಗು ಉದ್ಯೋಗ ನೀಡು ಎಂಬ ಘೋಷ ವಾಕ್ಯದೊಡನೆ ಹರಿಹರದ ಪಂಚಮಸಾಲಿ ಪೀಠದಲ್ಲಿ ಆಯೋಜನೆಯಾದ ಬೃಹತ್ ಉದ್ಯೋಗ ಮೇಳದಲ್ಲಿ ಪ್ರಥಮ ಪ್ರಯತ್ನದಲ್ಲೇ ಯಶಕಂಡಿದೆ. ಉದ್ಯೋಗ ಮೇಳದಲ್ಲಿ ಮುರುಗೇಶ್ ನಿರಾಣಿ ಜೊತೆ ಸ್ಟಾಲ್ ಗಳಿಗೆ ಭೇಟಿ ನೀಡಿ ಮಾತನಾಡಿದ ವಚನಾನಂದ ಶ್ರೀಗಳು, ನಮ್ಮ ಮೂರು ತಿಂಗಳ ಪರಿಶ್ರಸಾರ್ಥಕವಾಗಿದೆ ಎಂದರು.
ನನ್ನ ಜನುಮದ ದಿನದಂದು ಉದ್ಯೋಗ ಮೇಳ ಆಯೋಜಿಸಿರುವುದಕ್ಕೆ ಖುಷಿಯಾಗಿದೆ. ಇಂತಹದೊಂದು ಕಲ್ಪನೆಯನ್ನು ಮುರುಗೇಶ್ ನಿರಾಣಿ ಮುಂದೆ ಇಟ್ಟಾಗ ಅವರು ಮಾಡೋಣ ಎಂದ ಮೇಲೆ ಇಷ್ಟೆಲ್ಲಾ ಕಾರ್ಯ ಆಗಿದೆ. 75 ಸಾವಿರ ಜನಕ್ಕೆ ಉದ್ಯೋಗ ನೀಡಿದ ಮುರುಗೇಶ್ ನಿರಾಣಿ ಯವರ ಪ್ರೇರಣೆಯಿಂದ ಜಾತಿ ಬೇಧ ವಿಲ್ಲದೇ ಸಾವಿರಾರು ಯುವಕರು ಉದ್ಯೋಗ ಮೇಳದಲ್ಲಿ ಪಾಲ್ಗೊಂಡಿದ್ದಾರೆ. ಹಿಂದೂ ಮುಸ್ಲಿಂ ಇಬ್ಬರು ಸ್ನೇಹಿತ ಹುಡುಗಿಯರಿಗೆ ನಮ್ಮ ಉದ್ಯೋಗ ಮೇಳದಲ್ಲಿ ಉದ್ಯೋಗ ಸಿಕ್ಕಿದ್ದ ಇಬ್ಬರು ಖುಷಿಯಿಂದ ಇಲ್ಲಿಂದ ಹೋಗಿದ್ದು ನನಗೆ ಖುಷಿ ತಂದಿತು. ಆಧಾರ್ ಕಾರ್ಡ್ ಜೊತೆ ತಮ್ಮ ದಾಖಲೆಗಳನ್ನು ಹಿಡಿದುಕೊಂಡು ಬಂದ ಎಷ್ಟೋ ಆಕಾಂಕ್ಷಿಗಳಿಗೆ ಉದ್ಯೋಗ ಸಿಗುವ ಭರವಸೆ ಸಿಕ್ಕಿದೆ.ಇದಕ್ಕಿಂತ ಖುಷಿ ಇನ್ನೊಂದಿಲ್ಲ ನಮ್ಮ ಕಾರ್ಯಕ್ರಮ ಯಶಸ್ವಿಯಾಗಿದೆ. *ಉದ್ಯೋಗ ಮೇಳಕ್ಕೆ ವಿವಿಧ ಜಿಲ್ಲೆಗಳಿಂದ 9816 ಉದ್ಯೋಗ ಆಕಾಂಕ್ಷಿಗಳು ಆಗಮಿಸಿ ನೊಂದಣಿ ಮಾಡಿಸಿದ್ದರು. ಅದರಲ್ಲಿ 6540 ಜನರಿಗೆ ಉದ್ಯೋಗ ನೇಮಕಾತಿ ಪತ್ರ ನೀಡಲಾಗಿದೆ.ಇದಕ್ಕಿಂತ ದೊಡ್ಡ ಸಾಧನೆ ಇನ್ನೊಂದಿಲ್ಲ ಸಂತಸ ವ್ಯಕ್ತಪಡಿಸಿದರು.
ಹರಮಠದಲ್ಲಿ ಬೃಹತ್ ಉದ್ಯೋಗ ಮೇಳಕ್ಕೆ ಉತ್ತಮ ಪ್ರತಿಕ್ರಿಯೆ
ನಿಂದಿಸುವವರಿಗೆ ಪರೋಕ್ಷ ಎಚ್ಚರಿಕೆ ನೀಡಿದ ವಚನಾನಂದ ಶ್ರೀ
ಯಾವುದೇ ಹುಲಿ ಹಾಗೂ ಸಿಂಹ ಇರಲಿ ಅದಕ್ಕೆ ಸಮನಾದ ಶಕ್ತಿಗಳ ನಡುವೆ ಹೋರಾಟ ಮಾಡುತ್ತವೆ.ನಾವು ಕೂಡಾ ಹಾಗೆ, ಒಂದು ರಾಜಹುಲಿ ಜೊತೆ ರಾಜ ಹುಲಿಯೇ ಹೋರಾಟ ಮಾಡುತ್ತದೆ. ಯಾವುದೇ ಇಲಿ ಹೆಗ್ಗಣಗಳ ಜೊತೆ ಹೋರಾಟ ಮಾಡಲ್ಲ ಹಾಗೆ ಕೂಡಾ ನಾನು ತಮ್ಮ ವಿರುದ್ಧ ಮಾತಾಡುವರಿಗೆ ಉತ್ತರಿಸಿದ ಸ್ವಾಮೀಜಿ. ಕಾಂಗ್ರೆಸ್ ಅಧ್ಯಕ್ಷ ಡಿಕೆ ಶಿವಕುಮಾರ ನನ್ನ ಆತ್ಮೀಯರು ಒಂದು ರೀತಿ ಕನಕಪುರದ ಬಂಡೆ ಒಡೆದು ಮೂರ್ತಿ ಆದಂತೆ ಡಿಕೆಶಿ ಬದಲಾಗಿದ್ದರಾ? ಅವರ ಬೆಂಬಲಕ್ಕೆ ನಾನು ಯಾವಾಗಲು ಇರುತ್ತೇನೆ. ಯಾವುದೇ ಸ್ವಾಮೀಜಿ ಇರುತ್ತಾರೋ ಇಲ್ಲೋ ಗೊತ್ತಿಲ್ಲ ಆದ್ರೆ ನಾನು ಮಾತ್ರ ಡಿಕೆಶಿ ಬೆನ್ನಿಗೆ ನಿಲ್ಲುವೆ ಅಂದು ವಚನಾನಂದ ಸ್ವಾಮೀಜಿ ಹೇಳಿದರು.
ಎಲ್ಲಾ ಲಿಂಗಾಯತ ಒಳಪಂಗಡಗಳು ಒಂದೇ ಮೀಸಲಾತಿಯಡಿಯಲ್ಲಿ ಬರಬೇಕು
ಲಿಂಗಾಯತರಲ್ಲಿ ಒಬ್ಬೊಬ್ಬರು ಒಂದೊಂದು ಮೀಸಲಾತಿಯಲ್ಲಿ ಇದ್ದಾರೆ.ಜಾತಿಗೊಂದು ಮೀಸಲಾತಿ ಆದ್ರೆ ಸಮಾಜ ಇಬ್ಬಾಗವಾಗುತ್ತದೆ
ಎಲ್ಲಾ ಲಿಂಗಾಯತ ಪಂಗಡಗಳು ಒಂದುಗೂಡಬೇಕೆಂದು ಆಶಯ ನಮ್ಮದು. ನಾವು ಮುಂದಾಳತ್ವ ವಹಿಸುತ್ತೇವೆ ಎಲ್ಲಾ ಲಿಂಗಾಯತರು ಒಂದೇ ಮೀಸಲಾತಿಯಡಿ ಬರಬೇಕು.ಕೇಂದ್ರದ ಮೀಸಲಾತಿಯಲ್ಲಿ ಓಬಿಸಿ ಕೋಟಾ ಬರಬೇಕು ಅದಕ್ಕೆ ನಾವು ಜಯಪ್ರಕಾಶ್ ಹೆಗ್ಡೆ ನೇತೃತ್ವದಲ್ಲಿ ಸರ್ವೇ ನಡೆಯುತ್ತದೆ. ಆ ಕಮಿಟಿಗೆ ನಾವು ಮನವರಿಕೆ ಮಾಡಿಕೊಟ್ಟಿದ್ದೇವೆ ಎಂದರು.
ವಿಶ್ವಪ್ರಸನ್ನತೀರ್ಥ ಶ್ರೀಗಳಿಂದ ವಚನಾನಂದ ಶ್ರೀಗಳ ಬಗ್ಗೆ ಮೆಚ್ಚುಗೆ
ನಾಲ್ಕನೇ ವರ್ಷದ ಪೀಠಾರೋಹಣ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಉಡುಪಿಯ ವಿಶ್ವಪ್ರಸನ್ನ ತೀರ್ಥರು ವಚನಾನಂದ ಶ್ರೀಗಳ ಬಗ್ಗೆ ಮೆಚ್ಚುಗೆ ಮಾತನ್ನಾಡಿದರು. ಕೆಲವು ಶ್ರೀಗಳಿಂದ ಮಠದ ಗೌರವ ಹೆಚ್ಚಾಗುತ್ತದೆ ಅದಕ್ಕೆ ವಚನಾನಂದ ಶ್ರೀಗಳು ಅರ್ಹರು.ನಮ್ಮ ಹಿರಿಯ ಸ್ವಾಮೀಜಿ ಜೊತೆ ಉತ್ತಮ ಸಂಬಂಧ ಹೊಂದಿದ್ದರು ನಮ್ಮ ಜೊತೆ ಅದೇ ಸಂಬಂಧ ಹೊಂದಿದ್ದಾರೆ.ಅವರ ಸೌಜನ್ಯಕ್ಕೆ ಸಾಕಷ್ಟುಉದಾಹರಣೆಗಳಿವೆ.ಅವರ ಸೌಜನ್ಯದಿಂದ ಇಷ್ಟು ದೊಡ್ಡ ಯೋಗ್ಯತೆ ಸಂಪಾದಿಸಿದ್ದಾರೆ. ಯೋಗದಾನ ತುಂಬಾ ದೊಡ್ಡದು ಎಂಬುದನ್ನು ಅರಿತು ಜಗತ್ತಿಗೆ ಯೋಗ ಗುರುಗಳಾಗಿದ್ದಾರೆ. ಅನ್ನದಾಸೋಹ ಅಕ್ಷರ ದಾಸೋಹದ ಜೊತೆ ಉದ್ಯೋಗ ದಾಸೋಹ ಕಲ್ಪನೆಯನ್ನು ಹುಟ್ಟುಹಾಕಿದ್ದಾರೆ. ಚುನಾವಣೆ ಬಂದಾಗ ರಾಜಕಾರಣಿಗಳು ಪ್ರೀ ಕೊಡುವಾಗ ಗಿಪ್ಟ್ ಕೊಡುತ್ತಾರೆ. ಜನರನ್ನು ನಿರುದ್ಯೋಗಿಗಳನ್ನಾಗಿ ಮಾಡುವ ಗಿಪ್ಟ್ ಕೊಡಬೇಡಿ. ಪ್ರೀ ಕೊಡುವಾಗ ಎತ್ತುಗಳು ಟ್ರಾಕ್ಟರ್ , ಗ್ರೈಂಡರ್ , ಬಟ್ಟೆ ಯಂತ್ರ ಇಂತಹ ವಸ್ತುಗಳನ್ನು ಕೊಡಿ. ವಚನಾನಂದ ಶ್ರೀಗಳು ರಾಜಕಾರಣಿಗಳಿಗೆ ಉದ್ಯೋಗ ನೀಡುವ ಕಲ್ಪನೆ ನೀಡಿ ಮೇಲ್ಪಂಕ್ತಿ ಹಾಕಿಕೊಟ್ಟಿದ್ದಾರೆ.ಉದ್ಯೋಗ ನೀಡುವ ರಾಜಕಾರಣಿಗಳನ್ನು ಗೆಲ್ಲಿಸಿ ಮಾತ್ರ ಗೆಲ್ಲಿಸಿ ಸೋಮಾರಿಗಳನ್ನು ಮಾಡುವ ಗಿಪ್ಟ್ ಕೊಡುವ ರಾಜಕಾರಣಿಗಳು ಬೇಡ ಎಂದರು.
ಪರಕೀಯರಿಗೆ ವಿದೇಶಿಗರಿಗೆ ಯೋಗ ಪಾಠ ಹೇಳಿದ ಗುರು ವಚನಾನಂದ ಶ್ರೀ
ವಚನಾನಂದ ಶ್ರೀಗಳ ಪೀಠಾರೋಹಣ ಕಾರ್ಯಕ್ರಮದಲ್ಲಿ ಮಾತನಾಡಿದ ಆದಿಚುಂಚನಗಿರಿ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ವಚನಾನಂದ ಶ್ರೀ ಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ನಮಗೆ ಸ್ವತ್ರಂತ್ರ ಬಂದು 75 ವರ್ಷಗಳ ಬಂದ ಸವಿನೆನಪಿನಲ್ಲಿ ಅಮೃತ ಮಹೋತ್ಸವವನ್ನು ಆಚರಿಸುತ್ತಿದ್ದೇವೆ. ಕಾರ್ಯಕ್ರಮ ಬಹಳ ದೀರ್ಘವಾಗಿ ನಡೆದಿದೆ.ಯಾವ ವ್ಯಕ್ತಿಯಲ್ಲಿ ಸ್ವಾರ್ಥ ಇರುತ್ತೋ ಅಂತಹ ವ್ಯಕ್ತಿಯಲ್ಲಿ ನನ್ನವರು ಬೇರೆಯವರು ಎಂಬ ಭಾವ ಇರುತ್ತೇ. ಯಾವ ವ್ಯಕ್ತಿ ಜಗತ್ತಿನಲ್ಲೆಡೆ ಸಂಚರಿಸುತ್ತಾನೋ ಅವನು ಸ್ವಾರ್ಥಿಯಾಗಿ ಇರಲು ಸಾಧ್ಯ ಇಲ್ಲ.ಎಲ್ಲರನ್ನು ಪ್ರೀತಿಯಿಂದ ಕಾಣುತ್ತಾನೆ. ಅವರ ಪ್ರೀತಿ ನನ್ನನ್ನು ಭಾನುವಾರವು ಇಲ್ಲಿಗೆ ಎಳೆದು ತಂದಿದೆ ಎಂದರು.
ಒಬ್ಬ ಗುರು ಜಗತ್ತಿನಲ್ಲಿ ಆದರ್ಶವಾಗಿ ಬದುಕಲು ಹೇಳುತ್ತಾನೆ.ಶ್ರೇಷ್ಠ ಪೀಠದಲ್ಲಿ ವಚನಾನಂದ ಶ್ರೀಗಳು ಕುಳಿತಿದ್ದಾರೆ. ಜಗತ್ತಿನೆಲ್ಲೆಡೆ ಯೋಗ ಪಸರಿಸಿದ ಗುರು ವಚನಾನಂದ ಶ್ರೀ.ಪರಕೀಯರಲ್ಲಿ ನಮ್ಮ ದೇಶದ ಕೀರ್ತಿ ಪತಾಕೆ ಹಾರಿಸಿದ್ದಾರೆ. ವ್ಯಕ್ತಿತ್ವವನ್ನು ಕೂಡಿಸುವ ಶಕ್ತಿಯನ್ನು ಆಧ್ಯಾತ್ಮ ಹೇಳಿಕೊಡುತ್ತೇ.ಸಮಾಜವನ್ನು ಕೂಡಿಸುವ ಕೆಲಸವನ್ನು ವಚನಾನಂದ ಶ್ರೀ ಮಾಡುತ್ತಿದ್ದಾರೆ. ನಾಲ್ಕನೇ ವರ್ಷದ ಪಟ್ಟಾಧಿಕಾರವನ್ನು ಹಲವು ಕಾರ್ಯಕ್ರಮಗಳ ಮೂಲಕ ಆಚರಿಸುತ್ತಿದ್ದಾರೆ. ವಿದ್ಯಾವಂತ ಯುವಕನಿಗೆ ಉದ್ಯೋಗ ಇಲ್ಲದಂಗೆ ಇದ್ದರೆ ಸಮಾಜಕ್ಕೆ ಅಪಾಯಕಾರಿ, ಅಂತಹ ವ್ಯಕ್ತಿಗಳಿಗೆ ಉದ್ಯೋಗ ನೀಡುವ ಕೆಲಸ ಮಾಡಿದ್ದಾರೆ. ಸುಮಾರು 6 ಸಾವಿರ ಮಕ್ಕಳಿಗೆ ಸಿಕ್ಕಿರುವ ಉದ್ಯೋಗ 6 ಸಾವಿರ ಕುಟುಂಬಗಳಿಗೆ ನೆಲೆ ಸಿಕ್ಕಿದಂತಾಗಿದೆ ಎಂದರು.ಇತಿಹಾಸ ಗೊತ್ತಿರದ ವ್ಯಕ್ತಿಗಳು ಇತಿಹಾಸ ಸೃಷ್ಟಿಸಲಾರರು.ಸಮಾಜದ ಮಹನೀಯರನ್ನು ಪರಿಚಯಿಸುವ ಕೆಲಸ ಮಾಡಿ ಸಮಾಜಕ್ಕೆ ಋಣಿಯಾಗಿದ್ದಾರೆ.