
ದೇಶವನ್ನೇ ಬೆಚ್ಚಿ ಬೀಳಿಸಿದ ಟಿಸಿಎಸ್ ಸಂಸ್ಥೆಯಲ್ಲಿ ನಡೆದ ಕಾರ್ಪೋರೇಟ್ ಜಿಹಾದ್‌ಗೆ ಸಂಬಂಧಿಸಿದ ಕರ್ಮಕಾಂಡ ಬಗೆದಷ್ಟು ಬಯಲಾಗುತ್ತಿದೆ. ಈಗ ಮತ್ತೊಬ್ಬ ಮಹಿಳಾ ಉದ್ಯೋಗಿ ತಾನು ಅನುಭವಿಸಿದ ಕರಾಳ ಘಟನೆಯನ್ನು ಬಯಲು ಮಾಡಿದ್ದು, ಬೆಚ್ಚಿ ಬೀಳಿಸುವಂತಿದೆ.
ಈಗ ತನಗಾದ ಕೆಟ್ಟ ಘಟನೆಯನನ್ನು ಬಹಿರಂಗಪಡಿಸಿರುವ ಮಹಿಳೆ ನಾಸಿಕ್‌ನಲ್ಲಿರುವ ಟಿಸಿಎಸ್ ಸಂಸ್ಥೆಗೆ ಅಸೋಸಿಯೆಟ್ ಆಗಿ ಉದ್ಯೋಗಕ್ಕೆ ಸೇರಿದ್ದರು. ಆಗಷ್ಟೇ ಅವರ ಮದುವೆಯೂ ಆಗಿತ್ತು. ತಮ್ಮ ಸಂಸ್ಥೆಯಲ್ಲಿ ಹಿಂದೂ ಉದ್ಯೋಗಿಗಳ ಮೇಲೆ ಮ್ಯಾನೇಜರ್ ಮಟ್ಟದ ಅಧಿಕಾರಿಗಳು ಹಾಗೂ ಹೆಚ್ ಆರ್‌ಗಳು ನಡೆಸುತ್ತಿರುವ ಲೈಂಗಿಕ ದೌರ್ಜನ್ಯ ಹಾಗೂ ಪುರುಷ ಉದ್ಯೋಗಿಗಳ ಬಲವಂತದ ಮತಾಂತರದ ಬಗ್ಗೆ ಬಾಯ್ಬಿಟ್ಟ 8ಕ್ಕೂ ಹೆಚ್ಚು ಮಹಿಳಾ ಉದ್ಯೋಗಿಗಳ ಪೈಕಿ ಇವರು ಒಬ್ಬರಾಗಿದ್ದಾರೆ.
ತನ್ನ ಪತಿ ಪುಣೆಯಲ್ಲಿ ಕೆಲಸ ಮಾಡುತ್ತಿದ್ದಿದ್ದರಿಂದ ತಾನು ನಾಸಿಕ್‌ನಲ್ಲಿ ತನ್ನ ಅತ್ತೆ ಮಾವನ ಜೊತೆ ವಾಸ ಮಾಡುತ್ತಿದ್ದೆ ನನ್ನ ಮದುವೆಯ ನಂತರ 2025ರ ಜೂನ್‌ನಿಂದ ನಾನು ಟಿಸಿಎಸ್‌ನ ನಾಸಿಕ್ ಸಂಸ್ಥೆಯಲ್ಲಿ ಅಸೋಸಿಯೇಟ್ ಆಗಿ ಕೆಲ ಮಾಡುತ್ತಿದ್ದೆ. 2025ರ ಜೂನ್ 24ರಿಂದ ನನ್ನ ಮೂರು ತಿಂಗಳ ತರಬೇತಿ ಅವಧಿ ಇಲ್ಲಿ ಆರಂಭವಾಯ್ತು. ಶಾರುಖ್ ಖುರೇಷಿ ಹಾಗೂ ಜಯೇಶ್ ಗುಂಜಲ್ ಎಂಬುವವರು ನನಗೆ ತರಬೇತಿ ನೀಡುತ್ತಿದ್ದರು ಎಂದು ಮಹಿಳೆ ವಿಚಾರಣೆಯಲ್ಲಿ ಹೇಳಿದ್ದಾರೆ.
ನವವಿವಾಹಿತೆಗೆ ಸಹಾಯ ಬೇಕಿದ್ದರೆ ಕೇಳಿ ಎಂದಿದ್ದ ರಾಝಾ ಮೆನನ್
ತರಬೇತಿ ವೇಳೆ ಲೋನ್ ಬ್ರಾಂಚ್‌ನ ಟೀಮ್ ಲೀಡರ್ ರಾಝಾ ಮೆನನ್ ಎಂಬಾತ ತಮ್ಮ ತರಬೇತಿ ಕೊಠಡಿಗೆ ಬರುತ್ತಿದ್ದ. ಆತನಿಗೂ ತರಬೇತಿಗೂ ಯಾವುದೇ ಸಂಬಂಧ ಇರಲಿಲ್ಲ, ಆದರೂ ಆತ ಅಲ್ಲಿಗೆ ಬಂದು ತನ್ನ ವೈಯಕ್ತಿಕ ಜೀವನದ ಬಗ್ಗೆ ಕೇಳುತ್ತಿದ್ದ. ನಿನ್ನ ಗಂಡ ನಿನ್ನಿಂದ ದೂರ ವಾಸ ಮಾಡುತ್ತಿರುವುದರಿಂದ ನಿನಗೆ ಎಲ್ಲವನ್ನು ನಿರ್ವಹಿಸಲು ಸಾಧ್ಯವಾಗುತ್ತಿದೆಯೇ? ನಿನಗೆ ಭಯವಾಗುವುದಿಲ್ಲವೇ? ನಿಮಗೆ ನನ್ನ ಸಹಾಯ ಬೇಕಿದ್ದರೆ ನನಗೆ ಹೇಳಿ ನಾನು ನಿಮಗೆ ಯಾವುದೇ ಸಮಯದಲ್ಲಿ ಸಹಾಯ ಮಾಡಲು ಸಿದ್ಧನಿದ್ದೇನೆ ಎಂದು ಆತ ಹೇಳುತ್ತಿದ್ದ ಎಂದು ಮಹಿಳೆ ಆರೋಪಿಸಿದ್ದಾರೆ.
ಆಗ ತನಗೆ ಮದುವೆಯಾಗಿ ಕೇವಲ ಒಂದು ತಿಂಗಳಾಗಿತ್ತು. ಆದರೂ ಆತ ನನ್ನ ವೈವಾಹಿಕ ಜೀವನದ ಬಗ್ಗೆ ಆಗಾಗ ಕಾಮೆಂಟ್ ಮಾಡುತ್ತಲೇ ಇದ್ದ. ನೀನು ಈಗಷ್ಟೇ ಮದುವೆಯಾಗಿದ್ದಿಯಾ? ಹನಿಮೂನ್‌ಗೆ ಎಲ್ಲಿಗೆ ಹೋಗುತ್ತಿದ್ದಿಯಾ? ಅಲ್ಲಿ ಏನು ಮಾಡುತ್ತೀಯಾ ಎಂದೆಲ್ಲಾ ಆತ ಅಸಂಬದ್ಧ ಪ್ರಶ್ನೆಗಳನ್ನು ಕೇಳುತ್ತಿದ್ದ. ಈ ರಾಝಾನ ಈ ರೀತಿಯ ಅಧಿಕಪ್ರಸಂಗಿತನದ ಬಗ್ಗೆ ಟೀಮ್ ಲೀಡರ್ ಖುರೇಷಿ ಬಳಿ ಹೇಳಿದಾಗ ಆ ಟೀಮ್ ಲೀಡರ್ ಆತನ ವರ್ತನೆಯನ್ನು ನಿಯಂತ್ರಿಸುವ ಬದಲು ಆತನನ್ನೇ ಬೆಂಬಲಿಸುತ್ತಿದ್ದ.
ಶಾರುಖ್ ಖುರೇಷಿ ಕೂಡ ತನ್ನ ಮದುವೆಯ ಬಗ್ಗೆ ಪ್ರಶ್ನೆ ಮಾಡುತ್ತಿದ್ದ ಲವ್ ಮ್ಯಾರೇಜ್ ಅಥವಾ ಅರೆಂಜ್ ಮ್ಯಾರೇಜಾ ಎಂದು ಕೇಳುತ್ತಿದ್ದ, ಈ ಖುರೇಷಿ ಜೊತೆ ಸೇರಿ ರಾಝಾನೂ ನನಗೆ ಕಿರುಕುಳ ನೀಡುವುದಕ್ಕೆ ಶುರು ಮಾಡಿದ್ದ.
ಹೇಗೆ ಮಾಡಬೇಕೆಂದು ಕಲಿಸುತ್ತೇವೆ ಎಂದಿದ್ದ ಕಾಮುಕರು
ನಿನಗೆ ನಿನ್ನ ಗಂಡನೊಂದಿಗೆ ಹೊಂದಿಕೆಯಾಗದಿದ್ದರೆ, ನಮಗೆ ತಿಳಿಸು ನಾವು ನಿಮಗೆ ನಿಖರವಾಗಿ ಏನು ಮಾಡಬೇಕೆಂದು ಮತ್ತು ಅದನ್ನು ಹೇಗೆ ಮಾಡಬೇಕೆಂದು ಕಲಿಸುತ್ತೇವೆ. ನಿಮಗೆ ಸಾಕಷ್ಟು ಗೆಳೆಯರು ಇದ್ದಿರಬೇಕು. ಅವರೆಲ್ಲರನ್ನೂ ಬಿಟ್ಟು ನೀವು ಹೇಗೆ ಮದುವೆಯಾದಿರಿ? ಆ ಗೆಳೆಯರು ಇನ್ನೂ ಹಿಂದಿನಂತೆಯೇ ನಿಮ್ಮನ್ನು ಬೆನ್ನಟ್ಟುತ್ತಿದ್ದರೆ ಮತ್ತು ನಿಮ್ಮ ಕುಟುಂಬ ಅಥವಾ ಪತಿಗೆ ಅದು ತಿಳಿದಿದ್ದರೆ, ಏನಾಗುತ್ತಿತ್ತು? ನೀವು ಏನು ಮಾಡುತ್ತೀರಿ? ಎಂದು ರಝಾ ತನಗೆ ಕೇಳುತ್ತಾ ಕಿರುಕುಳ ನೀಡುತ್ತಿದ್ದ ಎಂದು ಮಹಿಳೆ ಆರೋಪಿಸಿದ್ದಾರೆ.
ತನಗೆ ಪ್ಲೇಯರ್ ಎಂದು ಹೆಸರಿಟ್ಟಿದ್ದ ಆತ ತಾನು ಕಚೇರಿಗೆ ಪ್ರವೇಶಿಸಿದಾಗಲೆಲ್ಲಾ ಪ್ಲೇಯರ್ ಎಂದು ಕರೆಯುತ್ತಿದ್ದ. ನನ್ನ ಕೆಲಸದಲ್ಲಿ ಯಾವುದೇ ತೊಂದರೆಗಳು ಎದುರಾದರೆ ಮತ್ತು ನಾನು ಅದನ್ನು ಶಾರುಖ್‌ಗೆ ಹೇಳಿದರೆ, ಆತ ಈ ರಝಾನನ್ನು ಕರೆಸುತ್ತಿದ್ದ. ಈ ರಝಾ ಬಂದು ಏನಾಯ್ತು ಪ್ಲೇಯರ್? ಕೆಲಸ ನಿರ್ವಹಿಸಲು ಸಾಧ್ಯವಾಗುತ್ತಿಲ್ಲವೇ? ನೀವು ಕಷ್ಟಪಡುತ್ತಿದ್ದರೆ, ನನಗೆ ತಿಳಿಸಿ ಎಂದು ಹೇಳುತ್ತಿದ್ದ ಎಂದು ಮಹಿಳೆ ಪೊಲೀಸರಿಗೆ ತಿಳಿಸಿದರು.
ಇದನ್ನೂ ಓದಿ: ತಿರುವಿನಲ್ಲಿ ಕಾದಿದ್ದ ಜವರಾಯ: ಕಂದಕಕ್ಕೆ ಉರುಳಿದ ಬಸ್ : 21 ಜನರ ದಾರುಣ ಸಾವು
ನಿಮ್ಮ ಗಂಡ ಇಲ್ಲಿಗೆ ಏಕೆ ಬರುವುದಿಲ್ಲ? ನೀವು ನವವಿವಾಹಿತರು. ನಿಮ್ಮಿಂದ ದೂರ ಇರುವುದನ್ನು ಅವನು ಹೇಗೆ ಸಹಿಸಿಕೊಳ್ಳಬಲ್ಲನು? ನಾನು ಅವನ ಸ್ಥಾನದಲ್ಲಿದ್ದರೆ, ನೀವು ಇಲ್ಲದೆ ನಾನು ಎಲ್ಲಿಗೂ ಹೋಗುತ್ತಿರಲಿಲ್ಲ; ನಾನು ನಿಮ್ಮ ಪಕ್ಕದಲ್ಲಿಯೇ ಇರುತ್ತಿದ್ದೆ ಎಂದು ಹೇಳುತ್ತಾ ಆತ ತನಗೆ ಕಿರುಕುಳ ನೀಡುತ್ತಿದ್ದ, ಈ ವರ್ಷದ ಮಾರ್ಚ್‌ನಲ್ಲಿ ಗುಡಿ ಪಾಡ್ವಾ ಹಬ್ಬದ ದಿನದಂದು ಸೀರೆ ಉಟ್ಟು ಕಚೇರಿಗೆ ಬಂದಿದ್ದಾಗ ರಾಝಾ ನನ್ನ ಸೀರೆಯನ್ನು ಎಳೆದಾಡಿದ ಎಂದು ಮಹಿಳೆ ದೂರಿದ್ದಾರೆ.
ನಾನು ಸೀರೆ ಧರಿಸಿ ಬಂದಿದ್ದೆ. ನಾನು ಲಾಬಿಯ ಮೂಲಕ ಸಾಗಿ ಪ್ಯಾಂಟ್ರಿಯ ಮೂಲಕ ನಡೆಯುತ್ತಿದ್ದಾಗ, ಯಾರೋ ನನ್ನ ಸೀರೆಯ ಸೆರಗನ್ನು ಹಿಡಿದು ಎಳೆದ ಅನುಭವ ಆಯ್ತು. ನಾನು ತಿರುಗಿ ನೋಡಿದಾಗ, ಸೀರೆಯ ಸೆರಗು ರಾಝಾ ಕೈಯಲ್ಲಿತ್ತು. ನಾನು ತಕ್ಷಣ ನನ್ನ ಸೀರೆಯ ಸೆರಗನ್ನು ಹಿಂದಕ್ಕೆ ಎಳೆದಾಗ ಅವನು ನನ್ನನ್ನು ಅಸಭ್ಯವಾಗಿ ನೋಡಿ ಮುಗುಳ್ನಕ್ಕ ಎಂದು ಆ ಮಹಿಳಾ ಉದ್ಯೋಗಿ ಆರೋಪಿಸಿದ್ದಾರೆ.
ನಾಸಿಕ್‌ನಲ್ಲಿ ಟಿಸಿಎಸ್ ಕಂಪನಿಯಲ್ಲಿ ನಡೆದ ಒತ್ತಾಯಪೂರ್ವಕ ಮತಾಂತರ ಹಾಗೂ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇದುವರೆಗೆ 8 ಜನರನ್ನು ಬಂಧಿಸಿದ್ದಾರೆ. ಈ ಪ್ರಕರಣದಲ್ಲಿ ಬಂಧಿತರಾಗಿ ಉದ್ಯೋಗದಿಂದ ಅಮಾನತಾಗಿರುವ ಉದ್ಯೋಗಿಗಳನ್ನು ದಾನಿಶ್ ಶೇಖ್, ತೌಸಿಫ್ ಅತ್ತರ್, ರಾಝಾ ಮೆಮನ್, ಶಾರುಖ್ ಖುರೇಶಿ, ಶಾಫಿ ಶೇಖ್, ಅಸೀಫ್ ಅಫ್ತಾಬ್ ಅನ್ಸಾರಿ ಹಾಗೂ ಹೆಚ್ ಆರ್ ಮುಖ್ಯಸ್ಥೆಅಶ್ವಿನಿ ಚೈನಾನಿ ಎಂದು ಗುರುತಿಸಲಾಗಿದೆ.
ಇದನ್ನೂ ಓದಿ: ಪ್ರಧಾನಿ ಕಿವಿಯಲ್ಲಿ ಹೇಳಿದ ಗುಟ್ಟು ಮಾಡಿದ ಸಿಎಂ: ಮೋದಿ ಸಿದ್ದು ಬಳಿ ಹೇಳಿದ್ದೇನು?