ಮೈಕ್ರೋಸಾಫ್ಟ್‌ನಿಂದ 11 ಸಾವಿರಕ್ಕೂ ಹೆಚ್ಚು ಉದ್ಯೋಗಿಗಳ ವಜಾ: ಟೆಕ್‌ ಸಂಸ್ಥೆಗಳಿಂದ ದಿನಕ್ಕೆ 1,600 ಸಿಬ್ಬಂದಿಗೆ ಗೇಟ್‌ಪಾಸ್..!

By BK Ashwin  |  First Published Jan 18, 2023, 11:59 AM IST

ಭಾರತ ಸೇರಿದಂತೆ ಜಾಗತಿಕ ಟೆಕ್‌ ಕಂಪನಿಗಳು ದಿನಕ್ಕೆ 1,600 ರಂತೆ ಉದ್ಯೋಗಿಗಳನ್ನು ವಜಾಮಾಡುತ್ತಿರುವುದು ಇತ್ತೀಚಿನ ಅಂಕಿ ಅಂಶಗಳಿಂದ ತಿಳಿದುಬಂದಿದೆ. ಜಾಗತಿಕ ಆರ್ಥಿಕ ಹಿಂಜರಿತ ಹಾಗೂ ನಿಧಾನಗತಿಯ ಆರ್ಥಿಕ ಬೆಳವಣಿಗೆ ಹಿನ್ನೆಲೆಯಲ್ಲಿ ಸಿಬ್ಬಂದಿಯನ್ನು ಸಾಮೂಹಿಕ ವಜಾಗೊಳಿಸುವ ಘಟನೆಗಳು ಜಗತ್ತಿನಾದ್ಯಂತ ವರದಿಗಳಾಗುತ್ತಿವೆ. 


ಇತ್ತೀಚೆಗೆ ಉದ್ಯೋಗಿಗಳ ನೇಮಕಾತಿಗಿಂತ ಉದ್ಯೋಗಿಗಳ ವಜಾ ಸುದ್ದಿಯೇ ಹೆಚ್ಚು ಕಾಣಿಸುತ್ತಿದೆ. ಹಾಗೆ, ಜಾಗತಿಕ ಟೆಕ್‌ ದೈತ್ಯ ಕಂಪನಿಗಳು ಉದ್ಯೋಗಿಗಳನ್ನು ಕಡಿತ ಮಾಡುತ್ತಿರುವುದೂ ಹೌದು. ಟ್ವಿಟ್ಟರ್‌, ಅಮೆಜಾನ್‌, ಫೇಸ್‌ಬುಕ್‌, ಶೇರ್‌ಚಾಟ್‌ ರೀತಿ ಮೈಕ್ರೋಸಾಫ್ಟ್‌ ಸಹ ಇದೀಗ ಸಾವಿರಾರು ಉದ್ಯೋಗಿಗಳನ್ನು ವಜಾ ಮಾಡುತ್ತಿದೆ ಎಂದು ವರದಿಗಳಾಗುತ್ತಿವೆ. ಈ ವರ್ಷದಲ್ಲಿ ಸುಮಾರು 11 ಸಾವಿರ ಉದ್ಯೊಗಿಗಳನ್ನು ಅದರೆ ಕಂಪನಿಯ ಶೇ. 5 ರಷ್ಟು ಸಿಬ್ಬಂದಿಗೆ ಗೇಟ್‌ಪಾಸ್‌ ನೀಡಲಾಗುತ್ತಿದೆ. ಹಾಗೆ, ಶೀಘ್ರದಲ್ಲೇ ವಜಾ ಪ್ರಕ್ರಿಯೆ ನಡೆಯಲಿದೆ ಎಂದೂ ಹೇಳಲಾಗಿದೆ. ಇದೇ ರೀತಿ, ಭಾರತ ಸೇರಿದಂತೆ ಜಾಗತಿಕ ಟೆಕ್‌ ಕಂಪನಿಗಳು ದಿನಕ್ಕೆ 1,600 ರಂತೆ ಉದ್ಯೋಗಿಗಳನ್ನು ವಜಾಮಾಡುತ್ತಿರುವುದು ಇತ್ತೀಚಿನ ಅಂಕಿ ಅಂಶಗಳಿಂದ ತಿಳಿದುಬಂದಿದೆ. ಜಾಗತಿಕ ಆರ್ಥಿಕ ಹಿಂಜರಿತ ಹಾಗೂ ನಿಧಾನಗತಿಯ ಆರ್ಥಿಕ ಬೆಳವಣಿಗೆ ಹಿನ್ನೆಲೆಯಲ್ಲಿ ಸಿಬ್ಬಂದಿಯನ್ನು ಸಾಮೂಹಿಕ ವಜಾಗೊಳಿಸುವ ಘಟನೆಗಳು ಜಗತ್ತಿನಾದ್ಯಂತ ವರದಿಗಳಾಗುತ್ತಿವೆ. 

ಎಂಜಿನಿಯರಿಂಗ್ (Engineering) ಹಾಗೂ ಎಚ್‌ಆರ್‌ ವಿಭಾಗದಲ್ಲಿ (HR Department) ಹೆಚ್ಚು ಉದ್ಯೋಗ ಕಡಿತವಾಗಲಿದೆ ಎಂದು ಬ್ಲೂಮ್‌ಬರ್ಗ್‌ ಹಾಗೂ ರಾಯಿಟರ್ಸ್‌ ವರದಿ ಅಂದಾಜಿಸಿದೆ. ಆದರೆ, ಉದ್ಯೋಗ ಕಡಿತದ (Job Loss) ಅಧಿಕೃತ ಸಂಖ್ಯೆಯನ್ನು ಮೈಕ್ರೋಸಾಫ್ಟ್‌ (Microsoft) ಈವರೆಗೆ ಬಾಯಿಬಿಟ್ಟಿಲ್ಲ. ಮೈಕ್ರೋಸಾಫ್ಟ್‌ನಲ್ಲಿ ಸುಮಾರು 2 ಲಕ್ಷ ಉದ್ಯೋಗಿಗಳಿದ್ದು (Employees) , ಈ ಪೈಕಿ ಅಕ್ಟೋಬರ್‌ 2022ರಲ್ಲಿ ಸುಮಾರು 1 ಸಾವಿರ ಉದ್ಯೋಗಿಗಳಿಗೆ ಗೇಟ್‌ ಪಾಸ್‌ ಸಿಕ್ಕಿತ್ತು ಎಂದು ವರದಿಯಾಗಿತ್ತು. ಆದರೆ, ಯುಕೆ ಮೂಲದ ಸ್ಕೈ ನ್ಯೂಸ್‌ ಪ್ರಕಾರ ಒಟ್ಟಾರೆ 11 ಸಾವಿರ ಉದ್ಯೋಗಿಗಳು ಮೈಕ್ರೋಸಾಫ್ಟ್‌ನಲ್ಲಿ ಉದ್ಯೋಗ ಕಳೆದುಕೊಳ್ಳುತ್ತಾರೆ. ಇದು ಕಂಪನಿಯ ಶೇ. 5 ರಷ್ಟು ಸಿಬ್ಬಂದಿಗೆ ಉದ್ಯೋಗ ಕಡಿತ ಎಂದು ತಿಳಿದುಬಂದಿದೆ.

Tap to resize

Latest Videos

ಇದನ್ನು ಓದಿ: Amazon Layoffs: ಯಾರನ್ನೂ ತೆಗೆದಿಲ್ಲ, ಅವರೇ ರಾಜೀನಾಮೆ ಕೊಟ್ಟಿದ್ದಾರೆ: ಕಾರ್ಮಿಕ ಇಲಾಖೆಗೆ ಅಮೆಜಾನ್‌ ಸ್ಪಷ್ಟನೆ

ಅಮೆಜಾನ್‌ ಇತ್ತೀಚೆಗೆ 18 ಸಾವಿರಕ್ಕೂ ಹೆಚ್ಚು ಉದ್ಯೋಗಿಗಳಿಗೆ ಗೇಟ್‌ಪಾಸ್‌ ನೀಡೋದಾಗಿ ಹೇಳಿತ್ತು. ಸಿಎಒ ಆಂಡಿ ಜ್ಯಾಸ್ಸಿ ಈ ಮಾಹಿತಿ ನೀಡಿದ್ದರು. ಹಾಗೆ ಶೇರ್‌ಚಾಟ್‌ ಸಹ 500 ರಿಂದ 600 ಉದ್ಯೋಗಿಗಳ ವಜಾ ಮಾಡುತ್ತಿದೆ. ಈಗ ಮೈಕ್ರೋಸಾಫ್ಟ್‌ ಸರದಿ. ಈ ಹಿನ್ನೆಲೆ ಟೆಕ್‌ ಸಿಬ್ಬಂದಿಗಳ ವಜಾ ಇನ್ನೂ ನಿಂತಿಲ್ಲ ಎಂಬುದಕ್ಕೆ ಇದು ಉತ್ತಮ ಉದಾಹರಣೆಯೂ ಹೌದು. ಪ್ರಮುಖವಾಗಿ ಟ್ವಿಟ್ಟರ್‌ ಶೇ. 50 ರಷ್ಟು ಸಿಬ್ಬಂದಿಯನ್ನು ವಜಾ ಮಾಡಿದ್ದು, ಈಗ ಮೈಕ್ರೋಸಾಫ್ಟ್‌ ವರದಿ ಬರುತ್ತಿರುವುದರಿಂದ 2023 ರಲ್ಲೂ ಈ ಟೆಕ್‌ ಸಿಬ್ಬಂದಿಗಳ ಲೇಆಫ್‌ ಮುಂದುವರಿಯಲಿದೆ ಎಂಬುದು ಇಲ್ಲಿನ ಪ್ರಮುಖಾಂಶ. 

ಭಾರತ ಸೇರಿದಂತೆ ಜಾಗತಿಕ ಟೆಕ್‌ ಕಂಪನಿಗಳು ದಿನಕ್ಕೆ 1,600 ರಂತೆ ಉದ್ಯೋಗಿಗಳನ್ನು ವಜಾಮಾಡುತ್ತಿದೆ ಎಂದು ಅಂಕಿ ಅಂಶಗಳಿಂದ ತಿಳಿದುಬಂದಿದೆ. ಜಾಗತಿಕ ಆರ್ಥಿಕ ಹಿಂಜರಿತ ಹಾಗೂ ನಿಧಾನಗತಿಯ ಆರ್ಥಿಕ ಬೆಳವಣಿಗೆ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗುತ್ತಿದೆ. ಸುಮಾರು 91 ಕಂಪನಿಗಳು ಜನವರಿ ತಿಂಗಳ ಮೊದಲ 15 ದಿನಗಳಲ್ಲೇ 24 ಸಾವಿರಕ್ಕೂ ಹೆಚ್ಚು ಟೆಕ್ಕಿಗಳನ್ನು ವಜಾಗೊಳಿಸಿವೆ. ಇಷ್ಟೊಂದು ಸಂಖ್ಯೆಯ ಉದ್ಯೋಗ ಕಡಿತ ಮುಂಬರುವ ಕೆಟ್ಟ ದಿನಗಳಿಗೆ ಮುನ್ಸೂಚನೆ ಎಂದೂ ಹೇಳಬಹುದು. ಕಳೆದ ವರ್ಷ ಅಂದರೆ 2022ರಲ್ಲಿ 1,000ಕ್ಕೂ ಹೆಚ್ಚು ಕಂಪನಿಗಳು 1.5 ಲಕ್ಷಕ್ಕೂ ಹೆಚ್ಚು ಉದ್ಯೋಗಿಗಳನ್ನು ವಜಾಗೊಳಿಸಿವೆ ಎಂದೂ ಕೆಲ ಅಂಕಿಅಂಶಗಳು ಹೇಳುತ್ತಿವೆ. 

ಇದನ್ನೂ ಓದಿ: ಶೀಘ್ರದಲ್ಲೇ 10,000 ಅಮೆಜಾನ್‌ ಸಿಬ್ಬಂದಿ ವಜಾ..! ಮೆಟಾ, ಟ್ವಿಟ್ಟರ್‌ ಬಳಿಕ ಮತ್ತೊಂದು ದೊಡ್ಡ ಶಾಕ್‌

ಕೆಲಸ ಕಳೆದುಕೊಂಡವರಿಗೆ ಲಿಂಕ್ಡ್‌ಇನ್‌ ಸಾಥ್‌..!

ಈ ಮಧ್ಯೆ, ಹೀಗೆ ಲಕ್ಷಾಂತರ ಸಂಖ್ಯೆಯಲ್ಲಿ ಕೆಲಸ ಕಳೆದುಕೊಂಡವರ ಗತಿ ಏನು, ಅವರ ಭವಿಷ್ಯ ಹೇಗೆ ಅಂತೀರಾ..? ಕೆಲಸ ಕಳೆದುಕೊಂಡವರಿಗೆ ಉದ್ಯೋಗ ಅನ್ವೇಷಣೆಗೆ ಲಿಂಕ್ಡ್‌ಇನ್‌ ನೆರವು ನೀಡುತ್ತಿದೆ. ವೃತ್ತಿ ಬದುಕಿನ ಅಡ್ಡಿಗಳು ಮತ್ತು ಸವಾಲುಗಳನ್ನು ನಿರ್ವಹಿಸುವ ಬಗೆಗೆ ಸಲಹೆಯನ್ನೂ ನೀಡುತ್ತಿದೆ. ಈ ಹಿನ್ನೆಲೆ ಲಿಂಕ್ಡ್‌ಇನ್‌ನತ್ತ ಇತ್ತೀಚೆಗೆ ಹಲವರು ಆಕರ್ಷಿತರಾಗುತ್ತಿದ್ದಾರೆ. 

ಕೆಲಸ ಕಳೆದುಕೊಂಡ ಬಗ್ಗೆ ಹಲವರು ಇದರಲ್ಲಿ ಪೋಸ್ಟ್ ಮಾಡುತ್ತಿದ್ದು, ಜತೆಗೆ ತಮ್ಮ ಸ್ನೇಹಿತರು, ಸಂಬಂಧಿಕರು ವಜಾ ಆಗಿದ್ದಾರೆ. ಇವರಿಗೆ ಕೆಲಸ ಕೊಡಿಸಲು ನೆರವು ನೀಡಿ ಎಂದೂ ಹಲವರು ಹಂಚಿಕೊಳ್ಳುತ್ತಿದ್ದಾರೆ. ಇನ್ನು ಕೆಲವರಂತೂ ಈ ಕಂಪನಿಗಳಲ್ಲಿ ಕೆಲಸ ಇದೆ ನೋಡಿ ಎಂದೂ ಶೇರ್‌ ಮಾಡಿಕೊಳ್ಳುತ್ತಿದ್ದಾರೆ. 

ಇದನ್ನೂ ಓದಿ: ಮಗಳಿಗೆ ಹಾಲುಣಿಸಲು ಎದ್ದೆ; Meta ಕೆಲಸ ಕಳೆದುಕೊಂಡ ಮೇಲ್ ನೋಡಿದೆ: ಭಾರತೀಯ ಮೂಲದ ಮಹಿಳೆ ಭಾವುಕ ಪೋಸ್ಟ್‌

click me!