
ಲಿಂಕ್ಡ್ಇನ್ ಪೋಸ್ಟ್ (linked.in post) ಒಂದನ್ನು ಲೈಕ್ ಮಾಡಿ ಇಂಪ್ಲಾಯ್ ಒಬ್ಬಳು ತನ್ನ ಜೀವನವನ್ನು ನರಕ ಮಾಡ್ಕೊಂಡಿದ್ದಾಳೆ. ಟಾಕ್ಸಿಕ್ ವರ್ಕ್ ಪ್ಲೇಸ್ (Toxic Workplace) ಬಗ್ಗೆ ಲಿಂಕ್ಡ್ ಇನ್ ನಲ್ಲಿ ಹಾಕಿದ್ದ ಪೋಸ್ಟ್ ಒಂದಕ್ಕೆ ಮಹಿಳೆ ಲೈಕ್ ಒತ್ತಿದ್ದಳು. ಅಷ್ಟೆ, ಆಕೆ ಕೆಲಸ ಮಾಡ್ತಿದ್ದ ಮೆಂಟಲ್ ಹೆಲ್ತ್ ಸ್ಟಾರ್ಟ್ ಅಪ್ (Mental Health Startup) ಕಂಪನಿ ಮ್ಯಾನೇಜರ್ ಹಾಗೂ ಸಿಇಒ, ಮಹಿಳೆ ಮಾನಸಿಕ ಸ್ಥಿತಿಯನ್ನೇ ಹದಗೆಡಿಸಿದ್ದಾರೆ. ಕುಂತಲ್ಲಿ, ನಿಂತಲ್ಲಿ ಮೆಂಟಲ್ ಟಾರ್ಚರ್ ನೀಡಿದ್ದಾರೆ. ಟಾಯ್ಲೆಟ್ ನಲ್ಲಿ ಅಳೋದು ಮಹಿಳೆಗೆ ಕಾಮನ್ ಆಗಿತ್ತು.
ರೆಡ್ಡಿಟ್ ನಲ್ಲಿ ಮಾಜಿ ಉದ್ಯೋಗಿ, ತನ್ನ ನೋವನ್ನು ಹಂಚಿಕೊಂಡಿದ್ದಾಳೆ. ಸೋಶಿಯಲ್ ಮೀಡಿಯಾದಲ್ಲಿ ಏಷ್ಯನ್ ಹೆಸರಿನಲ್ಲಿ ತನ್ನ ಖಾತೆ ತೆರೆದಿರುವ ಮಹಿಳೆ, ಪೋಸ್ಟ್ ಆರಂಭದಲ್ಲಿಯೇ ಮ್ಯಾನೇಜರ್ ಹಾಗೂ ಸಿಇಓ ಗುಣಗಾನ ಮಾಡಿದ್ದಾಳೆ.
ಗೂಗಲ್‌ನಲ್ಲಿ 60 ಲಕ್ಷ ಸಂಬಳದ ಕೆಲ್ಸ ಗಿಟ್ಟಿಸಿದ ಯುವತಿ: ಈಕೆ ಓದಿದ್ದು ಐಐಟಿಯಲ್ಲಿ ಅಲ್ಲ
ಟಾಕ್ಸಿಕ್ ಮ್ಯಾನೇಜರ್, ವಿಲಕ್ಷಣ ನಿಯಮಗಳು ಮತ್ತು ಡೈನಾಮಿಕ್ಸ್ ಎಂದು ಪೋಸ್ಟ್ ಶುರು ಮಾಡಿರುವ ಮಾಜಿ ಉದ್ಯೋಗಿ, ತನ್ನ ಮ್ಯಾನೇಜರ್, ಸಿಇಒ ಮುಂದೆ ಒಳ್ಳೆಯವಳಂತೆ ನಾಟಕವಾಡ್ತಿದ್ದಳು. ಅತ್ಯಂತ ಡೇಂಜರ್ ವ್ಯಕ್ತಿ ಆಕೆ. ಇನ್ನು ನಮ್ಮ ಸಿಇಒ ಕುರಿಗಳ ಉಡುಪಿನಲ್ಲಿರುವ ತೋಳ ಎಂದು ಮಹಿಳೆ ಬರೆದಿದ್ದಾಳೆ. ಅವರ ವರ್ತನೆ ನನ್ನ ಮಾನಸಿಕ ಸ್ಥಿತಿಯನ್ನು ಹದಗೆಡಿಸಿತ್ತು ಎಂದ ಮಹಿಳೆ, ಇದು ಸಹೋದ್ಯೋಗಿಗಳ ಗಮನಕ್ಕೂ ಬಂದಿತ್ತು. ಎಷ್ಟೋ ಬಾರಿ ಅವರು ನೀಡುವ ಹಿಂಸೆ ತಾಳಲಾರದೆ ಟಾಯ್ಲೆಟ್ ಗೆ ಹೋಗಿ ಅತ್ತಿದ್ದಿದೆ ಎಂದು ಆಕೆ ತನ್ನ ಕೆಲಸದ ದಿನಗಳನ್ನು ನೆನಪಿಸಿಕೊಂಡಿದ್ದಾಳೆ.
ಲಿಂಕ್ಡ್ ಇನ್ ನಲ್ಲಿ ಟಾಕ್ಸಿಕ್ ಕೆಲಸದ ಸ್ಥಳದ ಬಗ್ಗೆ ಪೋಸ್ಟ್ ಒಂದನ್ನು ಹಾಕಲಾಗಿತ್ತು. ಅದು ನನ್ನ ಮನಸ್ಸಿಗೆ ನಾಟಿತ್ತು. ಪೋಸ್ಟ್ ನನ್ನ ಪ್ರಸ್ತುತ ಜೀವನವನ್ನು ಹೋಲುತ್ತಿತ್ತು. ಅದಕ್ಕೊಂದು ಲೈಕ್ ನೀಡಿದ್ದೇ, ಕೆಲಸದ ಸ್ಥಳ ನರಕವಾಗಲು ಕಾರಣವಾಯ್ತು. ಆದ್ರೆ ನಾನು, ಕಂಪನಿ ಬಗ್ಗೆ ತಪ್ಪು ಸಂದೇಶ ರವಾನೆ ಮಾಡ್ತಿದ್ದೇನೆ ಎಂದು ಆರೋಪ ಮಾಡಿ ಸಿಇಒ ನನ್ನನ್ನು ಕೆಲಸದಿಂದ ವಜಾ ಮಾಡಿದ್ರು ಎಂದು ಮಹಿಳೆ ಬರೆದಿದ್ದಾಳೆ.
ಕೆಲಸದ ಸ್ಥಳದ ಬಗ್ಗೆ ಮಾತನಾಡುವಂತೆ ಸಮಾಜ ಹೇಳುತ್ತದೆ. ಆದ್ರೆ ಅದನ್ನು ಹೇಳಿದ್ರೆ, ಅವರನ್ನು ಕೆಲಸದಿಂದ ವಜಾ ಮಾಡಲಾಗುತ್ತದೆ. ಎಷ್ಟೇ ವಿಷಮ ಪರಿಸ್ಥಿತಿ ಬಂದರೂ ಬಾಯಿ ಮುಚ್ಚಿಕೊಳ್ಳುವುದು ನಮ್ಮ ಹಣೆಬರಹವೇ ಎಂದು ಮಹಿಳೆ ಪ್ರಶ್ನಿಸಿದ್ದಾಳೆ.
ಮಹಿಳೆಯ ರೆಡ್ಡಿಟ್ ಫೋಸ್ಟ್ ವೈರಲ್ ಆಗಿದೆ. ಅನೇಕರು ಇದಕ್ಕೆ ಕಮೆಂಟ್ ಮಾಡಿದ್ದಾರೆ. ಮಾನಸಿಕ ಆರೋಗ್ಯವನ್ನು ಉತ್ತೇಜಿಸುವ ಸ್ಟಾರ್ಟ್ ಅಪ್ ಕಂಪನಿಯ ವಿಷಕಾರಿ ನಡವಳಿಕೆಯ ಬಗ್ಗೆ ಬಳಕೆದಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾರ್ಪೋರೇಟ್ ಜಗತ್ತಿನಲ್ಲಿ ಇದು ಕಟು ಸತ್ಯ. ನೀವು ಮಾತನಾಡಬಹುದು ಎಂಬ ಸ್ವಾತಂತ್ರ್ಯವನ್ನು ನಮಗೆ ನೀಡ್ತಾರೆ. ನೀವು ಮಾತನಾಡಿದ್ರೆ, ಬಾಯಿ ಮುಚ್ಚಿಕೊಳ್ಳುವಂತೆ ಒತ್ತಡ ಹೇರುತ್ತಾರೆ ಎಂದು ಒಬ್ಬರು ಬರೆದಿದ್ದಾರೆ. ಮೆಂಟಲ್ ಸ್ಟಾರ್ಟ್ಅಪ್ ! ಇದು ಆರೋಗ್ಯವನ್ನು ಉತ್ತೇಜಿಸುವುದಕ್ಕಿಂತ ಹಣ ಮಾಡೋದ್ರಲ್ಲಿ ಬ್ಯುಸಿಯಾಗಿದೆ ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ. ಮೆಂಟಲ್ ಹೆಲ್ತ್ ಸ್ಟಾರ್ಟ್ ಅಪ್ ನಲ್ಲಿ ಟಾಕ್ಸಿಕ್ ಕೆಲಸದ ವಾತಾವರಣ ಎಂದು ಅನೇಕರು ಅಚ್ಚರಿ ವ್ಯಕ್ತಪಡಿಸಿದ್ದಾರೆ.
ನಿಮ್ಮ ಮಕ್ಕಳು ನಮ್ಮ ಉದ್ಯೋಗಿಗಳಲ್ಲ ಅವರ ಆರೋಗ್ಯಕ್ಕಾಗಿ ಸಿಕ್ ಲೀವ್ ಸಾಧ್ಯವಿಲ್ಲ; ಕಂಪನಿ ವಿವಾದ!
ಮೆಂಟಲ್ ಹೆಲ್ತ್ ಸ್ಟಾರ್ಟ್ ಅಪ್ ನಲ್ಲಿ ಹೆಲ್ತ್ ಹೆಸರು ತೆಗೆಯಲಾಗಿದೆ. ಹಾಗಾಗಿಯೇ ಅವರು ಈ ರೀತಿ ವರ್ತನೆ ಮಾಡ್ತಿದ್ದಾರೆಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ. ಕೆಲ ಬಳಕೆದಾರರು ತಮಗಾದ ಕೆಟ್ಟ ಅನುಭವಗಳನ್ನು ಇಲ್ಲಿ ಹಂಚಿಕೊಂಡಿದ್ದಾರೆ. ಕಂಪನಿ ಹೆಸರನ್ನು ಹೇಳಿದ್ರೆ, ಅನೇಕರಿಗೆ ಇದ್ರಿಂದ ಅನುಕೂಲವಾಗುತ್ತೆ ಎಂದು ಬಳಕೆದಾರರು ಮಹಿಳೆಗೆ ಸಲಹೆ ನೀಡಿದ್ದಾರೆ.