
ನವದೆಹಲಿ(ಸೆ.08) ಮಕ್ಕಳ ಆರೋಗ್ಯ ಕಾರಣಕ್ಕೆ ಸಿಕ್ ಲೀವ್ ಪಡೆದುಕೊಳ್ಳುತ್ತಿರುವ ಉದ್ಯೋಗಿಗಳ ವಿರುದ್ದ ಕಂಪನಿಯೊಂದು ಗರಂ ಆಗಿದೆ. ಖಡಕ್ ನೋಟಿಸ್ ನೀಡಿ ಎಚ್ಚರಿಸಿದೆ. ಮಕ್ಕಳಿಗೆ ಆರೋಗ್ಯ ಸಮಸ್ಯೆ ಇದೆ ಎಂದು ನೀವು ಸಿಕ್ ಲೀವ್ ಪಡೆದುಕೊಳ್ಳುವುದು, ಕೆಲಸಕ್ಕೆ ಗೈರಾಗುವುದನ್ನು ಕಂಪನಿ ಸಂಪೂರ್ಣವಾಗಿ ನಿಷೇಧಿಸಿದೆ. ನಿಮ್ಮ ಮಕ್ಕಳ ಜವಾಬ್ದಾರಿ ಕಂಪನಿಯದ್ದಲ್ಲ. ಈ ಕಾರಣ ಹೇಳಿ ಕೆಲಸಕ್ಕೆ ರಜೆ ಹಾಕುವು ಯಾವುದೇ ಅವಕಾಶ ಈ ಕಂಪನಿಯಲ್ಲಿ ಇಲ್ಲ ಎಂದು ನೋಟಿಸ್ ನೀಡಿದೆ. ಆದರೆ ಕಂಪನಿ ನೋಟಿಸ್ ಇದೀಗ ಭಾರಿ ವಿವಾದಕ್ಕೆ ಕಾರಣಾಗಿದೆ. ಕಂಪನಿ ಉದ್ಯೋಗಿಗಳು ಈ ನೋಟಿಸ್‌ನ್ನು ರೆಡ್ಡಿಟ್‌ನಲ್ಲಿ ಹಂಚಿಕೊಂಡಿದ್ದಾರೆ. ಇದರ ಬೆನ್ನಲ್ಲೋ ಸೋಶಿಯಲ್ ಮೀಡಿಯಾದಲ್ಲೂ ಕಂಪನಿ ವಿರುದ್ಧ ಹಲವರು ಗರಂ ಆಗಿದ್ದಾರೆ.
ಖಾಸಗಿ ಕಂಪನಿಯೊಂದು ನೀಡಿದ ನೋಟಿಸ್ ಇದೀಗ ವಿವಾದಕ್ಕೆ ಕಾರಣವಾಗಿದೆ. ರೆಟ್ಟಿಟ್ ಬಳಕೆದಾರರು ಈ ನೋಟಿಸ್ ಹಂಚಿಕೊಂಡಿದ್ದಾರೆ. ಪ್ರಮುಖವಾಗಿ ಕಂಪನಿಯಲ್ಲಿನ ಉದ್ಯೋಗಿಗಳು ಕೆಲವು ಬಾರಿ ತಮ್ಮ ಮಕ್ಕಳಿಗೆ ಆರೋಗ್ಯ ಸಮಸ್ಯೆ ಇದೆ ಎಂದು ಸಿಕ್ ಲೀವ್ ಸೇರಿದಂತೆ ಇತರ ಲೀವ್ ಪಡೆದುಕೊಂಡಿದ್ದಾರೆ. ಇದು ಕಂಪನಿ ಆಕ್ರೋಶಕ್ಕೆ ಕಾರಣವಾಗಿದೆ.
ಈ ಕಂಪನಿಯಲ್ಲಿ ಕಚೇರಿ ಟೈಮ್‌ನಲ್ಲೇ ಡೇಟಿಂಗ್ ಅನುಮತಿ, ಸ್ಯಾಲರಿ ಜೊತೆ ಹೆಚ್ಚುವರಿ ಭತ್ಯೆ ಸೌಲಭ್ಯ!
ಉದ್ಯೋಗಿಗಳು ಈ ರೀತಿ ಮಕ್ಕಳಿಗೆ ಹುಷಾರಿಲ್ಲ ಎಂದು ರಜೆ ಪಡೆಯುತ್ತಿದ್ದಾರೆ. ಇದರಿಂದ ಕಂಪನಿ ಉತ್ಪಾದಕತೆ ಕಡಿಮೆಯಾಗುತ್ತಿದೆ. ಕೆಲಸಕ್ಕೆ ಗೈರಾಗಲು ಇದು ಕಾರಣವಲ್ಲ. ಈ ಕಾರಣವನ್ನು ಕಂಪನಿ ಸ್ವೀಕರಿಸುವುದಿಲ್ಲ ಎಂದು ಎಚ್ಚರಿಸಿದೆ. ಈ ಕುರಿತು ಕಂಪನಿ ನೋಟಿಸ್ ಬೋರ್ಡ್‌ನಲ್ಲಿ ದೊಡ್ಡ ನೋಟಿಸ್ ಅಂಟಿಸಿ ಉದ್ಯೋಗಗಳಿಗೆ ಎಚ್ಚರಿಕೆ ನೀಡುವ ಪ್ರಯತ್ನ ಮಾಡಿದೆ. ಆದರೆ ಈ ನೋಟಿಸ್ ಇದೀಗ ವೈರಲ್ ಆಗಿ, ಕಂಪನಿ ವಿರುದ್ಧ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದೆ.
ಇಂದು ಕೆಲಸಕ್ಕೆ ಹಾಜರಾಗಲು ಸಾಧ್ಯವಾಗುತ್ತಿಲ್ಲ, ಮಕ್ಕಳಿಗೆ ಆರೋಗ್ಯ ಸಮಸ್ಯೆ ಇದೆ. ಸಿಕ್ ಲೀವ್ ಪಡೆದುಕೊಳ್ಳುತ್ತೇನೆ. ಈ ಕಾರಣ ನೀಡಿ ಕೆಲಸಕ್ಕೆ ಗೈರಾಗುವುದನ್ನು ಕಂಪನಿ ನಿರ್ಬಂಧಿಸಿದೆ. ಹಲವರು ಈ ರೀತಿ ರಜೆ ಪಡೆದುಕೊಂಡಿದ್ದಾರೆ. ಹೀಗಾಗಿ ಸ್ಪಷ್ಟವಾಗಿ ಕಂಪನಿ ಪಾಲಿಸಿ ತಿಳಿಸಿದ್ದೇವೆ. ನಿಮ್ಮ ಮಕ್ಕಳ ನಮ್ಮ ಕಂಪನಿಯ ಉದ್ಯೋಗಿಗಳಲ್ಲ, ಅವರ ಆರೋಗ್ಯ ಸಮಸ್ಯೆಗಳಿಗೆ ರಜೆ ಹಾಕಿ, ಕೆಲಸಕ್ಕೆ ಗೈರಾಗುವುದು ಕಂಪನಿಯಲ್ಲಿ ನಿರ್ಬಂಧಿಸಲಾಗಿದೆ ಎಂದು ನೋಟಿಸ್ ಅಂಟಿಸಲಾಗಿದೆ. ಇದು ಯಾವ ಕಂಪನಿ, ಎಲ್ಲಿ ಅನ್ನೋ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ.
ಈ ನೋಟಿಸ್ ಫೋಟೋ ರೆಡ್ಡಿಟ್ ಮೂಲಕ ಹರಿದಾಡಿದೆ. ಜೀತದಾಳುವಾಗಿ ದುಡಿಸಿಕೊಳ್ಳುವ ಕಂಪನಿಗಳಿಗೆ ಸರಿಯಾದ ಪಾಠ ಕಲಿಸಬೇಕು. ಉದ್ಯೋಗಿಗಳು ಕಂಪನಿಯ ಜೀತದಾಳುಗಳಲ್ಲ. ಮಕ್ಕಳ, ಪೋಷಕರು, ಇತರ ತುರ್ತು ಅಗತ್ಯ, ಹಬ್ಬ, ವೈಯುಕ್ತಿಕ ಕಾರ್ಯಕ್ರಮಗಳು ಉದ್ಯೋಗಿಗೆ ಅತ್ಯಂತ ಮುಖ್ಯ. ಕಂಪನಿ ಉದ್ಯೋಗಿ ಎಂದ ಮಾತ್ರಕ್ಕೆ ಆತ ಹಗಲು ರಾತ್ರಿ ಕಂಪನಿ ಕೆಲಸಕ್ಕಾಗಿ ಮಾತ್ರ ಬದುಕುಬೇಕು ಎಂದಲ್ಲ. ಆತನಿಗೆ ಖಾಸಗಿ ಬದುಕಿದೆ. ಕುಟುಂಬವಿದೆ. ಇದನ್ನು ಕಂಪನಿಗಳು ಅರ್ಥಮಾಡಿಕೊಂಡರೆ ಮಾತ್ರ ಪ್ರಗತಿ ಸಾಧ್ಯ ಎಂದು ಹಲವರು ಕಮೆಂಟ್ ಮಾಡಿದ್ದಾರೆ.
70 ಲಕ್ಷ ರೂ ಎಣಿಸಿ ಸುಸ್ತಾದ ಬೆನ್ನಲ್ಲೇ ಟ್ವಿಸ್ಟ್, ಶಾಪ್ ಸಿಬ್ಬಂದಿ ಮೇಲೆ ಸೇಡು ತೀರಿಸಿದ ಮಹಿಳೆ ನಡೆಗೆ ಮೆಚ್ಚುಗೆ!