ಸಾಮಾನ್ಯವಾಗಿ ಲಿಂಕ್ಡಿನ್ ಪ್ರೊಫೈಲ್ ಪಕ್ಕಾ ವೃತ್ತಿಪರವಾಗಿ ಗಂಭೀರವಾಗಿರುತ್ತದೆ. ಅದು ನೀರಸವಾಗಿಯೂ ಇರುತ್ತದೆ. ಆದರೆ, ಮಹೇಶ್ ಸುತಾರ್ ಎನ್ನುವವರ ಪ್ರೊಫೈಲ್ ಮಾತ್ರ ಹಾಸ್ಯಭರಿತವಾಗಿ ಭಾರೀ ವಿಶಿಷ್ಟವಾಗಿದ್ದು, ಸೋಷಿಯಲ್ ಮೀಡಿಯಾದಲ್ಲೀಗ ಹವಾ ಸೃಷ್ಟಿಸಿದೆ.
ಲಿಂಕ್ಡಿನ್ ನಲ್ಲಿ ಪ್ರೊಫೈಲ್ ಹೊಂದಿರುವ ಲಕ್ಷಾಂತರ ಜನ ಸಿಗುತ್ತಾರೆ. ಆದರೆ, ಎಲ್ಲರ ಪ್ರೊಫೈಲ್ ವಿಶಿಷ್ಟವಾಗಿರುವುದಿಲ್ಲ. ಪಕ್ಕಾ ವ್ಯವಹಾರಿಕ ಉದ್ದೇಶದ ಪ್ರೊಫೈಲ್ ಆಗಿದ್ದರೂ ಅಲ್ಲೂ ಕ್ರಿಯಾಶೀಲತೆಯನ್ನು ಮೆರೆಯುವವರಿದ್ದಾರೆ. ಅಂಥದ್ದೊಂದು ಕ್ರಿಯಾಶೀಲ ಹಾಗೂ ವಿಶಿಷ್ಟ ಪ್ರೊಫೈಲ್ ಒಂದು ಸೋಷಿಯಲ್ ಮೀಡಿಯಾದಲ್ಲೀಗ ವೈರಲ್ ಆಗಿದೆ. ಮಹೇಶ್ ಸುತಾರ್ ಎನ್ನುವವರ ಲಿಂಕ್ಡಿನ್ ಪ್ರೊಫೈಲ್ ಈಗ ಕೇಂದ್ರಬಿಂದುವಾಗಿದ್ದು, ಇದರಲ್ಲಿರುವ ಕ್ರಿಯಾಶೀಲತೆ ಎಲ್ಲರ ಹೃದಯಗಳನ್ನು ಗೆದ್ದಿದೆ. ತಮ್ಮ ಉದ್ಯೋಗದ ಅನುಭವಗಳನ್ನು ಅತಿ ವಿಶಿಷ್ಟ ರೀತಿಯಲ್ಲಿ ಅವರು ಪ್ರಸ್ತುತಪಡಿಸಿದ್ದಾರೆ. ಈ ವಿಧಾನ ಅತ್ಯಂತ ಅನ್ವೇಷಣಾತ್ಮಕವಾಗಿದ್ದು, ಸೆನ್ಸೇಷನ್ ಮೂಡಿಸಿದೆ.
ವಿಬಿನ್ ಬಹುರಾಜನ್ ಎನ್ನುವವರು ಮಹೇಶ್ ಸುತಾರ್ ಅವರ ಲಿಂಕ್ಡಿನ್ (LinkedIn) ಪ್ರೊಫೈಲ್ (Profile) ಮೇಲೆ ಬೆಳಕು ಚೆಲ್ಲಿದ್ದಾರೆ. ಅವರ ಖಾತೆಯ ಚಿತ್ರದ ಸ್ಕ್ರೀನ್ ಶಾಟ್ (Screen Shot) ಕಳಿಸಿದ್ದಾರೆ. ಅದು ಈಗ ಸಿಕ್ಕಾಪಟ್ಟೆ ವೈರಲ್ (Viral) ಆಗಿದೆ. ಅವರ ಖಾತೆಯಲ್ಲಿನ ವಿವರಗಳು ಬುದ್ಧಿವಂತಿಕೆಯಿಂದ ಕೂಡಿದೆ ಹಾಗೆಯೇ, ತಮಾಷೆಯಾಗಿಯೂ (Funny) ಇದೆ. ತಮ್ಮ ಅನುಭವಗಳನ್ನು ಅವರು ಲಿಸ್ಟ್ ಮಾಡಿ ಅದಕ್ಕೆ ಎಲ್ಲರೂ ಮಾಡುವ ಟಿಪಿಕಲ್ ಶೈಲಿಯ ನಿರೂಪಣೆ ಮಾಡಿಲ್ಲ. ಬದಲಿಗೆ ತಮ್ಮದೇ ವಿಶಿಷ್ಟ ವಿಧಾನವನ್ನು ಅಳುಕಿಲ್ಲದೆ ಅನುಸರಿಸಿದ್ದಾರೆ.
ಟಿಪಿಕಲ್ ಜಾಬ್ ವಿವರಣೆಯಿಂದ (Description) ಹೊರತಾಗಿರುವ ಅವರ ಖಾತೆ ಚುರುಕು, ಬುದ್ಧಿವಂತಿಕೆಯಿಂದ ಕೂಡಿದ್ದು, ರಿಫ್ರೆಶ್ (Refresh) ಮಾಡಿಸುವಂತಿದೆ.
ಪ್ರಸ್ತುತ ವೈಬಿಂಗ್ ಸ್ಟೇಟಸ್!
ಮಹೇಶ್ ಅವರು ಪ್ರೊಡಕ್ಟ್ ಮಾರ್ಕೆಟಿಂಗ್ ಮ್ಯಾನೇಜರ್ ಹುದ್ದೆಯನ್ನು ನೇರವಾಗಿ ಒಂದೇ ಮಾತಿನಲ್ಲಿ ಅವರು ಹೇಗೆ ವಿವರಣೆ ನೀಡಿದ್ದಾರೆ ಎಂದರೆ, “ಹೇಗೆ ಮಾರ್ಕೆಟಿಂಗ್ ಮಾಡಬೇಕು ಎನ್ನುವುದನ್ನು ಅರಿತಿರುವ’ ಎಂದು ಹೇಳಿದ್ದಾರೆ. ಕನ್ಸಲ್ಟಂಟ್ (Consultant) ಆಗಿದ್ದ ಅನುಭವವನ್ನು ತಮಾಷೆಯಾಗಿ “ಸ್ನೇಹಿತರನ್ನು (Friends) ಮಾಡಿಕೊಂಡ ಸಮಯ’ ಎಂದು ವಿವರಿಸಿದ್ದಾರೆ. ಸೀನಿಯರ್ ಡೈರೆಕ್ಟರ್ ಆಗಿದ್ದ ಹುದ್ದೆಯ ಬಗ್ಗೆ “ಹೆಚ್ಚಿನ ಕಲಿಕೆಯನ್ನು ನಿಲ್ಲಿಸಿದ ಅನುಭವ’ ಎಂಬುದಾಗಿ ವಿನೋದದಿಂದ ಬಣ್ಣಿಸಿದ್ದಾರೆ. ಹಾಗೂ ತಮ್ಮ ಪ್ರಸ್ತುತ ಸ್ಟೇಟಸ್ (Status) ಅನ್ನು ಅತ್ಯಂತ ಸೊಗಸಾಗಿ ಹೇಳಿದ್ದಾರೆ. ಸದ್ಯ ತಾವು “ವೈಬಿಂಗ್ ಅಂದರೆ ಕಂಪಿಸುತ್ತಿದ್ದೇನೆ’ ಎಂದು ಹೇಳಿಕೊಂಡಿದ್ದಾರೆ.
ಫನ್ನಿ ಪೋಸ್ಟ್
ವಿಬಿನ್ ಅವರು ಮಹೇಶ್ ಅವರ ಪ್ರೊಫೈಲ್ ಶೇರ್ ಮಾಡಿಕೊಂಡು “ಲಿಂಕ್ಡಿನ್ ಅನುಭವದ ವಿವರಣೆ ಸರಿಯಾಗಿದೆ’ ಎಂದು ಹೇಳಿದ್ದಾರೆ. ಈ ಪೋಸ್ಟ್ (Post) ಗೆ ಸಾವಿರಾರು ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಿಕ್ಕಾಪಟ್ಟೆ ಪ್ರತಿಕ್ರಿಯೆ ನೀಡಿದ್ದಾರೆ. ಅನೇಕ ಪೋಸ್ಟ್ ಬಹಳ ಫನ್ನಿಯಾಗಿವೆ.
ಒಬ್ಬರು, 'ನೀವು ಎಷ್ಟು ಸಂಖ್ಯೆಯಲ್ಲಿ ಸ್ನೇಹಿತರನ್ನು ಮಾಡಿಕೊಂಡಿರಿ ಎನ್ನುವುದನ್ನು ಸಹ ಉಲ್ಲೇಖಿಸಬೇಕಿತ್ತು’ ಎಂದು ಕಾಲೆಳೆದರೆ, ಮತ್ತೊಬ್ಬರು, 'ನಾನು ಅವರನ್ನು ಭೇಟಿಯಾಗಿದ್ದೇನೆ. ಅವರು ವಿನೋದ ಪ್ರಿಯರು’ ಎಂದು ಹೇಳಿದ್ದಾರೆ. “ಹೆಚ್ಚಿನ ಶಬ್ದಗಳನ್ನು ಬಳಕೆ ಮಾಡುತ್ತ ಯಾಕೆ ಸಮಯ ವೇಸ್ಟ್ ಮಾಡಬೇಕು. ಕೆಲವೇ ಶಬ್ದಗಳಲ್ಲಿ ಟ್ರಿಕ್ ಮಾಡಬಹುದು’ ಎಂದು ಅನಿಸಿಕೆ ಹಂಚಿಕೊಂಡಿದ್ದಾರೆ. ಮಹೇಶ್ ಅವರ ಮಾತುಗಳನ್ನೇ ಸಂದರ್ಶನದಲ್ಲಿ (Interview) ಕೇಳುವ ಪ್ರಶ್ನೋತ್ತರದಂತೆ ಒಬ್ಬರು ಅನ್ವಯ ಮಾಡಿದ್ದಾರೆ. ಅದರಲ್ಲಿ, ಸಂದರ್ಶನಕಾರರು, “ನೀವು ಕನ್ಸಲ್ಟಂಟ್ ಆಗಿ ಹೇಗೆ ಕೆಲಸ ಮಾಡಿದ್ದೀರಿ ಎನ್ನುವುದರ ಫೀಡ್ ಬ್ಯಾಕ್ (Feedback) ಕೊಡಿ’ ಎಂದು ಕೇಳುತ್ತಾರೆ. ಅದಕ್ಕೆ “ನನ್ನ ಕೆಲಸ ಹೆಚ್ಚಿನ ಸಂಖ್ಯೆಯಲ್ಲಿ ಸ್ನೇಹಿತರನ್ನು ಮಾಡಿಕೊಳ್ಳುವುದಾಗಿತ್ತು’ ಎಂದು ಹೇಳುತ್ತಾರೆ.
ಇನ್ನು, ಇಂಥದ್ದೇ ವಿಚಿತ್ರ ಹಾಗೂ ವಿಶಿಷ್ಟ ಉತ್ತರಗಳಿಂದ ಲಿಂಕ್ಡಿನ್ ಪ್ರೊಫೈಲ್ ಅನ್ನು ಬದಲಾಯಿಸುವ ಟ್ರೆಂಡ್ (Trend) ಆರಂಭವಾದರೂ ಅಚ್ಚರಿಯಿಲ್ಲ.