* 130 ನೇ ರಾಜ್ಯ ಮಟ್ಟದ ಏಕ ಗವಾಕ್ಷಿ ತೆರವು ಸಮಿತಿ ಸಭೆಯಲ್ಲಿ ಸಚಿವ ಮುರುಗೇಶ್ ಆರ್ ನಿರಾಣಿ ಅನುಮೋದನೆ
* ಒಟ್ಟು 48 ಯೋಜನೆಗಳಿಂದ 6,393 ಜನರಿಗೆ ಉದ್ಯೋಗಾವಕಾಶಗಳು ಸೃಷ್ಟಿ
* ಹೊಸ ಯೋಜನೆಗಳು ರಾಜ್ಯದಲ್ಲಿ ಕೈಗಾರಿಕಾ ಬೆಳವಣಿಗೆಗೆ ಉತ್ತೇಜನ
ಬೆಂಗಳೂರು, (ಮಾ.6): ಕೈಗಾರಿಕಾ ಬೆಳವಣಿಗೆಗೆ ರಾಜ್ಯದಲ್ಲಿ ಇನ್ನಷ್ಟು ಉತ್ತೇಜನ ನೀಡುವ ಮೂಲಕ ಕರ್ನಾಟಕ ಸರ್ಕಾರವು ಶನಿವಾರ 2,062.21 ಕೋಟಿ ಮೌಲ್ಯದ 48 ಕೈಗಾರಿಕಾ ಯೋಜನೆಗಳಿಗೆ ಅನುಮೋದನೆ ನೀಡಿದೆ. ಇದರಿಂದಾಗಿ ರಾಜ್ಯದಲ್ಲಿ 6,393 ಕ್ಕೂ ಹೆಚ್ಚು ಜನರಿಗೆ ಉದ್ಯೋಗವನ್ನು ಸೃಷ್ಟಿಸಲಿದೆ ಎಂದು ಸಚಿವ ಮುರುಗೇಶ್ ಆರ್ ನಿರಾಣಿ (Murugesh Nirani) ಹೇಳಿದ್ದಾರೆ.
ಶನಿವಾರ ಸಂಜೆ ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವರಾದ ಮುರುಗೇಶ್ ಆರ್ ನಿರಾಣಿ ನೇತೃತ್ವದಲ್ಲಿ ನಡೆದ 130ನೇ ರಾಜ್ಯ ಮಟ್ಟದ ಏಕ ಗವಾಕ್ಷಿ ತೆರವು ಸಮಿತಿ (ಎಸ್‍ಎಲ್‍ಎಸ್‍ಡಬ್ಲ್ಯೂಸಿಸಿ) ಸಭೆಯಲ್ಲಿ ಈ ಯೋಜನೆಗಳಿಗೆ ಅನುಮೋದನೆ ನೀಡಿದೆ.
SIDBI Recruitment 2022 : ಸಣ್ಣ ಕೈಗಾರಿಕೆ ಅಭಿವೃದ್ಧಿ ಬ್ಯಾಂಕ್ ನಿಂದ ಉದ್ಯೋಗ ನೇಮಕಾತಿ
ಸಮಿತಿಯು 50 ಕೋಟಿಗಿಂತ ಹೆಚ್ಚಿನ ಹೂಡಿಕೆಯೊಂದಿಗೆ 7 ಪ್ರಮುಖ ಬೃಹತ್ ಮತ್ತು ಮಧ್ಯಮ ಗಾತ್ರದ ಕೈಗಾರಿಕಾ ಯೋಜನೆಗಳನ್ನು ಪರಿಗಣಿಸಿ ಅನುಮೋದನೆ ನೀಡಿದೆ. 1275.67 ಕೋಟಿ ಮೌಲ್ಯದ ಈ ಯೋಜನೆಗಳು ರಾಜ್ಯದಲ್ಲಿ 3181 ಜನರಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ನಿರೀಕ್ಷೆಯಿದೆ ಎಂದು ಸಚಿವ ನಿರಾಣಿ ಹೇಳಿದ್ದಾರೆ.
15 ಕೋಟಿಗಿಂತ ಹೆಚ್ಚು ಮತ್ತು 50 ಕೋಟಿಗಿಂತ ಕಡಿಮೆ ಹೂಡಿಕೆಯ 40 ಹೊಸ ಯೋಜನೆಗಳನ್ನು ಅನುಮೋದಿಸಲಾಯಿತು.
724.87 ಕೋಟಿ ಮೌಲ್ಯದ ಈ ಯೋಜನೆಗಳು ರಾಜ್ಯದಲ್ಲಿ 3212 ಜನರಿಗೆ ಉದ್ಯೋಗಗಳನ್ನು ನೀಡಲಿದೆ.ವ 61.67 ಕೋಟಿ ಹೂಡಿಕೆಯ ಮತ್ತೊಂದು ಯೋಜನೆಗೆ ಅನುಮೋದನೆ ನೀಡಲಾಗಿದೆ. ಒಟ್ಟು 2,062.21 ಕೋಟಿ ರೂ.ಗಳ ಹೂಡಿಕೆಯೊಂದಿಗೆ 6,393 ಜನರಿಗೆ ಉದ್ಯೋಗಾವಕಾಶವಿರುವ ಒಟ್ಟು 48 ಯೋಜನೆಗಳಿಗೆ ಅನುಮತಿ ನೀಡಲಾಗಿದೆ ಎಂದರು.
ಅನುಮೋದಿಸಲಾದ ಹೊಸ ಯೋಜನೆಗಳು
*ರಾಕ್‍ಕೊಲಿನ್ ಇಂಡಿಯಾ ಎಂಟರ್‍ಪ್ರೈಸರ್ ಲಿ.(ರಾಯ್ತಾನ್ ಗ್ರೂಪ್) ₹253.75 ಕೋಟಿ, ಉದ್ಯೋಗ 1306 ವ್ಯಕ್ತಿಗಳಿಗೆ.
* ನಿತಿನ್ ಸಾಯಿ ಅಗ್ರೋಟೆಕ್ ಪ್ರೈವೇಟ್ ಲಿಮಿಟೆಡ್‍ನಿಂದ 231.82 ಕೋಟಿ ಯೋಜನೆಯು 965 ವ್ಯಕ್ತಿಗಳಿಗೆ ಉದ್ಯೋಗಾವಕಾಶವನ್ನು ಹೊಂದಿದೆ.
*165 ಉದ್ಯೋಗಗಳೊಂದಿಗೆ ಬ್ರೈಟ್ É್ಲಕ್ಸಿ ಇಂಟರ್‍ನ್ಯಾಶನಲ್ ಪ್ರೈವೇಟ್ ಲಿಮಿಟೆಡ್‍ನಿಂದ ₹.89.10 ಕೋಟಿ ಹೂಡಿಕೆ.
*85 ಜನರಿಗೆ ಉದ್ಯೋಗ ಸೃಷ್ಟಿಯೊಂದಿಗೆ ಒ/ ಕುಕ್ಸನ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‍ನಿಂದ ₹75 ಕೋಟಿ ಯೋಜನೆ.
*ಅಡೋಕ್ ಇನ್‍ಗ್ರಾಮ್ ಫಾರ್ಮ ಲಿಮಿಟೆಡ್‍ನಿಂದ ₹74.52 ಕೋಟಿ ಯೋಜನೆಯು 115 ಜನರಿಗೆ ಉದ್ಯೋಗ ಸೃಷ್ಟಿ
*84 ಉದ್ಯೋಗಗಳನ್ನು ಸೃಷ್ಟಿಸುವ ನಿರೀಕ್ಷೆಯಿರುವ ಸ್ಟರ್ಲಿಂಗ್ ಪ್ರೈವೇಟ್ ಲಿ.,ನಿಂದ ರೂ.61.86 ಕೋಟಿ ಹೂಡಿಕೆ.
ಸಭೆಯಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ ಇವಿ ರಮಣ ರೆಡ್ಡಿ, ಆಯುಕ್ತೆ, ಗುಂಜನ್ ಕೃಷ್ಣ, ಕೆಐಎಡಿಬಿ ಸಿಇಒ, ಎನ್ ಶಿವಶಂಕರ,ಕರ್ನಾಟಕ ಉದ್ಯೋಗ ಮಿತ್ರದ ವ್ಯವಸ್ಥಾಪಕ ನಿದೇರ್ಶಕ ದೊಡ್ಡಬಸವರಾಜ್ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.
ಸಣ್ಣ ಕೈಗಾರಿಕೆ ಅಭಿವೃದ್ಧಿ ಬ್ಯಾಂಕ್ ನಿಂದ ಉದ್ಯೋಗ ನೇಮಕಾತಿ
ಭಾರತದ ಸಣ್ಣ ಕೈಗಾರಿಕೆ ಅಭಿವೃದ್ಧಿ ಬ್ಯಾಂಕ್ (Small Industries Development Bank of India) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆ ಹೊರಡಿಸಿದೆ. ಒಟ್ಟು 100 ಸಹಾಯಕ ವ್ಯವಸ್ಥಾಪಕ (Assistant Manager) ಹುದ್ದೆಗಳು ಖಾಲಿ ಇದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಈಗಾಗಲೇ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಮಾರ್ಚ್ 24 ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗೆ ಆಸಕ್ತರು ಬ್ಯಾಂಕ್ ನ ಅಧಿಕೃತ ವೆಬ್‌ತಾಣ www.sidbi.in ಗೆ ಭೇಟಿ ನೀಡಬಹುದು.
ಭಾರತದ ಸಣ್ಣ ಕೈಗಾರಿಕೆ ಅಭಿವೃದ್ಧಿ ಬ್ಯಾಂಕ್ ನಲ್ಲಿ ಖಾಲಿ ಇರುವ 100 ಸಹಾಯಕ ವ್ಯವಸ್ಥಾಪಕ ಹುದ್ದೆಗಳನ್ನು ವರ್ಗಾನುಸಾರ ವಿಂಗಡಣೆ ಮಾಡಲಾಗಿದ್ದು ಈ ಬಗ್ಗೆ ಇನ್ನಷ್ಟು ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ