ಯಾರಿಗೆ ಸಾಲುತ್ತೆ ಸಂಬಳ (Salary). ಸ್ಯಾಲರಿ ಅದೆಷ್ಟಿದ್ರೂ ಅದ್ರ ದುಪ್ಪಟ್ಟು ಖರ್ಚುಗಳಿರುತ್ತವೆ. ಹೀಗಾಗಿ ಪ್ರತಿಯೊಬ್ಬ ಉದ್ಯೋಗಿಗಳು ಸ್ಯಾಲರಿ ಹೈಕ್ ಎಕ್ಸ್‌ಪೆಕ್ಟ್ ಮಾಡುತ್ತಲೇ ಇರುತ್ತಾರೆ. ಸ್ಯಾಲರಿ ಹೆಚ್ಚಾಗದಿದ್ದರೆ ರಿಸೈನ್ ಮಾಡಿಬಿಡುತ್ತಾರೆ ಅಥವಾ ಅಸಮಾಧಾನದಿಂದ ಕೆಲಸ (Work) ಮಾಡುತ್ತಾರೆ. ಹಾಗಿದ್ರೆ, ಸಂಬಳವನ್ನು ಹೆಚ್ಚಿಸದೇ ಉದ್ಯೋಗಿ (Employee)ಗಳನ್ನು ಖುಷಿಯಾಗಿಡುವುದು ಹೇಗೆ ?
ಪ್ರತಿಯೊಂದು ಸಂಸ್ಥೆಯ ಅಭಿವೃದ್ಧಿಗೂ ಸರಿಯಾದ ಉದ್ಯೋಗಿ (Employee)ಗಳು ಇರಬೇಕಾದುದು ಅಗತ್ಯವಾಗಿದೆ. ಆದರೆ ಯಾವುದೇ ಉದ್ಯೋಗಿಗಳು ಒಂದೇ ಸಂಸ್ಥೆಯಲ್ಲಿ ಜೀವಮಾನ ಪೂರ್ತಿ ಇರುವುದಿಲ್ಲ. ಹಲವಾರು ಕಾರಣಗಳಿಂದ ಕೆಲಸ (Work)ದ ಸ್ಥಳವನ್ನು ಬದಲಾಯಿಸುತ್ತಾರೆ. ಹೀಗಿದ್ದಾಗ ಉದ್ಯೋಗದಾತರು ಅವರಿಗೆ ಹೆಚ್ಚುವರಿ ಸಂಬಳವನ್ನು ನೀಡುವ ಮೂಲಕ ಉಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ ಈ ರೀತಿ ಕೆಲವೊಂದು ಸಂಸ್ಥೆಗಳಿಗೆ ಆರ್ಥಿಕ ಸಂಸ್ಥೆಯಿಂದ ಉದ್ಯೋಗಿಗಳ ಸಂಬಳವನ್ನು ಹೆಚ್ಚಿಸಲು ಸಾಧ್ಯವಾಗುವುದಿಲ್ಲ. ಹೀಗಿದ್ದಾಗ ಉದ್ಯೋಗದಾತರು ಸಂಬಳ (Salary)ವನ್ನು ಹೆಚ್ಚಿಸದೆ ಉದ್ಯೋಗಿಗಳನ್ನು ಉಳಿಸಿಕೊಳ್ಳಲು ಏನು ಮಾಡಬಹುದು ?
ಕೆಲಸ-ಜೀವನ ಸಮತೋಲನಕ್ಕೆ ಆದ್ಯತೆ ನೀಡಿ
ಕೆಲಸವೆಂಬುದು ಜೀವನದ ಒಂದು ಭಾಗ. ಕೆಲಸವೇ ಜೀವನ (Life)ದ ಭಾಗವಲ್ಲ. ಪ್ರತಿಯೊಬ್ಬರ ಜೀವನದಲ್ಲೂ ಔದ್ಯೋಗಿಕ ಜೀವನ ಇರುವಂತೆಯೇ ಖಾಸಗಿ ಜೀವನವೂ ಮುಖ್ಯವಾಗಿರುತ್ತದೆ. ಹೀಗಾಗಿ ಉದ್ಯೋಗಿಗಳಿಗೆ ಯಾವತ್ತೂ ಕೆಲಸ ಮತ್ತು ಜೀವನ ಎರಡನ್ನೂ ಸಮತೋಲನಗೊಳಿಸಲು ಆದ್ಯತೆ ನೀಡಿ. ಉನ್ನತ ಉದ್ಯೋಗದಾತರು ಉದ್ಯೋಗಿಗಳು ಸಂಸ್ಥೆಯೊಂದಿಗೆ ಸಂಪರ್ಕ ಹೊಂದುವ ವಾತಾವರಣವನ್ನು ಸೃಷ್ಟಿಸುತ್ತಾರೆ ಎಂದು ಅಮೇರಿಕನ್ ಸೈಕಲಾಜಿಕಲ್ ಅಸೋಸಿಯೇಷನ್‌ನ ಮನೋವಿಜ್ಞಾನದ ಸಹಾಯಕ ಕಾರ್ಯನಿರ್ವಾಹಕ ನಿರ್ದೇಶಕ ಡೇವಿಡ್ ಬಲ್ಲಾರ್ಡ್ ತಿಳಿಸುತ್ತಾರೆ.
Government Teacher Post: ಅಂಗವಿಕಲ ಶಿಕ್ಷಕರಿಗೆ ಅಗ್ನಿ ಪರೀಕ್ಷೆ..!
ಪಾರದರ್ಶಕ ಮತ್ತು ಪ್ರಾಮಾಣಿಕರಾಗಿರಿ
ಸಂಸ್ಥೆಯೊಂದರಲ್ಲಿ ಪ್ರಾಮಾಣಿಕವಾಗಿರುವುದು ಯಾವಾಗಲೂ ಮುಖ್ಯವಾಗಿದೆ. ಇದು ಇತರ ಉದ್ಯೋಗಿಗಳಲ್ಲಿ ಉತ್ತಮ ಭಾವನೆಯನ್ನು ಮೂಡಿಸುತ್ತದೆ. ನೀವು ಕಲಿತದ್ದನ್ನು ಹಂಚಿಕೊಳ್ಳುವ ಮೂಲಕ ಮತ್ತು ಸಮಸ್ಯೆಯನ್ನು ಪರಿಹರಿಸಲು ಕ್ರಮವನ್ನು ತೆಗೆದುಕೊಳ್ಳುವ ಮೂಲಕ ನೀವು ಯಾವಾಗಲೂ ಪಾರದರ್ಶಕವಾಗಿರಬೇಕು. ಕೆಲಸದ ಸ್ಥಳದಲ್ಲಿ ಅಪ್ರಾಮಾಣಿಕತೆ ಕೆಟ್ಟ ಅಭಿಪ್ರಾಯವನ್ನು ಮೂಡಿಸುತ್ತದೆ.
ಹೆಚ್ಚಿನ ರಜೆಯ ಸಮಯವನ್ನು ನೀಡಿ
ಉದ್ಯೋಗಿಗಳಿಂದ ಹೆಚ್ಚಿನ ಕೆಲಸವನ್ನು ತೆಗೆಸುವುದರ ಜತೆಗೇ ಉದ್ಯೋಗದಾತರಿಗೆ ಅವರಿಗೆ ತೊಂದರೆಯಿದ್ದಾಗ ಅನುಕೂಲಕರವಾಗಿ ರಜೆ (Leave)ಯನ್ನು ನೀಡಲು ತಿಳಿದಿರಬೇಕು. ಇದರಿಂದ ಅವರು ತಮ್ಮ ಪರ್ಸನಲ್ ಕೆಲಸವನ್ನು ಪೂರ್ಣಗೊಳಿಸುತ್ತಾರೆ ಮತ್ತು ಕುಟುಂಬ ಮತ್ತು ಸ್ನೇಹಿತರೊಂದಿಗೆ ಕೆಲವು ಹೆಚ್ಚುವರಿ ದಿನಗಳ ಕಳೆಯುತ್ತಾರೆ. ಮರಳಿ ಕೆಲಸಕ್ಕೆ ಹಾಜರಾದಾಗ ಅವರು ಮತ್ತಷ್ಟು ಪ್ರೊಡಕ್ಟಿವ್ ಆಗಿರುತ್ತಾರೆ.
Coast Guard Recruitment 2022: ಭಾರತೀಯ ಕರಾವಳಿ ಭದ್ರತಾಪಡೆ ನೇಮಕಾತಿ
ಧನಾತ್ಮಕ ಕೆಲಸದ ವಾತಾವರಣವನ್ನು ಉತ್ತೇಜಿಸಿ
ಉದ್ಯೋಗ ಮಾಡುವ ಸ್ಥಳದಲ್ಲಿ ಮನಸ್ಸಿಗೆ ಕಿರಿಕಿರಿಯೆನಿಸದ ವಾತಾವರಣವಿರುವುದು ಎಲ್ಲಕ್ಕಿಂತ ಮುಖ್ಯ. ಹೀಗಾಗಿ ಧನಾತ್ಮಕ ಕೆಲಸದ ವಾತಾವರಣವನ್ನು ಉತ್ತೇಜಿಸಿ. ಸುಮ್ಮನೆ ಸಿಡುಕುವುದು, ಕಿರುಚಾಡುವುದು ಆಫೀಸಿನ ವಾತಾವರಣವನ್ನು ಹಾಳು ಮಾಡುತ್ತದೆ. ಉದ್ಯೋಗಿಗಳ ಕೆಲಸ ಮಾಡುವ ಮನೋಭಾವವನ್ನು ಉದಾಸಗೊಳಿಸುತ್ತದೆ. ಸಂಸ್ಥೆಯಲ್ಲಿ ಉತ್ತಮವಾದ ಕ್ಯಾಂಟೀನ್, ಪಾರ್ಕಿಂಗ್ ವ್ಯವಸ್ಥೆಗಳಿರಲಿ. . ಹೊಸ ಅಪೇಕ್ಷಿತ ಜವಾಬ್ದಾರಿಗಳು ಅಥವಾ ಸವಾಲುಗಳು, ಹೊಸ ಕೌಶಲ್ಯಗಳನ್ನು ಕಲಿಯಲು ಕೋರ್ಸ್‌ಗಳನ್ನು ತೆಗೆದುಕೊಳ್ಳುವುದು ಮಾಡುತ್ತಿರಿ. ಕಂಪನಿಯಿಂದ ಆಯೋಜಿಸಲ್ಪಡುವ ಪ್ರವಾಸಗಳು ಉದ್ಯೋಗಿಗಳಿಗೆ ಹೆಚ್ಚು ಖುಷಿಯನ್ನು ನೀಡುತ್ತದೆ.
ಯಾವಾಗಲೂ ಧನ್ಯವಾದಗಳು ಎಂದು ಹೇಳಿ
ಉದ್ಯೋಗಿಗಳ ಕೆಲಸಕ್ಕೆ ಸಂಸ್ಥೆ ಸ್ಯಾಲರಿಯನ್ನು ನೀಡುತ್ತದೆ ಎಂಬುದು ನಿಜ. ಆದರೆ ಕೆಲಸ ಯಶಸ್ವಿಯಾಗಿ ಪೂರ್ಣಗೊಂಡಾಗ ಧನ್ಯವಾದಗಳನ್ನು ತಿಳಿಸುವುದರಲ್ಲಿ ತಪ್ಪೇನಿಲ್ಲ. ಇದು ಉದ್ಯೋಗಿಗಳಲ್ಲಿ ಹೆಚ್ಚಿನ ಹುರುಪನ್ನು ತುಂಬುತ್ತದೆ. ಮತ್ತಷ್ಟು ಉತ್ಸಾಹದಿಂದ ಕೆಲಸ ಮಾಡಲು ನೆರವಾಗುತ್ತದೆ. ಕೆಲಸದ ಸ್ಥಳಗಳಲ್ಲಿ ಬೈಗುಳ, ಕೆಲಸದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡದೆ ಇರುವುದರಿಂದ ಉದ್ಯೋಗಿಗಳು ಅತೃಪ್ತರಾಗುತ್ತಾರೆ. ಸಿಕ್ಕುವ ಸಂಬಳಕ್ಕಷ್ಟೇ ಕೆಲಸ ಮಾಡಿದರೆ ಸಾಕು ಎಂಬ ಉದಾಸ ಮನೋಭಾವವನ್ನು ರೂಢಿಸಿಕೊಳ್ಳುತ್ತಾರೆ.
ಉದ್ಯೋಗಿಗಳನ್ನು ಗುರುತಿಸಿ ಮತ್ತು ಬಹುಮಾನ ನೀಡಿ
ಸ್ವಾರ್ತ್‌ಮೋರ್ ಕಾಲೇಜ್ ಅಧ್ಯಯನದ ಪ್ರಕಾರ, ಸಂಸ್ಥೆಗಳಲ್ಲಿಉದ್ಯೋಗಿಗಳ ಕೆಲಸವನ್ನು ಗುರುತಿಸಿ ಮತ್ತು ಬಹುಮಾನ ನೀಡುವುದು ಮುಖ್ಯವಾಗಿದೆ. ಯಾವುದೇ ಪ್ರಾಜೆಕ್ಟ್ ಪೂರ್ತಿಗೊಂಡಾಗ, ಕೆಲಸ ಯಶಸ್ವಿಯಾಗಿ ಪೂರ್ತಿಯಾದಾಗ ಉದ್ಯೋಗಿಯನ್ನು ಹೊಗಳಿ. ಅವರಿಗೆ ಗಿಫ್ಟ್ ವೋಚರ್, ಇತರ ಯಾವುದೇ ವಸ್ತುಗಳನ್ನು ಬಹುಮಾನವಾಗಿ ನೀಡಿ. ಉದ್ಯೋಗಿಗಳು ಯಾವತ್ತೂ ಕೆಲಸದಲ್ಲಿ ತೃಪ್ತರಾಗಿರುವಂತೆ ನೋಡಿಕೊಳ್ಳಿ.
ಅತೃಪ್ತ ಕೆಲಸಗಾರರು ಹೊಸ ಕೆಲಸಕ್ಕೆ ಹೊರಡುವ ಸಾಧ್ಯತೆ ಹೆಚ್ಚು. ಕೆಲಸದ ಸ್ಥಳವು ಅನಾರೋಗ್ಯಕರವಾದಾಗ, ಅದು ಉದ್ಯೋಗಿಯ ಮೇಲೆ ಪರಿಣಾಮ ಬೀರುತ್ತದೆ. ಇದು ಉದ್ಯೋಗಿ ಹೊಸ ಕೆಲಸ ಹುಡುಕುವಂತೆ ಮಾಡುತ್ತದೆ. ಇದು ನಿಮ್ಮ ವ್ಯಾಪಾರದ ಮೇಲೆ ಹೆಚ್ಚುವರಿ ಒತ್ತಡವನ್ನು ನೀಡುತ್ತದೆ. ಹೊಸ ಅಭ್ಯರ್ಥಿಗಳನ್ನು ಸಂದರ್ಶಿಸಲು ಮತ್ತು ಹೊಸ ಬದಲಿ ತರಬೇತಿಗೆ ನೀವು ವ್ಯಕ್ತಿಗಳನ್ನು ಹುಡುಕಬೇಕಾಗುತ್ತದೆ.