ಶ್ರೀಮಂತರ ಮನೆಯಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗೆ ಜವಾಬ್ದಾರಿ ಹೆಚ್ಚಿದ್ರೂ ಸಂಬಳ ಕೈತುಂಬ ಸಿಗುತ್ತೆ. ಮಕ್ಕಳನ್ನು ನೋಡಿಕೊಂಡು, ಸಣ್ಣಪುಟ್ಟ ಕೆಲಸ ಮಾಡಿಕೊಂಡ್ರೂ ಲಕ್ಷಾಂತರ ರೂಪಾಯಿ ದುಡಿಬಹುದು. ಈಗ ಇಂಥದ್ದೇ ಇನ್ನೊಂದು ಅವಕಾಶ ದಾದಿಯರಿಗೆ ಸಿಗ್ತಿದೆ.
ಕೆಲಸ ಇಲ್ಲ ಎನ್ನುವವರಿಗೆ ಇಲ್ಲೊಂದು ಭರ್ಜರಿ ಆಫರ್ ಇದೆ. ನಿಮಗೆ 85 ಲಕ್ಷ ಸಂಬಳ ಪಡೆಯುವ ಕೆಲಸವೊಂದು ಕಾಯ್ತಿದೆ. ಆದರೆ ಈ ಕೆಲಸ ಗಿಟ್ಟಿಸಿಕೊಳ್ಳೋದು ಸುಲಭವಲ್ಲ. ಕೆಲ ಷರತ್ತುಗಳನ್ನು ನೀವು ಪೂರೈಸಿದ್ರೆ ಮಾತ್ರ ನಿಮಗೆ ಕೆಲಸ. ಕೆಲಸ ಬಹಳ ಸಿಂಪಲ್. ಇಬ್ಬರು ಮಕ್ಕಳನ್ನು ನೋಡಿಕೊಳ್ಳೋದು. ಅಂದ್ರೆ ದಾದಿ ಕೆಲಸವನ್ನು ನೀವು ಮಾಡ್ಬೇಕು.
ದಾದಿ (Nanny) ಗೆ 83 ಲಕ್ಷ ಸಂಬಳವ ಅಂತಾ ಹುಬ್ಬೆರಿಸಬೇಡಿ. ಈ ಕೆಲಸ ಆಫರ್ ಮಾಡ್ತಿರೋದು ಭಾರತೀಯ ಮೂಲದ ಅಮೆರಿಕ (America) ದ ಬಿಲಿಯನೇರ್, ಅಮೆರಿಕದಲ್ಲಿ ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ವಿವೇಕ್ ರಾಮಸ್ವಾಮಿ (Vivek Ramaswamy). ಅವರು ತಮ್ಮ ಇಬ್ಬರು ಮಕ್ಕಳನ್ನು ನೋಡಿಕೊಳ್ಳಲು ದಾದಿಯನ್ನು ಹುಡುಕುತ್ತಿದ್ದಾರೆ.
undefined
ಅಕ್ಕನಿಗೆ ಕಿಡ್ನಿ ಕೊಡಲು ನಿರಾಕರಿಸಿದ ತಂಗಿ.. ಚರ್ಚೆಯಲ್ಲಿದೆ ಕಾರಣ!
ವಿವೇಕ್ ರಾಮಸ್ವಾಮಿ, ದಾದಿ ನೇಮಕಾತಿಗೆ ಸಂಬಂಧಿಸಿದಂತೆ ವೆಬ್‌ಸೈಟ್‌ನಲ್ಲಿ ಜಾಹೀರಾತು ನೀಡಿದ್ದಾರೆ. ಉನ್ನತ ಕುಟುಂಬವನ್ನು ಸೇರಲು ಇದು ಉತ್ತಮ ಅವಕಾಶ. ಮಕ್ಕಳ ಬೆಳವಣಿಗೆ ಮತ್ತು ಅಭಿವೃದ್ಧಿಗಾಗಿ ದಾದಿ ಕುಟುಂಬ ಸಂಬಂಧಿತ ಸಾಹಸಗಳಲ್ಲಿ ಭಾಗವಹಿಸಬೇಕಾಗುತ್ತದೆ. ಆಯ್ಕೆಯಾದ ಅಭ್ಯರ್ಥಿಗೆ 1 ಲಕ್ಷ ಡಾಲರ್ ಅಂದರೆ ಸುಮಾರು 83 ಲಕ್ಷ ರೂಪಾಯಿ ವೇತನ ನೀಡಲಾಗುವುದು ಎಂದು ಜಾಹೀರಾತಿನಲ್ಲಿ ತಿಳಿಸಲಾಗಿದೆ.
ದಾದಿಗೆ ಸಿಗುತ್ತೆ ವಾರದಲ್ಲಿ ಇಷ್ಟು ದಿನ ರಜೆ : ಆಯ್ಕೆಯಾದ ಅಭ್ಯರ್ಥಿ ವಾರದ ಸರದಿಯ ವೇಳಾಪಟ್ಟಿಯಂತೆ ಕೆಲಸ ಮಾಡಬೇಕಾಗುತ್ತದೆ. ವಾರದಲ್ಲಿ ಒಂದು ದಿನ ನೀವು ರಜೆ ಪಡೆಯಬಹುದು. ಅಂದ್ರೆ ವರ್ಷಕ್ಕೆ 26 ವಾರ ಕೆಲಸ ಮಾಡಿದ್ರೆ ನಿಮಗೆ 83 ಲಕ್ಷ ರೂಪಾಯಿ ಸಂಬಳ ಸಿಗುತ್ತೆ. ಖಾಸಗಿ ವಿಮಾನದಲ್ಲಿ ಪ್ರಯಾಣಿಸುವ ಅವಕಾಶ : ದಾದಿಗೆ ಖಾಸಗಿ ವಿಮಾನದಲ್ಲಿ ಪ್ರಯಾಣಿಸುವ ಅವಕಾಶ ಕೂಡ ಸಿಗುತ್ತೆ. ಕೆಲಸದ ಬಗ್ಗೆ ಹಾಗೂ ದಾದಿ ಆಯ್ಕೆ ಬಗ್ಗೆ ವಿವೇಕ್ ರಾಮಸ್ವಾಮಿ ಜಾಹೀರಾತು ನೀಡಿದ್ದಾರೆ. ಅದ್ರಲ್ಲಿ, ದಾದಿ ವಾರದಲ್ಲಿ ಒಮ್ಮೆ ಖಾಸಗಿ ವಿಮಾನದಲ್ಲಿ ಪ್ರಯಾಣ ಬೆಳೆಸಬೇಕಾಗುತ್ತೆ ಎಂದು ಬರೆಯಲಾಗಿದೆ. ಕುಟುಂಬದ ಜೊತೆ ಆಗಾಗ ಪ್ರಯಾಣಕ್ಕೆ ಆಯ್ಕೆಯಾದ ದಾದಿ ಸಿದ್ಧರಿರಬೇಕು.
ನವರಾತ್ರಿ ಪುಣ್ಯಕಾಲದಲ್ಲಿ ಯಾವ ಆಹಾರ ಸೂಕ್ತ? ಯಾವ ಕೆಲಸವನ್ನೆಲ್ಲ ಮಾಡ್ಲೇಬಾರ್ದು ಗೊತ್ತಾ?
ದಾದಿಯ ಕೆಲಸ ಏನು? : ದಾದಿ ಮನೆಯ ಸಿಬ್ಬಂದಿಯ ಭಾಗವಾಗಿರಬೇಕು. ಮನೆ ಸಿಬ್ಬಂದಿಯಲ್ಲಿ ಬಾಣಸಿಗ, ದಾದಿ, ಮನೆಗೆಲಸಗಾರ ಮತ್ತು ಖಾಸಗಿ ಭದ್ರತಾ ಸಿಬ್ಬಂದಿ ಬರ್ತಾರೆ.
ದಾದಿ ತಂಡದೊಂದಿಗೆ ಒಟ್ಟಿಗೆ ಕೆಲಸ ಮಾಡಬೇಕಾಗುತ್ತದೆ. ಇದು ದಾದಿಯರಾಗಿ ಕೆಲಸ ಮಾಡುವ ನೌಕರರ ತಂಡವಾಗಿದೆ. ಮಕ್ಕಳ ದಿನಚರಿಯನ್ನು ನಿರ್ಧರಿಸುವುದು ಮತ್ತು ಪ್ರಯಾಣಕ್ಕಾಗಿ ಅವರ ಸಾಮಾನುಗಳನ್ನು ಪ್ಯಾಕ್ ಮಾಡುವುದು ಮತ್ತು ಬಂದ್ಮೇಲೆ ಅನ್ ಪ್ಯಾಕ್ ಮಾಡುವುದು ದಾದಿಯ ಕೆಲಸವಾಗಿರುತ್ತದೆ.
ವಯಸ್ಸಿನ ಮಿತಿ ಎಷ್ಟು? : ದಾದಿಯ ಕೆಲಸಕ್ಕೆ ಆಯ್ಕೆಯಾಗುವವರು ಒಪ್ಪಂದಕ್ಕೆ ಸಹಿ ಆಡ್ಬೇಕು. ಯಾರ್ಯಾರೋ ಈ ದಾದಿ ಹುದ್ದೆಗೆ ಅರ್ಜಿ ಸಲ್ಲಿಸಲು ಸಾಧ್ಯವಿಲ್ಲ. ವಿವೇಕ್ ರಾಮಸ್ವಾಮಿ ಇದಕ್ಕೆ ವಯಸ್ಸನ್ನು ಮಿತಿಗೊಳಿಸಿದ್ದಾರೆ. 21 ವರ್ಷ ವಯಸ್ಸಿನ ಯುವಕರು ಮಾತ್ರ ಅರ್ಜಿ ಸಲ್ಲಿಸಬಹುದು. ಅಲ್ಲದೆ ದಾದಿ ಕೆಲಸ ಮಾಡಿದ ಒಳ್ಳೆ ಅನುಭವ ಅವರಿಗೆ ಇರಬೇಕು.
ವಿವೇಕ್ ರಾಮಸ್ವಾಮಿ ಕುಟುಂಬ : ವಿವೇಕ್ ರಾಮಸ್ವಾಮಿಗೆ ಈಗ 38 ವರ್ಷ ವಯಸ್ಸು. ವಿವೇಕ್ ರಾಮಸ್ವಾಮಿ, ಅಪೂರ್ವ ರಾಮಸ್ವಾಮಿ ಅವರನ್ನು ವಿವಾಹವಾಗಿದ್ದಾರೆ. ಯೇಲ್ ವಿಶ್ವವಿದ್ಯಾಲಯದಲ್ಲಿ ಓದುತ್ತಿರುವಾಗ ಇಬ್ಬರು ಮೊದಲ ಬಾರಿ ಭೇಟಿಯಾಗಿದ್ದರು. ಇವರಿಬ್ಬರಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ.
ಮುಂಚೂಣಿಯಲ್ಲಿ ವಿವೇಕ್ ರಾಮಸ್ವಾಮಿ : 2024 ರ ಚುನಾವಣೆಯಲ್ಲಿ ಜೋ ಬಿಡೆನ್ ಅವರನ್ನು ಎದುರಿಸಲು ಮಾಜಿ ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜೊತೆಗೆ ವಿವೇಕ್ ರಾಮಸ್ವಾಮಿ ಮುಂಚೂಣಿಯಲ್ಲಿದ್ದಾರೆ.