ಟಾಟಾ ಗ್ರೂಪ್‌ನಲ್ಲಿ ಉದ್ಯೋಗ ಪಡೆಯಲು ರತನ್‌ ಟಾಟಾ ರೆಸ್ಯೂಮ್ ರೆಡಿ ಮಾಡಿದ ಸೀಕ್ರೆಟ್‌ ಬಯಲು!

By BK Ashwin  |  First Published Aug 28, 2023, 8:21 PM IST

ತಮ್ಮ ರೆಸ್ಯೂಮ್ ಅನ್ನು ಹಂಚಿಕೊಂಡ ನಂತರ, ರತನ್ ಟಾಟಾ 1962ರಲ್ಲಿ ಟಾಟಾ ಇಂಡಸ್ಟ್ರೀಸ್‌ನಲ್ಲಿ ಕೆಲಸ ಪಡೆದರು ಮತ್ತು ಸುಮಾರು ಮೂರು ದಶಕಗಳ ನಂತರ, 1991ರಲ್ಲಿ ಜೆಆರ್‌ಡಿ ಟಾಟಾ ನಿಧನದ ನಂತರ ಟಾಟಾ ಗ್ರೂಪ್‌ನ ಅಧ್ಯಕ್ಷರಾಗಿ ರತನ್ ಟಾಟಾ ಅಧಿಕಾರ ವಹಿಸಿಕೊಂಡರು.


ಮುಂಬೈ (ಆಗಸ್ಟ್‌ 28, 2023): ರತನ್ ಟಾಟಾ ಭಾರತದ ಅತ್ಯಂತ ಪ್ರಸಿದ್ಧ ಬಿಲಿಯನೇರ್‌ಗಳಲ್ಲಿ ಒಬ್ಬರು. ಪರೋಪಕಾರ, ಬುದ್ಧಿವಂತಿಕೆ, ವ್ಯಾಪಾರ ಕೌಶಲ್ಯ ಮತ್ತು ಸ್ಪೂರ್ತಿದಾಯಕ ಕಥೆಯಿಂದಾಗಿ ಟಾಟಾ ಸನ್ಸ್‌ನ ಚೇರ್ಮನ್ ಎಮೆರಿಟಸ್ ಎಲ್ಲ ವಯಸ್ಸಿನ ಅಭಿಮಾನಿಗಳನ್ನು ಹೊಂದಿದ್ದಾರೆ. ಕಂಪನಿಯನ್ನು ಹೊಸ ಎತ್ತರಕ್ಕೆ ಕೊಂಡೊಯ್ದ ರತನ್ ಟಾಟಾ ಅವರನ್ನು ಟಾಟಾ ಗ್ರೂಪ್‌ನ ಅಧ್ಯಕ್ಷರು ಎಂದು ಮಾತ್ರ ಹೆಚ್ಚಿನ ಜನರು ತಿಳಿದಿದ್ದಾರೆ. 

ಆದರೆ ರತನ್‌ ಟಾಟಾ ಐಟಿ ಸಂಸ್ಥೆಯಲ್ಲಿ ಕೆಲಸ ಮಾಡಲು ಬಯಸಿದ್ದರು ಮತ್ತು ಟಾಟಾ ಗ್ರೂಪ್‌ಗೆ ಸೇರಲು ಜೆಆರ್‌ಡಿ ಟಾಟಾ ಅವರೇ ಕೇಳಿಕೊಂಡರು ಎಂದು ಕೆಲವರಿಗೆ ಮಾತ್ರ ತಿಳಿದಿದೆ. ಈಗ ಮತ್ತೆ ಅಂತರ್ಜಾಲದಲ್ಲಿ ವೈರಲ್‌ ಆಗ್ತಿರೋ ಹಳೆಯ ವಿಡಿಯೋದಲ್ಲಿ, ರತನ್ ಟಾಟಾ ಅವರು ಟಾಟಾ ಗ್ರೂಪ್‌ನಲ್ಲಿ ಉದ್ಯೋಗ ಪಡೆಯಲು ತಮ್ಮ CV ಅನ್ನು ಹೇಗೆ ರಚಿಸಿದರು ಎಂಬುದನ್ನು ಬಹಿರಂಗಪಡಿಸಿದ್ದಾರೆ.

Tap to resize

Latest Videos

ಇದನ್ನು ಓದಿ: TATA ಗ್ರೂಪ್‌ನ ಈ ಷೇರಿಂದ ಜುಂಜುನ್ವಾಲಾ ಪತ್ನಿಗೆ ಒಂದೇ ದಿನದಲ್ಲಿ 315 ಕೋಟಿ ಲಾಭ: ನೀವು ಯಾಕೆ ಟ್ರೈ ಮಾಡ್ಬಾರ್ದು!

ರತನ್ ಟಾಟಾ ಅವರು ಕಾರ್ನೆಲ್ ವಿಶ್ವವಿದ್ಯಾಲಯದಿಂದ ಆರ್ಕಿಟೆಕ್ಚರ್ ಮತ್ತು ಸ್ಟ್ರಕ್ಚರಲ್ ಎಂಜಿನಿಯರಿಂಗ್‌ನಲ್ಲಿ ಪದವೀಧರರಾಗಿದ್ದಾರೆ ಮತ್ತು ಅವರು ಯುಎಸ್ ಜೀವನಶೈಲಿಯಿಂದ ಪ್ರಭಾವಿತರಾಗಿದ್ದರು ಹಾಗೂ, ಲಾಸ್ ಏಂಜಲೀಸ್‌ನಲ್ಲಿ ನೆಲೆಸಲು ಸಿದ್ಧರಾಗಿದ್ದರು. ಆದರೆ, ತನ್ನ ಅಜ್ಜಿಯ ಆರೋಗ್ಯ ಹದಗೆಟ್ಟ ನಂತರ ರತನ್‌ ಟಾಟಾ ಭಾರತಕ್ಕೆ ಮರಳಬೇಕಾಯಿತು.

ಭಾರತಕ್ಕೆ ಮರಳಿದ ನಂತರ, ರತನ್ ಟಾಟಾ IBM ನಲ್ಲಿ ಉದ್ಯೋಗ ಪಡೆದರು. ಆದರೆ ಜೆಆರ್‌ಡಿ ಟಾಟಾ ಆ ನಿರ್ಧಾರದಿಂದ ಸಂತೋಷವಾಗಿರಲಿಲ್ಲ. "ಅವರು ಒಂದು ದಿನ ನನಗೆ ಕರೆ ಮಾಡಿದರು ಮತ್ತು ನೀವು ಭಾರತದಲ್ಲಿರಲು IBMನಲ್ಲಿ ಕೆಲಸ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು" ಎಂದು ರತನ್ ಟಾಟಾ ನೆನಪಿಸಿಕೊಂಡರು. ಹಾಗೂ, ಟಾಟಾ ಗ್ರೂಪ್‌ನಲ್ಲಿ ಕೆಲಸ ಪಡೆಯಲು, ರತನ್ ಟಾಟಾ ತಮ್ಮ ರೆಸ್ಯೂಮ್ ಅನ್ನು ಜೆಆರ್‌ಡಿ ಟಾಟಾ ಅವರೊಂದಿಗೆ ಹಂಚಿಕೊಳ್ಳಬೇಕಾಗಿತ್ತು ಮತ್ತು ಅವರು ಅದನ್ನು ರೆಡಿ ಮಾಡಿದ ರೀತಿ ಹೇಳಿದ್ದಾರೆ.

ಇದನ್ನೂ ಓದಿ: Ambani vs Tata ನಡುವೆ ಹೆಚ್ತಿದೆ ಪೈಪೋಟಿ: ವಿವಿಧ ಕ್ಷೇತ್ರಗಳಲ್ಲಿ ಪರಸ್ಪರ ಸ್ಪರ್ಧಿಸುತ್ತಿರುವ ಬ್ರ್ಯಾಂಡ್‌ಗಳ ಪಟ್ಟಿ ಹೀಗಿದೆ..

ರತನ್ ಟಾಟಾ ಆ ಸಮಯದಲ್ಲಿ IBM ಕಚೇರಿಯಲ್ಲಿದ್ದ ಎಲೆಕ್ಟ್ರಿಕ್ ಟೈಪ್ ರೈಟರ್‌ಗಳಲ್ಲಿ ಟಾಟಾ ಗ್ರೂಪ್‌ನಲ್ಲಿ ಕೆಲಸ ಪಡೆಯಲು ತಮ್ಮ ರೆಸ್ಯೂಮ್ ಅನ್ನು ರಚಿಸಿದರು. “ನಾನು IBM ಕಚೇರಿಯಲ್ಲಿದ್ದೆ ಮತ್ತು ಅವರು (ಜೆಆರ್‌ಡಿ ಟಾಟಾ) ನನ್ನ ಬಳಿ ಇಲ್ಲದ ರೆಸ್ಯೂಮ್‌ಗಾಗಿ ಕೇಳಿದ್ದು ನನಗೆ ನೆನಪಿದೆ. ಕಚೇರಿಯಲ್ಲಿ ಎಲೆಕ್ಟ್ರಿಕ್ ಟೈಪ್ ರೈಟರ್‌ಗಳಿದ್ದವು. ಹಾಗಾಗಿ ನಾನು ಒಂದು ಸಂಜೆ ಕುಳಿತು ಅವರ ಟೈಪ್ ರೈಟರ್‌ನಲ್ಲಿ ರೆಸ್ಯೂಮ್ ಟೈಪ್ ಮಾಡಿ ಅವರಿಗೆ ಕೊಟ್ಟೆ” ಎಂದು ರತನ್ ಟಾಟಾ ಹಳೆಯ ಸಂದರ್ಶನದಲ್ಲಿ ಬಹಿರಂಗಪಡಿಸಿದ್ದಾರೆ.

ತಮ್ಮ ರೆಸ್ಯೂಮ್ ಅನ್ನು ಹಂಚಿಕೊಂಡ ನಂತರ, ರತನ್ ಟಾಟಾ 1962ರಲ್ಲಿ ಟಾಟಾ ಇಂಡಸ್ಟ್ರೀಸ್‌ನಲ್ಲಿ ಕೆಲಸ ಪಡೆದರು ಮತ್ತು ಸುಮಾರು ಮೂರು ದಶಕಗಳ ನಂತರ, 1991ರಲ್ಲಿ ಜೆಆರ್‌ಡಿ ಟಾಟಾ ನಿಧನದ ನಂತರ ಟಾಟಾ ಗ್ರೂಪ್‌ನ ಅಧ್ಯಕ್ಷರಾಗಿ ರತನ್ ಟಾಟಾ ಅಧಿಕಾರ ವಹಿಸಿಕೊಂಡರು.

ಇದನ್ನೂ ಓದಿ: ಒಂದೇ ಕಂಪನಿ ಷೇರಿನ ಮೂಲಕ 2 ತಿಂಗಳಲ್ಲಿ 2400 ಕೋಟಿ ಲಾಭ ಗಳಿಸಿದ ರೇಖಾ ಜುಂಜುನ್ವಾಲಾ: ಇವರ ಆಸ್ತಿ ಮೌಲ್ಯ ಎಷ್ಟು ನೋಡಿ..

click me!