Job Tips: ನಿಮಗೆ ಯಾವ ಉದ್ಯೋಗ ಸೂಕ್ತವಾಗುತ್ತದೆ? ಇಲ್ಲಿದೆ ಟಿಪ್ಸ್

By Suvarna NewsFirst Published Dec 27, 2021, 2:42 PM IST
Highlights

* ಡಿಗ್ರಿ ಮುಗಿಸಿದ ಅಭ್ಯರ್ಥಿಗಳಿಗೆ ಸಾಕಷ್ಟು ಉದ್ಯೋಗಾವಕಾಶಗಳುಂಟು
*ನಿಮ್ಮ ಆಸಕ್ತಿ ಹಾಗೂ ಪ್ರಸಕ್ತ ಹೆಚ್ಚು ಬೇಡಿಕೆಯಲ್ಲಿರುವ ಜಾಬ್ ಹುಡುಕಿಕೊಳ್ಳಬಹುದು
*ಗೇಮಿಂಗ್, ನರ್ಸಿಂಗ್, ಎಂಜಿನಿಯರಿಂಗ್, ಡೇಟಾ ಸೈನ್ಸ್ ಇತ್ಯಾದಿ ಕ್ಷೇತ್ರಗಳು

ಬೆಂಗಳೂರು(ಡಿ.27): ವಿದ್ಯಾರ್ಥಿ(Studnets)ಗಳಿಗೆ ಯಾವಾಗಲೂ ಒಂದು ಟೆನ್ಷನ್ ಇದ್ದೇ ಇರುತ್ತೆ. ಮುಂದೆ ಏನಾಗಬೇಕು? ಯಾವ ಕ್ಷೇತ್ರದ ಕಡೆ ಹೋಗಬೇಕು? ಯಾವ ಕೋರ್ಸ್ ಮಾಡಿದ್ರೆ ಹೆಚ್ಚು ಗಳಿಸಬಹುದು? - ಹೀಗೆ ಪ್ರೊಫೆಷನಲ್ ಕರಿಯರ್ (career) ಆರಂಭಿಸುವ ವಿಚಾರದಲ್ಲಿ ಸಾಕಷ್ಟು ಯೋಚನೆಗಳನ್ನು ಮಾಡ್ತಾರೆ.  ಸರಿಯಾದ ಮಾರ್ಗದರ್ಶನ ಸಿಕ್ಕರೆ ಒಳ್ಳೆಯ ಭವಿಷ್ಯ ರೂಪಿಸಿಕೊಳ್ತಾರೆ. ಕಾಲ ಕಾಲಕ್ಕೆ ಚೇಂಜ್ ಆಗುವ ಈ ಪ್ರೊಫೆಷನಲ್ ಕರಿಯರ್ ಟ್ರೆಂಡ್ ಬಗ್ಗೆ ಮೊದಲೇ ಲೆಕ್ಕಾಚಾರ ಹಾಕೋದು ಕಷ್ಟ. ಆದ್ರೂ ಸದ್ಯದ ಪರಿಸ್ಥಿತಿಯಲ್ಲಿ ಒಂದಷ್ಟು ಉದಯೋನ್ಮುಖ ಕ್ಷೇತ್ರಗಳು ಹೊಸಬರನ್ನು ಹೆಚ್ಚೆಚ್ಚು ಆಕರ್ಷಿಸುತ್ತಿವೆ. ಹೆಚ್ಚು ಹೆಚ್ಚು ವಿದ್ಯಾರ್ಥಿಗಳು ತಮ್ಮ ಕಲಿಕೆಯನ್ನು ವೈವಿಧ್ಯಗೊಳಿಸುತ್ತಿದ್ದು, ತಂತ್ರಜ್ಞಾನ ಶಿಕ್ಷಣ (Technology Education) ದತ್ತ ಹೆಚ್ಚು ವಾಲುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಒಂದಷ್ಟು ಕ್ಷೇತ್ರಗಳು ಹೆಚ್ಚು ಪ್ರಾಮುಖ್ಯತೆ ಗಳಿಸಿವೆ. 

ಗೇಮ್ ಡಿಸೈನ್:  ಈ ಕ್ಷೇತ್ರದಲ್ಲಿ  ವೀಡಿಯೊ ಗೇಮ್‌ (Video Game)ಗಳ ರಚನೆಕಾರರು, ಅಪ್ಲಿಕೇಷನ್ ರಚನೆ, ಗ್ರಾಫಿಕ್ಸ್, ವಿನ್ಯಾಸ, ಕೋಡಿಂಗ್ ಕೌಶಲ್ಯಗಳು, ಸಾಫ್ಟ್‌ವೇರ್ ಅಭಿವೃದ್ಧಿ ಮಾಡುವ ಅಗತ್ಯತೆ ಹೆಚ್ಚಿರುತ್ತದೆ. ಹೀಗಾಗಿ ಈ ಕ್ಷೇತ್ರಕ್ಕೆ ಹೋಗಲು ಬಯಸುವವರು  ಗೇಮ್ ಡಿಸೈನ್ನಲ್ಲಿ ಒಂದಷ್ಟು ಸ್ಪೆಷಲೈಜೇಷನ್ ಮಾಡಬಹುದು. ಮಲ್ಟಿಮೀಡಿಯಾ (Multi Media) ಆರ್ಟಿಸ್ಟ್ & ಅನಿಮೇಟರ್ಸ್ , ಸಾಫ್ಟ್ವೇರ್ ಡೆವಲಪರ್ಸ್ (Soft were Developers), ಆರ್ಟ್ ಡೈರೆಕ್ಟರ್ಸ್, ಗ್ರಾಫಿಕ್ ಡಿಸೈನರ್ಸ್, ವೆಬ್ ಡೆವಲಪರ್ಸ್, ಫೈನಲ್ ಥಾಟ್ಸ್ ಕೋರ್ಸ್ ಮಾಡಬಹುದು. 

GOVERNMENT JOB: ಗ್ರಾಪಂಗಳಲ್ಲಿ ಸಾವಿರಾರು ಹುದ್ದೆಗಳು ಖಾಲಿ..!

ಡೇಟಾ ಸೈನ್ಸ್: ಇತ್ತೀಚಿನ ವರ್ಷಗಳಲ್ಲಿ ಡೇಟಾ ಸೈನ್ಸ್ ಎಂಬುದು ಹೊಸ ಉದ್ಯೋಗದ ಸೃಷ್ಟಿಯಾಗಿದೆ. ಪ್ರತಿಯೊಂದು ಉದ್ಯಮವು ದೊಡ್ಡ ಡೇಟಾವನ್ನು ವಿಶ್ಲೇಷಿಸಲು, ತಮ್ಮ ವ್ಯವಹಾರವನ್ನು ಸುಧಾರಿಸಲು ಮತ್ತು ಗ್ರಾಹಕರಿಗೆ ಉತ್ತಮ ಸೇವೆ ನೀಡಲು ಡೇಟಾ ವಿಜ್ಞಾನವನ್ನು ಅವಲಂಬಿಸುತ್ತದೆ. ಹೀಗಾಗಿ ಡೇಟಾ ತಜ್ಞರಿಗೆ ಸಿಕ್ಕಾಪಟ್ಟೆ ಡಿಮ್ಯಾಂಡ್. ಹೀಗಾಗಿ ಡಾಟಾ ಸೈಂಟಿಸ್ಟ್ (Date Scientist), ಮೆಷಿನ್ ಲರ್ನಿಂಗ್ ಇಂಜಿನಿಯರ್ (Machine Learning Engineer), ಮೆಷಿನ್ ಲರ್ನಿಂಗ್ ಸೈಂಟಿಸ್ಟ್, ಅಪ್ಲಿಕೇಷನ್ಸ್ ಆರ್ಕಿಟೆಕ್, ಎಂಟರ್ಪ್ರೈಸಸ್ ಆರ್ಕಿಟೆಕ್ಟ್ಗಳಿಗೆ ಭಾರೀ ಬೇಡಿಕೆಯಿದೆ.  

ಸೈಬರ್ ಸೆಕ್ಯೂರಿಟಿ: ಸೈಬರ್ ಸೆಕ್ಯುರಿಟಿಯು ಸಾಕಷ್ಟು ಉದ್ಯೋಗಗಳನ್ನು ನೀಡುತ್ತದೆ. ಸೈಬರ್ ಸೆಕ್ಯೂರಿಟಿ ಅನಾಲಿಸ್ಟ್, ಸೈಬರ್ ಸೆಕ್ಯೂರಿಟಿ ಕನ್ಸಲ್ಟೆಂಟ್, ಸೈನರ್ ಸೆಕ್ಯೂರಿಟಿ ಮ್ಯಾನೇಜರ್, ಸಾಫ್ಟ್ವೇರ್ ಡೆವಲಪರ್, ಸೈಸ್ಟಮ್ಸ್ ಇಂಜಿನಿಯರ್ ಗಳಾಗಿ ಭವಿಷ್ಯ ರೂಪಿಸಿಕೊಳ್ಳಬಹುದು. ಕಂಪ್ಯೂಟರ್ ಸೈನ್ಸ್‌ನಲ್ಲಿ ಹಿನ್ನೆಲೆ ಹೊಂದಿರುವ ವಿದ್ಯಾರ್ಥಿಗಳು, ಸೈಬರ್‌ ಸೆಕ್ಯುರಿಟಿ, ಮಾಹಿತಿ ತಂತ್ರಜ್ಞಾನ, ಕೋಡಿಂಗ್ ಮತ್ತು ಸಾಫ್ಟ್‌ವೇರ್ ಅಭಿವೃದ್ಧಿ ಬಗ್ಗೆ ಅಭ್ಯಸಿಸಬಹುದು. 

ಫಾರ್ಮಕಾಲಜಿ: ಫಾರ್ಮಸಿಸ್ಟ್ (Pharmacist) , ಫಾರ್ಮಕಾಲಜಿಸ್ಟ್, ಫಾರ್ಮಕಾಟಿಕಲ್ ಸೇಲ್ಸ್ ರೆಪ್ರೆಸೆಂಟೇಟಿವ್, ಫಾರ್ಮಕಾಲಟಿಕಲ್ ಮಾರ್ಕೆಂಟಿಂಗ್ ಮ್ಯಾನೇಜರ್ (Marketing Manager), ಮೆಡಿಕಲ್ ರೈಟರ್ ಹುದ್ದೆಗೆ ಸೇರಬಹುದು.

ಕನ್ಸ್ ಟ್ರಕ್ಷನ್ ಮ್ಯಾನೇಜ್ಮೆಂಟ್: ನಿರ್ಮಾಣ ಕ್ಷೇತ್ರದಲ್ಲೂ  ಕನ್ಸ್ ಟ್ರಕ್ಷನ್ ಮ್ಯಾನೇಜರ್ (Construction Manager), ಪ್ರಾಜೆಕ್ಟ್ ಇಂಜಿನಿಯರ್, ಎಸ್ಟಿಮೇಟರ್, ಕನ್ಸಟ್ರಕ್ಷನ್ ಇನ್ಸ್ ಪೆಕ್ಟರ್, ಸಿವಿಲ್ ಇಂಜಿನಿಯರ್ ಆಗಿ ಕೆಲಸ ಮಾಡಬಹುದು. ಸಾಕಷ್ಟು ಉದ್ಯೋಗಾವಕಾಶಗಳು ಲಭ್ಯ ಇವೆ.

ಹ್ಯೂಮನ್ ರಿಸೋರ್ಸ್: ಹೆಚ್ ಆರ್ ಆಫೀಸರ್, ಹೆಚ್ ಆರ್ ಮ್ಯಾನೇಜರ್, ಹೆಚ್ ಆರ್ ಕನ್ಸಲ್ಟೆಂಟ್, ಎಕ್ಸಿಕ್ಯುಟಿವ್ ರಿಕ್ರೂಟರ್, ಕಾಂಪನ್ಸೇಷನ್ & ಬೆನ್ ಫಿಟ್ಸ್ ಮ್ಯಾನೇಜರ್ ಗಳಿಗೆ ಎಲ್ಲಿಲ್ಲದ ಬೇಡಿಕೆಯಿದೆ.

ನರ್ಸಿಂಗ್: ಜನಸಂಖ್ಯೆ ಹೆಚ್ಚಾದಂತೆ ಆರೋಗ್ಯ ವೃತ್ತಿಪರರ ಅಗತ್ಯವೂ ಹೆಚ್ಚುತ್ತಿದೆ. ನರ್ಸಿಂಗ್(Nursing)ನಲ್ಲಿ ಹಲವು ಸ್ಪೆಷಲೈಜೇಷನ್ ಗಳಿದ್ದು, ಆ ಕೋರ್ಸ್ ಮಾಡಿದವರಿಗೆ ಜೀವನಪರ್ಯಂತ ಅತ್ಯುತ್ತಮ ಭವಿಷ್ಯ ರೂಪಿಸಿಕೊಳ್ಳಬಹುದು.

UPSC Recruitment 2022: ಖಾಲಿ ಇರುವ 187 ಹುದ್ದೆಗಳ ನೇಮಕಕ್ಕೆ ಯುಪಿಎಸ್‌ಸಿ ಅರ್ಜಿ ಆಹ್ವಾನ

ಇಂಜಿನಿಯರಿಂಗ್:  ಬಯೋಮೆಡಿಕಲ್ ಇಂಜಿನಿಯರ್ (Bio Medical Engineer), ಸಿವಿಲ್ ಇಂಜಿನಿಯರ್ಸ್, ಎಲೆಕ್ಟ್ರಿಕಲ್ ಇಂಜಿನಿಯರ್, ಎನ್ ವಿರಾನ್ಮೆಂಟಲ್ ಇಂಜಿನಿಯರ್, ಸಾಫ್ಟ್‌ವೇರ್ ಎಂಜಿನಿಯರ್ (Softwere Engineer) ಆಗಬಹುದು.

ಉದ್ಯಮ: ಬ್ಯುಸಿನೆಸ್ ಸ್ಟಡೀಸ್ (Business Studies) ಮಾಡುವ ವಿದ್ಯಾರ್ಥಿಗಳು ಮಾರ್ಕೆಟಿಂಗ್, ಅರ್ಥಶಾಸ್ತ್ರ, ಹಣಕಾಸು ಮತ್ತು ಹೆಚ್ಚಿನದನ್ನು ಅಧ್ಯಯನ ಮಾಡಬಹುದು! ಅವರು ಯಾವುದೇ ಕ್ಷೇತ್ರದಲ್ಲಿ ಕೆಲಸ ಮಾಡಬಹುದು ಅಥವಾ ತಮ್ಮ ಸ್ವಂತ ವ್ಯವಹಾರವನ್ನು ಪ್ರಾರಂಭಿಸಬಹುದು. 

 ಜಾಹೀರಾತು & ಮಾರ್ಕೆಟಿಂಗ್: ಡಿಗ್ರಿ ಮುಗಿಸಿರುವವರು ಮಾರ್ಕೆಟಿಂಗ್ ಅಥವಾ ಜಾಹೀರಾತಿನಲ್ಲಿ ವೃತ್ತಿಜೀವನ ಪ್ರಾರಂಭಿಸಬಹುದು.  ಮಾರ್ಕೆಟಿಂಗ್ ಮ್ಯಾನೇಜರ್, ಎಸ್ ಇಒ  ಮ್ಯಾನೇಜರ್, ಫಂಡ್ರೈಸಿಂಗ್ ಮ್ಯಾನೇಜರ್, ಇವೆಂಟ್ ಪ್ಲಾನರ್, ಸೋಷಿಯಲ್ ಮೀಡಿಯಾ ಮ್ಯಾನೇಜರ್ ಆಗಿ ದುಡಿಯಬಹುದು.

click me!