Wipro Recruitment 2022: ಎಂಜಿನಿಯರಿಂಗ್​ ಅಭ್ಯರ್ಥಿಗಳಿಗೆ ವಿಪ್ರೋ ಭರ್ಜರಿ ಆಫರ್, ಹೊಸಬರಿಗೆ ಮಾತ್ರ ಅವಕಾಶ

By Suvarna News  |  First Published Dec 26, 2021, 6:36 PM IST
  • ಹೊಸಬರಿಗೆ ಭರ್ಜರಿ ಆಫರ್ ನೀಡುತ್ತಿದೆ  ಟೆಕ್​ ದೈತ್ಯ ವಿಪ್ರೋ
  • ಎಂಜಿನಿಯರಿಂಗ್​ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದ ವಿಪ್ರೋ 
  • ಅರ್ಜಿ ಸಲ್ಲಿಸಲು ಜನವರಿ 31 ಕೊನೆ ದಿನ

ಬೆಂಗಳೂರು(ಡಿ.26): ಟೆಕ್​ ದೈತ್ಯ ವಿಪ್ರೋ (Wipro) ಎಲೈಟ್​ ನ್ಯಾಷನಲ್​ ಟಾಲೆಂಟ್​ ಹಂಟ್​ (Elite National Talent Hunt) ಎಂಬ ಫ್ರೆಶರ್ಸ್​​ ಹೈರಿಂಗ್ (Fresher's Hiring)​ ಯೋಜನೆಯಡಿ ಎಂಜಿನಿಯರಿಂಗ್​ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಕಂಪನಿ ಅಧಿಸೂಚನೆ ಪ್ರಕಾರ, 2020, 2021 ಮತ್ತು 2022ರಲ್ಲಿ ಪಾಸಾಗಲಿರುವ ಬಿಇ/ ಬಿ.ಟೆಕ್/ ಎಂಇ/ಎಂ.ಟೆಕ್ ​ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿದ್ದಾರೆ. ಫ್ಯಾಶನ್​ ಟೆಕ್ನಾಲಜಿ, ಟೆಕ್ಸ್​​ಟೈಲ್​ ಎಂಜಿನಿಯರಿಂಗ್​, ಎಗ್ರಿಕಲ್ಚರ್ ಮತ್ತು ಫುಡ್​ ಟೆಕ್ನಾಲಜಿ ವಿಭಾಗಗಳನ್ನು ಹೊರತುಪಡಿಸಿ ಉಳಿದೆಲ್ಲಾ ಬ್ರಾಂಚ್​​​ಗಳಿಗೆ ಹೊಸಬರು (Fresher's)​ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಅರ್ಜಿ ಸಲ್ಲಿಸಲು ಈ ಲಿಂಕ್ ಕ್ಲಿಕ್ ಮಾಡಿ https://app.joinsuperset.com/company/wipro/elite-national-talent-hunt.html

ವಿದ್ಯಾರ್ಹತೆ ಮತ್ತು ವಯೋಮಿತಿ: ವಿಪ್ರೋ ಕಂಪೆನಿಯ ಪ್ರಾಜೆಕ್ಟ್​ ಎಂಜಿನಿಯರ್ ಹುದ್ದೆಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು 10ನೇ ತರಗತಿ, 12ನೇ ತರಗತಿ, ಪದವಿ ಹಾಗೂ ಸ್ನಾತಕೋತ್ತರ ಪದವಿಯಲ್ಲಿ ಕನಿಷ್ಠ ಶೇ.60ರಷ್ಟು ಅಂಕಗಳೊಂದಿಗೆ ತೇರ್ಗಡೆ ಹೊಂದಿರಬೇಕು. ಅಭ್ಯರ್ಥಿಯ ವಯೋಮಿತಿಯು ಗರಿಷ್ಠ 25 ವರ್ಷ ಮೀರಿರಬಾರದು.

Latest Videos

undefined

ಅಗತ್ಯ ಮಾಹಿತಿಗಳು: ವಿಪ್ರೋ ಕಂಪೆನಿಯ ಪ್ರಾಜೆಕ್ಟ್​ ಎಂಜಿನಿಯರ್ ಹುದ್ದೆಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಕಳೆದ ಆರು ತಿಂಗಳಲ್ಲಿ ವಿಪ್ರೋ ನಡೆಸಿದ ಯಾವುದೇ ನೇಮಕಾತಿ ಪ್ರಕ್ರಿಯೆಯಲ್ಲಿ ಭಾಗವಹಿಸಿರಬಾರದು. ಭಾಗವಹಿಸಿದ್ದರೆ ಅಂತವರು ಅರ್ಹರಲ್ಲ. ಎರಡನೆಯದಾಗಿ ಅಭ್ಯರ್ಥಿಗಳು ಭಾರತೀಯ ನಾಗರಿಕರು ಅಥವಾ PIO ಅಥವಾ OCI ಕಾರ್ಡುದಾರರಾಗಿರಬೇಕು. ಭೂತಾನ್ ಮತ್ತು ನೇಪಾಳದ ವ್ಯಕ್ತಿಗಳು ತಮ್ಮ ಪೌರತ್ವ ಪ್ರಮಾಣಪತ್ರಗಳನ್ನು ಸಲ್ಲಿಸಬೇಕು.

HATTI GOLD MINES RECRUITMENT 2022: ಹಟ್ಟಿ ಚಿನ್ನದ ಗಣಿಯಲ್ಲಿ 1 ಲಕ್ಷಕ್ಕೂ ಅಧಿಕ ವೇತನದ ಉದ್ಯೋಗ, ಇಂದೇ ಅರ್ಜಿ ಸಲ್ಲಿಸಿ

ವೇತನ ವಿವರ: ಪ್ರಾಜೆಕ್ಟ್ ಎಂಜಿನಿಯರ್ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ವಾರ್ಷಿಕ ಪ್ಯಾಕೇಜ್​​ 3.5 ಲಕ್ಷ ರೂ.  ಆಫರ್ ನೀಡಲಾಗುತ್ತದೆ. ಅರ್ಜಿಗಳ ನೋಂದಣಿಗೆ ಕೊನೆಯ ದಿನಾಂಕ ಜನವರಿ 31, 2022. ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಈ ಲಿಂಕ್ ಕ್ಲಿಕ್ ಮಾಡಿ: https://app.joinsuperset.com/company/wipro/elite-national-talent-hunt.html ಅಥವಾ https://app.joinsuperset.com/join/#/signup/student/jobprofiles/fc5074dc-ec91-49eb-b2ab-9f00ed5e2eb6 

UPSC Recruitment 2022: ಖಾಲಿ ಇರುವ 187 ಹುದ್ದೆಗಳ ನೇಮಕಕ್ಕೆ ಯುಪಿಎಸ್‌ಸಿ ಅರ್ಜಿ ಆಹ್ವಾನ

ವಿಪ್ರೊ ಟೆಕ್ನಾಲಜೀಸ್ 1980 ರಲ್ಲಿ ಸ್ಥಾಪಿತವಾದ ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ. ಇದು 1945 ರಿಂದ ಅಸ್ತಿತ್ವದಲ್ಲಿರುವ ವಿಪ್ರೊ ಸಂಸ್ಥೆಯ ಮಾಹಿತಿ ತಂತ್ರಜ್ಞಾನ ವಿಭಾಗ. ಇದರ ಮುಖ್ಯ ಕಛೇರಿ ಬೆಂಗಳೂರು ನಗರದಲ್ಲಿದೆ. ಈ ಸಂಸ್ಥೆ ಒಟ್ಟು 80,000 ಕ್ಕೂ ಹೆಚ್ಚು ಕೆಲಸಗಾರರನ್ನು ಹೊಂದಿದೆ.

ವಿಪ್ರೊ ಟೆಕ್ನಾಲಜೀಸ್ ಒಟ್ಟು ಮುನ್ನೂರಕ್ಕೂ ಹೆಚ್ಚು ಸಂಸ್ಥೆಗಳಿಗೆ ಮಾಹಿತಿ ತಂತ್ರಜ್ಞಾನಕ್ಕೆ ಸಂಬಂಧಪಟ್ಟ ಸೇವೆಯನ್ನು ಒದಗಿಸುತ್ತದೆ. ಈ ಗ್ರಾಹಕ ಸಂಸ್ಥೆಗಳು ಮುಖ್ಯವಾಗಿ ಅಮೆರಿಕ, ಯೂರೋಪ್ ಮತ್ತು ಜಪಾನ್ ಗಳಲ್ಲಿವೆ. ರೂ. 500 ಕೋಟಿಗೂ ಹೆಚ್ಚು ವಾರ್ಷಿಕ ಆದಾಯ ಹೊಂದಿರುವ ಈ ಸಂಸ್ಥೆ ಭಾರತದ ಪ್ರಮುಖ ಮಾಹಿತಿ ತಂತ್ರಜ್ಞಾನ ಸಂಸ್ಥೆಗಳಲ್ಲಿ ಒಂದು. ಅಜಿಮ್ ಪ್ರೇಮ್‍ಜಿ. ವಿಪ್ರೊ ಟೆಕ್ನಾಲಜೀಸ್ ನ ನಿರ್ದೇಶಕರು. 

2020 ನೇ ಆರ್ಥಿಕ ವರ್ಷದಲ್ಲಿ ಐಟಿ ಕಂಪನಿ ವಿಪ್ರೋ ಮುಖ್ಯಸ್ಥ ಅಜಿಮ್ ಪ್ರೇಮ್ ಜಿ ದಿನವೊಂದಕ್ಕೆ 22 ಕೋಟಿಯ ಲೆಕ್ಕದಲ್ಲಿ ವರ್ಷದಲ್ಲಿ 7,904 ಕೋಟಿ ರೂಪಾಯಿ ಸಮಾಜಕ್ಕೆ, ಸಾಮಾಜಿಕ ಕೆಲಸಗಳಿಗಾಗಿ ದಾನ ನೀಡಿದ್ದಾರೆ. ಈ ಮೂಲಕ 2020 ನೇ ಸಾಲಿನಲ್ಲಿ ಭಾರತದ ಅತ್ಯಂತ ಉದಾರಿ ಉದ್ಯಮಿ ಎಂಬ ಹೆಗ್ಗಳಿಕೆಗೆ ಅಜಿಮ್ ಪ್ರೇಮ್ ಜಿ ಭಾಜನರಾಗಿದ್ದರು.

click me!