ಸುಂದರ್‌ ಪಿಚೈಗೆ ದೂರದೃಷ್ಟಿ ಕೊರತೆ: 18 ವರ್ಷ ಬಳಿಕ ರಾಜೀನಾಮೆ ನೀಡಿದ ಗೂಗಲ್‌ ಮಾಜಿ ಉದ್ಯೋಗಿ ವಾಗ್ದಾಳಿ

Published : Nov 25, 2023, 02:08 PM ISTUpdated : Nov 25, 2023, 02:48 PM IST
ಸುಂದರ್‌ ಪಿಚೈಗೆ ದೂರದೃಷ್ಟಿ ಕೊರತೆ: 18 ವರ್ಷ ಬಳಿಕ ರಾಜೀನಾಮೆ ನೀಡಿದ ಗೂಗಲ್‌ ಮಾಜಿ ಉದ್ಯೋಗಿ ವಾಗ್ದಾಳಿ

ಸಾರಾಂಶ

ಬಳಕೆದಾರರ ಹಿತಾಸಕ್ತಿಗಿಂತ ಕಂಪನಿಗೆ ಲಾಭವನ್ನು ಹೆಚ್ಚಿಸುವುದು ಮತ್ತು ಗೂಗಲ್‌ನ ನೀತಿಗೆ ಒಂದು ಕಾಲದಲ್ಲಿ ಅವಿಭಾಜ್ಯವಾಗಿದ್ದ ಪಾರದರ್ಶಕತೆ ಕಡಿಮೆಯಾಗಿರುವ ಬಗ್ಗೆಯೂ ಅವರು ಆರೋಪಿಸಿದ್ದಾರೆ.

ನವದೆಹಲಿ (ನವೆಂಬರ್ 25, 2023): ಗೂಗಲ್‌ ಜಗತ್ತಿನ ಪ್ರಮುಖ ಕಂಪನಿಗಳಲ್ಲೊಂದು. ಈ ಕಂಪನಿಗೆ ಭಾರತ ಮೂಲದ ಸುಂದರ್ ಪಿಚೈ ಸಿಇಒ ಆಗಿದ್ದು, ಕಂಪನಿಯನ್ನು ಮತ್ತಷ್ಟು ಎತ್ತರಕ್ಕೆ ಏರಿಸಿದ್ದಾರೆ. ಆದರೆ, ಇತ್ತೀಚೆಗೆ ಗೂಗಲ್‌ ಉದ್ಯೋಗಿಯೊಬ್ಬರು ರಾಜೀನಾಮೆ ನೀಡಿದ್ದು, ಸುಂದರ್ ಪಿಚೈ ವಿರುದ್ಧವೇ ವಾಗ್ದಾಳಿ ನಡಸಿದ್ದಾರೆ. 

ಇತ್ತೀಚಿನ ಬ್ಲಾಗ್ ಪೋಸ್ಟ್‌ನಲ್ಲಿ, 18 ವರ್ಷಗಳ ನಂತರ ಕಂಪನಿಗೆ ರಾಜೀನಾಮೆ ನೀಡಿದ ಗೂಗಲ್‌ನ ಮಾಜಿ ಉದ್ಯೋಗಿಯೊಬ್ಬರು ಸುಂದರ್‌ ಪಿಚೈ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬದಲಾಗುತ್ತಿರುವ ಕೆಲಸದ ಸಂಸ್ಕೃತಿ ಮತ್ತು ಸಿಇಒ ಸುಂದರ್ ಪಿಚೈ ನಾಯಕತ್ವದ ಬಗ್ಗೆ ಆರೋಪ ಮಾಡಿದ್ದಾರೆ.

ಇದನ್ನು ಓದಿ: ಝೊಮ್ಯಾಟೋ, ಸ್ವಿಗ್ಗಿಗೆ ಜಿಎಸ್‌ಟಿ ಶಾಕ್‌: ತಲಾ 500 ಕೋಟಿ ನೀಡುವಂತೆ ನೋಟಿಸ್‌ ಪಡೆದ ಆನ್‌ಲೈನ್‌ ಆಹಾರ ವಿತರಕರು!

2005 ರಲ್ಲಿ ಗೂಗಲ್‌ಗೆ ಸೇರಿದಾಗಿನಿಂದ ಇಂದಿನವರೆಗಿನ ಕಂಪನಿಯಲ್ಲಿನ ಪ್ರಯಾಣವನ್ನು ಅವರು ತಮ್ಮ ಬ್ಲಾಗ್‌ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ. ಅರಂಭದಲ್ಲಿ ಕಂಪನಿ ಬಳಕೆದಾರರು ಮತ್ತು ಸಾಮಾಜಿಕ ಕಲ್ಯಾಣದ ಮೇಲೆ ಹೆಚ್ಚು ಗಮನವಿತ್ತು. ಆದರೆ, ಕಾಲಾನಂತರದಲ್ಲಿ, ಟೆಕ್ ದೈತ್ಯ ಸಂಸ್ಥೆಯಲ್ಲಿ ಕೆಲಸದ ಸಂಸ್ಕೃತಿಯು ಸವೆಯಲು ಪ್ರಾರಂಭಿಸಿದೆ ಎಂದು ಗೂಗಲ್‌ ಮಾಜಿ ಉದ್ಯೋಗಿ ಹೇಳಿದ್ದಾರೆ. 

ಬಳಕೆದಾರರ ಹಿತಾಸಕ್ತಿಗಿಂತ ಕಂಪನಿಗೆ ಲಾಭವನ್ನು ಹೆಚ್ಚಿಸುವುದು ಮತ್ತು ಗೂಗಲ್‌ನ ನೀತಿಗೆ ಒಂದು ಕಾಲದಲ್ಲಿ ಅವಿಭಾಜ್ಯವಾಗಿದ್ದ ಪಾರದರ್ಶಕತೆ ಕಡಿಮೆಯಾಗಿರುವ ಬಗ್ಗೆಯೂ ಅವರು ಆರೋಪಿಸಿದ್ದಾರೆ. ಅಲ್ಲದೆ, ಉದ್ಯೋಗಿಗಳು ಸಂಸ್ಥೆಯಿಂದ ಬಿಡುತ್ತಿರುವುದಕ್ಕೆ ಹಾಗೂ ದೂರವಾಗುತ್ತಿರುವುದಕ್ಕೆ ಸುಂದರ್ ಪಿಚೈ ಅವರ ನಾಯಕತ್ವ ಕಾರಣ ಎಮದೂ ಅವರು ಟೀಕಿಸಿದ್ದಾರೆ. 

ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆಯಾಗಲಿದೆ ಟೆಸ್ಲಾದ ಅತಿ ಕಡಿಮೆ ಬೆಲೆಯ ಎಲೆಕ್ಟ್ರಿಕ್‌ ಕಾರು!

ಅಲ್ಲದೆ, ಕಳೆದ ವರ್ಷ ಗಮನಾರ್ಹ ವಜಾಗೊಳಿಸುವಿಕೆಯ ಬಗ್ಗೆಯೂ ಇವರು ಮಾತನಾಡಿದ್ದು, ತ್ರೈಮಾಸಿಕ ಗಳಿಕೆಯ ಬೆಳವಣಿಗೆಯ ಮೇಲೆ ಅಲ್ಪ ದೃಷ್ಟಿಯ ಗಮನದಿಂದ ಈ ರೀತಿ ಮಾಡಲಾಗಿದೆ. ಇದು ಕಂಪನಿಯ ದೊಡ್ಡ ದೋಷ ಎಂದೂ ಮಾಜಿ ಉದ್ಯೋಗಿ ಕರೆದುಕೊಂಡಿದ್ದಾರೆ. ಲೇಆಫ್‌ ಕಂಪನಿಯ ಸಂಸ್ಕೃತಿಯ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತವೆ, ಅಪನಂಬಿಕೆಯನ್ನು ಬೆಳೆಸುತ್ತವೆ ಮತ್ತು ಶ್ರೇಣಿ ಹಾಗೂ ಫೈಲ್ ಉದ್ಯೋಗಿಗಳಲ್ಲಿ ಭಯವನ್ನು ಹುಟ್ಟುಹಾಕುತ್ತವೆ ಎಂದೂ ಅವರು ವಾದಿಸಿದರು. 

ಗೂಗಲ್‌ನ ಮಾಜಿ ಮತ್ತು ಪ್ರಸ್ತುತ ಕಾರ್ಯ ನಿರ್ವಹಿಸುತ್ತಿರುವ ಉದ್ಯೋಗಿಗಳು ಈ ಹಿಂದೆ ತಮ್ಮ ವಜಾಗೊಳಿಸುವ ಅನುಭವಗಳನ್ನು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ಹಂಚಿಕೊಂಡಿದ್ದುರ. ಇದ್ದಕ್ಕಿದ್ದಂತೆ ನೋಟಿಫಿಕೇಷನ್‌ ಕಳಿಸಿ ತೆಗೆದು ಹಾಕುವುದು ಮತ್ತು ಸಿಸ್ಟಮ್ ಲಾಗ್‌ಔಟ್‌ ಮಾಡಿ ವಜಾಗೊಳಿಸಲಾಗಿದೆ ಎಂದೂ ಹೇಳಿದ್ದರು. ಈ ಹಿನ್ನೆಲೆ ವಜಾಗೊಳಿಸುವ ಪರಿಸ್ಥಿತಿಯನ್ನು ಉತ್ತಮವಾಗಿ ನಿಭಾಯಿಸುವಂತೆ ಗೂಗಲ್‌ ಸಿಇಒ ಹಾಗೂ ಭಾರತ ಮೂಲದ ಸುಂದರ್ ಪಿಚೈಗೆ ಪತ್ರ ಬರೆದಿದ್ದರು.

ಹೆಂಡ್ತಿನೇ ನೋಡ್ಕೊಳ್ಳದವ್ರು ಕಂಪನಿ ಹೇಗೆ ನೋಡ್ಕೋತಾರೆ: ವಿಚ್ಛೇದನದ ಬಳಿಕ 1,500 ಕೋಟಿ ಆಸ್ತಿ ಕಳ್ಕೊಂಡ ಖ್ಯಾತ ಉದ್ಯಮಿ!

ವಿಶ್ವಕ್ಕೆ ಧನಾತ್ಮಕವಾಗಿ ಕೊಡುಗೆ ನೀಡಲು ಗೂಗಲ್ ಮತ್ತೊಮ್ಮೆ ತನ್ನ ಸಾಮರ್ಥ್ಯವನ್ನು ಪೂರೈಸುವ ಭವಿಷ್ಯವನ್ನು ತಾನು ಕಲ್ಪಿಸಿಕೊಂಡಿದ್ದೇನೆ ಎಂದು ಹೇಳುವ ಮೂಲಕ ಗೂಗಲ್‌ ಮಾಜಿ ಉದ್ಯೋಗಿ ತಮ್ಮ ಬ್ಲಾಗ್‌ಪೋಸ್ಟ್‌ನ ಅಂತ್ಯದಲ್ಲಿ ಆಶಾವಾದಿಯಾಗಿದ್ದಾರೆ.
 

PREV
Read more Articles on
click me!

Recommended Stories

ಬೆಂಗಳೂರಿನ ಅಮರ್‌ ಸುಬ್ರಹ್ಮಣ್ಯ ಆಪಲ್‌ ಎಐ ಟೀಮ್‌ಗೆ ಉಪಾಧ್ಯಕ್ಷ!
ಸರಾಸರಿ ಮಾಸಿಕ ವೇತನ: ದೇಶದಲ್ಲಿಯೇ 2ನೇ ಸ್ಥಾನದಲ್ಲಿ ಕರ್ನಾಟಕ, ಸಿಗೋ ಸ್ಯಾಲರಿ ಎಷ್ಟು?