IIT, IIM ವಿದ್ಯಾರ್ಥಿಗಳು ಲಕ್ಷ, ಕೋಟಿ ರೂಪಾಯಿ ವೇತನದ ಉದ್ಯೋಗ ಗಿಟ್ಟಿಸಿಕೊಂಡ ಉದಾಹರಣೆಗಳಿವೆ. ಇದೀಗ ಎಂಕೆಟ್ ವಿದ್ಯಾರ್ಥಿಯೊಬ್ಬ ವಾರ್ಷಿಕ 1.13 ಕೋಟಿ ರೂಪಾಯಿ ವೇತನದ ಉದ್ಯೋಗ ಗಿಟ್ಟಿಸಿಕೊಂಡು ಎಲ್ಲರಿಗೂ ಮಾದರಿಯಾಗಿದ್ದಾರೆ.
ಇಂದೋರ್(ನ.14) ಭಾರತದ ಪ್ರತಿಭಾನ್ವಿತ ವಿದ್ಯಾರ್ಥಿಗಳು ಕೋಟಿ ಕೋಟಿ ರೂಪಾಯಿ ವೇತನದ ಉದ್ಯೋಗ ಗಿಟ್ಟಿಸಿಕೊಂಡು ರಾಷ್ಟ್ರ-ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿದ್ದಾರೆ. ಈ ಸಾಲಿಗೆ ಮತ್ತೊಬ್ಬ ವಿದ್ಯಾರ್ಥಿ ಸೇರಿಕೊಂಡಿದ್ದಾರೆ. ಆದರೆ ಈ ವಿದ್ಯಾರ್ಥಿ ಪ್ರತಿಷ್ಠಿತ ಐಐಟಿ, ಐಐಎಂನಲ್ಲಿ ಓದಿಲ್ಲ. ಈತ ಓದಿರುವುದು ಎಂಕೆಟ್. ಆದರೆ ಈತನ ಪ್ರತಿಭಗೆ ಸಿಕ್ಕಿರುವುದು 1.13 ಕೋಟಿ ರೂಪಾಯಿ ವೇತನದ ಉದ್ಯೋಗ. ಮಧ್ಯಪ್ರದೇಶದ ದೇವಿ ಅಹಿಲ್ಯ ವಿಶ್ವವಿದ್ಯಾಲಯದ(DAVV) ವಿದ್ಯಾರ್ಥಿ ಸಾಹೀಲ್ ಆಲಿ ಈ ಸಾಧನೆ ಮಾಡಿದ್ದಾನೆ.
DAV ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿ ಸಾಹಿಲ್ ಆಲಿ ಎಂಕೆಟ್ ಪದವಿ ಮುಗಿಸಿದ ಬೆನ್ನಲ್ಲೇ ನಡೆದ ಕ್ಯಾಂಪಸ್ ಸಂದರ್ಶನದಲ್ಲಿ ದಾಖಲೆ ಮೊತ್ತದ ಉದ್ಯೋಗ ಗಿಟ್ಚಿಸಿಕೊಂಡಿದ್ದಾರೆ. ನೆದರ್ಲೆಂಡ್ ಮೂಲದ ಟೆಕ್ ಕಂಪನಿ ಅಡೆನ್(Adyen) ಕಂಪನಿಯಲ್ಲಿ ಕೋಟಿ ರೂಪಾಯಿ ವೇತನದ ಉದ್ಯೋಗ ಗಿಟ್ಟಿಸಿಕೊಂಡು ದಾಖಲೆ ಬರೆದಿದ್ದಾನೆ.
10 ನೇ ತರಗತಿಯಾದವರಿಗೆ ಸಂತಸದ ಸುದ್ದಿ, ಕೇಂದ್ರ ಗುಪ್ತಚರ ಇಲಾಖೆಯಲ್ಲಿ ನೇಮಕಾತಿ
DAVV ವಿದ್ಯಾಲಯದಲ್ಲಿ ಎಂಕೆಟ್ ಪದವಿ ಮುಗಿಸಿದ ಸಾಹಿಲ್ ಆಲಿ, ಇದೀಗ Adyen ಕಂಪನಿಯಲ್ಲಿ ಸಾಫ್ಟ್‌ವೇರ್ ಎಂಜಿನೀಯರ್ ಆಗಿ ಕೆಲಸ ಗಿಟ್ಟಿಸಿಕೊಂಡಿದ್ದಾರೆ . DAVV ವಿಶ್ವವಿದ್ಯಾಲಯದಲ್ಲಿ ದುಬಾರಿ ಮೊತ್ತದ ಉದ್ಯೋಗ ಗಿಟ್ಟಿಸಿಕೊಂಡ ಮೊದಲ ವಿದ್ಯಾರ್ಥಿ ಅನ್ನೋ ಹೆಗ್ಗಳಿಕೆಗೆ ಸಾಹಿಲ್ ಆಲಿ ಪಾತ್ರರಾಗಿದ್ದಾನೆ. ಎಂಕೆಟ್ ವ್ಯಾಸಾಂಗ ಮಾಡುತ್ತಿರುವಾಗಲೇ ಸಾಹೀಲ್ ಆಲಿ, ಎಟಬರ್ಪ್ ಡೆವಲಪ್ಪರ್ಸ್, ಕೊಡೆನ್ಶಿಯಸ್, ಕ್ಲಿಫ್.ಎಐ, ಗ್ರೀನ್‌ಡೆಕ್, ಪೈಥಾನ್ ಸಾಫ್ಟ್‌ವೇರ್ ಫೌಂಡೇಶನ್, ಗಿಟ್‌ಹಬ್ ಹಾಗೂ ಕ್ರೆಡ್ ಕಂಪನಿಯಲ್ಲಿ ಇಂಟರ್ನಶಿಪ್ ಮಾಡಿ ಅನುಭವ ಪಡೆದುಕೊಂಡಿದ್ದಾರೆ.
ಓದಿನಲ್ಲಿ ಸಾಮಾನ್ಯ ವಿದ್ಯಾರ್ಥಿಯಾಗಿದ್ದ ಸಾಹಿಲ್ ಆಲಿ, ಪ್ರಾಯೋಗಿಕ ವಿಚಾರ ಬಂದಾಗ ಮುಂಚೂಣಿಯಲ್ಲಿದ್ದ. ಇಂಟರ್ನ್‌ಶಿಪ್ ವೇಳೆ ಅತೀ ಕಡಿಮೆ ಅವಧಿಯಲ್ಲಿ ಕಂಪನಿಯ ಸಾಫ್ಟ್‌ವೇರ್ ಡೆವಲಪ್‌ಮೆಂಟ್‌ನಿಂದ ಹಿಡಿದು ಬಹುತೇಕ ವಿಚಾರಗಳನ್ನು ಕರಗತ ಮಾಡಿಕೊಂಡಿದ್ದು. ಕ್ಯಾಂಪಸ್ ಸಂದರ್ಶನದಲ್ಲಿ ಸಾಹಿಲ್ ಆಲಿ, ದಾಖಲೆ ಮೊತ್ತದ ಉದ್ಯೋಗ ಗಿಟ್ಟಿಸಿಕೊಂಡಿದ್ದಾನೆ.
ಸ್ಕೂಲ್ ಫೀಸ್ ಕಟ್ಟಲಾಗದೆ ಶಾಲೆ ಬಿಟ್ಟ ವ್ಯಕ್ತಿ: ಈಗ 5.4 ಲಕ್ಷ ಕೋಟಿ ರೂ. ಕಂಪನಿಯ ಸಿಇಒ
ಕಾಲೇಜು ನೀಡಿದ ಪ್ರೋತ್ಸಾಹ ಹಾಗೂ ಹೊಸತನದ ಆವಿಷ್ಕಾರದ ತುಡಿತದಿಂದ ಇದು ಸಾಧ್ಯವಾಗಿದೆ. ಕಠಿಣ ಪರಿಶ್ರಮ ಹಾಗೂ ತಂತ್ರಜ್ಞಾನ ಜಗತ್ತಿನಲ್ಲಿ ಅವಶ್ಯಕತೆಗಳು, ಎದುರಾಗವು ಸವಾಲುಗಳಿಗೆ ತ್ವರಿತಗತಿಯಲ್ಲಿ ಪರಿಹಾರ ಕಂಡುಕೊಳ್ಳುವ ಸಾಮರ್ಥ್ಯವಿದ್ದರೆ ಟೆತ್ ಜಗತ್ತನ್ನು ಜಯಿಸಬಹುದು ಎಂದು ಸಾಹಿಲ್ ಆಲಿ ಹೇಳಿದ್ದಾರೆ.