ಇಕಾಮರ್ಸ್ ದೈತ್ಯ ಫ್ಲಿಪ್‌ಕಾರ್ಟ್ ತನ್ನ ಸಂಪನ್ಮೂಲಗಳನ್ನು ಅತ್ಯುತ್ತಮವಾಗಿಸಲು ಮತ್ತು ಲಾಭದಾಯಕವಾಗಿರಲು ಆಂತರಿಕವಾಗಿ ಈ ಉದ್ಯೋಗ ಕಡಿತ ನಡೆಯಲಿದೆ ಎಂದು ತಿಳಿದುಬಂದಿದೆ.
ದೆಹಲಿ (ಜನವರಿ 8, 2024): ವಾಲ್‌ಮಾರ್ಟ್ ಒಡೆತನದ ಇ ಕಾಮರ್ಸ್ ದೈತ್ಯ ಫ್ಲಿಪ್‌ಕಾರ್ಟ್ ಮತ್ತೆ ಉದ್ಯೋಗ ಕಡಿತಕ್ಕೆ ಮುಂದಾಗಿದೆ. ತನ್ನ ಶೇ. 5 ರಿಂದ 7 ರಷ್ಟು ಉದ್ಯೋಗಿಗಳನ್ನು ಕಡಿಮೆ ಮಾಡಲು ಪ್ಲ್ಯಾನ್ ಮಾಡ್ತಿದೆ. ಅಂದರೆ, ಸುಮಾರು 1,500 ಉದ್ಯೋಗಿಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.
ಪರ್ಪಾಮೆನ್ಸ್ ರಿವ್ಯೂ ಆಧಾರದ ಮೇಲೆ ಈ ಉದ್ಯೋಗ ಕಡಿತ ನಡೆಯಲಿದ್ದು, ಮಾರ್ಚ್-ಏಪ್ರಿಲ್ 2024 ರ ವೇಳೆಗೆ ಪೂರ್ಣಗೊಳ್ಳಲಿದೆ ಎಂದೂ ತಿಳಿದುಬಂದಿದೆ. ಫ್ಲಿಪ್‌ಕಾರ್ಟ್ 22,000 ಉದ್ಯೋಗಿಗಳನ್ನು ಹೊಂದಿದ್ದು, ತನ್ನ ಫ್ಯಾಷನ್ ಪೋರ್ಟಲ್ Myntra ಗಾಗಿ ಕೆಲಸ ಮಾಡುವವರನ್ನು ಹೊರತುಪಡಿಸಿ ಇಷ್ಟು ಉದ್ಯೋಗಿಗಳಿದ್ದಾರೆ. ಇಕಾಮರ್ಸ್ ದೈತ್ಯ ತನ್ನ ಸಂಪನ್ಮೂಲಗಳನ್ನು ಅತ್ಯುತ್ತಮವಾಗಿಸಲು ಮತ್ತು ಲಾಭದಾಯಕವಾಗಿರಲು ಆಂತರಿಕವಾಗಿ ಈ ಉದ್ಯೋಗ ಕಡಿತ ನಡೆಯಲಿದೆ ಎಂದು ತಿಳಿದುಬಂದಿದೆ.
ಸಾವಿರಕ್ಕೂ ಹೆಚ್ಚು ಉದ್ಯೋಗಿಗಳ ಕಡಿತಕ್ಕೆ ಮುಂದಾದ Paytm: ಕನಿಷ್ಠ 10% ವೇತನದಾರರ ಮೇಲೆ ಪ್ರಭಾವ!
ಇನ್ನು, ಕಾರ್ಯಕ್ಷಮತೆಯ ವಿಮರ್ಶೆಗಳ ಆಧಾರದ ಮೇಲೆ ವಾರ್ಷಿಕ ಉದ್ಯೋಗ ಕಡಿತಗಳು ಹೊಸದೇನಲ್ಲ ಮತ್ತು ಕಳೆದ ಎರಡು ವರ್ಷಗಳಿಂದ Flipkart ಇದನ್ನು ಮಾಡುತ್ತಿದೆ. ಜತೆಗೆ, ಕಂಪನಿಯು ನೇಮಕಾತಿಯನ್ನು ಸ್ಥಗಿತಗೊಳಿಸಿದೆ ಮತ್ತು ವೆಚ್ಚವನ್ನು ಕಡಿತಗೊಳಿಸಲು ಕಳೆದ ವರ್ಷದಿಂದ ಹೊಸ ಪ್ರತಿಭೆಗಳನ್ನು ಉದ್ಯೋಗಕ್ಕೆ ತೆಗೆದುಕೊಂಡಿಲ್ಲ ಎಂದೂ ಮೂಲಗಳನ್ನು ಉಲ್ಲೇಖಿಸಿ ವರದಿ ಮಾಡಲಾಗಿದೆ.
ಇದು ಈಗ ವಾರ್ಷಿಕ ಅಭ್ಯಾಸವಾಗಿದೆ. ಮೌಲ್ಯಮಾಪನ ಚಕ್ರದ ಭಾಗವಾಗಿ, ಫ್ಲಿಪ್‌ಕಾರ್ಟ್ ತಂಡಗಳನ್ನು ಪುನರ್ ರಚಿಸುತ್ತಿದೆ. 2023 ರಲ್ಲಿ ಒಟ್ಟಾರೆ ವ್ಯವಹಾರವು ಫ್ಲಿಪ್‌ಕಾರ್ಟ್ ಸೇರಿದಂತೆ ಇಕಾಮರ್ಸ್ ಉದ್ಯಮಕ್ಕೆ ಅದರ ಏರಿಳಿತಗಳನ್ನು ಹೊಂದಿದೆ. ಆದ್ದರಿಂದ, ಈಗ ತಿದ್ದುಪಡಿಗಳನ್ನು ಮಾಡಲಾಗುತ್ತಿದೆ ಎಂದು ಮೂಲಗಳು ತಿಳಿಸಿದೆ.
ಇದನ್ನು ಓದಿ: ಮತ್ತೆ 30,000 ಉದ್ಯೋಗಿಗಳ ವಜಾ ಮಾಡಲು ಮುಂದಾದ ಗೂಗಲ್? AI ಅಬ್ಬರ ಶುರುವಾಯ್ತಾ?
ಅಲ್ಲದೆ, ಅಸ್ತಿತ್ವದಲ್ಲಿರುವ ಮತ್ತು ಹೊಸ ವ್ಯವಹಾರಗಳಾದ್ಯಂತ ಸಂಪನ್ಮೂಲಗಳ ಉತ್ತಮ ಬಳಕೆಯನ್ನು ಯೋಜಿಸಲಾಗುತ್ತಿದೆ ಎಂದೂ ವರದಿ ಹೇಳಿದೆ. ಫ್ಲಿಪ್‌ಕಾರ್ಟ್‌ನ ಪುನರ್ ರಚನೆ ಮತ್ತು 2024 ರ ಮಾರ್ಗಸೂಚಿಗಾಗಿ ಎರಡೂ ಯೋಜನೆಗಳನ್ನು ಫೆಬ್ರವರಿಯಲ್ಲಿ ಹಿರಿಯ ಅಧಿಕಾರಿಗಳು ಭೇಟಿಯಾದಾಗ ಚರ್ಚಿಸಲಾಗುವುದು ಎಂದು ವರದಿ ತಿಳಿಸಿದೆ.
2021 ರಲ್ಲಿ ನೇಮಕಾತಿಯ ಹೆಚ್ಚಳದ ಬಳಿಕ ಹಲವಾರು ಐಟಿ ಕಂಪನಿಗಳು ಮತ್ತು ಸ್ಟಾರ್ಟ್‌ಅಪ್‌ಗಳು ಈಗ ಉದ್ಯೋಗಿಗಳನ್ನು ವಜಾ ಮಾಡುತ್ತಿದೆ. ಇತ್ತೀಚೆಗೆ Paytm 1,000 ಉದ್ಯೋಗಿಗಳನ್ನು ವಜಾಗೊಳಿಸಿದೆ ಮತ್ತು 10-15 ಪ್ರತಿಶತದಷ್ಟು ಉದ್ಯೋಗಗಳನ್ನು ಕಡಿತಗೊಳಿಸಲು ಪ್ರಯತ್ನಿಸುತ್ತಿದೆ. ಹಾಗೂ, ಮೀಶೋ ಕೂಡ ವ್ಯಾಪಾರ ಪುನರ್ರಚನೆಯನ್ನು ಉಲ್ಲೇಖಿಸಿ ಉದ್ಯೋಗಗಳನ್ನು ಕಡಿತಗೊಳಿಸಿದೆ.
ಶೇ. 80 ಕ್ಕೂ ಹೆಚ್ಚು ಭಾರತೀಯ ವೃತ್ತಿಪರರಿಗೆ AIನದ್ದೇ ಚಿಂತೆ: ಕೆಲಸ ಕಳೆದುಕೊಳ್ಳೋ ಆತಂಕದಲ್ಲಿ ಜನತೆ!