ಭಾರತೀಯ ಆಹಾರ ನಿಗಮ(ಎಫ್‌ಸಿಐ)ದಲ್ಲಿ ಖಾಲಿ ಇರುವ ಅಸಿಸ್ಟೆಂಟ್ ಮ್ಯಾನೇಜರ್ ಹಾಗೂ ಮೆಡಿಕಲ್ ಆಫೀಸರ್ 89 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಮಾರ್ಚ್ 31ಕ್ಕೂ ಮೊದಲೇ ಆನ್‌ಲೈನ್ ಅರ್ಜಿಗಳನ್ನು ಭರ್ತಿ ಮಾಡಬೇಕು ಹಾಗೂ ಆನ್‌ಲೈನ್ ಅರ್ಜಿಗಳನ್ನು ಮಾತ್ರವೇ ಎಫ್‌ಸಿಐ ಪರಿಗಣಿಸುತ್ತದೆ. ಸಂಬಳ ಗರಿಷ್ಠ 1.80 ಲಕ್ಷ ರೂಪಾಯಿಯಿ ಇದೆ.
ಸರ್ಕಾರಿ ಸ್ವಾಮ್ಯದ ಭಾರತೀಯ ಆಹಾರ ನಿಗಮ-ಎಫ್‌ಸಿಐ(ಫುಡ್ ಕಾರ್ಪೋರೇಷನ್ ಆಫ್ ಇಂಡಿಯಾ) 89 ಹುದ್ದೆಗಳಿಗೆ ನೇಮಕಾತಿಯನ್ನು ಆರಂಭಿಸಿದೆ. ಆಸಕ್ತ ಅಭ್ಯರ್ಥಿಗಳ ಮಾರ್ಚ್ 31ಕ್ಕೂ ಮೊದಲೇ ಆನ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.
ಎಫ್‌ಸಿಐ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್, ಮೆಡಿಕಲ್ ಆಫೀಸರ್ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳುತ್ತಿದೆ ಮತ್ತು ಈ ನೇಮಕಾತಿ ದೇಶಾದ್ಯಂತವಾಗಿದೆ. ಒಟ್ಟು ಖಾಲಿ ಇರುವ 89 ಪೋಸ್ಟ್‌ಗಳಿಗೆ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಈ ಹುದ್ದೆಗಳಿಗೆ ಆನ್‌ಲೈನ್ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ
undefined
89 ನಾನಾ ಹುದ್ದೆಗೆ UPSC ನೇಮಕಾತಿ, ಅರ್ಜಿ ಸಲ್ಲಿಸಲು ಮಾ.18 ಕೊನೆ ದಿನ
ಅಸಿಸ್ಟೆಂಟ್ ಜನರಲ್ ಮ್ಯಾನೇಜರ್(ಸಾಮಾನ್ಯ ಆಡಳಿತ)-30, ಅಸಿಸ್ಟೆಂಟ್ ಜನರಲ್ ಮ್ಯಾನೇಜರ್(ತಾಂತ್ರಿಕ)- 27, ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ (ಅಕೌಂಟ್ಸ್)-22, ಅಸಿಸ್ಟೆಂಟ್ ಜನರಲ್ ಮ್ಯಾನೇಜರ್(ಕಾನೂನು)- 8 ಮತ್ತು ಮೆಡಿಕಲ್ ಆಫೀಸರ್ – 2 ಹುದ್ದೆಗಳಿಗೆ ಎಫ್‌ಸಿಐ ನೇಮಕಾತಿ ಮಾಡಿಕೊಳ್ಳುತ್ತಿದೆ.
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಆನ್‌ಲೈನ್ ಟೆಸ್ಟ್ ಮ್ತತು ಸಂದರ್ಶನವನ್ನು ಎದುರಿಸಬೇಕಾಗುತ್ತದೆ. ಸಂದರ್ಶನ ಮತ್ತು ಆನ್‌ಲೈನ್ ಟೆಸ್ಟ್ ಮೂಲಕವೇ ನೇಮಕಾತಿ ಮಾಡಿಕೊಳ್ಳಲಾಗುತ್ತದೆ.
ಸಂಬಳ ಎಷ್ಟು ಗೊತ್ತಾ?
ಅಸಿಸ್ಟೆಂಟ್ ಮ್ಯಾನೇಜರ್ ಮತ್ತು ಮೆಡಿಕಲ್ ಆಫೀಸರ್ ಹುದ್ದೆಗಳಿಗೆ ಆಯ್ಕೆಯಾಗಿ ನೇಮಕಗೊಂಡವರಿಗೆ ಭರ್ಜರಿ ಸಂಬಳ ದೊರೆಯಲಿದೆ. ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ಹುದ್ದೆಗೆ ವೇತನ ಶ್ರೇಣಿ 60 ಸಾವಿರ ರೂಪಾಯಿಯಿಂದ 1.80 ಲಕ್ಷ ರೂಪಾಯಿಯವರೆಗೂ ಇರಲಿದೆ. ಇನ್ನು ಮೆಡಿಕಲ್ ಆಫೀಸರ್ ಹುದ್ದೆಗಳಿಗೆ ಆಯ್ಕೆಯಾದವರಿಗೆ 50 ಸಾವಿರ ರೂಪಾಯಿಯಿಂದ 1.60 ಸಾವಿರವರೆಗೂ ಸಿಗಲಿದೆ.
ಅಪ್ಲೈ ಮಾಡೋದು ಹೇಗೆ?
ಅಸಿಸ್ಟೆಂಟ್ ಮ್ಯಾನೇಜರ್ ಹಾಗೂ ಮೆಡಿಕಲ್ ಆಫೀಸರ್ ಹುದ್ದೆಗಳಿಗೆ ಆನ್‌ಲೈನ್ ಮೂಲಕ ಅಪ್ಲೈ ಮಾಡಿದ ಅರ್ಜಿಗಳನ್ನು ಮಾತ್ರವೇ ಪರಿಗಣಿಸಲಾಗುತ್ತದೆ. ಆನ್‌ಲೈನ್ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಎಫ್‌ಸಿಐನ ಅಧಿಕೃತ ವೆಬ್‌ತಾಣ www.fci.gov.in ಗೆ ಭೇಟಿ ಕೊಡಬೇಕು. ಅಲ್ಲಿ ಕಾಣುವ ಅಪ್ಲೈ ಆನ್‌ಲೈನ್ ಬಟನ್ ಮೇಲೆ ಕ್ಲಿಕ್ ಮಾಡಬೇಕು. ಆಗ ಹೊಸ ಸ್ಕ್ರೀನ್ ತೆರೆದುಕೊಳ್ಳುತ್ತದೆ.
HALನಲ್ಲಿ ಅಪ್ರೆಂಟಿಸ್ ಟ್ರೈನಿ ಹುದ್ದೆಗಳಿಗೆ ಅರ್ಜಿ ಆಹ್ವಾನ
ಅರ್ಜಿ ನೋಂದಣಿ ಮಾಡಿಕೊಳ್ಳಲು ಅಭ್ಯರ್ಥಿಗಳು ಕ್ಲಿಕ್ ಹಿಯರ್ ಫಾರ್ ನ್ಯೂ ರಿಜಿಸ್ಟ್ರೇಷನ್ ಬಟನ್ ಮೇಲೆ ಕ್ಲಿಕ್ ಮಾಡಬೇಕು. ಬಳಿಕ ಅಭ್ಯರ್ಥಿಗಳು ತಮ್ಮ ಹೆಸರು, ಸಂಪರ್ಕದ ಸಂಖ್ಯೆಗಳ ವಿವರ ಮತ್ತು ಇ ಮೇಲ್ ಐಡಿ ಸೇರಿ ಇನ್ನಿತರ ಮಾಹಿತಿಯನ್ನು ನಮೂದಿಸಬೇಕು. ಆಗ ಪ್ರಾವಿಷನಲ್ ರಿಜಿಸ್ಟ್ರೇಷನ್ ನಂಬರ್ ಮತ್ತು ಪಾಸ್‌ವರ್ಡ್ ನಂಬರ್ ಜನರೇಟ್ ಆಗುತ್ತದೆ ಮತ್ತು ಸ್ಕ್ರೀನ್ ಮೇಲೆ ಕಾಣಿಸಿಕೊಳ್ಳುತ್ತದೆ. ಬಳಿಕ ಅಭ್ಯರ್ಥಿಗಳು ಜಾಗೃತೆಯಿಂದ ಆನ್‌ಲೈನ್ ಅರ್ಜಿಯನ್ನು ಭರ್ತಿ ಮಾಡಬೇಕು. ಯಾಕೆಂದರೆ ಒಮ್ಮೆ ನೀವು ಫೈನಲ್ ಸಬ್‌ಮಿಟ್ ಬಟನ್ ಒತ್ತಿದ ಮೇಲೆ ಮತ್ತೆ ಯಾವುದೇ ತಿದ್ದುಪಡಿಗೆ ಅವಕಾಶವಿರುವುದಿಲ್ಲ. ಹಾಗಾಗಿ ಬಹಳ ಜಾಗೃತಿಯಿಂದ ಭರ್ತಿ ಮಾಡಬೇಕು.
ಅಭ್ಯರ್ಥಿಗಳು ತಮ್ಮ ಸಹಿ ಹಾಗೂ ಫೋಟೋಗಳನ್ನು ಅಪ್‌ಲೋಡ್ ಮಾಡಬೇಕು. ಆನ್‌ಲೈನ್ ಅಪ್ಲಿಕೇಷನ್ ಭರ್ತಿ ಪೂರ್ತಿಯಾದ ಬಳಿಕ, ಅಂದರೆ ನಮೂದಿಸಿ ಎಲ್ಲ ಮಾಹಿತಿ ಸರಿಯಾಗಿದೆಯೇ, ಫೋಟೋ ಅಪ್‌ಲೋಡ್ ಮಾಡಲಾಗಿದೆಯೇ, ಸಿಗ್ನೇಚರ್ ಅಪ್‌ಲೋಡ್ ಮಾಡಲಾಗಿದೆಯೇ ಎಂಬುದನ್ನು ಪೂರ್ತಿಯಾಗಿ ಖಚಿತಪಡಿಸಿಕೊಂಡ ಬಳಿಕವಷ್ಟೇ ಫೈನಲ್ ಸಬ್‌ಮಿಟ್ ಬಟನ್ ಒತ್ತಬೇಕು. ಇಷ್ಟಾದ ಮೇಲೆ ಪೇಮೆಂಟ್ ಬಟನ್ ಮೇಲೆ ಕ್ಲಿಕ್ ಮಾಡಬೇಕು. ಆ ಮೇಲೆ ಸೂಚಿರುವ ಆದೇಶದಂತೆ ಶುಲ್ಕವನ್ನು ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ಸ್, ಇಂಟರ್ನೆಟ್ ಬ್ಯಾಂಕಿಂಗ್, ಐಎಂಪಿಎಸ್, ಕ್ಯಾಶ್ ಕಾರ್ಡ್ಸ್, ಮೊಬೈಲ್ ವಾಲೆಟ್ಸ್ ಬಳಸಿಕೊಂಡ ಅಭ್ಯರ್ಥಿಗಳನ್ನು ಶುಲ್ಕವನ್ನು ಭರಿಸಬಹುದು. ಎಸ್ ಸಿ, ಎಸ್ ಟಿ ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಶುಲ್ಕ ವಿನಾಯ್ತಿ ಇದೆ. ಉಳಿದ ವರ್ಗದ ಅಭ್ಯರ್ಥಿಗಳು 1000 ರೂ. ಶುಲ್ಕ ಭರಿಸಬೇಕಾಗುತ್ತದೆ.
RBIನಲ್ಲಿ ಕೆಲ್ಸಾ ಇದೆ: 72208 ರೂಪಾಯಿ ವೇತನ!