2023ರಲ್ಲೂ ಉದ್ಯೋಗಿಗಳನ್ನು ವಜಾ ಮಾಡುವುದಾಗಿ ಘೋಷಣೆ ಮಾಡಿದ್ದ ಮೆಟಾ, ಅದನ್ನು ಮೇ ತಿಂಗಳಿನಿಂದಲೇ ಆರಂಭ ಮಾಡುವುದಾಗಿ ಪ್ರಕಟಿಸಿದೆ. ಮೊದಲ ಹಂತದಲ್ಲಿ 11 ಸಾವಿರ ಉದ್ಯೋಗಿಗಳನ್ನು ವಜಾ ಮಾಡಿದ್ದ ಮೆಟಾ, 2ನೇ ಹಂತದಲ್ಲಿ 10 ಸಾವಿರ ಉದ್ಯೋಗಿಗಳನ್ನು ವಜಾ ಮಾಡುವುದಾಗಿ ಘೋಷಿಸಿದೆ.
ನವದೆಹಲಿ (ಏ.19): ಫೇಸ್‌ಬುಕ್, ಇನ್ಸ್‌ಟಾಗ್ರಾಮ್ ಹಾಗೂ ವಾಟ್ಸ್‌ಆಪ್‌ನ ಮಾತೃಸಂಸ್ಥೆ ಮೆಟಾ ಮತ್ತೆ 10 ಸಾವಿರ ಉದ್ಯೋಗಿಗಳನ್ನು ವಜಾ ಮಾಡುವುದಾಗಿ ಘೋಷಣೆ ಮಾಡಿದೆ. ಮೇ ತಿಂಗಳಿನಿಂದಲೇ ಉದ್ಯೋಗಿಗಳ ವಜಾ ಪ್ರಕ್ರಿಯೆ ಆರಂಭವಾಗಲಿದೆ ಎಂದು ತಿಳಿಸಿದೆ. ಮಾಧ್ಯಮ ವರದಿಗಳ ಪ್ರಕಾರ, ಕಂಪನಿಯ ಹಿರಿಯ ಅಧಿಕಾರಿಗಳೇ ಕಂಪನಿಯಲ್ಲಿ ಮತ್ತೆ ಉದ್ಯೋಗ ಕಡಿತ ಘೋಷಣೆಯಾಗಿರುವುದಾಗಿ ತಿಳಿಸಿದ್ದಾನೆ. ಇದು ಮೆಟಾದಲ್ಲಿ 2ನೇ ಹಂದ ಉದ್ಯೋಗಿಗಳ ವಜಾ ಪ್ರಕ್ರಿಯೆ ಆಗಿದೆ. ಮೆಟಾ ಕಂಪನಿ ಮೊದಲ ಹಂತದಲ್ಲಿ 11 ಸಾವಿರ ಉದ್ಯೋಗಳನ್ನು ವಜಾ ಮಾಡಿತ್ತು. ಇದು ಫೇಸ್‌ಬುಕ್‌ನ ಒಟ್ಟಾರೆ ಕಾರ್ಯಪಡೆಯ ಶೇ.13ರಷ್ಟಾಗಿತ್ತು. 18 ವರ್ಷಗಳ ಕಂಪನಿ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ದೊಡ್ಡ ಪ್ರಮಾಣದಲ್ಲಿ ಉದ್ಯೋಗಿಗಳನ್ನು ವಜಾ ಮಾಡಿತ್ತು. ಸ್ವತಃ ಕಂಪನಿಯ ಸಿಇಒ ಮಾರ್ಕ್ ಜುಕರ್‌ಬರ್ಗ್ ಉದ್ಯೋಗಿಗಳನ್ನು ವಜಾ ಮಾಡುತ್ತಿರುವ ಬಗ್ಗೆ ಪ್ರಕಟಣೆ ನೀಡಿ ಮಾತನಾಡಿದ್ದರು. ಕೆಲವೊಂದು ತಪ್ಪು ನಿರ್ಧಾರಗಳಿಂದ ಕಂಪನಿಯ ಆದಾಯ ಗಣನೀಯವಾಗಿ ಕುಸಿಯುತ್ತಿದ್ದು ಆ ಕಾರಣಕ್ಕಾಗಿ ಈ ನಿರ್ಧಾರ ಮಾಡದ್ದಾಗಿ ತಿಳಿಸಿದರು.
5 ಸಾವಿರ ಹುದ್ದೆಗಳು ಖಾಲಿ ಉಳಿಯಲಿವೆ: ಜುಕರ್‌ಬರ್ಗ್ ಕಳೆದ ತಿಂಗಳು ಹಿಂಬಡ್ತಿಗೆ ಸೂಚಿಸಿದ್ದರು. 10,000 ಜನರನ್ನು ವಜಾಗೊಳಿಸಿದ ನಂತರ, ಕಂಪನಿಯಲ್ಲಿ 5,000 ಹುದ್ದೆಗಳನ್ನು ಖಾಲಿ ಇಡಲಾಗುವುದು ಎಂದು ಅವರು ಹೇಳಿದ್ದರು. ಜುಕರ್‌ಬರ್ಗ್, 'ಯುಎಸ್‌ನಲ್ಲಿ ಹೆಚ್ಚುತ್ತಿರುವ ಬಡ್ಡಿದರಗಳು ಮತ್ತು ಜಗತ್ತಿನಲ್ಲಿ ಹೆಚ್ಚಿದ ಚಂಚಲತೆಯು ಕಂಪನಿಯ ಗಳಿಕೆಯಲ್ಲಿನ ಕುಸಿತಕ್ಕೆ ಕಾರಣವಾಗಿದೆ' ಎಂದು ಹೇಳಿದ್ದಾರೆ.
ಮೊದಲ ಸುತ್ತಿನ ವಜಾ ಪ್ರಕ್ರಿಯೆ ಮಾಡುವ ವೇಳೆ ಮಾತನಾಡಿದ್ದ ಮಾರ್ಕ್ ಜುಕರ್‌ಬರ್ಗ್, 'ಕೋವಿಡ್ ಆರಂಭದ ಸಮಯದಲ್ಲಿ ಜಗತ್ತು ಅತ್ಯಂತ ವೇಗವಾಗಿ ಆನ್‌ಲೈನ್‌ಗೆ ಒಳಗಾಯಿತು. ಇ-ಕಾಮರ್ಸ್‌ಗಳ ಬೇಡಿಕೆಯಿಂದಾಗಿ ಕಂಪನಿಯ ಲಾಭ ಕೂಡ ಏರಿಕೆಯಾಗಿತ್ಉತ. ಹೆಚ್ಚಿವರು ಈ ಪ್ರಗತಿ ಶಾಶ್ವತವಾಗಿ ಇರಲಿದೆ ಎಂದು ಅಂದಾಜು ಮಾಡಿದ್ದರು. ಸಾಂಕ್ರಾಮಿಕ ಉಗಿದ ಬಳಿಕವೂ ಜನ ಇಷ್ಟೇ ಪ್ರಮಾಣದಲ್ಲಿ ಇ-ಕಾಮರ್ಸ್ ಬಳಕೆ ಮಾಡಲಿದ್ದಾರೆ ಎನ್ನಲಾಗಿತ್ತು. ನಾನೂ ಕೂಡ ಹೀಗೆ ಅಂದಾಜು ಮಾಡಿದದ್ದೆ. ಅದಕ್ಕಾಗಿ ನಾನು ಹೂಡಿಕೆಯನ್ನೂ ಕೂಡ ಏರಿಕೆ ಮಾಡಿದ್ದೆ. ದುರಾದೃಷ್ಟವಶಾತ್, ಇದು ನನ್ನ ನಿರೀಕ್ಷೆಯನ್ನು ಮುಟ್ಟಲಿಲ್ಲ' ಎಂದು ಜುಕರ್‌ಬರ್ಗ್ ಹೇಳಿದ್ದರು.
ಆನ್‌ಲೈನ್ ವಾಣಿಜ್ಯವು ಹಿಂದಿನ ಟ್ರೆಂಡ್‌ಗಳಿಗೆ ಮರಳಿದೆ ಮಾತ್ರವಲ್ಲದೆ, ಸ್ಥೂಲ ಆರ್ಥಿಕ ಕುಸಿತ, ಸ್ಪರ್ಧೆ ಮತ್ತು ಕಡಿಮೆ ಜಾಹೀರಾತುಗಳು ಆದಾಯವು ನಾನು ನಿರೀಕ್ಷಿಸಿದ್ದಕ್ಕಿಂತ ಕಡಿಮೆಯಾಗಿದೆ. ನಾನು ಈ ತಪ್ಪನ್ನು ಮಾಡಿದ್ದೇನೆ ಮತ್ತು ಅದರ ಜವಾಬ್ದಾರಿಯನ್ನು ನಾನು ತೆಗೆದುಕೊಳ್ಳುತ್ತೇನೆ. ಈ ಹೊಸ ವಾತಾವರಣದಲ್ಲಿ, ನಾವು ಹೆಚ್ಚು ಬಂಡವಾಳವನ್ನು ಸಮರ್ಥವಾಗಿ ಹೂಡಬೇಕಾಗಿದೆ. ನಾವು ಹೆಚ್ಚಿನ ಆದ್ಯತೆಯ ಬೆಳವಣಿಗೆಯ ಪ್ರದೇಶಗಳಿಗೆ ಸಂಪನ್ಮೂಲಗಳನ್ನು ಬದಲಾಯಿಸಿದ್ದೇವೆ ಎಂದು ಹೇಳಿದ್ದರು.
undefined
3ನೇ ಮಗುವಿಗೆ ಜನ್ಮ ನೀಡಿದ ಮಾರ್ಕ್ ಜುಕರ್‌ಬರ್ಗ್ ಪತ್ನಿ: ತುಂಬಾ ಕಷ್ಟಪಡ್ತಿದ್ದೀರಾ ಎಂದು ಕಾಲೆಳೆದ ನೆಟ್ಟಿಗರು
ಸೆಪ್ಟೆಂಬರ್ 2022 ರ ಅಂತ್ಯದ ವೇಳೆಗೆ, ಮೆಟಾ 87,314 ಉದ್ಯೋಗಿಗಳನ್ನು ಹೊಂದಿತ್ತು. ಮೆಟಾ ಪ್ರಸ್ತುತ WhatsApp, Instagram ಮತ್ತು Facebook ಸೇರಿದಂತೆ ವಿಶ್ವದ ಕೆಲವು ದೊಡ್ಡ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳನ್ನು ಹೊಂದಿದೆ. ಆದಾಗ್ಯೂ, ಕಂಪನಿಯು ಮೆಟಾವರ್ಸ್‌ನಲ್ಲಿ ತನ್ನ ಹೂಡಿಕೆಯನ್ನು ದೊಡ್ಡ ಪ್ರಮಾಣದಲ್ಲಿ ಏರಿಕೆ ಮಾಡುತ್ತಿದೆ. ಮೆಟಾವರ್ಸ್ ಎನ್ನುವುದು ಮೆಟಾ ಸೃಷ್ಟಿ ಮಾಡುತ್ತಿರುವ ವರ್ಚುವಲ್ ಪ್ರಪಂಚವಾಗಿದೆ.
ಫೇಸ್‌ಬುಕ್, ಇನ್ಸ್ಟಾ ಬ್ಲೂ ಬ್ಯಾಡ್ಜ್‌ಗೂ ಶುಲ್ಕ: ಚಂದಾ ಪಾವತಿಸಿದವರಿಗೆ ಖಾತೆ ನಕಲು ತಡೆ ಸೇರಿ ಹಲವು ಸವಲತ್ತು..!
ಪ್ರಪಂಚದ ಅನೇಕ ದೊಡ್ಡ ಕಂಪನಿಗಳು ಈ ವರ್ಷ ದೊಡ್ಡ ಪ್ರಮಾಣದಲ್ಲಿ ಉದ್ಯೋಗಿಗಳನ್ನು ವಜಾ ಮಾಡಿದೆ. ಅಮೆಜಾನ್ 2023 ರಲ್ಲಿ ಇದುವರೆಗೆ 27 ಸಾವಿರ ಉದ್ಯೋಗಿಗಳನ್ನು ವಜಾ ಮಾಡಿದೆ. ಮೆಟಾ ಈ ವರ್ಷ ಇದುವರೆಗೆ 11,000 ಜನರನ್ನು ವಜಾ ಮಾಡಿದ್ದು,ಮೇ ತಿಂಗಳಲ್ಲಿ 10,000 ಉದ್ಯೋಗಿಗಳಿಗೆ ಪಿಂಕ್ ಸ್ಲಿಪ್ ನೀಡಲಿದೆ. ಇವರಲ್ಲದೆ ಆಲ್ಫಾಬೆಟ್ 12 ಸಾವಿರ ಹಾಗೂ ಮೈಕ್ರೋಸಾಫ್ಟ್ 10 ಸಾವಿರ ಉದ್ಯೋಗಿಗಳ ವಜಾ ಮಾಡಿದೆ.