ಬರೋಬ್ಬರಿ 35 ಬಾರಿ ರಿಜೆಕ್ಟ್ ಆದ ಮಾಜಿ ಗೂಗಲ್‌ ಉದ್ಯೋಗಿಗೆ ಕೊನೆಗೂ ಸಿಕ್ತು 1.9 ಕೋಟಿ ರೂ ವೇತನದ ಕೆಲಸ

By Gowthami K  |  First Published Sep 12, 2023, 9:46 AM IST

ವೈಫಲ್ಯಗಳೇ ಯಶಸ್ಸಿನ ಹಾದಿಯಲ್ಲಿ ಮೆಟ್ಟಿಲುಗಳಾಗಿ ಕಾರ್ಯನಿರ್ವಹಿಸುತ್ತವೆ. ವೈಫಲ್ಯ , ನಿರಾಕರಣೆ, ಹಿನ್ನಡೆಗಳು ನಮಗೆ ಅಮೂಲ್ಯವಾದ ಪಾಠವನ್ನು ಕಲಿಸುತ್ತವೆ. ಇದಕ್ಕೆ ಮನು ಅಗರವಾಲ್ ಅವರ ಜೀವನ ಕಥೆಯು ಉತ್ತಮ ಉದಾಹರಣೆ.


ವೈಫಲ್ಯಗಳೇ ಯಶಸ್ಸಿನ ಹಾದಿಯಲ್ಲಿ ಮೆಟ್ಟಿಲುಗಳಾಗಿ ಕಾರ್ಯನಿರ್ವಹಿಸುತ್ತವೆ. ವೈಫಲ್ಯ , ನಿರಾಕರಣೆ, ಹಿನ್ನಡೆಗಳು ನಮಗೆ ಅಮೂಲ್ಯವಾದ ಪಾಠವನ್ನು ಕಲಿಸುತ್ತವೆ. ಯಶಸ್ವಿಯಾಗಲು ಸಹಾಯ ಮಾಡುತ್ತದೆ. ಇದಕ್ಕೆ ಮನು ಅಗರವಾಲ್ ಅವರ ಜೀವನ ಕಥೆಯು ಉತ್ತಮ ಉದಾಹರಣೆ. ಕೇವಲ 10,000 ರೂಪಾಯಿ ವೇತನ ಪಡೆಯುತ್ತಿದ್ದ ಮನು ಈಗ  1.9 ಕೋಟಿ ರೂಪಾಯಿಗಳ ಸಂಬಳ ಪಡೆಯುವವರೆಗೆ ತಮ್ಮ ವೃತ್ತಿಜೀವನದಲ್ಲಿ ಬಹಳ ದೂರ ಸಾಗಿದ್ದಾರೆ.

ಮನು ಈಗ ಟ್ಯುಟೋರ್ಟ್ ಅಕಾಡೆಮಿಯ ಸ್ಥಾಪಕರಾಗಿದ್ದಾರೆ. ಇದು ಪ್ರೋಗ್ರಾಮಿಂಗ್ ಮತ್ತು ಸಾಫ್ಟ್‌ವೇರ್ ಎಂಜಿನಿಯರಿಂಗ್‌ನಲ್ಲಿ ಮಾಸ್ಟರ್ ಕೋರ್ಸ್‌ಗಳಿಗೆ ಹೆಸರುವಾಸಿಯಾಗಿದೆ. ಈ ಕೋರ್ಸ್‌ಗಳು ಡೇಟಾ ಸೈನ್ಸ್, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್, ಡೇಟಾ ಸ್ಟ್ರಕ್ಚರ್ ಮತ್ತು ಹೆಚ್ಚಿನ ವಿಷಯಗಳನ್ನು ಒಳಗೊಂಡಿರುತ್ತವೆ.

Tap to resize

Latest Videos

G20 ಶೃಂಗ ಸಭೆಗೆ ಭಾರೀ ಖರ್ಚು ಮಾಡಿದ ಭಾರತ, ಎಲ್ಲೆಲ್ಲಿ ಎಷ್ಟು ವೆಚ್ಚ ಮಾಡಿದೆ ಇಲ್ಲಿದೆ ವಿವರ

ಉತ್ತರ ಪ್ರದೇಶದ ಝಾನ್ಸಿಯಿಂದ ಬಂದಿರುವ ಮನು ಅಗರವಾಲ್ ಅವರು ಹಿಂದಿ ಮಾಧ್ಯಮದ ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡಿದರು, ಅಲ್ಲಿ ಅವರು ತಮ್ಮ ಮೂಲಭೂತ ಶಿಕ್ಷಣವನ್ನು ಪಡೆದರು. ಅವರು ಹೆಚ್ಚು ಪರಿಶ್ರಮದ ವಿದ್ಯಾರ್ಥಿಯಾಗಿರಲಿಲ್ಲ ಮತ್ತು ಗಣಿತ ಮನುಗೆ ತುಂಬಾ ಕಷ್ಟವಾಗಿತ್ತು. ಆದರೆ ಅವನು ತನ್ನ ಶೈಕ್ಷಣಿಕ ನ್ಯೂನತೆಗಳನ್ನು ಧೈರ್ಯದಿಂದ ಎದುರಿಸಲು ತೀರ್ಮಾನಿಸಿದರು.

ರೆಸ್ಟೋರೆಂಟ್‌ನಲ್ಲಿ 5 ಸಾವಿರ ದುಡಿಯುತ್ತಿದ್ದ ಈತ ಈಗ ಭಾರತದ ಶ್ರೀಮಂತ

ಮನು ಅಗರ್ವಾಲ್‌ AIEEE ಸ್ಕೋರ್ ಗಳಿಸಿದ ನಂತರ ಬುಂದೇಲ್‌ಖಂಡ್ ವಿಶ್ವವಿದ್ಯಾಲಯದಲ್ಲಿ BCA (ಬ್ಯಾಚುಲರ್ ಆಫ್ ಕಂಪ್ಯೂಟರ್ ಅಪ್ಲಿಕೇಶನ್) ಪದವಿ ಪಡೆದರು. ನಂತರ ಅವರು ತಮ್ಮ ಸ್ನಾತಕೋತ್ತರ ಪದವಿಯನ್ನು ತಿರುಚಿರಾಪಳ್ಳಿಯಲ್ಲಿರುವ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ನಲ್ಲಿ ಮುಗಿಸಿದರು. ಅವರು 2016 ರಲ್ಲಿ ರೂ 10,000  ವೇತನಕ್ಕೆ ಇಂಟರ್ನ್‌ಶಿಪ್ ಮುಗಿಸಿದರು. ಮನು ತಮ್ಮ MCA ಅನ್ನು ವಿದ್ಯಾಭ್ಯಾಸಕ್ಕೆ ಮುನ್ನ BCA ನಂತರ ಹಲವಾರು ಕಂಪನಿಗಳಿಗೆ ಅರ್ಜಿ ಸಲ್ಲಿಸಿದರು. 

click me!