ಕೊರೋನಾ ಹೊಡೆತ: ಬೆಂಗ್ಳೂರಲ್ಲಿ ಸಾವಿರಾರು ಮಂದಿ ಉದ್ಯೋಗ ಕಳೆದುಕೊಳ್ಳುವುದು ಖಚಿತ..!

By Suvarna NewsFirst Published Apr 13, 2020, 6:17 PM IST
Highlights
ನೋಟ್‌ ಬ್ಯಾನ್‌, ಜಿಎಸ್‌ಟಿ ಜಾರಿ ಬಳಿಕ ಹಿನ್ನಡೆ ಅನುಭವಿಸಿದ್ದ ಉದ್ಯಮ ರಂಗದಲ್ಲಿಇತ್ತೀಚೆಗೆ ಸ್ವಲ್ಪ ಚೇತರಿಸಿಕೊಳ್ಳುತ್ತಿದ್ದ ಕಂಪನಿಗಳಿಗೆ ಕೊರೋನಾ ಲಾಕ್‌ಡೌನ್‌ ಮರ್ಮಾಘಾತ ನೀಡಿದ್ದು, ಸಾವಿರಾರು  ಮಂದಿ ಉದ್ಯೋಗ ಕಳೆದುಕೊಳ್ಳುವ ಭೀತಿಯಲಿದ್ದಾರೆ.
ಬೆಂಗಳೂರು, (ಏ.13): ಇಡೀ ವಿಶ್ವದ ಡಿಡ್ಲಿ ಕೊರೋನಾ ವೈರಸ್ ಜನರ ಮೇಲೆ ಮಾತ್ರವಲ್ಲದೇ ದೇಶಗಳ ಆರ್ಥಿಕತೆ ಮೇಲೆ ದೊಡ್ಡ ಹೊಡೆತ ಬಿದ್ದಿದೆ. ಇದರಿಂದ ಭಾರತದಲ್ಲಿರುವ ಮಲ್ಟಿ ನ್ಯಾಷನಲ್​ ಕಂಪನಿಗಳು ಅಕ್ಷರಶಃ ನಲುಗಿ ಹೋಗಿ. 
 
ಈ ಹಿನ್ನೆಲೆಯಲ್ಲಿ  ಲಾಕ್​​ಡೌನ್​​ ಅವಧಿಯಲ್ಲಿ ಮನೆಯಲ್ಲಿರುವ ಉದ್ಯೋಗಿಗಳ ಕೆಲಸಕ್ಕೆ ಕಂಪನಿಗಳು ಕತ್ತರಿ ಹಾಕಲು ಮುಂದಾಗಿದ್ದು, ಐಟಿ-ಬಿಟಿ ಕಂಪನಿ ಉದ್ಯೋಗಿಗಳಿಗೆ ಢವಢವ ಶುರುವಾಗಿದೆ.
 
ಅಮೆರಿಕ, ಬ್ರಿಟನ್​, ಚೀನಾ, ಜರ್ಮನಿ ಮೊದಲಾದ ದೇಶಗಳಲ್ಲೂ ಉದ್ಯೋಗಿಗಳ ಕೆಲಸಕ್ಕೆ ಕತ್ತರಿ ಹಾಕಿದ್ದಲ್ಲದೇ, ಕೆಲ ಕಂಪನಿಗಳು ಆರ್ಥಿಕ ಮುಗ್ಗಟ್ಟಿನಿಂದ ಲಾಕ್‌ಔಟ್ ಘೋಷಿಸಿವೆ. ಅದರಂತೆ  ಬೆಂಗಳೂರಿನಲ್ಲೂ ಸಹ ಲಾಕ್ ಡೌನ್ ಸಂದರ್ಭದಲ್ಲಿ ಉತ್ಪಾದನೆ ಇಲ್ಲದೆ ಉದ್ದಿಮೆದಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ನಾಳೆ ಪ್ರಧಾನಿ ಮೋದಿ ಮಾತು, ಭಾರತೀಯ ಸೇನೆಯಿಂದ ಪಾಕ್‌ಗೆ ತಿರುಗೇಟು; ಏ.13ರ ಟಾಪ್ 10 ಸುದ್ದಿ!

ಪೂರ್ತಿ ವೇತನ ಪಾವತಿ ಮಾಡಲಾಗದೆ ಸಮಸ್ಯೆಗೆ ಸಿಲುಕಿದ್ದಾರೆ. ಇದರಿಂದ ಅನೇಕ ಕಂಪನಿಗಳಲ್ಲಿ ಶೇ 20ರಿಂದ 30ರಷ್ಟು ಸಂಬಳ ಕಟ್ ಮಾಡಲಾಗಿದೆ.​ ಸಾಲದಕ್ಕೆ ಕೇಂದ್ರ ಸರ್ಕಾರದ ಸೂಚನೆಯನ್ನೂ ಧಿಕ್ಕರಿಸಿ ಉದ್ಯೋಗಿಗಳನ್ನು ವಜಾ ಮಾಡುತ್ತಿದ್ದು, ಸುಮಾರು 10 ಸಾವಿರ ಮಂದಿ ಉದ್ಯೋಗ ಕಳೆದುಕೊಳ್ಳುವ ಭಯದಲ್ಲಿದ್ದಾರೆ.

ಲಾಕ್ ಡೌನ್ ಸಂದರ್ಭದಲ್ಲಿ ಕೆಲಸ ಮನೆಯಿಂದಲೇ ಕೆಲಸ ಮಾಡಿದವರಿಗೆ ಪೂರ್ತಿ ವೇತನ ನೀಡಬೇಕು. 15 ಸಾವಿರಕ್ಕಿಂತ ಒಳಗಿನ ವೇತನದಾರರಿಗೆ ಕೆಲಸ ಮಾಡದೇ ಇದ್ದರೂ ಪೂರ್ತಿ ವೇತನ ಪಾವತಿಸುವಂತೆ ರಾಜ್ಯ ಕೈಗಾರಿಕೆ ವಾಣಿಜ್ಯ ಮಹಾ ಸಂಸ್ಥೆ (ಎಫ್ ಕೆ ಸಿ ಸಿ ಐ) ಸೂಚನೆ ನೀಡಿದೆ. ಇದ್ಯಾವುದಕ್ಕೂ ಕಂಪನಿಗಳು ಕ್ಯಾರೇ ಎನ್ನುತ್ತಿಲ್ಲ.

ನೋಟ್‌ ಬ್ಯಾನ್‌, ಜಿಎಸ್‌ಟಿ ಜಾರಿ ಬಳಿಕ ಹಿನ್ನಡೆ ಅನುಭವಿಸಿದ್ದ ಉದ್ಯಮ ರಂಗದಲ್ಲಿಇತ್ತೀಚೆಗೆ ಸ್ವಲ್ಪ ಚೇತರಿಸಿಕೊಳ್ಳುತ್ತಿದ್ದ ಕಂಪನಿಗಳಿಗೆ ಕೊರೋನಾ ಲಾಕ್‌ಡೌನ್‌ ಮರ್ಮಾಘಾತ ನೀಡಿದೆ.

ಬರಗಾಲದಲ್ಲಿ ಅಧಿಕ ಮಾಸ ಎನ್ನುವಂತಾ ದುಸ್ಥಿತಿಯಲ್ಲಿ ಉದ್ಯೋಗಿಗಳು ಇದ್ದಾರೆ. ಭಾರತ ಲಾಕ್ ಡೌನ್ ಆಗಿ ಕೈಯಲ್ಲಿ ಹಣವಿಲ್ಲದೇ, ತುತ್ತು ಅನ್ನಕ್ಕೂ ಸರ್ಕಾರ ನೀಡುವ ರೇಷನ್ ಎದುರು ನೋಡುತ್ತಾ ಜನರು ನಿಂತಿದ್ದಾರೆ. ಇಂಥ ಸಂದರ್ಭದಲ್ಲಿ ನೆಚ್ಚಿಕೊಂಡಿದ್ದ ಕೆಲಸವೂ ಎಲ್ಲಿ ಹೊರಟು ಹೋಗುತ್ತದೆಯೋ ಎಂಬ ಆತಂಕದಲ್ಲಿ ಉದ್ಯೋಗಿಗಳಿದ್ದಾರೆ.
click me!