ಭಾರತದಲ್ಲಿ ಕಾಗ್ನಿಜೆಂಟ್ ನೇಮಕಾತಿ ಆರಂಭ; 1 ಲಕ್ಷ ಅನುಭವಿ, 1 ಲಕ್ಷ ಫ್ರೆಶರ್‌ಗೆ ಅವಕಾಶ!

Published : Jul 29, 2021, 05:38 PM IST
ಭಾರತದಲ್ಲಿ ಕಾಗ್ನಿಜೆಂಟ್ ನೇಮಕಾತಿ ಆರಂಭ; 1 ಲಕ್ಷ ಅನುಭವಿ, 1 ಲಕ್ಷ ಫ್ರೆಶರ್‌ಗೆ ಅವಕಾಶ!

ಸಾರಾಂಶ

ಕೊರೋನಾ 2ನೇ ಅಲೆ ತಗ್ಗಿದ ಬೆನ್ನಲ್ಲೇ ಇದೀಗ ಭರ್ಜರಿ ಉದ್ಯೋಗ ಆಫರ್ ಅಮೆರಿಕದ ಮೂಲದ ಕಾಗ್ನಿಜೆಂಟ್ ಭಾರತದಲ್ಲಿ ನೇಮಕಾತಿ ಆರಂಭ 1 ಲಕ್ಷ ಅನುಭವಿ ಹಾಗೂ 1 ಲಕ್ಷ ಫ್ರೆಶರ್‌ಗೆ ಅವಕಾಶ  

ನವದೆಹಲಿ(ಜು.29): ಅಮೆರಿಕ ಮೂಲದ ಕಾಗ್ನಿಜೆಂಟ್ ಐಟಿ ಕಂಪನಿ ಭಾರತದಲ್ಲಿ ನೇಮಕಾತಿ ಆರಂಭಿಸಿದೆ.  ಪ್ರಸಕ್ತ ವರ್ಷ ಕಾಗ್ನಿಜೆಂಟ್ 1 ಲಕ್ಷ ಅನುಭವಿ ಹಾಗೂ 1 ಲಕ್ಷ ಫ್ರೆಶರ್‌ ನೇಮಕ ಮಾಡಿಕೊಳ್ಳುತ್ತಿದೆ. ಇದರಲ್ಲಿ ಈ ವರ್ಷ 30,000 ಫ್ರೆಶರ್ ಉದ್ಯೋಗಿಗಳನ್ನು ನೇಮಕ ಮಾಡಿಕೊಂಡರೆ, 2022ರಲ್ಲಿ 45,000 ಪದವೀಧರರನ್ನು ವರ್ಷದಿಂದ ವರ್ಷಕ್ಕೆ ಹಂತ ಹಂತವಾಗಿ ನೇಮಿಸಿಕೊಳ್ಳಲಿದೆ. 

ಖಾಲಿ ಇರುವ ವಿವಿಧ ಸರ್ಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನ, ತಿಂಗಳಿಗೆ ಸಖತ್ ಸಂಬಳ

ತ್ರೈಮಾಸಿಕದ ಆರ್ಥಿಕ ಫಲಿತಾಂಶಗಳ ವಿಶ್ಲೇಷಣೆ ಸಭೆಯಲ್ಲಿ  ಭಾರತದಲ್ಲಿ ನೇಮಕಾತಿ ಕುರಿತು ಕಾಗ್ನಿಜೆಂಟ್  ಸಿಇಒ ಬ್ರಿಯಾನ್ ಹಂಫ್ರೈಸ್ ಘೋಷಿಸಿದ್ದಾರೆ. ಈ ಘೋಷಣೆ ಕೊರೋನಾದಿಂದ ಭಾರತದಲ್ಲಿ ಹೆಚ್ಚಾಗಿರುವ ನಿರುದ್ಯೋಗ ಏರಿಕೆ ಸಮಸ್ಯೆ ಒಂದು ಹಂತದಲ್ಲಿ ಬ್ರೇಕ್ ಹಾಕಲಿದೆ. 

ಕಳೆದ 6 ತಿಂಗಳಲ್ಲಿ ಕಾಗ್ನಿಜೆಂಟ್ ಕಂಪನಿ ವಿ ಆಕಾರದಲ್ಲಿ ಬೆಳವಣಿಗೆಯಾಗಿದೆ. 2021 ರ ಜೂನ್ 30 ಕ್ಕೆ ಕೊನೆಗೊಂಡ ಎರಡನೇ ತ್ರೈಮಾಸಿಕ ಆದಾಯದಲ್ಲಿ 15 ಪ್ರತಿಶತದಷ್ಟು ಹೆಚ್ಚಳ ಕಂಡಿದೆ. ಕಂಪನಿ ಆದಾಯ 6 4.6 ಶತಕೋಟಿಗೆ ತಲುಪಿದೆ ಎಂದು ಕಂಪನಿ ವರದಿ ಹೇಳಿದೆ. ಇದು ಇದುವರೆಗಿನ ತ್ರೈಮಾಸಿಕದ ಅತ್ಯಧಿಕ ಆದಾಯವಾಗಿದೆ ಮತ್ತು 2015 ರಿಂದೀಚೆಗೆ ಅತಿದೊಡ್ಡ ಶೇಕಡಾವಾರು ತ್ರೈಮಾಸಿಕ ಬೆಳವಣಿಗೆಯಾಗಿದೆ. 

7 ತಿಂಗಳ ಶ್ರಮ: Googleನಲ್ಲಿ 2 ಕೋಟಿ ರೂ. ವೇತನದ ಉದ್ಯೋಗ ಪಡೆದ ಹಳ್ಳಿ ಪ್ರತಿಭೆ!

ಡಿಜಿಟಲ್ ಆದಾಯವು ವರ್ಷದಿಂದ ವರ್ಷಕ್ಕೆ ಸುಮಾರು 20 ಪ್ರತಿಶತದಷ್ಟು ಹೆಚ್ಚಾಗಿದೆ. ಹೀಗಾಗಿ ಕಂಪನಿ ನೇಮಕಾತಿ ಸಾಮರ್ಥ್ಯವನ್ನು ಹೆಚ್ಚಿಸುತ್ತಿದೆ ಎಂದು ಬ್ರಿಯಾನ್ ಹಂಫ್ರೈಸ್ ಹೇಳಿದ್ದಾರೆ. ಕಾಗ್ನಿಜೆಂಟ್ ಕಂಪನಿ ತನ್ನ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ 3,00,000 ಕ್ಕಿಂತ ಹೆಚ್ಚು ಉದ್ಯೋಗಿಗಳನ್ನು ಹೊಂದಿದ ಹೆಗ್ಗಳಿಕೆಗೆ ಪಾತ್ರವಾಗಿದೆ. 
 

PREV
click me!

Recommended Stories

ಬೆಂಗಳೂರಿನ ಅಮರ್‌ ಸುಬ್ರಹ್ಮಣ್ಯ ಆಪಲ್‌ ಎಐ ಟೀಮ್‌ಗೆ ಉಪಾಧ್ಯಕ್ಷ!
ಸರಾಸರಿ ಮಾಸಿಕ ವೇತನ: ದೇಶದಲ್ಲಿಯೇ 2ನೇ ಸ್ಥಾನದಲ್ಲಿ ಕರ್ನಾಟಕ, ಸಿಗೋ ಸ್ಯಾಲರಿ ಎಷ್ಟು?