ಆರ್ಥಿಕ ಹಿಂಜರಿತ ಉಂಟಾದ್ರೆ, ಯಾವೆಲ್ಲ ಉದ್ಯೋಗಳು ಉಳಿಯಲಿವೆ?

By Suvarna News  |  First Published Jun 29, 2021, 4:07 PM IST

ಕೊರೊನಾದಿಂದಾಗಿ ಆರೋಗ್ಯ ಕ್ಷೇತ್ರ ಮಾದ ಹದಗೆಟ್ಟಿಲ್ಲ. ಬದಲಿದೆ ಇಡೀ ಆರ್ಥಿಕತೆಯ ಮೇಲೂ ದುಷ್ಪರಿಣಾಮ ಬೀರಿದೆ. ಇದರಿಂದಾಗಿ ಮುಂಬರುವ ಒಂದೂವರೆ ವರ್ಷದಲ್ಲಿ ಆರ್ಥಿಕ ಹಿಂಜರಿತ ಸಂಭವಿಸಬಹುದು ಎಂಬ ಲೆಕ್ಕಾಚಾರ ಶುರುವಾಗಿದ್ದು, ಯಾವೆಲ್ಲ ಉದ್ಯೋಗಗಳು ಸುರಕ್ಷಿತವಾಗಿರಬಹುದು ಎಂಬ ಚರ್ಚೆಗಳು ಶುರುವಾಗಿವೆ.


ಮಾರಣಾಂತಿಕ ವೈರಸ್ ಕೊರೊನಾ ಇಡೀ ಜಗತ್ತನ್ನೇ ತಲ್ಲಣಿಸಿಬಿಟ್ಟಿದೆ. ಹೋದ್ಯಾ ಪಿಶಾಚಿ ಅಂದ್ರೆ ಬಂದೆ ಗವಾಕ್ಷಿಲಿ ಅಂತ ರೂಪಾಂತರ ಪಡೆದು ಬರ್ತಾನೆ ಇದೆ. ಈ ಸಾಂಕ್ರಾಮಿಕ ರೋಗವು ಜಗತ್ತಿನಾದ್ಯಂತ ಲಕ್ಷಾಂತರ ಜನರನ್ನು ಬಲಿ ತೆಗೆದುಕೊಂಡಿದೆ. ಮನುಷ್ಯರ ಜೀವದ ಜೊತೆ ಚೆಲ್ಲಾಟವಾಡುತ್ತಿರೋ ಹೆಮ್ಮಾರಿ, ಆರ್ಥಿಕತೆ ಮೇಲೆ ಭಾರೀ ದುಷ್ಪರಿಣಾಮ ಬೀರಿದೆ. 

ಈಗಾಗಲೇ ಕೊರೊನಾದ 2 ಅಲೆಗಳ ಹೊಡೆತಕ್ಕೆ ಜಾಗತಿಕ ಆರ್ಥಿಕತೆಯೇ ತಲೆಕೆಳಗಾಗಿ ಹೋಗಿದೆ. ಭಾರತ, ಚೀನಾ ಅಷ್ಟೇ ಅಲ್ಲ, ಅಭಿವೃದ್ಧಿ ರಾಷ್ಟ್ರಗಳ ಆರ್ಥಿಕತೆಯನ್ನೇ ಕೊರೊನಾ ಬುಡಮೇಲಾಗಿಸಿದೆ. ಅದೆಷ್ಟೋ ಕಂಪನಿಗಳು ಮುಚ್ಚಿ ಹೋಗಿವೆ. ಸಹಸ್ರಾರು ಮಂದಿ ಕೆಲಸ ಕಳೆದುಕೊಂಡು ಮತ್ತೆ ನಿರುದ್ಯೋಗಿಗಳಾಗಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಜೀವ ಉಳಿಸಿಕೊಳ್ಳುವುದೊಂದೇ ಏಕೈಕ ಗುರಿಯಾಗಿದ್ದು, ಆರ್ಥಿಕ ಹೊಡೆತವನ್ನು ತಡೆದುಕೊಳ್ಳಲೇಬೇಕಾದ ಅನಿವಾರ್ಯತೆ ಎಲ್ಲ ದೇಶಗಳದ್ದು. 

Tap to resize

Latest Videos

undefined

ಕಾಲೇಜುಗಳಿಗೆ ಬೋಧಕರ ನೇಮಕಕ್ಕೆ ಸರ್ಕಾರ ಅನುಮತಿ

ಅಂದಹಾಗೇ ಮುಂದಿನ ಒಂದೂವರೆ ವರ್ಷದಲ್ಲಿ ಆರ್ಥಿಕ ಹಿಂಜರಿತ ಸಂಭವಿಸುವ ಸಾಧ್ಯತೆ ಶೇಕಡಾ ೬೦ಕ್ಕಿಂತ ಹೆಚ್ಚಿದೆ ಅಂತ ವರದಿಗಳು ಹೇಳುತ್ತಿವೆ. ಜಾಗತಿಕ ಹಣದುಬ್ಬರವು ಶೇಕಡಾವಾರು ಆರ್ಥಿಕತೆ ಹಿಂಜರಿತ ಏರಿಕೆಗೆ ಕಾರಣವಾಗಿದೆ ಅಂತ ಅರ್ಥಶಾಸ್ತ್ರಜ್ಞರು ಹೇಳುತ್ತಿದ್ದಾರೆ. ಒಂದು ವೇಳೆ ಆರ್ಥಿಕ ಹಿಂಜರಿತ ಸಂಭವಿಸಿದ್ರೆ ಅದನ್ನ ಎದುರಿಸಲು ನೀವು ಸಿದ್ಧರಿದ್ದೀರಾ? ಅಂಥ ಸಂದಿಗ್ಧ ಪರಿಸ್ಥಿತಿಯಲ್ಲೂ ಯಾವ ಉದ್ಯೋಗ ಸೇಫ್? ಯಾವ ಜಾಬ್ ಹೇಗೆ ಬದುಕುಳಿಯಬಹುದು ಎಂಬ ಬಗ್ಗೆ ಚರ್ಚೆಗಳು ಶುರುವಾಗಿವೆ.

ಬೋಧನಾ ಸಹಾಯಕ: ಜಾಗತಿಕ ಮಟ್ಟದಲ್ಲಿ ಅನೇಕ ವೃತ್ತಿಗಳಲ್ಲಿ ಶಿಕ್ಷಣವು ಕಡ್ಡಾಯವಾಗಿದೆ. ಅನೇಕ ವಿದ್ಯಾರ್ಥಿಗಳಿಗೆ ಶಿಕ್ಷಕನು ನೇರ ಗಮನ ನೀಡಬೇಕಾಗುತ್ತದೆ. ಹೀಗಾಗಿ  ವಿದ್ಯಾರ್ಥಿಗೆ ಸ್ವತಂತ್ರವಾಗಿ ಸಹಾಯ ಮಾಡಲು ಶಿಕ್ಷಕರ ಸಹಾಯಕರ ಅಗತ್ಯವಿರುತ್ತದೆ, ಆಗ ಶಿಕ್ಷಕನು ಉಳಿದ ತರಗತಿಗೆ ಕಲಿಸುವುದನ್ನು ಮುಂದುವರಿಸಬಹುದು. 

ಶಿಕ್ಷಕ ಉದ್ಯೋಗ: ಶಿಕ್ಷಕರು ಎಲ್ಲಾ ವಯಸ್ಸಿನ ಮಕ್ಕಳು ಮತ್ತು ವಿದ್ಯಾರ್ಥಿಗಳಲ್ಲಿ ಶಿಕ್ಷಣ, ಅಭಿವೃದ್ಧಿ ಮತ್ತು ನಾಯಕತ್ವ ಗುಣವನ್ನು ಬೆಳೆಸುತ್ತಾರೆ. ಬೋಧನೆಯು ಮರುಬಳಕೆಯ ಪ್ರಕ್ರಿಯೆಯಾಗಿದ್ದು, ಕಲಿಕಾ ವಿಧಾನದಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ. ಹೀಗಾಗಿ ಮುಂದಿನ ಆರ್ಥಿಕ ಹಿಂಜರಿತ ಸಂದರ್ಭದಲ್ಲೂ ಶಿಕ್ಷಕನ ಪಾತ್ರಕ್ಕೆ ಬಹಳ ಮಹತ್ವವಿರಲಿದೆ.

SSLC ಪಾಸಾದ ಹೆಣ್ಣುಮಕ್ಕಳಿಗೆ ಮಿಲಿಟರಿ ಸೇರಲು ಅವಕಾಶ, ಅರ್ಜಿ ಹಾಕಿ

ನರ್ಸ್, ಶುಶ್ರೂಷಕರು: ಆರ್ಥಿಕ ಹಿಂಜರಿತದ ಸಮಯದಲ್ಲಿ ಹೆಲ್ತ್‌ಕೇರ್ ಮತ್ತೊಂದು ಅನಿವಾರ್ಯ ವೃತ್ತಿಯ ಮಾರ್ಗವಾಗಿದೆ. ಆರ್ಥಿಕ ಹಿಂಜರಿತವು ಜಗತ್ತನ್ನೇ ಅಲುಗಾಡಿಸಬಹುದು. ಆದರೆ ನರ್ಸ್‌ಗಳ ಅವಶ್ಯಕತೆ ಹಾಗೇ ಹೆಚ್ಚುತ್ತಾ ಹೋಗುತ್ತದೆ. 

ವೈದ್ಯರ ಸಹಾಯಕರು:  ಆರ್ಥಿಕ ಹಿಂಜರಿತದ ಸಮಯದಲ್ಲಿ  ಆರೋಗ್ಯ ಕ್ಷೇತ್ರದಲ್ಲಿ ವೈದ್ಯರ ಸಹಾಯಕರು ಉತ್ತಮವಾಗಿ ಕಾರ್ಯನಿರ್ವಹಿಸುವ ನಿರೀಕ್ಷೆಯಿದೆ. ಜನರಿಗೆ ಆರೋಗ್ಯದ ರಕ್ಷಣೆ ಅತ್ಯಗತ್ಯ. ಹೀಗಾಗಿ ಆರೋಗ್ಯ ಸೇವೆ ಸದಾ ಇದ್ದೇ ಇರುತ್ತದೆ. ಸರಿಯಾದ ಶಿಕ್ಷಣವನ್ನು ಹೊಂದಿದ್ದರೆ ಮುಂದಿನ ಆರ್ಥಿಕ ಹಿಂಜರಿತದಲ್ಲೂ ನೀವು ಸುರಕ್ಷಿತವಾಗಿರಬಹುದು.

ಅಕೌಂಟೆಂಟ್:  ತೆರಿಗೆ ಪಾವತಿಸುವ ಸಂದರ್ಭದಲ್ಲಿ ಅಕೌಂಟೆಂಟ್ ಉದ್ಯೋಗ ಬಹಳ ಮಹತ್ವ ಪಡೆಯುತ್ತದೆ. ಒಂದು ವೇಳೆ ಆರ್ಥಿಕ ಹಿಂಜರಿತ ಉಂಟಾದರೆ ತೆರಿಗೆಗಳನ್ನ ಲೆಕ್ಕ ಮಾಡಲು, ಸರಿಯಾಗಿ ಸಂಖ್ಯೆಗಳನ್ನ ಗಮನಿಸಲು ಅಕೌಂಟೆಂಟ್‌ನನ್ನೇ ಅವಲಂಭಿಸಬೇಕು.

NCC ಸ್ಪೆಷಲ್ ಎಂಟ್ರಿ ಸ್ಕೀಮ್: ಸೇನೆ ಸೇರಲು ಸುವರ್ಣ ಅವಕಾಶ, ಅರ್ಜಿ ಹಾಕಿ

ಆಡಿಟರ್ಸ್:  ತೆರಿಗೆ ಸೀಸನ್‌ನಲ್ಲಿ ಅಕೌಂಟೆಂಟ್‌ನೊಂದಿಗೆ ವ್ಯವಹಾರಕ್ಕೆ ಹೋಗುವಾಗ ಸಂಖ್ಯೆಗಳು ಸರಿಯಾಗಿರಬೇಕು. ತೆರಿಗೆ ಪ್ರಕ್ರಿಯೆಯನ್ನು ಸರಿಯಾಗಿ ಮಾಡಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳಲು ಐಆರ್‌ಎಸ್ ಆಡಿಟರ್ ಅನ್ನು ಬಳಸುತ್ತದೆ. ಹೀಗಾಗಿ ಲೆಕ್ಕಪರಿಶೋಧಕನು ಮುಂದಿನ ಆರ್ಥಿಕ ಹಿಂಜರಿತದಿಂದ ಪಾರಾಗುವ ಸಾಧ್ಯತೆ ಇದೆ. 

ಯುಟಿಲಿಟಿ ವರ್ಕರ್ಸ್, ಪೌರ ಕಾರ್ಮಿಕರು: ವಿದ್ಯುತ್ ಲೈನ್ಸ್ ಎಳೆಯುವುದು, ರಸ್ತೆ ಕ್ಲೀನ್ ಮಾಡುವುದು ಇತ್ಯಾದಿ ಕೆಲಸ ನಿರ್ವಹಿಸುವ ಯುಟಿಲಿಟಿ ವರ್ಕರ್ಸ್ ಪಾತ್ರ ಜಗತ್ತಿನಾದ್ಯಂತ ಅತ್ಯಗತ್ಯ. ಹೀಗಾಗಿ ಮುಂದಿನ ಆರ್ಥಿಕ ಹಿಂಜರಿತದ ಹೊಡೆತಕ್ಕೆ ಅವರು ಸಿಲುಕುವುದಿಲ್ಲ. 

click me!