ಡಿಗ್ರಿ – ಡಿಪ್ಲೋಮಾ ಬೇಕಾಗಿಲ್ಲ.. ಈ ಕೆಲಸಕ್ಕೆ ತಿಂಗಳಿಗೆ ಸಿಗುತ್ತೆ 70 ಸಾವಿರ ಸಂಬಳ !

By Suvarna News  |  First Published Jan 11, 2024, 12:21 PM IST

ಕೆಲಸ ಸುಲಭವಾಗಿರಬೇಕು, ಸಿಕ್ಕಾಪಟ್ಟೆ ಸಂಬಳ ಬರಬೇಕು. ಇದು ಬಹುತೇಕ ಎಲ್ಲರ ಆಸೆ. ಇದು ಎಲ್ಲ ಕೆಲಸದಲ್ಲಿ ಸಾಧ್ಯವಿಲ್ಲ. ಕಷ್ಟಪಟ್ಟರೆ ಹಣ ಎನ್ನುವ ಸ್ಥಿತಿ ಈಗಿದೆ. ಆದ್ರೆ ಇಲ್ಲೊಂದು ಕೆಲಸ ಬಹಳ ಆಸಕ್ತಿಕರವಾಗಿದೆ. ಸಂಬಳದ ಜೊತೆ ಬಾಳೆ ಹಣ್ಣು ಸಿಗುತ್ತೆ.
 


ಕಷ್ಟಪಟ್ಟು ಕೆಲಸ ಮಾಡೋದು ಅನೇಕರಿಗೆ ಇಷ್ಟವಾಗೋದಿಲ್ಲ. ಆರಾಮವಾಗಿ ಕುಳಿತು ಕೆಲಸ ಮಾಡಿ ಲಕ್ಷಾಂತರ ರೂಪಾಯಿ ಹಣ ಸಂಪಾದನೆ ಮಾಡೋದು ಎಲ್ಲರಿಗೂ ಇಷ್ಟ. ಅಂಥ ಕೆಲಸವನ್ನು ಅನೇಕರು ಹುಡುಕುತ್ತಿರುತ್ತಾರೆ. ಅವರಿಗೆ ಒಂದು ಸುವರ್ಣಾವಕಾಶವಿದೆ. ಚೀನಾದ ಹೆಬೈ ಪ್ರಾಂತ್ಯದಲ್ಲಿ ಕೆಲಸದ ಅವಕಾಶವಿದೆ. ಸಾಮಾಜಿಕ ಮಾಧ್ಯಮದಲ್ಲಿ ಈ ಕೆಲಸದ ಬಗ್ಗೆ ಚರ್ಚೆಯಾಗ್ತಿದೆ.  

ಹೆಬೈ (Hebei) ಪ್ರಾಂತ್ಯದ ವುಝಿಶನ್ ಸಿನಿಕ್ ಏರಿಯಾ ಪ್ರವಾಸಿ ತಾಣವಾಗಿದೆ. ಅಲ್ಲಿ ಕೆಲಸದ ಅವಕಾಶವಿದೆ. ವುಝಿಶನ್ ಸಿನಿಕ್ ಏರಿಯಾ ಗುಹೆಯೊಳಗೆ ನೀವು ಕೆಲಸ ಮಾಡಬೇಕು. ಅಲ್ಲಿ ನೀವು ಮಂಕಿ ಕಿಂಗ್ (Monkey King) ಆಗಿ ಉದ್ಯೋಗ ಮಾಡಬೇಕಾಗುತ್ತದೆ. ಗುಹೆಯಲ್ಲೇ ನೀವು ಇರಬೇಕಾಗುತ್ತದೆ. ನಿಮ್ಮ ಶಿಫ್ಟ್ ಸಮಯದಲ್ಲಿ ನೀವು ಮಂಗದಂತಹ ವೇಷಭೂಷಣವನ್ನು ಧರಿಸಬೇಕು. 

Tap to resize

Latest Videos

ಗುಹೆ ಸ್ವಲ್ಪ ತೆರೆದಿರುತ್ತದೆ. ಅಲ್ಲಿ ನೀವು  ಪ್ರವಾಸಿಗರು ನೀಡುವ ಬಾಳೆಹಣ್ಣು, ನೂಡಲ್ಸ್ ಮತ್ತು ಬಿಸ್ಕತ್ತುಗಳನ್ನು ತಿನ್ನಬೇಕಾಗುತ್ತದೆ.  ಈ ಉದ್ಯೋಗ ಪಡೆಯಲು ನೀವು ಯಾವುದೇ ಪದವಿ-ಡಿಪ್ಲೊಮಾ ಹೊಂದಿರಬೇಕು ಎನ್ನುವ ಅನಿವಾರ್ಯತೆ ಇಲ್ಲ. ನಿಮಗೆ ಮಂಗದಂತೆ ವರ್ತಿಸುವ ಕಲೆ, ನಟನೆ ಗೊತ್ತಿರಬೇಕು. ಅಲ್ಲಿಗೆ ಬರುವ ಪ್ರವಾಸಿಗರನ್ನು ರಂಜಿಸೋದು ನಿಮ್ಮ ಕೆಲಸವಾಗಿರುತ್ತದೆ. ಹಾಗಾಗಿ ಹೇಗೆ ಪ್ರವಾಸಿಗರ ಮನಸ್ಸು ಕದಿಯಬೇಕು ಎನ್ನುವ  ಜ್ಞಾನ ನಿಮಗಿರಬೇಕು. 

ಈ ಭಾರತೀಯ ದಾನ ಕೊಟ್ಟಿದ್ದು ಬರೋಬ್ಬರಿ 8,29,734 ಕೋಟಿ ರೂ.ಗಳನ್ನು!

ಗುಹೆಯ ವ್ಯವಸ್ಥಾಪಕರು, ಕೆಲಸದ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಎರಡು ಶಿಫ್ಟ್ ನಲ್ಲಿ ಕೆಲಸ ಇರುತ್ತದೆ. ಕೆಲಸದ ಸಮಯದಲ್ಲಿ ನೀವು ಮಂಕಿ ವೇಷಭೂಷಣ ಧರಿಸೋದು ಅನಿವಾರ್ಯ. ನಿಮಗೆ ಚಳಿ ಆಗದಿರಲಿ ಎನ್ನುವ ಕಾರಣಕ್ಕೆ ಅಲ್ಲಿ ಹೀಟರ್ ಕೂಡ ಅಳವಡಿಸಲಾಗಿದೆ.  ಈಗಾಗಲೇ ಮಂಕಿ ಕಿಂಗ್ ಆಗಿ ಕೆಲಸ ಮಾಡುವ ಇಬ್ಬರ ನೇಮಕ ಆಗಿದೆ. ಇನ್ನೊಬ್ಬರ ಅಗತ್ಯ ಈದೆ. 

ಮಂಕಿ ಕಿಂಗ್ ಕೆಲಸಕ್ಕೆ ಎಷ್ಟು ಸಂಬಳ ? :  ನೀವು ಗುಹೆಯಲ್ಲಿ ಮಂಗದ ವೇಷಭೂಷಣ ಹಾಕಿಕೊಂಡು, ಪ್ರವಾಸಿಗರನ್ನು ರಂಜಿಸಿದ್ರೆ ನಿಮಗೆ  ತಿಂಗಳಿಗೆ 842 ಡಾಲರ್ ಅಂದರೆ ಸುಮಾರು 70 ಸಾವಿರ ರೂಪಾಯಿ ವೇತನ ಸಿಗುತ್ತದೆ. ಕೆಲಸಕ್ಕೆ ನೇಮಕವಾಗುವ ಜನರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚು ಚಿಂತಿಸುವ ಅಗತ್ಯವಿಲ್ಲ. ಅಲ್ಲಿ ನಿಮಗೆ ಬೇಕಾದ ಎಲ್ಲ ವಸ್ತುಗಳು ಲಭ್ಯವಿದೆ. ಅಲ್ಲಿರುವ ಆಹಾರದಲ್ಲಿ ಯಾವುದನ್ನು ಬೇಕಾದ್ರೂ ನೀವು ತಿನ್ನಬಹುದು. ಪ್ರವಾಸಿಗರು ನೀಡಿದ ಎಲ್ಲ ಬಾಳೆ ಹಣ್ಣು, ನೂಡಲ್ಸ್ ಗಳನ್ನು ನೀವು ತಿನ್ನಲೇಬೇಕು ಎನ್ನುವ ನಿಯಮವೂ ಇಲ್ಲ. ನೀವು ಅದನ್ನು ಅಗತ್ಯವೆನ್ನಿಸಿದ ಸಮಯದಲ್ಲಿ ತಿನ್ನಬಹುದು ಇಲ್ಲವೆ ಸಿಬ್ಬಂದಿಗೆ ಹಂಚಬಹುದು. 

ಮಂಕಿ ಕಿಂಗ್ ಗೆ ಪುರಾಣದ ನಂಟು : ಚೀನಾ ಪುರಾಣದಲ್ಲಿ ಮಂಕಿ ಕಿಂಗ್ ಬರುತ್ತದೆ. ಸುನ್ ವುಕಾಂಗ್ ಎಂಬಲ್ಲಿ ನೀವು ಮಂಕಿ ಕಿಂಗ್ ಕಥೆ ಕೇಳಬಹುದು. ಮಂಕಿ ಕಿಂಗ್ ಹುಟ್ಟು ಕಲ್ಲಿನಿಂದ ಆಗಿರುತ್ತದೆ.  ತೈ-ಚಿ  ಸಮರ ಕಲಾವಿದರಿಂದ ಕೆಲವು ಅಲೌಕಿಕ ಶಕ್ತಿಯನ್ನು ಪಡೆದುಕೊಳ್ಳುತ್ತಾರೆ. ಚಿನ್ನದ ಮಂತ್ರದಂಡ ಹಿಡಿದು ಮೋಡದ ಮೇಲೆ ಓಡಾಡುತ್ತಾರೆ. ಯೋಧರಂತೆ ಹೋರಾಡುತ್ತಾರೆ.  ಚೀನಾದಲ್ಲಿ ಮಂಕಿ ಕಿಂಗ್ ಹೆಚ್ಚು ಪ್ರಸಿದ್ಧಿ ಪಡೆದ ಪಾತ್ರವಾಗಿದೆ. ನೀವು ಸಿನಿಮಾ, ಧಾರಾವಾಹಿ ಮಕ್ಕಳ ಕಾರ್ಟೂನ್ ಗಳಲ್ಲಿ ಇದನ್ನು ನೋಡಬಹುದು.

ಅಂಬಾನಿ ಕುಟುಂಬದ ಪಾರ್ಟಿಗಳಲ್ಲಿ ಕಾಣಿಸಿಕೊಳ್ಳೋ ಬ್ಯೂಟಿ ಕ್ವೀನ್ ದಿಯಾ ಮೆಹ್ತಾ, ಯಾರು ಈ ಲೇಡಿ ಓರಿ?

ಸಾಮಾಜಿಕ ಜಾಲತಾಣದಲ್ಲಿ ಮಂಕಿ ಕಿಂಗ್ ಕೆಲಸ ಖಾಲಿ ಇದೆ ಎಂಬುದನ್ನು ನೋಡಿದ ಜನರು ತರತರಹದ ಕಮೆಂಟ್ ಮಾಡ್ತಿದ್ದಾರೆ. ಬೇಕಾದಷ್ಟು ತಿಂದು, ಒಳ್ಳೆ ಸಂಬಳ ಪಡೆಯುವ ಕೆಲಸ ಇದು ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ. ಟಿಕ್ ಟಾಕ್ ನಲ್ಲಿ ಈ ಕೆಲಸ ಮಾಡ್ತಿರುವವರ ವಿಡಿಯೋ ಕೂಡ ವೈರಲ್ ಆಗಿದ್ದು, ಮಂಕಿ ಕಿಂಗ್ ಕೆಲಸ ಮಾಡೋದು ನನಗೆ ಖುಷಿ ನೀಡಿದೆ ಎಂದು ಉದ್ಯೋಗಿ ವಿಡಿಯೋದಲ್ಲಿ ಹೇಳಿದ್ದನ್ನು ನೋಡಬಹುದು. 
 

click me!