ಎಜುಟೆಕ್ ಕಂಪನಿ ಬೈಜೂಸ್ ಈಗಾಗಲೇ ಅಕ್ಟೋಬರ್ 2022 ರಿಂದ ತನ್ನ ಉದ್ಯೋಗಿಗಳನ್ನು ವಜಾಗೊಳಿಸುವ ಪ್ರಕ್ರಿಯೆಯನ್ನು ನಡೆಸುತ್ತಾ ಬಂದಿದೆ. ಇದೀಗ ಮತ್ತೆ ಸುಮಾರು 5000 ಉದ್ಯೋಗಿಗಳನ್ನು ಬೈಜೂಸ್ ತೆಗೆದು ಹಾಕಲು ಯೋಜನೆ ರೂಪಿಸಿದೆ ಎಂದು ವರದಿ ತಿಳಿಸಿದೆ.
ಗೂಗಲ್ ಬಳಿಕ ನೂರಾರು ಉದ್ಯೋಗಿಗಳನ್ನು ವಜಾ ಮಾಡಿದ ಇತ್ತೀಚಿನ ಕಂಪನಿ ಎಂದರೆ ಅದು ಬೈಜೂಸ್. ಈ ಎಜುಟೆಕ್ ಕಂಪನಿಯು ಈಗಾಗಲೇ ಅಕ್ಟೋಬರ್ 2022 ರಿಂದ ತನ್ನ ಉದ್ಯೋಗಿಗಳನ್ನು ವಜಾಗೊಳಿಸುವ ಪ್ರಕ್ರಿಯೆಯನ್ನು ನಡೆಸುತ್ತಾ ಬಂದಿದೆ. ಇದೀಗ ಮತ್ತೆ ಸುಮಾರು 5000 ಉದ್ಯೋಗಿಗಳನ್ನು ಬೈಜೂಸ್ ತೆಗೆದು ಹಾಕಲು ಯೋಜನೆ ರೂಪಿಸಿದೆ ಎಂದು ವರದಿ ತಿಳಿಸಿದೆ.
ಕಳೆದವಾರ ಸಂಸ್ಥೆಯ ಹೊಸ ಸಿಇಒ ಆಗಿ ಅರ್ಜುನ್ ಮೋಹನ್ ಅವರ ನೇಮಕಗೊಂಡಿದ್ದರು ಅದರ ಬೆನ್ನಲ್ಲೇ ಈಗ ಉದ್ಯೋಗ ಕಡಿತದ ಸುದ್ದಿ ಹೊರಬಿದ್ದಿದೆ. ಮೋಹನ್ ಈ ಬಗ್ಗೆ ಸಂಸ್ಥೆಯ ಉದ್ಯೋಗಿಗಳಿಗೆ ಕಡಿತದ ಬಗ್ಗೆ ತಿಳಿಸಿದ್ದಾರೆ ಎಂದು ವರದಿ ತಿಳಿಸಿದೆ. ಟೆಕ್ಕ್ರಂಚ್ ಪ್ರಕಾರ ಬೈಜೂಸ್ ಕಂಪೆನಿಯನ್ನು ಮರುಸಂಘಟನೆ ಮಾಡಲು ಎಲ್ಲಾ ರೀತಿಯ ಪ್ರಯತ್ನವನ್ನು ಮಾಡುತ್ತಿದೆ. ಹೊಸ CEO ನಿರ್ದೇಶನದ ಅಡಿಯಲ್ಲಿ ಮರುಸಂಘಟನೆಗೆ ಕೆಲವು ನಿಯಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ತಿಳಿದುಬಂದಿದೆ. ಜೊತೆಗೆ ಬೈಜೂಸ್ ತನ್ನ ಅಂಗಸಂಸ್ಥೆಗಳ ಪುನರ್ ರಚನೆಗೆ ಮಾರಾಟ ಮಾಡಲು ಚಿಂತನೆ ನಡೆಸಿದೆ ಎಂದು ವರದಿಯಾಗಿದೆ.
undefined
ಟೆಕ್ ದೈತ್ಯ ಮೈಕ್ರೋಸಾಫ್ಟ್‌ನಲ್ಲಿ 50 ಲಕ್ಷ ರೂ. ಪ್ಯಾಕೇಜ್ ಉದ್ಯೋಗ ಪಡೆದು ಎಐಟಿಎಚ್ ವಿದ್ಯಾರ್ಥಿನಿ ಇತಿಹಾಸ!
ಆಪರೇಟಿಂಗ್ ರಚನೆಗಳನ್ನು ಸರಳೀಕರಿಸಲು, ವೆಚ್ಚವನ್ನು ಕಡಿಮೆ ಮಾಡಲು ಮತ್ತು ಉತ್ತಮ ಆರ್ಥಿಕ ಹರಿವಿನ ನಿರ್ವಹಣೆಗಾಗಿ ನಾವು ವ್ಯವಹಾರ ಪುನರ್ರಚನೆಯ ಅಂತಿಮ ಹಂತದಲ್ಲಿರುತ್ತೇವೆ, ಬೈಜೂಸ್‌ನ ಹೊಸ ಭಾರತದ ಸಿಇಒ ಅರ್ಜುನ್ ಮೋಹನ್ ಮುಂದಿನ ಕೆಲವು ವಾರಗಳಲ್ಲಿ ಈ ಪುಕ್ರಿಯೆಯನ್ನು ಪೂರ್ಣಗೊಳಿಸಲಿದ್ದಾರೆ ಮತ್ತು ಸುಧಾರಿತ ಮತ್ತು ಸುಸ್ಥಿರ ಕಾರ್ಯಾಚರಣೆಯನ್ನು ಮುನ್ನಡೆಸಲಿದ್ದಾರೆ ಎಂದ ಬೈಜೂಸ್ ವಕ್ತಾರರು ತಿಳಿಸಿದ್ದಾರೆ.
ಈ ತಿಂಗಳ ಆರಂಭದಲ್ಲಿ, ಬ್ರೆಜೂಸ್ ತನ್ನ ಸಂಪೂರ್ಣ ವಿವಾದಿತ 1.2 ಬಿಲಿಯನ್ ಡಾಲರ್ ಅವಧಿ ಸಾಲ ಬಿ ಅನ್ನು ಮುಂದಿನ ಆರು ತಿಂಗಳಲ್ಲಿ ಮರುಪಾವತಿಸಲು ತನ್ನ ಸಾಲದಾತರಿಗೆ ಪ್ರಸ್ತಾವನೆಯನ್ನು ಕಳುಹಿಸಿದೆ, ಮುಂದಿನ ಮೂರು ತಿಂಗಳಲ್ಲಿ 300 ಮಿಲಿಯನ್ ಡಾಲರ್ ಮುಂಗಡ ಪಾವತಿಯೊಂದಿಗೆ, ಕಂಪನಿಯು ತನ್ನ ಮರುಪಾವತಿ ಯೋಜನೆಗಳಿಗೆ ಧನಸಹಾಯ ನೀಡಲು ಎರಡು ಪ್ರಮುಖ ಸ್ವತ್ತುಗಳಾದ ಗ್ರೇಟ್ ಅರ್ನಿಂಗ್ ಮತ್ತು ಯುಎಸ್ ಮೂಲದ ಎಪಿಕ್ ಅನ್ನು ಮಾರಾಟ ಮಾಡಲು ಯೋಜಿಸುತ್ತಿರುವಾಗ ಅಂಗಸಂಸ್ಥೆಗಳನ್ನು ಪುನರ್ರಚಿಸಲು ನೋಡುತ್ತಿದೆ.
ಯುಎಸ್ ಮೂಲದ ಕಂಪೆನಿಯಿಂದ 1.35 ಕೋಟಿ ರೂ. ಪ್ಯಾಕೇಜ್ ಉದ್ಯೋಗ ಪಡೆದು ಬೆಂಗಳೂರು
ವಿದೇಶಿ ವಿನಿಮಯ ಕಾಯ್ದೆ (ಫೆಮಾ) ಉಲ್ಲಂಘನೆ ಆರೋಪದ ಹಿನ್ನೆಲೆಯಲ್ಲಿ ಪ್ರತಿಷ್ಠಿತ ಆನ್‌ಲೈನ್ ಟ್ಯೂಷನ್ ಸಂಸ್ಥೆ ಬೈಜೂಸ್‌ನ ಬೆಂಗಳೂರು ಕಚೇರಿ ಹಾಗೂ ಕಂಪನಿಯ ಮುಖ್ಯಸ್ಥ ಮತ್ತು ಮಾಜಿ ಸಿಇಒ ರವೀಂದ್ರನ್ ಬೈಜು ಅವರ ಬೆಂಗಳೂರು ನಿವಾಸದ ಮೇಲೆ ಜಾರಿ ನಿರ್ದೇಶನಾಲಯದ (ಇ.ಡಿ.) ಅಧಿಕಾರಿಗಳು ಕಳೆದ ಏಪ್ರಿಲ್ ಅಂತ್ಯದಲ್ಲಿ ದಾಳಿ ನಡೆಸಿ ಲ್ಯಾಪ್‌ಟಾಪ್ ಮತ್ತು ಅಗತ್ಯ ದಾಖಲೆಯನ್ನು ವಶಪಡಿಸಿಕೊಂಡರು. ಇದಾದ ಬಳಿಕ ಕಂಪೆನಿಗೆ ಬೃಹತ್ ಹೊಡೆತ ಬಿದ್ದಿದೆ.
ಬೆಂಗಳೂರಿನಲ್ಲಿ ಬೈಜೂಸ್‌ನ ನೋಂದಾಯಿತ ಮಾತೃ ಕಂಪನಿ ‘ಥಿಂಕ್ ಅಂಡ್ ಲರ್ನ್ ಪ್ರೈ.ಲಿ.’ನ ಎರಡು ಕಚೇರಿಗಳು ಹಾಗೂ ಮುಖ್ಯಸ್ಥ ರವೀಂದ್ರನ್ ಬೈಜು ಅವರ ಮನೆಯ ಮೇಲೆ ದಾಳಿ ನಡೆಸಿದಾಗ, ಕಂಪನಿಯ ಸಂಸ್ಥಾಪಕ ಮತ್ತು ಮಾಲೀಕ ರವೀಂದ್ರನ್ ಮತ್ತು ಅವರ ಕುಟುಂಬ ತಮ್ಮ ದುಬೈನ ಮನೆಯಲ್ಲಿದ್ದರು. ಸದ್ಯ ಕಂಪೆನಿ ಬಿಕ್ಕಟ್ಟಿನಲ್ಲಿದೆ.