ನಿರುದ್ಯೋಗಿಗಳಿಗೆ ಗುಡ್ ಆಫರ್: 3348 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

By Suvarna News  |  First Published Aug 22, 2020, 5:50 PM IST

ಭಾರತೀಯ ಪಶುಪಾಲನ್ ನಿಗಮ ನಿಯಮಿತ(BPNL) 2020ನೇ ಸಾಲಿನ ನೇಮಕಾತಿಗೆ ಅಧಿಸೂಚನೆ ಹೊರಡಿಸಿದ್ದು, ಈ ಬಗ್ಗೆ ಇನ್ನಷ್ಟು ಮಾಹಿತಿ ಈ ಕೆಳಗಿನಂತಿದೆ ನೋಡಿ. 


ನವದೆಹಲಿ, (ಆ. 22): ಭಾರತದೆಲ್ಲೆಡೆ ಖಾಲಿ ಇರುವ 3348 ಹುದ್ದೆಗಳಿಗೆ ಭಾರತೀಯ ಪಶುಪಾಲನ್ ನಿಗಮ ನಿಯಮಿತ (BPNL) ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ.

2700 ಸೇಲ್ಸ್ ಅಸಿಸ್ಟೆಂಟ್, 108 ಸೇಲ್ಸ್ ಮ್ಯಾನೇಜರ್ ಮತ್ತು 540 ಸೇಲ್ಸ್ ಡೆವಲಪ್ಮೆಂಟ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು,  ಆಸಕ್ತ ಮತ್ತು  ಅರ್ಹ ಅಭ್ಯರ್ಥಿಗಳು ಆರ್ಜಿಗಳನ್ನು ಆಗಸ್ಟ್ 31ರೊಳಗೆ ಸಲ್ಲಿಸಲು ಕೋರಲಾಗಿದೆ.

Tap to resize

Latest Videos

ಜಾಬ್ಸ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವಯೋಮಿತಿ: ಕನಿಷ್ಠ ವಯಸ್ಸು 18 ವರ್ಷ ಗರಿಷ್ಠ ವಯಸ್ಸು 45 ವರ್ಷ 

ಅರ್ಜಿ ಶುಲ್ಕ: 
* ಸೇಲ್ಸ್ ಮ್ಯಾನೇಜರ್: 826ರೂ. 
* ಸೇಲ್ಸ್ ಡೆವಲಪ್ಮೆಂಟ್ ಅಧಿಕಾರಿ: 708 ರೂ. 
* ಸೇಲ್ಸ್ ಸಹಾಯಕ: 590 ರೂ.

 ವಿದ್ಯಾರ್ಹತೆ: ಸರ್ಕಾರದಿಂದ ಮಾನ್ಯತೆ ಪಡೆದ ವಿದ್ಯಾಸಂಸ್ಥೆಯಿಂದ 10, 12ನೇ ತರಗತಿ ಉತ್ತೀರ್ಣ, ವಿಶ್ವವಿದ್ಯಾಲಯದಿಂದ ಪದವಿ.

ನೇಮಕಾತಿ ಪ್ರಕ್ರಿಯೆ: ವೈಯಕ್ತಿಕ ಸಂದರ್ಶನ ಮೂಲಕ ಈ ಹುದ್ದೆಗಳಿಗೆ ಅಭ್ಯರ್ಥಿಗಳನ್ನ ಆಯ್ಕೆ ಮಡಲಾಗುತ್ತದೆ. 

ಅರ್ಜಿ ಸಲ್ಲಿಸುವ ವಿಧಾನ ಹಾಗೂ ಇನ್ನಿತರ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

click me!