ಭವಿಷ್ಯ ಹೇಳೋ ಸ್ಟಾರ್ಟಪ್‌ಗೆ ದಿನಕ್ಕೆ 14 ಲಕ್ಷ ಬ್ಯುಸಿನೆಸ್ಸು!

By Suvarna NewsFirst Published May 30, 2020, 6:33 PM IST
Highlights

ಕೊರೋನಾ ವೈರಸ್‌ ಹಾವಳಿ ಹೆಚ್ಚು ಕಡಿಮೆ ಎಲ್ಲ ಇಂಡಸ್ಟ್ರಿಗಳನ್ನೂ ಮಕಾಡೆ ಮಲಗಿಸಿದೆ. ಅದರೆ ಒಂದು ಉದ್ಯಮ ಮಾತ್ರ ಚುರುಕಾಗಿದೆ. ದಿಲ್ಲಿ ಮೂಲದ ಒಂದು ಜ್ಯೋತಿಷ್ಯ ಹೇಳುವ ಸ್ಟಾರ್ಟಪ್‌ ಕಂಪನಿ, ಈ ಲಾಕ್ಡೌನ್‌ ಕಾಲದಲ್ಲಿ ಪ್ರತಿದಿನ ಸುಮಾರು 14 ಲಕ್ಷ ರೂಪಾಯಿಯಷ್ಟು ಬ್ಯುಸಿನೆಸ್‌ ಮಾಡಿದೆಯಂತೆ!

ಕೊರೋನಾ ವೈರಸ್‌ ಹಾವಳಿ ಹೆಚ್ಚು ಕಡಿಮೆ ಎಲ್ಲ ಇಂಡಸ್ಟ್ರಿಗಳನ್ನೂ ಮಕಾಡೆ ಮಲಗಿಸಿದೆ. ಯಾವುದೇ ಉದ್ಯಮ ಇದರಿಂದ ಹೊರತಾಗಿಲ್ಲ. ಅದರೆ ಒಂದು ಉದ್ಯಮ ಮಾತ್ರ ಚುರುಕಾಗಿದೆ. ಅದ್ಯಾವುದು ಗೊತ್ತಾ? ಜ್ಯೋತಿಷ್ಯ ಅಥವಾ ಭವಿಷ್ಯ! ಇದಕ್ಕೆ ಉದಾಹರಣೆ ಕಣ್ಣ ಮುಂದೆಯೇ ಇದೆ. ದಿಲ್ಲಿ ಮೂಲದ ಒಂದು ಜ್ಯೋತಿಷ್ಯ ಹೇಳುವ ಸ್ಟಾರ್ಟಪ್‌ ಕಂಪನಿ, ಈ ಲಾಕ್ಡೌನ್‌ ಕಾಲದಲ್ಲಿ ಪ್ರತಿದಿನ ಸುಮಾರು 14 ಲಕ್ಷ ರೂಪಾಯಿಯಷ್ಟು ಬ್ಯುಸಿನೆಸ್‌ ಮಾಡಿದೆಯಂತೆ!
 

ಇದಕ್ಕೆ ಕಾರಣ ಊಹಿಸುವುದು ಸುಲಭ. ಎಲ್ಲರಿಗೂ ಈಗ ಭವಿಷ್ಯದ ಬಗ್ಗೆ ಆತಂಕವಿದೆ. ಮುಂದೇನಾಗಲಿದೆ ಎಂಬುದು ಯಾರಿಗೂ ಗೊತ್ತಿಲ್ಲ. ಆರೋಗ್ಯ, ಹಣ, ಕೆರಿಯರ್‌, ಉದ್ಯೋಗ, ಕಂಪನಿ, ಎಲ್ಲದರಲ್ಲೂ ಅನಿಶ್ಚಿತತೆ. ಯಾವಾಗ ಕೆಲಸದಿಂದ ತೆಗೆಯುತ್ತಾರೋ, ಸಂಬಳದಲ್ಲಿ ಎಷ್ಟು ಕಡಿತವಾಗುತ್ತದೋ, ಕೆಲಸದಿಂದ ತೆಗೆದರೆ ಮುಂದೇನು ಮಾಡಬಹುದೋ ಗೊತ್ತಿಲ್ಲ. ಇಂಥ ಸಂದರ್ಭದಲ್ಲಿ ಊಹೆಗೇ ಕೆಲಸ. ಜ್ಯೋತಿಷ್ಯ ಹೇಳುವವರು, ಭವಿಷ್ಯ ಹೇಳುವವರಿಗೆ ಇಂಥ ಸಂದರ್ಭದಲ್ಲಿ ಹೆಚ್ಚು ಬೇಡಿಕೆ ಸೃಷ್ಟಿಯಾಗುವುದು ಸಹಜ.

ಇಂಥ ಸನ್ನಿವೇಶವನ್ನು ಎನ್‌ಕ್ಯಾಶ್‌ ಮಾಡಿಕೊಂಡವರು ದಿಲ್ಲಿ ಮೂಲದ ಆಸ್ಟ್ರೋಟಾಕ್‌ ಎಂಬ ಜ್ಯೋತಿಷ್ಯ ಸೇವೆ ಒದಗಿಸುವ ಕಂಪನಿ. ಇವರು 2017ರಲ್ಲೇ ಕಂಪನಿ ಆಋಂಭಿಸಿದ್ದರು. ಆದರೆ ಲಾಕ್‌ಡೌನ್‌ ಕಾಲದಲ್ಲಿ ಇವರ ವ್ಯಾಪಾರ ದುಪ್ಪಟ್ಟು ಆಯಿತು. ಕಳೆದ ನವೆಂಬರ್‌ ವರೆಗೆ ದಿನಕ್ಕೆ ಸುಮಾರು 5 ಲಕ್ಷದಷ್ಟು ಬ್ಯುಸಿನೆಸ್ ಆಗುತ್ತಿತ್ತು. ಈಗ ಅದು ದಿನಕ್ಕೆ ಸುಮಾರು 14 ಲಕ್ಷಕ್ಕೆ ಬಂದು ನಿಂತಿದೆ! ಒಂದು ದಿನದಲ್ಲಿ 17  ಲಕ್ಷಕ್ಕೆ ತಲುಪಿದ್ದೂ ಉಂಟಂತೆ! ಇದು ಹಲವಾರು ಜ್ಯೋತಿಷ್ಯ ಸೇವೆಗಳನ್ನು ನೀಡುತ್ತದೆ. ವೆಬ್‌ ಮೂಲಕ, ಫೋನ್‌ನಲ್ಲಿ, ನೇರವಾಗಿ ಇತ್ಯಾದಿ. ವಿಶೇಷವೆಂದರೆ ಇವರ ಗ್ರಾಹಕರಲ್ಲಿ ಹೆಚ್ಚಿನವರು ಯುವಕರು- 22ರಿಂದ 40 ವರ್ಷ ವಯಸ್ಸಿನವರು. ಇವರು ಕೇಳುವ ಪ್ರಶ್ನೆಗಳು ಸಾಮಾನ್ಯವಾಗಿ ಕೆಲಸಕ್ಕೆ ಸಂಬಂಧಿಸಿದ ಆತಂಕ, ಸಂಬಂಧಗಳ ಬಗೆಗಿನ ಪ್ರಶ್ನೆಗಳು, ಕೆರಿಯರ್‌ ಬಗೆಗಿನ ಆತಂಕಗಳು, ಹಣಕಾಸಿನ ಬಿಕ್ಕಟ್ಟಿನ ಬಗ್ಗೆ ಇತ್ಯಾದಿ ಆಗಿರುತ್ತವಂತೆ.

 

#ExcelCourse ಮಾಡಿ ಉದ್ಯೋಗಾವಕಾಶ ಹೆಚ್ಚಿಸಿಕೊಳ್ಳಿ

 

ಈ ಸ್ಟಾರ್ಟಪ್‌ನಲ್ಲಿ ಹಲವಾರು ಮಂದಿ ಭವಿಷ್ಯ, ಜ್ಯೋತಿಷ್ಯ ತಜ್ಞರು ಇದ್ದಾರೆ. ಲಾಕ್‌ಡೌನ್‌ಗೂ ಮೊದಲು ಇವರಿಗೆ ಹೆಚ್ಚು ಕೆಲಸ ಇರಲಿಲ್ಲ. ಕೆಲಸ ಒದಗಿಸುವಂತೆ ಮಾಲಿಕನಿಗೆ ದುಂಬಾಲು ಬೀಳುತ್ತಿದ್ದರು. ಆದರೆ ಈಗ ಪ್ರಶ್ನೆಗಳ ಪ್ರವಾಹ ಹೆಚ್ಚಿದೆ, ತಜ್ಞರೇ ಸಾಕಷ್ಟಿಲ್ಲ ಎಂಬಂತಾಗಿದೆ. ಕೆಲವು ಜ್ಯೋತಿಷಿಗಳು ದಿನಕ್ಕೆ 12 ಗಂಟೆ ದುಡಿದರೂ ಮುಗಿಯುತ್ತಿಲ್ಲ ಎಂದು ಹೇಳುತ್ತಿದ್ದಾರಂತೆ. ಇವರ ವೆಬ್‌ಸೈಟ್‌ನಲ್ಲಿ ಹತ್ತು ರೂಪಾಯಿಯಿಂದ ಹಿಡಿದು ಇನ್ನೂರು ರೂಪಾಯಿಯವರೆಗೆ ಹಲವು ಬಗೆಯ ಜ್ಯೋತಿಷ್ಯ ಪ್ಯಾಕೇಜ್‌ಗಳಿವೆ. ಹೆಚ್ಚಿನವರು ಫೋನ್‌ ಚಾಟ್‌ನಲ್ಲಿ ಉತ್ತರ ಪಡೆಯಲು ಇಷ್ಟಪಡುತ್ತಾರೆ. ನೇರಾನೇರ ಆಗಮಿಸುವವರು, ಫೋನ್‌ ಮಾಡುವವರು ಕಡಿಮೆ. ದಿನಭವಿಷ್ಯವೂ ಇವರ ವೆಬ್‌ಸೈಟ್‌ನಲ್ಲಿ ಇದೆ.

 

ಆತಂಕದಲ್ಲಿದ್ದ ಮಂದಿಗೆ ಅಮೇಜಾನ್‌ ಆಫರ್; 50ಸಾವಿರ ಉದ್ಯೋಗವಕಾಶ!

 

ದಿಲ್ಲಿ ಮೂಲದ ಪುನೀತ್‌ ಗುಪ್ತಾ ಎಂಬವರು ಈ ಸ್ಟಾರ್ಟಪ್‌ ಅನ್ನು 2017ರಲ್ಲಿ ಆರಂಭಿಸಿದ್ದರು. ಎರಡು ವರ್ಷ ಯಾವುದೇ ಹೇಳಿಕೊಳ್ಳುವಂಥ ಬ್ಯುಸಿನೆಸ್‌ ಆಗಿರಲಿಲ್ಲ. ಆದರೆ ಈಗ ಬ್ಯುಸಿನೆಸ್‌ ಪ್ರವಾಹದಂತೆ ಹರಿದುಬರುತ್ತಿದೆ. ಇದು ಜ್ಯೋತಿಷ್ಯ ಸ್ಟಾರ್ಟಪ್‌ಗಳಲ್ಲೇ ಆಸ್ಟ್ರೋಟಾಕ್‌ ಅನ್ನು ಮುಂಚೂಣಿಯಲ್ಲಿ ನಿಲ್ಲಿಸಿದೆ. ಈ ಕ್ಷೇತ್ರದಲ್ಲಿ ಸಾಕಷ್ಟು ಬ್ಯುಸಿನೆಸ್‌ ಇದೆ. ಅದು ಈಗ ಗೊತ್ತಾಗುತ್ತಿದೆ. ಹಿಂದೆ ಯಾರೂ ಪ್ರಯತ್ನಿಸಿರಲಿಲ್ಲ. ಈಗಿನ ಸನ್ನಿವೇಶ ಇಂಥ ಉದ್ಯಮಕ್ಕೆ ಪೂರಕವಾಗುವಂತೆ ಇದೆ ಎನ್ನುತ್ತಾರೆ ಪವನ್‌. ಜ್ಯೋತಿಷ್ಯಶಾಸ್ತ್ರ ವಿಜ್ಞಾನವೇ ಅಥವಾ ನಿಜವೇ ಎಂಬಂಥ ಪ್ರಶ್ನೆಗಳನ್ನು ಇವರಲ್ಲಿ ಕೇಳಬಾರದು. ತನಗಂತೂ ಇದರಿಂದ ತುಂಬಾ ನೆರವಾಗಿದೆ ಎನ್ನುತ್ತಾರೆ ಪವನ್.

ಕೃಪೆ: ಯುವರ್‌ಸ್ಟೋರಿ ಡಾಟ್‌ಕಾಮ್‌
 

ನಾಲ್ಕು ಮಕ್ಕಳನ್ನು ಹೆತ್ತೂ ಕನ್ಯತ್ವ ಉಳಿಸಿಕೊಂಡ ಹೆಣ್ಣಿವಳು!

click me!