ಸದ್ಯದಲ್ಲೇ ಉದ್ಯೋಗದ ಬಗ್ಗೆ ಸ್ವಯಂ ಚಾಲಿತವಾಗಿ ತಿಳಿಸುವ ಕೃತಕ ಬುದ್ದಿಮತ್ತೆ ಆಧಾರಿತ ತಂತ್ರಜ್ಞಾನ: ಅಶ್ವತ್ಥನಾರಾಯಣ

By Suvarna News  |  First Published Feb 19, 2022, 8:25 PM IST

ಸದ್ಯದಲ್ಲೇ ಉದ್ಯೋಗದ ಬಗ್ಗೆ ಸ್ವಯಂ ಚಾಲಿತವಾಗಿ ತಿಳಿಸುವ ಕೃತಕ ಬುದ್ದಿಮತ್ತೆ ಆಧಾರಿತ ತಂತ್ರಜ್ಞಾನ ವೇದಿಕೆಯನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಕೌಶಲ್ಯಾಭಿವೃದ್ಧಿ ಸಚಿವ ಡಾ. ಸಿ.ಎನ್. ಅಶ್ವತ್ಥ ನಾರಾಯಣ ಹೇಳಿದ್ದಾರೆ. 


ಬೆಂಗಳೂರು (ಫೆ.19): ಉದ್ಯೋಗವಕಾಶಗಳ  ಬಗ್ಗೆ ಯುವಜನರಿಗೆ ಸ್ವಯಂ ಚಾಲಿತವಾಗಿ ತಿಳಿಸುವ ಕೃತಕ ಬುದ್ದಿಮತ್ತೆ ಆಧಾರಿತ ತಂತ್ರಜ್ಞಾನ ವೇದಿಕೆಯನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಕೌಶಲ್ಯಾಭಿವೃದ್ಧಿ ಸಚಿವ (Skill Development and Entrepreneurship Minister) ಡಾ. ಸಿ.ಎನ್. ಅಶ್ವತ್ಥ ನಾರಾಯಣ (C N Ashwath Narayan) ಅವರು ಹೇಳಿದ್ದಾರೆ.

ವಿದ್ಯುತ್ ಚಾಲಿತ ವಾಹನ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಓರಿಯಂಟೇಶನ್ ಮತ್ತು ನೋಂದಣಿ ಹಾಗೂ ಉದ್ಯೋಗಾವಕಾಶ ಕುರಿತು  ಮಲ್ಲೇಶ್ವರಂ ಕೌಶಲ್ಯ ಕೇಂದ್ರ ಹಾಗೂ ಡಾ. ಸಿ.ಎನ್. ಅಶ್ವತ್ಥ ನಾರಾಯಣ ಪ್ರತಿಷ್ಠಾನಗಳ ಸಹಯೋಗದಲ್ಲಿ ನಡೆದೆ ಕಾರ್ಯಕ್ರಮಕ್ಕೆ ಶುಕ್ರವಾರ ಚಾಲನೆ ನೀಡಿ ಮಾತನಾಡಿದ ಅವರು,  ಉದ್ದೇಶಿತ ನೂತನ ವ್ಯವಸ್ಥೆಯಲ್ಲಿ ವಿದ್ಯಾರ್ಥಿಗಳು ವೈಯಕ್ತಿಕ ವಿವರಗಳನ್ನು ಒಮ್ಮೆ ಅಪ್ಲೋಡ್ ಮಾಡಿದರೆ, ನಂತರದ ದಿನಗಳಲ್ಲಿ ಉದ್ಯೋಗಾವಕಾಶಗಳ ಬಗ್ಗೆ ತನ್ನಿಂತಾನೇ ಮಾಹಿತಿ ಲಭ್ಯವಾಗಲಿದೆ ಎಂದರು.

Tap to resize

Latest Videos

undefined

Coal India Limited Recruitment 2022: ಕೋಲ್ ಇಂಡಿಯಾ ಲಿಮಿಟೆಡ್‌ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ

ರಾಜ್ಯದಲ್ಲಿ ಈಗಾಗಲೇ ರಾಷ್ಟ್ರೀಯ ನೂತನ ಶಿಕ್ಷಣ ನೀತಿ ಪ್ರಕಾರ, ಉನ್ನತ ಶಿಕ್ಷಣವನ್ನು ಡಿಜಿಟಲೀಕರಣಗೊಳಿಸಲಾಗಿದೆ. ಈಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ,  ವರ್ಚುಯಲ್ ರೂಪಾಂತರಕ್ಕೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಇದಕ್ಕೆ ತಕ್ಕಂತೆ ಪಠ್ಯಕ್ರಮ ಮತ್ತು ಬೋಧನಾ ಕ್ರಮಗಳನೆಲ್ಲ ಮೇಲ್ದರ್ಜೇರಿಸಲಾಗುವುದು.ಈ  ಹೊಸ ರೀತಿಯ ಕಲಿಕೆಗೆ ವಿದ್ಯಾರ್ಥಿಗಳು ಸಿದ್ಧರಾಗಬೇಕು ಎಂದು ಅವರು ನುಡಿದರು.

 

ನಮ್ಮ ಮಲ್ಲೇಶ್ವರದ ನಾರಾಯಣ ತರಬೇತಿ ಕೇಂದ್ರದಲ್ಲಿ Orientation, Registration for Skill Development & Placement Opportunity on Electric Vehicle ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಾಯಿತು.

ಸರ್ವರಿಗೂ ಉದ್ಯೋಗ ಕಲ್ಪಿಸುವ ಧ್ಯೇಯದೊಂದಿಗೆ ಕೌಶಲ್ಯ ತರಬೇತಿಯ ಜತೆ ಶಿಕ್ಷಣ ಸುಧಾರಣೆಗೂ ಒತ್ತು ನೀಡಲಾಗುತ್ತಿದೆ. pic.twitter.com/TUXM2BiKt6

— Dr. Ashwathnarayan C. N. (@drashwathcn)

ಕೃತಕ ಬುದ್ದಿಮತ್ತೆ, ಡೇಟಾ ಅನಲೆಟಿಕ್ಸ್ ಬ್ಲ್ಯಾಕ್ ಚೈನ್,  ರೋಬೋಟಿಕ್ಸ್, ಐಓಟಿ ಜ್ಞಾನಧಾರೆಗಳು ಇಂದು ಜಗತ್ತನ್ನು ಆಳುತ್ತಿವೆ. ಆದ್ದರಿಂದ ಯುವಜನರು ಉದ್ಯಮ ಲೋಕದ ಬೇಡಿಕೆಗೆ ತಕ್ಕಂತೆ ಕೌಶಲ್ಯಗಳನ್ನು ರೂಡಿಸಿಕೊಳ್ಳಬೇಕು ಎಂದು ಸಚಿವರು ಕರೆ ನೀಡಿದರು.

EIL RECRUITMENT 2022: ಇಂಜಿನಿಯರಿಂಗ್ ಪದವೀಧರರಿಗೆ ಇಂಜಿನಿಯರ್ಸ್ ಇಂಡಿಯಾ ಲಿಮಿಟೆಡ್ ನಲ್ಲಿ ಉದ್ಯೋಗವಕಾಶ

ಅತಿಥಿ ಶಿಕ್ಷಕರ ಕಾಯಂ: ಸಚಿವ ಕೋಟ ಹೇಳಿದ್ದಿಷ್ಟು: ಸಮಾಜ ಕಲ್ಯಾಣ ಇಲಾಖೆಯ(Department of Social Welfare) ವಸತಿ ಶಾಲೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅತಿಥಿ ಶಿಕ್ಷಕರನ್ನು ಕಾಯಂಗೊಳಿಸಲು ಸಾಧ್ಯವಿಲ್ಲ ಎಂದು ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ(Kota Shrinivas Poojari) ತಿಳಿಸಿದ್ದಾರೆ.

ಜೆಡಿಎಸ್‌(JDS) ಸದಸ್ಯ ಕೆ.ಟಿ. ಶ್ರೀಕಂಠೇಗೌಡ ಅವರ ಪ್ರಶ್ನೆಗೆ ಉತ್ತರಿಸಿರುವ ಅವರು, ನ್ಯಾಯಾಲಯದ(Court) ಆದೇಶದಂತೆ ಅತಿಥಿ ಶಿಕ್ಷಕರ(Guest Teachers) ಮನವಿ ಪರಿಶೀಲಿಸಿ, ಅತಿಥಿ ಶಿಕ್ಷಕರನ್ನು ಪೂರ್ಣ ಕಾಲಿಕ ಶಿಕ್ಷಕರನ್ನಾಗಿ ಕಾಯಂ ಗೊಳಿಸಲು ನಿಯಮಾನುಸಾರ ಅವಕಾಶವಿರುವುದಿಲ್ಲ ಎಂದು ಹಿಂಬರಹ ನೀಡಲಾಗಿರುತ್ತದೆ ಎಂದರು.

ಪ್ರಸ್ತುತ ಕರ್ನಾಟಕ ವಸತಿ ಶಿಕ್ಷಣ (Education) ಸಂಸ್ಥೆಗಳ ಸಂಘದ ವ್ಯಾಪ್ತಿಯಲ್ಲಿ 826 ವಸತಿ ಶಾಲೆ/ಕಾಲೇಜುಗಳು ಕಾರ್ಯನಿರ್ವಹಿಸಿತ್ತಿದ್ದು, ಇಲ್ಲಿ 2213 ಅತಿಥಿ ಶಿಕ್ಷಕರು/ಉಪನ್ಯಾಸಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ಸಂಘದ ಅಡಿಯಲ್ಲಿನ ವಸತಿ ಶಾಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅತಿಥಿ ಶಿಕ್ಷಕರಿಗೆ ತಿಂಗಳಿಗೆ 10 ಸಾವಿರ ರು. ವಸತಿ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರಿಗೆ 12 ಸಾವಿರ ರು. ನೀಡಲಾಗುತ್ತಿದೆ. ಅವರು ಕರ್ತವ್ಯ ನಿರ್ವಹಿಸಿದ ಅವಧಿಗೆ ವೇತನ ಪಾವತಿಸಲಾಗಿದೆ ಎಂದು ಸಚಿವರು ತಿಳಿಸಿದರು.

click me!