Twitter CEO Paternity Leave: ಎರಡನೇ ಮಗುವಿನ ನಿರೀಕ್ಷೆಯಲ್ಲಿ ಪಿತೃತ್ವ ರಜೆ ಪಡೆದ ಟ್ವಿಟ್ಟರ್‌ ಸಿಇಓ ಅಗರವಾಲ್‌

By Suvarna News  |  First Published Feb 19, 2022, 3:40 PM IST

ಭಾರತ ಮೂಲದ ಪರಾಗ್‌ ಅಗರವಾಲ್‌ ಟ್ವಿಟ್ಟರ್‌ನ  ನೂತನ ಸಿಇಓ ತಮ್ಮ ಎರಡನೇ ಮಗುವಿಗೆ ಆಗಮನದ ಸಂತಸದಲ್ಲಿದ್ದು, ಅದನ್ನು ಸ್ವಾಗತಿಸುವ ಸಲುವಾಗಿ 5 ವಾರಗಳ ಪಿತೃತ್ವ ರಜೆ ತೆಗೆದುಕೊಳ್ಳಲು ಮುಂದಾಗಿದ್ದಾರೆ.


ನವದೆಹಲಿ(ಫೆ.19): ಮೂರು ತಿಂಗಳ ಹಿಂದೆ ಭಾರತ ಮೂಲದ ಪರಾಗ್‌ ಅಗರವಾಲ್‌ ಟ್ವಿಟ್ಟರ್‌ನ (Twitter CEO Parag Agrawal) ನೂತನ ಸಿಇಓ ಆಗಿ ನೇಮಕಗೊಂಡಿದ್ದರು. ಇದೀಗ ಅವರು  ತಮ್ಮ ಎರಡನೇ ಮಗುವಿಗೆ ಆಗಮನದ ಸಂತಸದಲ್ಲಿದ್ದು, ಅದನ್ನು ಸ್ವಾಗತಿಸುವ ಸಲುವಾಗಿ 5 ವಾರಗಳ ಪಿತೃತ್ವ ರಜೆ (Paternity Leave) ತೆಗೆದುಕೊಳ್ಳಲು ಮುಂದಾಗಿದ್ದಾರೆ.

ಕಳೆದ ವರ್ಷ ನವೆಂಬರ್ 29 ರಂದು ಜಾಕ್‌ ಡೊರ್ಸಿ( Jack Dorsey) ಅವರು ಟ್ವಿಟ್ಟರ್‌ನ ಸಿಇಒ ಸ್ಥಾನದಿಂದ ಕೆಳಗಿಳಿದ ಬಳಿಕ ಭಾರತೀಯ ಮೂಲದ ಟೆಕ್ಕಿ ಪರಾಗ್‌  ಅವರನ್ನು  ಸಿಇಒ ಆಗಿ ನೇಮಿಸಲಾಯಿತು. 

Latest Videos

undefined

37 ವರ್ಷದ ಪರಾಗ್‌ ಅಗರವಾಲ್‌   ತನ್ನ ಎರಡನೇ ಮಗುವನ್ನು ಸ್ವಾಗತಿಸುವ ಹಿನ್ನೆಲೆಯಲ್ಲಿ ಕೆಲವು ವಾರಗಳ ವಿರಾಮವನ್ನು ತೆಗೆದುಕೊಳ್ಳುವ ಸಲುವಾಗಿ ಎಲ್ಲರಂತೆ ಪಿತೃತ್ವ ರಜೆಯನ್ನು ಬಳಸಿಕೊಳ್ಳುತ್ತಿದ್ದಾರೆ.

South East Central Railway Recruitment 2022: ಕ್ರೀಡಾ ಅಭ್ಯರ್ಥಿಗಳಿಗೆ ರೈಲ್ವೆ ಇಲಾಖೆ

ಪರಾಗ್‌ ಅಗರವಾಲ್‌ ಪಿತೃತ್ವ ರಜೆ ತೆಗೆದುಕೊಳ್ಳುವ ಸುದ್ದಿಯನ್ನು ಟ್ವಿಟ್ಟರ್ ತನ್ನ ಅಧಿಕೃತ ಖಾತೆಯಿಂದ ಟ್ವೀಟ್ ಮಾಡಿ ಮಾಹಿತಿ ಹಂಚಿಕೊಂಡಿದೆ. " ಸಂಸ್ಥೆಯನ್ನು ಮುನ್ನಡೆಸುವ ಉನ್ನತ ವ್ಯಕ್ತಿಯೊಬ್ಬರು ಪಿತೃತ್ವ ರಜೆಯನ್ನು ತೆಗೆದುಕೊಳ್ಳುತ್ತಿದ್ದು, ಕಂಪೆನಿಯಲ್ಲಿ ಈ ಸೌಲಭ್ಯವಿದೆ. ಇದು ಉಳಿದ ಎಲ್ಲಾ ಉದ್ಯೋಗಿಗಳಿಗೆ ಇದೊಂದು ಮಾದರಿಯಾಗಿದೆ. ಈ ರೋಮಾಂಚಕಾರಿ ಸುದ್ದಿಗೆ ನಿಮಗೆ ಅಭಿನಂದನೆಗಳು ಪರಾಗ್" ಎಂದು ಟ್ವೀಟ್ ಮಾಡಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ  ವೈರಲ್ ಆಗುತ್ತಿದ್ದಂತೆಯೇ, ನೆಟಿಜನ್‌ಗಳು ಪರಾಗ್ ಅಗರವಾಲ್ ಅವರನ್ನು ಸಿಕ್ಕಾಪಟ್ಟೆ ಹೊಗಳಿದ್ದಾರೆ. ತಂದೆಗೆ ಬೇಕಾದ ಪಿತೃತ್ವ ರಜೆಯ ಅಗತ್ಯವನ್ನು ಕೆಲವರು ಬೆಂಬಲಿಸಿದರೆ, ಟ್ವಿಟರ್‌ನ ಸಿಇಒ ತೆಗೆದುಕೊಂಡ ಈ ನಿರ್ಧಾರವು ತಂದೆಯಾಗುವ ಹಲವು ಮಂದಿಗೆ ತಮ್ಮ ಕುಟುಂಬಗಳಿಗೆ ಹೆಚ್ಚಿನ ಸಮಯವನ್ನು ನೀಡುವುದು ಎಷ್ಟು ಮುಖ್ಯ ಎಂಬುದನ್ನು ತಿಳಿಸಿ ಕೊಡುತ್ತದೆ ಎಂದಿದ್ದಾರೆ.

ಈ ಸುದ್ದಿಗೆ ಸಂಬಂಧಿಸಿದಂತೆ ನಟಿ ಅನುಷ್ಕಾ ಶರ್ಮಾ ಇನ್‌ಸ್ಟಾಗ್ರಾಮ್ ಸ್ಟೋರಿಯನ್ನೂ ಹಂಚಿಕೊಂಡಿದ್ದಾರೆ. "ಈ ಸಮಯದಲ್ಲಿ ಇದು ಸಾಮಾನ್ಯವಾಗಿದೆ, ಎಂದು ಬರೆದುಕೊಂಡಿದ್ದಾರೆ. ಈ ಹಿಂದೆ, ಅನುಷ್ಕಾ ಅವರ ಪತಿ ಮತ್ತು ಭಾರತದ ಮಾಜಿ ನಾಯಕ ವಿರಾಟ್ ಕೊಹ್ಲಿ ತಮ್ಮ ಮಗು ವಮಿಕಾಳನ್ನು ಸ್ವಾಗತಿಸಲು ಪಿತೃತ್ವ ರಜೆ ತೆಗೆದುಕೊಂಡಿದ್ದಕ್ಕಾಗಿ ಅವರನ್ನು ಟ್ರೋಲ್ ಮಾಡಲಾಗಿತ್ತು.

Tumakuru Anganawadi Recruitment 2022: ತುಮಕೂರು ಜಿಲ್ಲೆಯಾದ್ಯಂತ ಅಂಗನವಾಡಿ ಹುದ್ದೆಗಳಿಗೆ ಅರ್ಜಿ

ಪರಾಗ್ ಅಗರವಾಲ್ 2005 ರಲ್ಲಿ USಗೆ ತೆರಳಿದರು. ಭಾರತದಲ್ಲಿ ಜನಿಸಿದ ಪರಾಗ್‌ ಅಗರವಾಲ್‌ ತಮ್ಮ ಆರಂಭಿಕ ಶಿಕ್ಷಣವನ್ನು ಭಾರತದಲ್ಲಿಯೇ ಮುಗಿಸಿದ್ದಾರೆ. ಕಂಪ್ಯೂಟರ್‌ ಸೈನ್ಸ್ ವಿಷಯಯದಲ್ಲಿ ಇಂಡಿಯನ್‌ ಇನ್ಸ್‌ಟಿಟ್ಯೂಟ್‌ ಆಪ್‌ ಬಾಂಬೆಯಿಂದ ಇಂಜಿನಿಯರಿಂಗ್‌ ಪದವಿ ಪಡೆದಿರುವ ಅಗರ್ವಾಲ್‌, ಕ್ಯಾಲಿಫೋರ್ನಿಯಾದ  ಸ್ಟ್ಯಾನ್‌ಫೋರ್ಡ್‌ ವಿಶ್ವವಿದ್ಯಾನಿಲಯ(Stanford University)ದಿಂದ  ಪಿಹೆಚ್‌ಡಿ ಪದವಿ ಕೂಡ ಪಡೆದಿದ್ದಾರೆ. 

2011ರಲ್ಲಿ ಟ್ವಿಟ್ಟರ್‌ಗೆ ಸೇರಿದ ಅಗರ್ವಾಲ್‌ 2017ರ ವೇಳೆಗೆ ಅದರ ಸಿಟಿಒ ಹುದ್ದೆಗೇರಿದರು. 2018ರಲ್ಲಿ ಮುಖ್ಯ ತಂತ್ರಜ್ಞಾನ ಅಧಿಕಾರಿಯನ್ನಾಗಿ ನೇಮಿಸಲಾಗಿತ್ತು. 2019ರಲ್ಲಿ ಟ್ವೀಟರ್‌ ಆರಂಭಿಸಿದ ಪ್ರಾಜೆಕ್ಟ್ ಬ್ಲೂ ಸ್ಕೈನ ಮುಖ್ಯಸ್ಥರಾಗಿಯೂ ಪರಾಗ್‌ ಸೇವೆ ಸಲ್ಲಿಸಿದ್ದಾರೆ. ಸಂಸ್ಥೆಯೊಂದರ ತಂತ್ರಜ್ಞಾನದ ಮುಖ್ಯಸ್ಥರಾಗಿ ಅವರು, ಮೆಷಿನ್‌ ಲರ್ನಿಂಗ್‌ (Machine Learning) ಹಾಗೂ ಕೃತಕ ಇಂಟೆಲಿಜೆನ್ಸ್‌ (Artificial Intelligence) ಹಾಗೂ ಸಂಸ್ಥೆಯ ವಿಶಾಲವಾದ ತಾಂತ್ರಿಕ ಕಾರ್ಯತಂತ್ರಗಳ ಮೇಲ್ವಿಚಾರಣೆ ನಡೆಸಿದರು. ಇವರ ಈ ವಿಶೇಷತೆಗಳು ಇವರನ್ನು ಡೊರ್ಸಿಯವರ ಸ್ಥಾನಕ್ಕೆ ಆಯ್ಕೆಯಾಗುವಂತೆ ಮಾಡಿತ್ತು.

 ಸಿಇಒ ಆಗಿ, ಪರಾಗ್‌ಗೆ ವಾರ್ಷಿಕ 1 ಮಿಲಿಯನ್ ಡಾಲರ್ ವೇತನ ನೀಡಲಾಗುವುದು ಮತ್ತು 12.5 ಮಿಲಿಯನ್ ಡಾಲರ್ ಮೌಲ್ಯದ ಷೇರು ಪರಿಹಾರವನ್ನು ನೀಡಲಾಗುವುದು ಎಂದು ಟ್ವಿಟರ್ ಬಹಿರಂಗಪಡಿಸಿತ್ತು. 2006ರಲ್ಲಿ ಆರಂಭವಾದ ಟ್ವಿಟರ್‌ 33 ಕೋಟಿ ಸಕ್ರಿಯ ಬಳಕೆದಾರರನ್ನು ಹೊಂದಿದ್ದು ವಾರ್ಷಿಕ 28000 ಕೋಟಿ ರು. ಆದಾಯ ಹೊಂದಿದೆ.
 

click me!