* ರೇಡಿಯೋ ಜಾಕಿ ಆಗುವ ಕನಸು ಕಾಣುತ್ತಿದ್ದೀರಾ?
* ರೇಡಿಯೋ ಜಾಕಿ ಆಗುವ ಕನಸು ಉಳ್ಳವರಿಗೆ ಸುವರ್ಣಾವಕಾಶ
* ಅಲ್ಮಾ ಮೀಡಿಯಾ ಸ್ಕೂಲ್ ಮತ್ತು ಗೌರೀಶ್ ಅಕ್ಕಿ ಸ್ಟುಡಿಯೋ ಸಹಯೋಗದಲ್ಲಿ ಆರ್ ಜೆ ಕಾರ್ಯಾಗಾರ
ಬೆಂಗಳೂರು, (ಫೆ.18): ಅದೆಲ್ಲೋ ಕುಳಿತು ಒಂದೇ ಸಮನೆ ಮಾತುದುರಿಸುವ ಮೂಲಕ ಬರೀ ಧ್ವನಿಯಲ್ಲೇ ಮೋಡಿ ಮಾಡುವ, ಮಾತುಗಳಿಂದಲೇ ನಗಿಸುವ, ಕೋಪ ತರಿಸುವ, ಮನಸಿಗೆ ಹತ್ತಿರವಾಗುವ ರೇಡಿಯೋ ಜಾಕಿಗಳು.
ಈ ರೀತಿ ನೀವೂ ರೇಡಿಯೋ ಜಾಕಿ(Radio Jockey) ಆಗುವ ಕನಸು ಕಾಣುತ್ತಿದ್ದೀರಾ? ಆಸಕ್ತಿ ಇರುವವರಿಗೆ ಇಲ್ಲೊಂದು ಸುವರ್ಣಾವಕಾಶ ಇಲ್ಲಿದೆ.
ಬೆಂಗಳೂರಿನ ಆಲ್ಮಾ ಮೀಡಿಯಾ ಸ್ಕೂಲ್ (Alma Media School) ಮತ್ತು ಗೌರೀಶ್ ಅಕ್ಕಿ ಸ್ಟುಡಿಯೋ ಸಹಯೋಗದಲ್ಲಿ 5 ದಿನಗಳ ಆರ್ ಜೆ ಕಾರ್ಯಾಗಾರವನ್ನು (RJ Workshop) ನಡೆಸಲಾಗುತ್ತಿದೆ. ಫೆಬ್ರವರಿ 23ರಿಂದ ಫೆಬ್ರವರಿ 27ರವರೆಗೂ ಈ ಕಾರ್ಯಾಗಾರ ನಡೆಯಲಿದೆ.
ಬೆಂಗಳೂರು ಜಯ ನಗರದ 33ನೇ ಅಡ್ಡರಸ್ತೆ, 2ನೇ ಮುಖ್ಯರಸ್ತೆಯ 7ನೇ ಹಂತದಲ್ಲಿ ಇರುವ ಆಲ್ಮಾ ಮೀಡಿಯಾ ಸ್ಕೂಲ್, ಎಎಂಸಿ ಸಿಟಿ ಕಾಲೇಜು ಕ್ಯಾಂಪಸ್ ನಲ್ಲಿ ಐದು ದಿನಗಳ ಆರ್ ಜೆ ಕಾರ್ಯಾಗಾರ ನಡೆಯಲಿದೆ. ಬೆಳಗ್ಗೆ 10 ಗಂಟೆಗೆ ಆರಂಭವಾಗಲಿರುವ ಕಾರ್ಯಾಗಾರವು ಸಂಜೆ 5.30ರವರೆಗೂ ನಡೆಯಲಿದೆ.
ಪ್ರಸಿದ್ಧ ರೇಡಿಯೋ ಜಾಕಿಗಳಾದ ವಿಕ್ಕಿ, ಪ್ರದೀಪ್, ಅವನೀಧರ್ ಸೇರಿದಂತೆ ಪ್ರಮುಖ ರೇಡಿಯೋ ಜಾಕಿಗಳು ಹಾಗೂ ರೇಡಿಯೋ ತಜ್ಞರು ಈ ಕಾರ್ಯಾಗಾರದಲ್ಲಿ ಭಾಗವಹಿಸಲಿದ್ದಾರೆ. ಪರಿಣಿತರು ಮತ್ತು ರೇಡಿಯೋ ತಜ್ಞರು ನಿಮ್ಮ ಜೊತೆ ತಮ್ಮ ಅನುಭವ ಹಂಚಿಕೊಳ್ಳಲಿದ್ದಾರೆ. ಈ ಹಿನ್ನೆಲೆಯಲ್ಲಿ ಅವರಿಂದ ಸಲಹೆ, ಸೂಚನೆಗಳನ್ನ ಪಡೆದು ಕಲಿಯಿರಿ ರೇಡಿಯೋ ಜಾಕಿಯಿಂಗ್.
ಇಂತಹ ಆರ್‌ಜೆಯಾಗಬೇಕು ಎಂಬ ಬಯಕೆ ನಿಮ್ಮದಾಗಬೇಕೆಂದರೆ, ನೀವು ಪಟಪಟನೆ ಅರಳು ಹುರಿದಂತೆ ಮಾತನಾಡುವ ಕಲೆ, ಮಧುರವಾದ ಧ್ವನಿ, ಪ್ರಚಲಿತ ವಿದ್ಯಮಾನಗಳ ಬಗ್ಗೆ ಆಸಕ್ತಿ, ಸಂದರ್ಶನ ಮಾಡುವ ಕಲೆಯನ್ನು ಕರಗತ ಮಾಡಿಕೊಂಡಿರಬೇಕು. ಇನ್ನೂ ಇದರ ಬಗ್ಗೆ ಪರಿಣಿತರು ಕಾರ್ಯಗಾರದಲ್ಲಿ ಮಾಹಿತಿ ಕೊಡಲಿದ್ದಾರೆ.