ನಿಮಗೆ ವಿಮಾನನಿಲ್ದಾಣ ಪ್ರಾಧಿಕಾರದಲ್ಲಿ ಕೆಲಸ ಮಾಡುವ ಆಸಕ್ತಿ ಇದೆಯಾ? ಆಸಕ್ತಿ ಇದ್ದರೆ ತಡ ಯಾಕೆ? ವಿಮಾನ ನಿಲ್ದಾಣ ಪ್ರಾಧಿಕಾರವು ಮ್ಯಾನೇಜರ್ ಹಾಗೂ ಜ್ಯೂನಿಯರ್ ಎಕ್ಸಿಕ್ಯುಟಿವ್ ಹುದ್ದೆಗಳಿಗಾಗಿ ಅರ್ಜಿ ಆಹ್ವಾನಿಸಿದೆ. ಒಟ್ಟು 368 ಹುದ್ದೆಗಳಿಗೆ ಭರ್ತಿ ಮಾಡಿಕೊಳ್ಳಲಾಗುತ್ತಿದೆ. ಇದೇ ತಿಂಗಳು 14 ಕೊನೆಯ ದಿನಾಂಕವಾಗಿದೆ.
ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ(ಎಎಐಐ)ನಲ್ಲಿ ಅನೇಕ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತಿದೆ. ಈಗಾಗಲೇ ಪ್ರಾಧಿಕಾರವು ಈ ಸಂಬಂಧ ನೋಟಿಫಿಕೇಷನ್ ಕೂಡ ಹೊರಡಿಸಿದೆ.
ಪ್ರಾಧಿಕಾರವು ಮ್ಯಾನೇಜರ್ ಮತ್ತು ಜೂನಿಯರ್ ಎಕ್ಸಿಕ್ಯುಟಿವ್ ಪೋಸ್ಟ್‌ಗಳಿಗೆ ಅರ್ಜಿ ಆಹ್ವಾನಿಸಿದೆ. ಅರ್ಹ ಅಭ್ಯರ್ಥಿಗಳು ಜನವರಿ 14ಕ್ಕೆ ಮುಂಚೆಯೇ ಏರ್‌ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ ನೇಮಕಾತಿ ನೋಟಿಫಿಕೇಷನ್ ಮೂಲಕ ತಿಳಿದಿ ಅರ್ಜಿ ನಮೂನೆಯಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. 2020ರ ಡಿಸೆಂಬರ್ 15ರಿಂದಲೇ ಆನ್‌ಲೈನ್ ಅಪ್ಲಿಕೇಷನ್‌ಗೆ ಅವಕಾಶ ಮಾಡಿಕೊಡಲಾಗಿದೆ. ಈ ಅಪ್ಲಿಕೇಷನ್ ಸಲ್ಲಿಸಲು ಜನವರಿ 14 ಕೊನೆಯ ದಿನವಿದೆ.
undefined
ವಿದ್ಯಾರ್ಥಿಗಳಿಗೆ ಕಾಲೇಜ್ ಮೆಂಟರ್‌ಶಿಪ್ ಆರಂಭಿಸಿದ ಆ್ಯಪಲ್ ಕಂಪನಿ!
ಎಷ್ಟು ಹುದ್ದೆಗಳು?
ಮ್ಯಾನೇಜರ್(ಫೈರ್ ಸರ್ವಿಸ್)-11, ಮ್ಯಾನೇಜರ್(ತಾಂತ್ರಿಕ)-2, ಜೂನಿಯರ್ ಎಕ್ಸಿಕ್ಯುಟಿವ್(ಏರ್ ಟ್ರಾಫಿಕ್ ಕಂಟ್ರೋಲ್)-264, ಜೂನಿಯರ್ ಎಕ್ಸಿಕ್ಯುಟಿವ್(ಏರ್‌ಪೋರ್ಟ್ ಆಪರೇಷನ್)- 83, ಜ್ಯೂನಿಯರ್ ಎಕ್ಸಿಕ್ಯೂಟಿವ್(ಟೆಕ್ನಿಕಲ್)-8 ಹುದ್ದೆಗಳ ಭರ್ತಿಗೆ ಏರ್‌ಪೋರ್ಟ್ಸ್ ಆಥಾರಿಟಿ ಆಫ್ ಇಂಡಿಯಾ ಮುಂದಾಗಿದೆ.
ಅರ್ಹತೆ ಮತ್ತು ವಯೋಮಿತಿ
ಮ್ಯಾನೇಜರ್(ಫೈರ್ ಸರ್ವಿಸ್)- ಆಟೋಮೊಬೈಲ್/ಮೆಕ್ಯಾನಿಕಲ್ ಎಂಜಿನಿಯರಿಂಗ್/ ಫೈರ್ ಎಂಜಿನಿಯರಿಂಗ್‌ನಲ್ಲಿ ಬಿಇ/ಬಿಟೆಕ್ ಪದವಿ ಪಡೆದುಕೊಂಡಿರಬೇಕು. 2020 ನವೆಂಬರ್ 30ಕ್ಕೆ 32 ವರ್ಷ ಮೀರಿರಬಾರದು.ಅದೇ ರೀತಿ, ಮ್ಯಾನೇಜರ್(ಟೆಕ್ನಿಕಲ್) ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮೆಕ್ಯಾನಿಕಲ್ ಅಥವಾ ಆಟೋಮೊಬೈಲ್ ವಿಷಯದಲ್ಲಿ ಬಿಇ, ಬಿಟೆಕ್ ಪದವಿ ಪಡೆದುಕೊಂಡಿರಬೇಕು. 2020 ನವೆಂಬರ್ 30ಕ್ಕೆ ಅಭ್ಯರ್ಥಿಗಳ ವಯಸ್ಸು 32 ಮೀರಿರಬಾರದು.
ಇನ್ನು ಜ್ಯೂನಿಯರ್ ಎಕ್ಸಿಕ್ಯುಟಿವ್(ಏರ್‌ಟ್ರಾಫಿಕ್ ಕಂಟ್ರೋಲ್) ಹುದ್ದೆಗೆ ಅರ್ಜಿ ಸಲ್ಲಿಸಿವವರು ಮೂರು ವರ್ಷಗಳ ಬಿಎಸ್ಸಿ ಮಾಡಿರಬೇಕು. ಪದವಿಯಲ್ಲಿ ಅವರು ಫಿಜಿಕ್ಸ್, ಗಣಿತ ಓದಿರಬೇಕು. ಅಥವಾ ಯಾವುದೇ ಎಂಜಿನಿಯರಿಂಗ್ ಓದಿರಬೇಕು(ಫಿಜಿಕ್ಸ್ ಮತ್ತು ಗಣಿತ ವಿಷಯಗಳು ಈ ಪದವಿಗಳಲ್ಲಿ ಯಾವುದೇ ಸೆಮಿಸ್ಟರ್‌ಗಳಲ್ಲಿ ಪಠ್ಯವಾಗಿರಬೇಕು). 2020 ನವೆಂಬರ್ 30ಕ್ಕೆ ಅಭ್ಯರ್ಥಿಯ ವಯಸ್ಸು 27 ಮೀರಿರಬಾರದು.
ಹಳ್ಳಿಯ ಒಂದೇ ಕುಟುಂಬದ ಮೂವರು ಸೋದರಿಯರಿಂದ ಇತಿಹಾಸ ಸೃಷ್ಟಿ, ಏನದು?
ಜ್ಯೂನಿಯರ್ ಎಕ್ಸಿಕ್ಯುಟಿವ್(ಏರ್ ಪೋರ್ಟ್ ಆಪರೇಷನ್ಸ್) ಹುದ್ದೆಗೆ ಅರ್ಜಿ ಹಾಕಲು ಇಚ್ಛಿಸುವ ಅಭ್ಯರ್ಥಿಗಳು 2020ರ ನವೆಂಬರ್ 30ಕ್ಕೆ ಗರಿಷ್ಠ 27 ವರ್ಷ ವಯಸ್ಸಾಗಿರಬೇಕು. ಅಭ್ಯರ್ಥಿಯು ಎರಡು ವರ್ಷಗಳ ಅವಧಿಯ ಎಂಬಿಎ ಮಾಡಿರಬೇಕು ಅಥವಾ ಎಂಜನಿಯರಿಂಗ್‌ನಲ್ಲಿ ಪದವಿ ಪಡೆದುಕೊಂಡಿರಬೇಕು. ಜ್ಯೂನಿಯರ್ ಎಕ್ಸಿಕ್ಯುಟಿವ್(ಟೆಕ್ನಿಕಲ್) ಹುದ್ದೆಗೆ ಅರ್ಜಿ ಸಲ್ಲಿಸಲು ಇಚ್ಛಿಸುವ ಅಭ್ಯರ್ಥಿಗಳು ಮೆಕ್ಯಾನಿಕಲ್ ಅಥವಾ ಆಟೋಮೊಬೈಲ್ ವಿಷಯದಲ್ಲಿ ಬಿಇ , ಬಿಟೆಕ್ ಮಾಡಿರಬೇಕು. 2020ರ ನವೆಂಬರ್ 30ಕ್ಕೆ ಅಭ್ಯರ್ಥಿಗಳ ವಯಸ್ಸು 32 ಮೀರಿರಬಾರದು.
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಜನವರಿ 14ಕ್ಕೆ ಮುಂಚೆ, ಏರ್‌ಪೋರ್ಟ್ಸ್ ಅಥಾರಿಟ ಆಫ್ ಇಂಡಿಯಾ(ಎಎಐ)ದ ನೇಮಕಾತಿ ಅಧಿಸೂಚನೆಯ ಪ್ರಕಾರ ಸೂಚಿಸಲಾಗಿರುವ ಅರ್ಜಿ ನಮೂನೆಯಲ್ಲಿ ತಮ್ಮ ಅರ್ಜಿಗಳನ್ನು ಸಲ್ಲಿಸಬೇಕು. ಯಾವುದೇ ಹುದ್ದೆಗೆ ಅರ್ಜಿ ದಾಖಲಿಸುವ ಮುನ್ನು ಅಭ್ಯರ್ಥಿಗಳು ತಾವು ಉದ್ದೇಶಿತ ಹುದ್ದೆಯ ನೇಮಕಾತಿ ಅರ್ಹತೆಯನ್ನು ಹೊಂದಿದ್ದೇವೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು.
www.aai.aero ಜಾಲತಾಣದ CAREERS ಟ್ಯಾಬ್‌ನಲ್ಲಿ ಟ್ಯಾಪ್ ಮಾಡಿದಾಗ ದೊರೆಯುವ ಲಿಂಕ್ ಬಳಸಿಕೊಂಡ ಆನ್‌ಲೈ ಮೂಲಕವೇ ಅಭ್ಯರ್ಥಿಗಳು ಅರ್ಜಿಗಳನ್ನು ಸಲ್ಲಿಸಬಹುದು. ಆನ್‌ಲೈನ್ ಮೂಲಕವೇ ಸಲ್ಲಿಸಿದ ಅರ್ಜಿಗಳನ್ನು ಮಾತ್ರವೇ ಪರಿಗಣಿಸಲಾಗುತ್ತದೆ. ಉಳಿದ ಯಾವುದೇ ಮಾದರಿಯಲ್ಲಿ ಸಲ್ಲಿಸ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ. ಜೊತೆಗೆ ಅಪೂರ್ಣ ಮಾಹಿತಿಯುಳ್ಳು ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ. ಅಭ್ಯರ್ಥಿಗಳ ಅಧಿಕೃತ ಇಮೇಲ್ ಐಡಿ ಮತ್ತು ಮೊಬೈಲ್ ನಂಬರ್‌ಗಳನ್ನು ಹೊಂದಿರಬೇಕು. ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ಈ ನೇಮಕಾತಿ ಸಂಬಂಧ ನಿಯಮಿತವಾಗಿ ತಮ್ಮ ಮೇಲ್ ಹಾಗೂ ಪ್ರಾಧಿಕಾರದ ಜಾಲತಾಣವನ್ನು ಪರೀಕ್ಷಿಸುತ್ತಿರಬೇಕು.
ಹೆಚ್ಚಿ ಮಾಹಿತಿಗಾಗಿ ಅಭ್ಯರ್ಥಿಗಳು www.aai.aero ಭೇಟಿ ನೀಡಬಹುದು.
ಹೊಸ ವರ್ಷದಲ್ಲಿ ಅತಿ ಹೆಚ್ಚು ಸಂಭಾವನೆ ನೀಡುವ ಉದ್ಯೋಗಗಳಿವು