ಹಳ್ಳಿಯ ಒಂದೇ ಕುಟುಂಬದ ಮೂವರು ಸೋದರಿಯರಿಂದ ಇತಿಹಾಸ ಸೃಷ್ಟಿ, ಏನದು?
ಶೈಕ್ಷಣಿಕ ರಂಗದಲ್ಲಿ ಸಾಧನೆ ಮಾಡೋದು ಅಂದ್ರೆ ನಿಜಕ್ಕೂ ಅದು ತಪಸ್ಸೇ. ಹಗಲು ರಾತ್ರಿ ನಿದ್ದೆ ಬಿಟ್ಟು ಊಟ ಬಿಟ್ಟು ಓದಿ ಗುರಿ ಸಾಧಿಸಿದ ಅದೆಷ್ಟೋ ಮಂದಿ ನಮ್ಮ ಕಣ್ಣಮುಂದೆ ಇದ್ದಾರೆ. ರಾಜಸ್ಥಾನದ ಗ್ರಾಮವೊಂದರ ಮೂವರು ಸ್ತ್ರೀಯರು ಒಟ್ಟಿಗೆ ವಿಶಿಷ್ಟವಾದ ಸ್ಧಾಧನೆಯನ್ನುಮಾಡಿ ಗಮನ ಸೆಳೆದಿದ್ದಾರೆ. ಹಾಗಾದರೆ, ಅವರ ಸಾಧನೆ ಏನು?
ಸಾಧನೆ ಮಾಡೋದು ಅಂದ್ರೆ ಅಷ್ಟು ಸುಲಭವಲ್ಲ. ಅದಕ್ಕೆ ಋಷಿಮುನಿಗಳ ಹಾಗೇ ತಪ್ಪಸ್ಸು ಮಾಡಬೇಕು. ಅದರಲ್ಲೂ ಶೈಕ್ಷಣಿಕ ರಂಗದಲ್ಲಿ ಸಾಧನೆ ಮಾಡೋದು ಅಂದ್ರೆ ನಿಜಕ್ಕೂ ಅದು ತಪಸ್ಸೇ. ಹಗಲು ರಾತ್ರಿ ನಿದ್ದೆ ಬಿಟ್ಟು ಊಟ ಬಿಟ್ಟು ಓದಿ ಗುರಿ ಸಾಧಿಸಿದ ಅದೆಷ್ಟೋ ಮಂದಿ ನಮ್ಮ ಕಣ್ಣಮುಂದೆ ಇದ್ದಾರೆ. ಅಂಥ ಸಾಧಕ ವಿದ್ಯಾರ್ಥಿಗಳ ಸಾಲಿಗೆ ರಾಜಸ್ಥಾನದ ಗ್ರಾಮವೊಂದರ ಒಂದೇ ಕುಟುಂಬದ ಮೂವರು ಸಹೋದರಿಯರು ಕೂಡ ಸೇರುತ್ತಾರೆ. ಈ ಅಕ್ಕ-ತಂಗಿಯರು ಒಟ್ಟಿಗೆ ಪಿಎಚ್‌ಡಿ ಪದವಿ ಪಡೆಯೋ ಮೂಲಕ ಹೊಸ ಇತಿಹಾಸವನ್ನೇ ನಿರ್ಮಿಸಿದ್ದಾರೆ.
ರಾತ್ರಿಯೆಲ್ಲಾ ಜಮೀನಿನಲ್ಲಿ ವ್ಯವಸಾಯ ಮಾಡಿ, ಹಗಲಿನಲ್ಲಿ ಶೂ ಅಂಗಡಿಯಲ್ಲಿ ದುಡಿಯುವ ರೈತನ ಮಕ್ಕಳಾಗಿ ಜನಿಸಿದ ಈ ಮೂವರು ಸಹೋದರಿಯರು ಒಟ್ಟಿಗೆ ಪಿಎಚ್‌ಡಿ ಪದವಿ ಪಡೆದಿರೋದು ಹೆಮ್ಮೆಯ ಸಂಗತಿ. ರಾಜಸ್ಥಾನದ ಜುನ್‌ಜುನು ಜಿಲ್ಲೆಯ ಚುರೆಲಾ ಹಳ್ಳಿಯಲ್ಲಿರುವ ಜಗದೀಶ್ ಪ್ರಸಾದ್ ಜಬರ್‌ಮಾಲ್ ತಿಬ್ರೇವಾಲಾವಿಶ್ವವಿದ್ಯಾಲಯದಿಂದ ಸಹೋದರಿಯರಾದ ಸರಿತಾ ತಿಲೋತಿಯಾ, ಕಿರಣ್ ತಿಲೋತಿಯಾ ಹಾಗೂ ಅನಿತಾ ತಿಲೋತಿಯಾ ಪಿಎಚ್‌ಡಿ ಡಿಗ್ರಿ ಪಡೆದಿದ್ದಾರೆ.
ಹೊಸ ವರ್ಷದಲ್ಲಿ ಅತಿ ಹೆಚ್ಚು ಸಂಭಾವನೆ ನೀಡುವ ಉದ್ಯೋಗಗಳಿವು
ಸರಿತಾ ಭೌಗೋಳಶಾಸ್ತ್ರದಲ್ಲಿ ಡಾಕ್ಟರೇಟ್ ಪದವಿ ಗಳಿಸಿದ್ರೆ, ಕಿರಣ್ ರಸಾಯನಿಕ ವಿಷಯದಲ್ಲಿ ಹಾಗೂ ಅನಿತಾ ಶಿಕ್ಷಣ ವಿಷಯದಲ್ಲಿ ಡಾಕ್ಟರೇಟ್ ಪದವಿ ಗಳಿಸಿದ್ದಾರೆ. ಈ ಮೂವರು ಸಹೋದರಿಯರು ದೇಶಕ್ಕೆ ಏನಾದರೂ ಕೊಡುಗೆ ನೀಡಲು ಬಯಸಿದ್ದು, ಭಾರತದಲ್ಲಿ ಶಿಕ್ಷಣ ಅಭಿಯಾನವನ್ನು ಹೊಸ ಎತ್ತರಕ್ಕೇರಿಸಬೇಕೆಂಬ ಆಶಯ ವ್ಯಕ್ತಪಡಿಸಿದ್ದಾರೆ. ಅಂದಹಾಗೆ ಮೂವರು ಸಹೋದರಿಯರು ಒಟ್ಟಿಗೆ ಡಾಕ್ಟರೇಟ್ ಪಡೆದಿದ್ದು, ಸದ್ಯ ದೇಶದ ಎರಡನೇ ನಿದರ್ಶನವಾಗಿದೆ. ಈ ಹಿಂದೆ ಮಧ್ಯಪ್ರದೇಶದ ಸಹೋದರಿಯರು ಒಟ್ಟಿಗೆ ಪಿಎಚ್‌ಡಿ ಪದವಿ ಪಡೆದಿದ್ದರು.
ನಮ್ಮ ತಂದೆ ಸದಾ ನಮ್ಮನ್ನು ಓದಲು ಪ್ರೋತ್ಸಾಹಿಸುತ್ತಾರೆ. ನಮ್ಮ ಜೀವನದಲ್ಲಿ ನಾವು ಎಂದಿಗೂ ಸುಮ್ಮನೆ ಕುಳಿತುಕೊಳ್ಳಲಿಲ್ಲ. ಅದಕ್ಕೆ ಕಾರಣ ಯಾವಾಗಲೂ ಬ್ಯುಸಿಯಾಗಿರುವ ನಮ್ಮ ಪ್ರೀತಿಯ ತಂದೆ. ಅವರಂತೆ ಆಗಲು ನಾವು ಬಯಸುತ್ತೇವೆʼ ಅಂತಾರೆ ಸರಿತಾ.
ನಾವು ಗ್ರಾಮೀಣ ಪ್ರದೇಶದಿಂದ ಬಂದವರಾಗಿದ್ದರೂ, ಉನ್ನತ ಶಿಕ್ಷಣಕ್ಕಾಗಿ ಜೈಪುರ ಹಾಗೂ ಜುಂಜುನು ಜಿಲ್ಲೆಯ ಹಾಸ್ಟೆಲ್ಸ್‌ಗಳಿಗೆ ನಮ್ಮನ್ನು ಸೇರಿಸಿ ಓದಿಸಿದ್ದಾರೆ. ಮದುವೆಯಾದ ಮೇಲೂ ನಾವು ಮೂವರು ಪಿಎಚ್‌ಡಿ ಪದವಿ ಪಡೆದಿದ್ದು ಜೀವನದಲ್ಲಿ ಯಾವುದಕ್ಕೂ ಪೂರ್ಣ ವಿರಾಮವಿರಲ್ಲ ಎನ್ನುತ್ತಿದ್ದ ನಮ್ಮ ತಂದೆಗಾಗಿಯೇ ಅಂತಾರೆ ಸರಿತಾ. ತಂದೆ ಮಂಗಲ್‌ಚಾಂದ್ ತಿಲೊತಿಯಾಗೆ ಶಿಕ್ಷಣದ ಮೌಲ್ಯಗಳ ಅರಿವಿದೆ. ಅಲ್ಲದೇ ಹಲವು ವರ್ಷಗಳ ಹಿಂದೆಯೇ ಅವರು ʼಬೇಟಿ ಪಡಾವೋʼ ಪ್ರಾಕ್ಟೀಸ್ ಮಾಡಿದ್ದಾರೆ ಅಂತ ಹೇಳ್ತಾರೆ ಸಹೋದರಿಯರು.
ಪೋಸ್ಟ್ ಮ್ಯಾಟ್ರಿಕ್ ಸ್ಕಾಲರ್‌ಶಿಪ್ ಯೋಜನೆಗೆ 59,000 ಕೋಟಿ ರೂ. ಹೂಡಿಕೆ
41 ವರ್ಷದ ಸರಿತಾಗೆ 16ನೇ ವಯಸ್ಸಿನಲ್ಲೇ ಮದುವೆಯಾಗಿದೆ. ಹೀಗಿದ್ರೂ ಆಕೆ ತಂದೆಯೇ ಆಕೆಯ ಸ್ಫೂರ್ತಿ. ಆಹಾರ ಧಾನ್ಯಗಳ ಮಾರುಕಟ್ಟೆ ವ್ಯವಹಾರ ನಡೆಸ್ತಿರೋ ಗಂಡನಿಗೆ ಸದಾ ನೆರವಾಗಿದ್ದರು. ʼನನ್ನ ಗಂಡನ ಬ್ಯುಸಿನೆಸ್ ಮೂಲಕ ನಾನು ರೈತ ಕಷ್ಟವನ್ನು ಚೆನ್ನಾಗಿ ಅರಿತಿದ್ದೆ. ಹೀಗಾಗಿ ಜುಂಜುನು ಜಿಲ್ಲೆಯ ಕೃಷಿ ಉತ್ಪನ್ನ ಮಾರುಕಟ್ಟೆ ಕಡೆಗೆ ರೈತರು ಹಾಗೂ ಸಾಂಪ್ರದಾಯಿಕ, ಇ-ವ್ಯವಹಾರದ ಮೇಲಿನ ರೈತರ ವರ್ತನೆ ಮತ್ತು ಅರಿವು ಎಂಬ ಅಧ್ಯಯನದ ಮೇಲೆ ಸಂಶೋಧನೆ ನಡೆಸಲು ಸಾಧ್ಯವಾಯಿತು ಎಂದು ಹೇಳುತ್ತಾರೆ ಸರಿತಾ.
ಇನ್ನು 37 ವರ್ಷದ ಕಿರಣ್, ಜಲಮಾಲಿನ್ಯ ವಿಚಾರವಾಗಿ ಕೆಮಿಸ್ಟ್ರಿಯಲ್ಲಿ ಡಾಕ್ಟರೇಟ್ ಪಡೆದಿದ್ದು, ಸದ್ಯ ಸರ್ಕಾರಿ ನೌಕರಿಯಲ್ಲಿದ್ದಾರೆ. ಅವರ ಪತಿ, ರಿಯಲ್ ಎಸ್ಟೇಟ್ ಉದ್ಯಮಿಯಾಗಿದ್ದು, ಪತ್ನಿಯ ವಿದ್ಯಾಭ್ಯಾಸವನ್ನ ಪ್ರೋತ್ಸಾಹಿಸಿದ್ದಾರೆ. ಕೊನೆಯವರಾದ ಅನಿತಾ, ಶಿಕ್ಷಣ ವಿಭಾಗದಲ್ಲಿ ಪಿಎಚ್‌ಡಿ ಪೂರೈಸಿದ್ದಾರೆ. ಉನ್ನತ ಶಿಕ್ಷಣ ಪಡೆಯಲು ಬಯಸುವವರಿಗಾಗಿ ಗ್ರಾಮೀಣ ಪ್ರದೇಶಗಳಲ್ಲಿ ಯೂನಿರ್ವಸಿಟಿಯ ವಾತಾವರಣ ನಿರ್ಮಿಸಬೇಕು ಅಂತಾರೆ ಕಿರಣ್.
JEE Main: ಬಾಯಿಂದ ಎಕ್ಸಾಮ್ ಬರೆದು ಜೆಇಇ rank ಗಳಿಸಿದ ಯುವಕ