
ಇತ್ತೀಚೆಗೆ ಲೇಆಫ್ ಶುರುವಾಗಿದೆ. ಸಾಕಷ್ಟು ಕಂಪೆನಿಗಳು ಎಐ ತಂತ್ರಜ್ಞಾನವನ್ನು ಅಳವಡಿಸಿಕೊಂಡು, ಲೇಆಫ್ ಆರಂಭಿಸಿದೆ. ಲೇಆಫ್‌ನಿಂದ ಏನೆಲ್ಲ ಸಮಸ್ಯೆ ಆಗುತ್ತಿದೆ ಎಂಬ ಪೋಸ್ಟ್‌ವೊಂದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಶುರು ಮಾಡಿದೆ.
ಜಾಗತಿಕವಾಗಿ ಅಮೆಜಾನ್ ಸುಮಾರು 14,000 ಕಾರ್ಪೊರೇಟ್ ಉದ್ಯೋಗವನ್ನು ಕಡಿತಗೊಳಿಸುವ ಪ್ಲ್ಯಾನ್ ಹೇಳಿತ್ತು, ಆ ಬಳಿಕ ಇದ ಈ ಸಂಖ್ಯೆ 30,000 ತಲುಪುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ರೆಡ್ಡಿಟ್ ಬಳಕೆದಾರರೊಬ್ಬರು ಪ್ರಸ್ತುತ ಅಮೆರಿಕನ್ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ತಮ್ಮ ಸ್ನೇಹಿತನ ಅನುಭವ, ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.
"ತನ್ನ ಕೆಲಸದಲ್ಲಿ ಅತ್ಯುತ್ತಮ ಆಗಿರುವ ವ್ಯಕ್ತಿಗೆ ಲೇಆಫ್ ಆತಂಕ ಯಾಕೆ ಬರುತ್ತದೆ?” ಎಂಬ ಶೀರ್ಷಿಕೆಯ ಪೋಸ್ಟ್‌ನಲ್ಲಿ, ಲೇಆಫ್ ಆಗುವ ಸ್ನೇಹಿತನ ಭಯವನ್ನು ವಿವರಿಸಿದ್ದಾರೆ. "ನನ್ನ ಆತ್ಮೀಯ ಸ್ನೇಹಿತನೊಬ್ಬ ಅಮೆಜಾನ್ ಕಂಪೆನಿಯಲ್ಲಿ ಕೆಲಸ ಮಾಡುತ್ತಾನೆ. ಅಸಾಧಾರಣ ಪ್ರತಿಭಾವಂತ ವ್ಯಕ್ತಿ, ಬೇರೆಯವರಿಗೆ ಅರ್ಥವಾಗದ, ಹೇಳಲಾಗದ ತಾಂತ್ರಿಕ ಸಮಸ್ಯೆಯನ್ನು ಈತ ಹೇಳುತ್ತಾನೆ. ಲೇಆಫ್ ಆಗುತ್ತದೆ ಎಂಬ ವಿಷಯ ಬಂದಾಗಿನಿಂದ ಅವನು ಭಯದಲ್ಲಿ ಬದುಕುತ್ತಿದ್ದಾನೆ" ಎಂದು ಹೇಳಿದ್ದಾರೆ.
“ನನ್ನ ಫ್ರೆಂಡ್ ಬ್ರೇಕ್ ತಗೊಳ್ತಿಲ್ಲ, ವಿಶ್ರಾಂತಿ ಪಡೆಯುತ್ತಿಲ್ಲ. ತಮ್ಮ ಉದ್ಯೋಗದ ಮೇಲೆ ಏನು ಪರಿಣಾಮ ಬೀರುತ್ತದೆ ಎಂಬ ಭಯದಲ್ಲಿ ಇರುತ್ತಾನೆ, ಲೇಆಫ್ ಇಮೇಲ್ ಬರುವುದಾ ಎಂಬ ಭಯದಲ್ಲಿ ಇರುತ್ತಾನೆ” ಎಂದು ಅವರು ಹೇಳಿದ್ದಾರೆ. "ನನ್ನ ಫ್ರೆಂಡ್ ಸರಿಯಾಗಿ ನಿದ್ದೆ ಮಾಡೋದಿಲ್ಲ, ಬಹುಶಃ ರಾತ್ರಿ 2 ಅಥವಾ 3 ಗಂಟೆ ಮಾತ್ರ ನಿದ್ದೆ ಮಾಡ್ತಾನೆ. ಲೇಆಫ್ ಆದವರಿಗೆ ಮಧ್ಯರಾತ್ರಿಯ ನಂತರ ಅಥವಾ ಬೆಳಿಗ್ಗೆ ಇಮೇಲ್‌ಗಳು ಬಂದಿತ್ತಂತೆ. ತನಗೂ ಹಾಗೆ ಆಗಬಹುದು ಎಂದು ಅವರು ಮಲಗದೆ, ಎಚ್ಚರವಾಗಿ ಇರುತ್ತಾರೆ. ಅಂತಹ ಇಮೇಲ್‌ಗೆ ಎಷ್ಟು ಭಯಪಟ್ಟಿರುತ್ತಾರೆಂದು ಊಹಿಸಿ" ಎಂದು ಅವರು ಬರೆದುಕೊಂಡಿದ್ದಾರೆ.
"ಚೆನ್ನಾಗಿ ಕೆಲಸ ಮಾಡಿದ ಬಳಿಕವೂ ಕೆಲಸ ಇರುತ್ತೋ ಇಲ್ಲವೋ ಎಂಬ ಭಯದಲ್ಲಿ ಬದುಕುವುದು, ಕುಗ್ಗುತ್ತಿರುವುದನ್ನು ನೋಡುವುದು ಬಹಳ ಬೇಸರ ಆಗುವುದು. ನಮ್ಮ ಫೋನ್ ಆತಂಕವನ್ನು ಹುಟ್ಟುಹಾಕುವುದು, ಭಯ ಸೃಷ್ಟಿ ಮಾಡುವುದು. ಈ ಕಾರ್ಪೊರೇಟ್ ಕಂಪೆನಿಗಳಲ್ಲಿ ವಜಾಗೊಳಿಸುವ ಬಗೆ, ಇದರಿಂದ ಏನೆಲ್ಲ ಆಗುವುದು ಎಂಬುದರ ಬಗ್ಗೆ ಯಾರೂ ಕೂಡ ಮಾತನಾಡೋದಿಲ್ಲ. ಇದು ಕ್ರೂರ. ಕೆಲಸ ಕಳೆದುಕೊಳ್ಳುವ ಭಯವು, ನಿಮ್ಮನ್ನು ಲೇಆಫ್ ಮಾಡುವ ಮೊದಲೇ ನಿಮ್ಮನ್ನು ಮುರಿಯುತ್ತದೆ ಎಂದು ನಾನು ಭಾವಿಸುವೆ" ಎಂದು ಹೇಳಿಕೊಂಡಿದ್ದಾರೆ.
ಈ ಪೋಸ್ಟ್ ನೋಡಿ ಅನೇಕರು ಕಾಮೆಂಟ್ ಮಾಡಿದ್ದಾರೆ. "ನಾನು ಕೂಡ ಇದನ್ನು ಅನುಭವಿಸಿದ್ದೇನೆ. ನಿಮಗೆ ಆಗುವ ಆತಂಕ, ಊಟ ತಿಂಡಿ ಮಾಡಲು ಕೂಡ ಆಗದೆ ಇರೋದು, ಮೆಸೇಜ್‌ಗೋಸ್ಕರ ಕಾಯುವುದು, ಹೃದಯ ಬಡಿತದ ಏರಿಳಿತ ಇವೆಲ್ಲವೂ ನಿಜವಾದುದು" ಎಂದು ಅವರು ಹೇಳಿಕೊಂಡಿದ್ದಾರೆ.
"ಅಮೆಜಾನ್ ಸಂದರ್ಶನವನ್ನು ಕ್ಲಿಯರ್ ಮಾಡ್ತಾರೆ ಎಂದಾದರೆ, ಬೇರೆ ಸಂದರ್ಶನವನ್ನು ಕ್ಲಿಯರ್ ಮಾಡ್ತಾರೆ. ಕೇವಲ ಹಣ ಗಳಿಸಿ, ಜೀವನವನ್ನು ಆನಂದಿಸಿ. ನೀವು ಬಹಳ ಟೈಮ್‌ವರೆಗೆ ನನ್ನ ಜೀವನ ಹೇಗಿತ್ತು ಎಂದು ಹೇಳಿದ್ದೀರಿ. ನನಗೆ ಒಳ್ಳೆಯ ಜಾಬ್ ಇತ್ತು, ನನ್ನ ಕಂಪನಿ ಯಾವುದೇ ಸೂಚನೆ ಕೊಡದೆ, ಸುಮಾರು 50% ಉದ್ಯೋಗಿಗಳನ್ನು ವಜಾ ಮಾಡಿತ್ತು, ನಾನು 9 ತಿಂಗಳ ಕಾಲ ಆತಂಕದಲ್ಲಿದ್ದೆ” ಎಂದು ಹೇಳಿದ್ದರು.
“ಅನೇಕರು ಇಂದು ಅತಿಯಾದ ಇಂಪೋಸ್ಟರ್ ಸಿಂಡ್ರೋಮ್‌ನಿಂದ ಬಳಲುತ್ತಿದ್ದಾರೆ, ತಮ್ಮ ಮೇಲೆ ವಿಶ್ವಾಸ ಇಟ್ಟುಕೊಂಡಿಲ್ಲ. ನೀವು ಹೇಳಿದಂತೆ ಅವರು ನಿಜವಾಗಿಯೂ ಸಾಮರ್ಥ್ಯ ಹೊಂದಿದ್ದರೆ, ಅಮೆಜಾನ್‌ಗೆ ಸಮನಾದ ಇನ್ನುಳಿದ ಪ್ರತಿಷ್ಠಿತ ಕಂಪನಿಯಿಂದ ಆಫರ್ ಬರುತ್ತದೆ” ಎಂದು ಹೇಳಿದ್ದಾರೆ.