ಅಮೆಜಾನ್ ಅಧ್ಯಕ್ಷ ಜೆಫ್ ಬೆಜೋಸ್ ತಮ್ಮ ಒಟ್ಟು ಆಸ್ತಿಯಾದ 10 ಲಕ್ಷ ಕೋಟಿ ಪೈಕಿ ಬಹುತೇಕ ಆಸ್ತಿಯನ್ನು ತಮ್ಮ ಜೀವಿತಾವಧಿಯಲ್ಲಿ ದಾನ ಮಾಡುವುದಾಗಿ ಸಿಎನ್‌ಎನ್‌ಗೆ ಮಾಹಿತಿ ನೀಡಿದ ದಿನವೇ ಹುದ್ದೆ ಕಡಿತದ ಸುದ್ದಿ ಪ್ರಕಟವಾಗಿದೆ.
ನ್ಯೂಯಾರ್ಕ್: ಟ್ವಿಟ್ಟರ್ (Twitter), ಮೆಟಾ (Meta) ಕಂಪನಿಗಳು ಸಿಬ್ಬಂದಿ ಕಡಿತ (Layoff) ಮಾಡಿದ ಬೆನ್ನಲ್ಲೇ ಅಮೆಜಾನ್ (Amazon) ಸಹ 10 ಸಾವಿರ ಉದ್ಯೋಗಿಗಳನ್ನು (Employees) ಕೆಲಸದಿಂದ ತೆಗೆದು ಹಾಕಲು ಯೋಜನೆ ರೂಪಿಸಿದೆ. ಕಾರ್ಪೋರೆಟ್ ಮತ್ತು ತಂತ್ರಜ್ಞಾನ ವಿಭಾಗದಲ್ಲಿ ಈ ವಾರದಿಂದಲೇ ಸಿಬ್ಬಂದಿ ಕಡಿತ ಮಾಡಲಾಗುತ್ತದೆ ಎಂದು ಮೂಲಗಳನ್ನು ಉಲ್ಲೇಖಿಸಿ ಅಮೆರಿಕದ ನ್ಯೂಯಾರ್ಕ್ ಟೈಮ್ಸ್ (New York Times) ವರದಿ ಮಾಡಿದೆ. ಸಿಬ್ಬಂದಿ ಕಡಿತದ ಕುರಿತಾಗಿ ಅಮೆಜಾನ್ ಪ್ರತಿಕ್ರಿಯೆ ನೀಡಿಲ್ಲದಿದ್ದರೂ ಸಹ ಕಂಪನಿ ತನ್ನ ಅಧೀನದಲ್ಲಿರುವ ವಿವಿಧ ವಲಯಗಳಿಂದಲೂ ಸಿಬ್ಬಂದಿಗಳನ್ನು ಕಡಿತ ಮಾಡಲು ನಿರ್ಧರಿಸಿದೆ ಎಂದು ವರದಿ ತಿಳಿಸಿದೆ. ಕಳೆದ ವರ್ಷ ಡಿಸೆಂಬರ್ 31ರ ವೇಳೆಗೆ ಅಮೆಜಾನ್‌ನಲ್ಲಿ 1.68 ಲಕ್ಷ ಮಂದಿ ಅರೆಕಾಲಿಕ ಉದ್ಯೋಗಿಗಳಾಗಿದ್ದರು. ಮುಖ್ಯವಾಗಿ ವಾಯ್ಸ್ ಅಸಿಸ್ಟೆಂಟ್ ಅಲೆಕ್ಸಾ, ರೀಟೇಲ್ ವಿಭಾಗ ಮತ್ತು ಮಾನವ ಸಂಪನ್ಮೂಲ ವಿಭಾಗದಲ್ಲಿ ಹೆಚ್ಚಿನ ಸಂಖ್ಯೆಯ ಸಿಬ್ಬಂದಿ ಉದ್ಯೋಗ ಕಳೆದುಕೊಳ್ಳುವ ಸಾಧ್ಯತೆ ಇದೆ.
ಅಮೆಜಾನ್ ಅಧ್ಯಕ್ಷ ಜೆಫ್ ಬೆಜೋಸ್ ತಮ್ಮ ಒಟ್ಟು ಆಸ್ತಿಯಾದ 10 ಲಕ್ಷ ಕೋಟಿ ಪೈಕಿ ಬಹುತೇಕ ಆಸ್ತಿಯನ್ನು ತಮ್ಮ ಜೀವಿತಾವಧಿಯಲ್ಲಿ ದಾನ ಮಾಡುವುದಾಗಿ ಸಿಎನ್‌ಎನ್‌ಗೆ ಮಾಹಿತಿ ನೀಡಿದ ದಿನವೇ ಹುದ್ದೆ ಕಡಿತದ ಸುದ್ದಿ ಪ್ರಕಟವಾಗಿದೆ.
ಇದನ್ನು ಓದಿ: ಟ್ವಿಟರ್, ಮೆಟಾ ಆಯ್ತು.. ಈಗ ಅಮೆಜಾನ್‌ನಿಂದ 3766 ಉದ್ಯೋಗಿಗಳ ವಜಾ!
ಈ ನಡುವೆ ಅಮೆರಿಕ ಮತ್ತೊಂದು ವಿಶ್ವವಿಖ್ಯಾತ ಕಂಪನಿ ಡಿಸ್ನಿ ಕಂಪನಿಯೂ ಸಿಬ್ಬಂದಿ ಕಡಿತಕ್ಕೆ ಯೋಜಿಸಿದೆ. ಕಂಪನಿಯ ಸ್ಟ್ರೀಮಿಂಗ್ ಸೇವೆ ಕಳೆದ ತ್ರೈಮಾಸಿಕದಲ್ಲಿ 12,000 ಕೋಟಿ ರೂ. ನಷ್ಟ ಅನುಭವಿಸಿದೆ. ಇದು ಕಳೆದ ವರ್ಷದ ಇದೇ ಅವಧಿಗಿಂತ ದ್ವಿಗುಣ. ಹಾಗಾಗಿ ವೆಚ್ಚ ಕಡಿತಕ್ಕಾಗಿ ಸಿಬ್ಬಂದಿ ಕಡಿತ ಮಾಡಲಾಗುವುದು ಎಂದು ಸಿಇಒ ಬಾಬ್ ಚಪಾಕ್ ಹೇಳಿದ್ದಾರೆ.
ಅಲ್ಲದೆ, ಇದಕ್ಕೂ ಮುನ್ನವೇ ಅಮೆಜಾನ್ ಗ್ಲೋಬಲ್ ರೊಬಾಟಿಕ್ಸ್ ಟೀಮ್‌ನಿಂದ 3,766 ಉದ್ಯೋಗಿಗಳನ್ನು ವಜಾ ಮಾಡಿರುವ ವರದಿಯಾಗಿದೆ. Amazon.com Inc ವೆಚ್ಚವನ್ನು ಕಡಿತಗೊಳಿಸಲು ಧ್ವನಿ ಸಹಾಯಕ ಅಲೆಕ್ಸಾವನ್ನು ಹೊಂದಿರುವ ಸಾಧನಗಳ ಘಟಕವನ್ನು ಒಳಗೊಂಡಂತೆ ತನ್ನ ಲಾಭದಾಯಕವಲ್ಲದ ವ್ಯವಹಾರಗಳ ಪರಿಶೀಲನೆ ಕೈಗೊಳ್ಳುತ್ತಿದೆ ಎಂದು ವಾಲ್ ಸ್ಟ್ರೀಟ್ ಜರ್ನಲ್ ವರದಿ ಮಾಡಿದೆ.
ಇದನ್ನೂ ಓದಿ: TWITTER ನೌಕರರಿಗೆ ವಾರಕ್ಕೆ 80 ತಾಸುಗಳ ಕೆಲಸ: ಉಚಿತ ಊಟ, ತಿಂಡಿ ಸೌಲಭ್ಯ ಕಟ್..!
ಸಂಸ್ಥೆ ಹುದ್ದೆ ಕಡಿತ
ಮೆಟಾ 11,000
ಅಮೆಜಾನ್ 10,000
ಸ್ನ್ಯಾಪ್ 6,000
ಟ್ವಿಟ್ಟರ್ 3,500
ಇದನ್ನು ಓದಿ: ಮುಂಬರುವ ಕಷ್ಟಕರ ಸಮಯಕ್ಕೆ ಸಿದ್ಧರಾಗಿ: ಟ್ವಿಟ್ಟರ್ ಸಿಬ್ಬಂದಿಗೆ ಇ - ಮೇಲ್ ಕಳಿಸಿದ Elon Musk..!
ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್, ಇನ್ಸ್ಟಾಗ್ರಾಂ, ವಾಟ್ಸ್ಆ್ಯಪ್ ಒಡೆತನ ಹೊಂದಿರುವ ಮೆಟಾ ಕಂಪನಿ ಕೆಲ ದಿನಗಳ ಹಿಂದಷ್ಟೇ 11,000 ಮಂದಿಯನ್ನು ಕೆಲಸದಿಂದ ತೆಗೆದು ಹಾಕಿತ್ತು. ಅದಕ್ಕೂ ಮುನ್ನ ಮೈಕ್ರೋ ಬ್ಲಾಗಿಂಗ್ ತಾಣ ಟ್ವಿಟ್ಟರ್ 3,500ಕ್ಕೂ ಹೆಚ್ಚು ಮಂದಿಯನ್ನು ತೆಗೆದು ಹಾಕಿತ್ತು. ಇದಕ್ಕೆ ವಿರೋಧ ಕೂಡ ವ್ಯಕ್ತವಾಗಿತ್ತು. ಅದಕ್ಕೂ ಮುನ್ನ ಟೆಕ್ ದೈತ್ಯ ಮೈಕ್ರೋಸಾಫ್ಟ್ ಸುಮಾರು 1,000 ಉದ್ಯೋಗಿಗಳನ್ನು ವಜಾಗೊಳಿಸಿತ್ತು.
ಬಹುರಾಷ್ಟ್ರೀಯ ಕಂಪನಿಗಳಲ್ಲಿರುವ ತಾಂತ್ರಿಕ ಮತ್ತು ನೆರವು ವಿಭಾಗಗಳ ಉದ್ಯೋಗಿಗಳು ಕೆಲಸ ಕಳೆದುಕೊಳ್ಳುವ ಭೀತಿ ಭವಿಷ್ಯದಲ್ಲಿ ಹೆಚ್ಚಾಗಿದೆ. ಆರ್ಥಿಕ ಹಿಂಜರಿಕೆ, ಆರ್ಥಿಕ ಕುಸಿತ, ಆರ್ಥಿಕ ಸ್ಥಗಿತದ ಭೀತಿ ಎಲ್ಲೆಡೆ ಕಾಡುತ್ತಿದೆ, ಆದಾಯ ಕುಂಠಿತಗೊಳ್ಳಬಹುದು ಎಂಬ ಭಯದಲ್ಲಿರುವ ಟೆಕ್ ಕಂಪನಿಗಳು ಎಚ್ಚರಿಕೆಯ ಹೆಜ್ಜೆ ಇಡುತ್ತಿವೆ ಎಂದು ವರದಿಯಾಗಿದೆ.
ಇದನ್ನು ಓದಿ: ಮಗಳಿಗೆ ಹಾಲುಣಿಸಲು ಎದ್ದೆ; META ಕೆಲಸ ಕಳೆದುಕೊಂಡ ಮೇಲ್ ನೋಡಿದೆ: ಭಾರತೀಯ ಮೂಲದ ಮಹಿಳೆ ಭಾವುಕ ಪೋಸ್ಟ್