ಏರ್‌ಇಂಡಿಯಾ ಎಕ್ಸ್‌ಪ್ರೆಸ್‌ನಲ್ಲಿ ಖಾಲಿ ಹುದ್ದೆಗೆ ನೇಮಕ, ಜ.24 ಕೊನೇ ದಿನಾಂಕ

By Suvarna News  |  First Published Jan 13, 2021, 6:35 PM IST

ಏರ್‌ಇಂಡಿಯಾ ಎಕ್ಸ್‌ಪ್ರೆಸ್ ಲಿ. ಖಾಲಿ ಇರುವ ಹತ್ತು ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆಗಳನ್ನು ಆರಂಭಿಸಿದೆ. ಈಗಾಗಲೇ ಆನ್‌ಲೈನ್ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದು, ಜನವರಿ 24 ಅಪ್ಲೈ ಮಾಡಲು ಕೊನೆಯ ದಿನವಾಗಿದೆ. ಅತ್ಯುತ್ತಮ ಸಂಬಳ ಪ್ಯಾಕೇಜ್ ಕೂಡ ಇದೆ.


ಏರ್ ಇಂಡಿಯಾ ಎಕ್ಸ್‌ಪ್ರೆಸ್ ಲಿಮಿಟೆಡ್ (ಎಐಇಎಲ್) 2021 ನೇಮಕಾತಿ ಪ್ರಕ್ರಿಯೆ ಆರಂಭಿಸಿದೆ. ಏರ್ ಇಂಡಿಯಾ ಎಕ್ಸ್‌ಪ್ರೆಸ್ ಲಿಮಿಟೆಡ್, ಈ ಕುರಿತು ಅಧಿಕೃತ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ವಿಮಾನ ನಿರ್ವಹಣೆ ಎಂಜಿನಿಯರ್, ಮ್ಯಾನೇಜರ್- ಫ್ಲೈಟ್ ಡಿಸ್ಪ್ಯಾಚ್, ಮ್ಯಾನೇಜರ್-ಐಟಿ- ಇನ್ಫ್ರಾಸ್ಟ್ರಕ್ಚರ್ ಆಂಡ್ ನೆಟ್‌ವರ್ಕ್ಸ್, ಆಫೀಸರ್-ಫ್ಲೈಟ್ ಡಿಸ್ಪ್ಯಾಚ್ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಆನ್‌ಲೈನ್ ಅರ್ಜಿ ಪ್ರಕ್ರಿಯೆ ಪ್ರಾರಂಭವಾಗಿದ್ದು, ಅರ್ಜಿ ಸಲ್ಲಿಸಲು ಇದೇ ಜನವರಿ 24 ಕೊನೆ ದಿನಾಂಕವಾಗಿದೆ.

careers.airindiaexpress.in ವೆಬ್‌ಸೈಟ್‌ನಲ್ಲಿ ಅಪ್ಲಿಕೇಷನ್ ಫಾರ್ಮ್ ಅನ್ನು ಭರ್ತಿ ಮಾಡಬಹುದು.

Tap to resize

Latest Videos

undefined

ಯಾವೆಲ್ಲ ಹುದ್ದೆಗಳು?
ಖಾಲಿಯಿರುವ ಹುದ್ದೆಗಳ ಸಂಖ್ಯೆ ಒಟ್ಟು 10. ಈ ಪೈಕಿ ಐದು ಹುದ್ದೆಗಳು ಏರ್ ಕ್ರಾಫ್ಟ್ ಮೆಂಟೇನೆನ್ಸ್ ಎಂಜಿನಿಯರ್ ಹುದ್ದೆಗಳಾದರೆ, ಮ್ಯಾನೇಜರ್-ಫ್ಲೈಟ್ ಡಿಸ್‌ಪ್ಯಾಚ್ 3 ಹುದ್ದೆಗಳು, ಮ್ಯಾನೇಜರ್-ಐಟಿ-ಇನ್‌ಫ್ರಾಸ್ಟ್ರಕ್ಚರ್ ಆಂಡ್ ನೆಟ್‌ವರ್ಕ್ಸ್ ಮತ್ತು ಆಫೀಸರ್-ಫ್ಲೈಟ್ ಡಿಸ್‌ಪ್ಯಾಚ್  1 ಹುದ್ದೆಗೆ ನೇಮಕಾತಿ ನಡೆಸಲಾಗುತ್ತಿದೆ.

ರೆಸ್ಯೂಮ್ ಮತ್ತು ಸಿ.ವಿ.ಎರಡೂ ಒಂದೆನಾ OR ಬೇರೆನಾ?

ಶೈಕ್ಷಣಿಕ ವಿದ್ಯಾರ್ಹತೆ
ಏರ್‌ಕ್ರಾಫ್ಟ್ ಮೆಂಟೇನನ್ಸ್ ಎಂಜಿನಿಯರ್ ಹುದ್ದೆಗೆ ಅರ್ಜಿ ಸಲ್ಲಿಸಲು ಇಚ್ಛಿಸುವವರು  ಮಾನ್ಯತೆ ಪಡೆದ ಭಾರತೀಯ ಮಂಡಳಿ / ವಿಶ್ವವಿದ್ಯಾಲಯದಿಂದ ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಗಣಿತದೊಂದಿಗೆ 10 + 2 ಉತ್ತೀರ್ಣರಾಗಿರಬೇಕು. ಜೊತೆಗೆ ಬಿ 737-800 ವಿಮಾನದಲ್ಲಿ ಸಿಎಫ್‌ಎಂ 56 ಎಂಜಿನ್‌ ಅಳವಡಿಸಿರುವ ಸಿಎಆರ್ 66 ಸಿಎಟಿ ಬಿ 1/ಬಿ 2 ಪರವಾನಗಿ ಹೊಂದಿರಬೇಕು. ಇಷ್ಟು ಮಾತ್ರವಲ್ಲದೇ ಕನಿಷ್ಠ 3 ವರ್ಷಗಳ ಅನುಭವವಿರುವ AME ಪ್ರಮಾಣಪತ್ರ ಹೊಂದಿರಬೇಕು.



ಇನ್ನು ಮ್ಯಾನೇಜರ್-ಫ್ಲೈಟ್ ಡಿಸ್‌ಪ್ಯಾಚ್ ಹುದ್ದೆಗೆ ಅರ್ಜಿ ಸಲ್ಲಿಸಲು ಬಯಸುವವರು  ಡಿಜಿಸಿಎ ಅಗತ್ಯಕ್ಕೆ ಅನುಗುಣವಾಗಿ ಮಾನ್ಯತೆ ಪಡೆದ ವಿಶ್ವವಿದ್ಯಾಲಯ / ಮಂಡಳಿಯಿಂದ ಭೌತಶಾಸ್ತ್ರ ಮತ್ತು ಗಣಿತದೊಂದಿಗೆ 10 + 2 ಪರೀಕ್ಷೆಯೊಂದಿಗೆ ಪದವಿ ಪಡೆದಿರಬೇಕು. ಬಿ 737 ಮಾದರಿಯ ವಿಮಾನಗಳಲ್ಲಿ ಈಗಾಗಲೇ  ಡಿಜಿಸಿಎ ಡಿಸ್ಪ್ಯಾಚರ್ ಮಾನ್ಯತೆ ಪಡೆದಿರುವವರಿಗೆ ಇದು ಅನ್ವಯಿಸುವುದಿಲ್ಲ.

ಕ್ರೀಡಾ ಕೋಟಾದಲ್ಲಿ ತೆರಿಗೆ ಇಲಾಖೆಯಲ್ಲಿ ಉದ್ಯೋಗ, ಅರ್ಜಿ ಹಾಕಿ

ಡೆಪ್ಯುಟಿ ಮ್ಯಾನೇಜರ್- ಐಟಿ-ಇನ್‌ಫ್ರಾಸ್ಟ್ರಕ್ಚರ್ ಆಂಡ್ ನೆಟ್‌ವರ್ಕ್ಸ್ ಅಪ್ಲೈ ಮಾಡುವವರು ಬಿಇ / ಬಿಟೆಕ್ - ಕಂಪ್ಯೂಟರ್ ಸೈನ್ಸ್ / ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್ / ಎಂಸಿಎ / ಎಂಬಿಎ ಐಟಿ / ಬಿಸಿಎ / ಬಿಎಸ್ಸಿ (ಐಟಿ) / ಬಿಎಸ್ಸಿ (ಕಂಪ್ಯೂಟರ್ ಸೈನ್ಸ್) ಅಥವಾ ಐಟಿಯಲ್ಲಿ ಸ್ನಾತಕೋತ್ತರ ಪದವಿ /ವಿಜ್ಞಾನದಲ್ಲಿ ಪದವಿ ಹಾಗೂ ಐಟಿ ಕ್ಷೇತ್ರದಲ್ಲಿ ಡಿಪ್ಲೋಮಾ ಮಾಡಿರುವವರು ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸುವುದು ಹೇಗೆ?
ಎಲ್ಲಾ ಅಭ್ಯರ್ಥಿಗಳು ಆನ್‌ಲೈನ್‌ ಮೂಲಕ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಲಿಮಿಟೆಡ್ (ಎಐಇಎಲ್) ನ ಅಧಿಕೃತ ವೆಬ್‌ಸೈಟ್‌ನಲ್ಲಿ  ಅರ್ಜಿ ಸಲ್ಲಿಸಬಹುದು. careers.airindiaexpress.in ವೆಬ್‌ಸೈಟ್‌ನಲ್ಲಿ ನೇರವಾಗಿ ಅರ್ಜಿ ಸಲ್ಲಿಸಬಹುದು.  ಅಭ್ಯರ್ಥಿಯು ಆಯಾ ಹುದ್ದೆಗೆ ಅರ್ಜಿ ಸಲ್ಲಿಸುವ ಮೊದಲು ಅರ್ಜಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ನೀವು ಅರ್ಜಿಯೊಂದಿಗೆ ಪಾವತಿಯ ವರ್ಗಾವಣೆ ಮಾಹಿತಿ ಹಾಗೂ ಐಡಿಯನ್ನು ನಮೂದಿಸಬೇಕಾಗುತ್ತದೆ.

ಸಂಬಳ ಎಷ್ಟು?
ಏರ್ ಕ್ರಾಫ್ಟ್ ಮೆಂಟೇನೆನ್ಸ್ ಎಂಜಿನಿಯರ್ ಹುದ್ದೆಗೆ  ವಾರ್ಷಿಕ 14 ಲಕ್ಷ - 22.50 ಲಕ್ಷ ರೂ. ಪ್ಯಾಕೇಜ್ ಆದರೆ,  ಮ್ಯಾನೇಜರ್-ಫ್ಲೈಟ್ ಡಿಸ್‌ಪ್ಯಾಚ್ ಆಯ್ಕೆಯಾದವರಿಗೆ ವಾರ್ಷಿಕ 8 ಲಕ್ಷದಿಂದ-8.50 ಲಕ್ಷ ರೂ. ಸಂಬಳ ದೊರೆಯಲಿದೆ. ಅದೇ ರೀತಿ, ಮ್ಯಾನೇಜರ್-ಐಟಿ-ಇನ್‌ಫ್ರಾಸ್ಟ್ರಕ್ಚರ್ ಆಂಡ್ ನೆಟ್‌ವರ್ಕ್ಸ್  ಹುದ್ದೆಗಳಿಗೆ ವಾರ್ಷಿಕ 7 ಲಕ್ಷದಿಂದ-7.50 ಲಕ್ಷ ರೂ. ಮತ್ತು ಸೀನಿಯರ್ ಆಫೀಸರ್-ಫ್ಲೈಟ್ ಡಿಸ್‌ಪ್ಯಾಚ್  ಹುದ್ದೆಗಳಿಗೆ ಆಯ್ಕೆಯಾದವರಿಗೆ ವಾರ್ಷಿಕ ೪.೭೫ ಲಕ್ಷದಿಂದ ೫ ಲಕ್ಷ ರೂಪಾಯಿ ವೇತನ ದೊರೆಯಲಿದೆ.

ಅರ್ಜಿ ಸಲ್ಲಿಸಲು 2021ರ ಜನವರಿ 24, ಅರ್ಜಿ ಸಲ್ಲಿಸಲು ಅಂತಿಮ ದಿನಾಂಕವಾಗಿದೆ.

ಈ ವಿಶ್ವವಿದ್ಯಾಲಯದಲ್ಲಿ ಓದುತ್ತಲೇ ಪಾರ್ಟ್ ಟೈಮ್ ಜಾಬ್ ಕೂಡ ಮಾಡಬಹುದು!

click me!