ಏರ್ ಇಂಡಿಯಾ ಗಗನಸಖಿಯಾಗಿ 35 ವರ್ಷ ಸೇವೆ, ಕೊನೆ ಹಾರಾಟದ ಭಾವುಕ ಕ್ಷಣ ವೈರಲ್

Published : Jan 30, 2026, 01:22 PM IST
Air India viral video

ಸಾರಾಂಶ

ಏರ್ ಇಂಡಿಯಾದಲ್ಲಿ ಗಗನಸಖಿಯಾಗಿ ನೂಪುರ್ ಪರ್ತ್ 35 ವರ್ಷ ಪೂರೈಸಿದ್ದಾರೆ. ಯಶಸ್ವಿಯಾಗಿ ವೃತ್ತಿ ಜೀವನ ನಡೆಸಿದ ಅವರು ಈಗ ನಿವೃತ್ತಿ ಘೋಷಣೆ ಮಾಡಿದ್ದಾರೆ. ಅದ್ರ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. 

ಏರ್ ಇಂಡಿಯಾ (Air India )ದ ಗಗನಸಖಿ (air hostess)ಯೊಬ್ಬರ ಬೀಳ್ಕೊಡುಗೆಯ ವಿಡಿಯೋ ಪ್ರಸ್ತುತ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. 35 ವರ್ಷಗಳ ಕಾಲ ಸೇವೆ ಸಲ್ಲಿಸಿದ ಗಗನಸಖಿ ತಮ್ಮ ಅಂತಿಮ ಹಾರಾಟದ ವೇಳೆ ನಿವೃತ್ತಿ ಘೋಷಿಸಿದ್ದಾರೆ. ಅವರ ಮಗಳು ಈ ಭಾವನಾತ್ಮಕ ಕ್ಷಣವನ್ನು ಕ್ಯಾಮೆರಾದಲ್ಲಿ ಸೆರೆಹಿಡಿದು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್ ತ್ವರಿತವಾಗಿ ವೈರಲ್ ಆಗಿದ್ದು, ಬಳಕೆದಾರರ ಕಣ್ಣು ಒದ್ದೆಯಾಗಿದೆ.

35 ವರ್ಷಗಳ ನಂತ್ರ ವೃತ್ತಿಜೀವನಕ್ಕೆ ವಿದಾಯ

35 ವರ್ಷಗಳ ಕಾಲ ಗಗನಸಖಿಯಾಗಿ ಕೆಲಸ ಮಾಡೋದು ಸುಲಭವಲ್ಲ. ಕೆಲ್ಸದ ನಂತ್ರ ನಿವೃತ್ತಿ ಘೋಷಣೆ ಕೂಡ ಸುಲಭದ ಮಾತಲ್ಲ. ಸಾಕಷ್ಟು ಏಳು – ಬೀಳುಗಳ ಮಧ್ಯೆ ಗಗನಸಖಿಯಾಗಿ ಯಶಸ್ವಿ ವೃತ್ತಿ ಜೀವನ ಮುಗಿಸಿದವರು ನೂಪುರ್ ಪಾರ್ತ್. ಅವರು 35 ವರ್ಷಗಳ ವೃತ್ತಿಜೀವನದ ನಂತ್ರ ಭಾವನಾತ್ಮಕ ರೀತಿಯಲ್ಲಿ ತಮ್ಮ ವೃತ್ತಿಜೀವನಕ್ಕೆ ವಿದಾಯ ಹೇಳಿದ್ದಾರೆ. ಚಿಕಾಗೋದಿಂದ ದೆಹಲಿಗೆ ಹೋಗುವ ಏರ್ ಇಂಡಿಯಾ ವಿಮಾನವು ನೂಪುರ್ ಪಾರ್ತ್ ಅವರು ಗಗನಸಖಿಯಾಗಿ ಕೆಲಸ ಮಾಡಿದ ಕೊನೆಯ ಹಾರಾಟವಾಗಿತ್ತು. ನೂಪುರ್ ಪಾರ್ತ್ ತಮ್ಮ ವೃತ್ತಿ ಜೀವನದ ಕೊನೆ ಕ್ಷಣದಲ್ಲಿ ಪ್ರಯಾಣಿಕರಿಗೆ ಅಂತಿಮ ಘೋಷಣೆ ಮಾಡಿದ್ರು. ಅವರ ಮಗಳು ಸಂಜನಾ ಪಾರ್ತ್ ಈ ವಿಶೇಷ ಕ್ಷಣವನ್ನು ತಮ್ಮ ಫೋನ್ನಲ್ಲಿ ರೆಕಾರ್ಡ್ ಮಾಡಿದ್ದಾರೆ. ಈ ಘೋಷಣೆ ಇತರ ಪ್ರಯಾಣಿಕರಿಗೆ ಸಾಮಾನ್ಯವಾಗಿದ್ದರೂ, ನೂಪುರ್, ಅವರ ಕುಟುಂಬ ಮತ್ತು ಸಹೋದ್ಯೋಗಿಗಳಿಗೆ ಇದು ಸ್ಮರಣೀಯ ಮತ್ತು ಭಾವನಾತ್ಮಕ ಕ್ಷಣವಾಗಿತ್ತು.

40 ವರ್ಷ ವಯಸ್ಸಾದರೂ ಸಿಗುತ್ತೆ ರಾಜ್ಯ ಸರ್ಕಾರಿ ಕೆಲಸ!

ಕೊನೆಯ ಬಾರಿಗೆ ಘೋಷಣೆ

ವೀಡಿಯೊದಲ್ಲಿ ನೀಲಿ ಸೀರೆ ಧರಿಸಿರುವ ನೂಪುರ್ ಶಾಂತ ಮತ್ತು ಆತ್ಮವಿಶ್ವಾಸದಿಂದ ಕಾಣಿಸಿಕೊಂಡಿದ್ದಾರೆ. ಅವರು ಅತ್ಯಂತ ಸರಳತೆಯಿಂದ, ಸ್ಪಷ್ಟವಾಗಿ ಅನೌನ್ಸ್ ಮಾಡ್ತಿರೋದನ್ನು ವಿಡಿಯೋದಲ್ಲಿ ಕೇಳಬಹುದು. ವಿಮಾನಕ್ಕೆ ಸಂಬಂಧಿಸಿದ ಎಲ್ಲಾ ಪ್ರಮುಖ ಮಾಹಿತಿಯನ್ನು ಅವರು ಹಂಚಿಕೊಳ್ಳುತ್ತಿದ್ದಾರೆ. ಅವರ ಧ್ವನಿಯಲ್ಲಿ ಯಾವುದೇ ಹಿಂಜರಿಕೆಯಿರಲಿಲ್ಲ. ಅವರ ಮುಖದಲ್ಲಿ ಯಾವುದೇ ಆಡಂಬರದ ಅಭಿವ್ಯಕ್ತಿ ಇಲ್ಲ, ಇದು ಅವರ ವರ್ಷಗಳ ಅನುಭವಕ್ಕೆ ಸಾಕ್ಷಿಯಾಗಿದೆ. ಪೈಲಟ್ ಜೊತೆ ಕೇಕ್ ಕತ್ತರಿಸಿ, ಸಹೋದ್ಯೋಗಿಗಳಿಗೆ ನಗು ಮುಖದಿಂದ ಧನ್ಯವಾದ ಹೇಳಿ, ವಿಮಾನದಿಂದ ನೂಪುರ್ ಇಳಿಯೋದನ್ನು ವಿಡಿಯೋದಲ್ಲಿ ನೋಡಬಹುದು.

ಶಾಶ್ವತವಾಗಿ ನೆನಪಿಡುವ ಪ್ರಯಾಣ

ಈ ಕ್ಷಣವನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿರುವ ನೂಪುರ್ ಅವರ ಪುತ್ರಿ ಸಂಜನಾ ಪಾರ್ತ್, 30.07.2024 ಅವರ ಅಂತಿಮ ಘೋಷಣೆ. ಸಿಬ್ಬಂದಿಯಾಗಿ ಅವರ ಕೊನೆಯ ವಿಮಾನ ಎಂಬ ಶೀರ್ಷಿಕೆಯಲ್ಲಿ ಬರೆದಿದ್ದಾರೆ. ಈ ಸಣ್ಣ ಶೀರ್ಷಿಕೆಯು ಇಡೀ ವೃತ್ತಿಜೀವನದ ಕಠಿಣ ಪರಿಶ್ರಮ, ಸಮರ್ಪಣೆಯನ್ನು ಹೇಳುತ್ತದೆ.

ಬೀದಿ ಬದಿ ಮಲಗಿದ್ದ ಮಗುವಿಗೆ ತೊಟ್ಟಿಲ ಉಡುಗೊರೆ ಕೊಟ್ಟ ಪೊಲೀಸ್, ಖಾಕಿ ಮನಸ್ಸಿಗೆ ಕರಗಿದ ನೆಟ್ಟಿಗರು

ಬಳಕೆದಾರರ ಭಾವನಾತ್ಮಕ ಪ್ರತಿಕ್ರಿಯೆ

ವೀಡಿಯೊ ವೈರಲ್ ಆದ ತಕ್ಷಣ, ಜನರು ನೂಪುರ್ ಪಾರ್ತ್ಗೆ ಆತ್ಮೀಯ ಶುಭಾಶಯಗಳನ್ನು ತಿಳಿಸಿದ್ದಾರೆ. ಕೆಲವರು ಇದನ್ನು ಹೆಮ್ಮೆಯ ಕ್ಷಣ ಎಂದು ಕರೆದಿದ್ದಾರೆ. ಇತರರು ವೀಡಿಯೊ ನೋಡಿ ಕಣ್ಣಂಚಲ್ಲಿ ನೀರು ಬಂದು ಎಂದಿದ್ದಾರೆ. ಅನೇಕರು ಗಗನಸಖಿಯ ಕಠಿಣ ಪರಿಶ್ರಮ ಮತ್ತು ಶಿಸ್ತನ್ನು ಶ್ಲಾಘಿಸಿದರು.

 

 

PREV
Read more Articles on
click me!

Recommended Stories

30 ಸಾವಿರ ನೌಕರರನ್ನು ಮನೆಗೆ ಕಳುಹಿಸಿದ ಬೃಹತ್​ ಕಂಪೆನಿ! ರಾಜ್ಯದಲ್ಲಿ ಯಾರ ಕೆಲಸಕ್ಕೆ ಬಿತ್ತು ಕತ್ತರಿ?
ನಾಳೆ 16 ಸಾವಿರ ಉದ್ಯೋಗಿಗಳ ಕಿತ್ತು ಹಾಕಲಿದೆ ಅಮೇಜಾನ್, ಭಾರತದಲ್ಲೇ ಹೆಚ್ಚು