ಬೆಂಗಳೂರು ಮೆಟ್ರೋದಲ್ಲಿ 2 ಲಕ್ಷ ವೇತನದ ಉದ್ಯೋಗ! ಯಾರು ಅರ್ಜಿ ಸಲ್ಲಿಸಬಹುದು? ಇಂದೇ ಅರ್ಜಿ ಸಲ್ಲಿಸಿ

Published : Jan 07, 2026, 07:52 PM IST
BMRCL

ಸಾರಾಂಶ

ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ಕಂಪನಿ ಕಾರ್ಯದರ್ಶಿ ಮತ್ತು ಜನರಲ್ ಮ್ಯಾನೇಜರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಪದವಿ, ಸ್ನಾತಕೋತ್ತರ ಪದವಿ, ಎಂಬಿಎ, ಅಥವಾ ಸಿಎ ಪೂರ್ಣಗೊಳಿಸಿದ ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.  

ಬೆಂಗಳೂರು: ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ಇದೀಗ ಉನ್ನತ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು.

ಹುದ್ದೆಯ ವಿವರಗಳು:

ಹುದ್ದೆಗಳು: ಕಂಪನಿ ಕಾರ್ಯದರ್ಶಿ ಮತ್ತು ಜನರಲ್ ಮ್ಯಾನೇಜರ್.

ಒಟ್ಟು ಹುದ್ದೆಗಳು: 02

ಸಂಬಳ: 1,64,000-2,06,250

ಕೆಲಸದ ಸ್ಥಳ: ಬೆಂಗಳೂರು-ಕರ್ನಾಟಕ

ಯಾರು ಅರ್ಜಿ ಸಲ್ಲಿಸಬಹುದು?

ಪದವಿ, ಸ್ನಾತಕೋತ್ತರ ಪದವಿ, ಎಂಬಿಎ, ಸಿಎ

ವಯೋಮಿತಿ:

ಗರಿಷ್ಠ 55 ವರ್ಷದೊಳಗಿರಬೇಕು.

ಅರ್ಜಿ ಶುಲ್ಕ:

ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ

ಆಯ್ಕೆ ಹೇಗೆ?

ಕಿರುಪಟ್ಟಿ ಮತ್ತು ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.

ಅರ್ಜಿ ಸಲ್ಲಿಸುವುದು ಹೇಗೆ?

ಮೊದಲು ಬಿಎಂಆರ್‌ಸಿಎಲ್ ವೆಬ್‌ಸೈಟ್ (bmrc.co.in) ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ.  ನಂತರ ಆ ಅರ್ಜಿಯ ಪ್ರಿಂಟ್ ತೆಗೆದುಕೊಂಡು, ಅಗತ್ಯ ದಾಖಲೆಗಳೊಂದಿಗೆ ಈ ಕೆಳಗಿನ ವಿಳಾಸಕ್ಕೆ ಕೊರಿಯರ್ ಅಥವಾ ಪೋಸ್ಟ್ ಮೂಲಕ ಕಳುಹಿಸಿ:

ವಿಳಾಸ: ಜನರಲ್ ಮ್ಯಾನೇಜರ್ (HR), ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್, 3ನೇ ಮಹಡಿ, BMTC ಕಾಂಪ್ಲೆಕ್ಸ್, ಶಾಂತಿನಗರ, ಬೆಂಗಳೂರು – 560027.

ಪ್ರಮುಖ ದಿನಾಂಕಗಳು:

ಅರ್ಜಿ ಸಲ್ಲಿಕೆ ಆರಂಭವಾದ ದಿನಾಂಕ: ಡಿಸೆಂಬರ್ 31-2025

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಜನವರಿ 26-2026

ಹಾರ್ಡ್ ಸಲ್ಲಿಕೆಯ ಕೊನೆಯ ದಿನಾಂಕ: ಜನವರಿ 31-2026

PREV
Read more Articles on
click me!

Recommended Stories

WFH ನಿಯಮ ಬದಲಿಸಿದ ವಿಪ್ರೋ, ಕನಿಷ್ಠ 6 ಗಂಟೆ ಕಚೇರಿಯಲ್ಲಿ ಕೆಲಸ ಮಾಡುವಂತೆ ಟೆಕ್ಕಿಗಳಿಗೆ ಸೂಚನೆ!
ಅಸ್ವಸ್ಥ ತಾಯಿಯ ನೋಡಿಕೊಳ್ಳಲು ರಜೆ ಕೇಳಿದ ಉದ್ಯೋಗಿಗೆ ಮ್ಯಾನೇಜರ್ ಹೇಳಿದ್ದೇನು? ಕೆಲಸ ತೊರೆದು ಸಂಕಟ ತೋಡಿಕೊಂಡ ಮಹಿಳೆ