ವಿವಿಧ ಹುದ್ದೆಗಳ ನೇಮಕಾತಿ ಮಾಡಿಕೊಳ್ಳಲು ಬಿಬಿಎಂಪಿ ನೇರ ಸಂದರ್ಶನಕ್ಕೆ ಆಹ್ವಾನಿಸಿದೆ, ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಸಂದರ್ಶನಕ್ಕೆ ಹಾಜರಾಗಬಹುದು. ಈ ಬಗ್ಗೆ ಮಾಹಿತಿ ಇಲ್ಲಿದೆ.
ಬೆಂಗಳೂರು, (ಆಗಸ್ಟ್ 05): ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ವ್ಯಾಪ್ತಿಯಲ್ಲಿ ಸ್ಥಾಪಿಸಲಾಗುವ 'ನಮ್ಮ ಕ್ಲಿನಿಕ್'ಗಳಲ್ಲಿ ಕರ್ತವ್ಯ ನಿರ್ವಹಸಲು ವಿವಿಧ ಹುದ್ದೆಗಳ ನೇಮಕಾತಿ ನಡೆಯುತ್ತಿದೆ. ಒಟ್ಟು 940 ವಿವಿಧ ಹುದ್ದೆಗಳ ಭರ್ತಿಗೆ ನೇರ ಸಂದರ್ಶನಕ್ಕೆ ದಿನಾಂಕ ನಿಗದಿಪಡಿಸಿದೆ,
ವೈದ್ಯರು, ದಾದಿಯರು ಸೇರಿದಂತೆ ವಿವಿಧ ಹುದ್ದೆಗಳ ನೇಮಕಾತಿಗೆ ನೇರ ಸಂದರ್ಶನ ನಡೆಸಲಾಗುವುದು. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆಗಸ್ಟ್ 10 ಮತ್ತು 11 ರಂದು ನಡೆಯುವ ಈ ನೇರ ಸಂದರ್ಶನದಲ್ಲಿ ಭಾಗಿಯಾಗಬಹುದಾಗಿದೆ.
ಜಾಬ್ಸ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಕೇಂದ್ರ ಸರ್ಕಾರದ 15ನೇ ಹಣಕಾಸು ಆಯೋಗದ ಯೋಜನೆಯಡಿಯಲ್ಲಿ ಕರ್ನಾಟಕ ಸರ್ಕಾರದ ಅನುಮೋದನೆಯಂತೆ 'ನಮ್ಮ ಕ್ಲಿನಿಕ್'ಗಳನ್ನು ಸ್ಥಾಪಿಸಲಾಗಿದ್ದು, 01 ವರ್ಷದ ಅವಧಿಗೆ ಗುತ್ತಿಗೆ ಆಧಾರದ ಮೇಲೆ ಅಭ್ಯರ್ಥಿಗಳನ್ನ ಆಯ್ಕೆ ಮಾಡಿಕೊಳ್ಳಲಾಗುತ್ತಿದೆ.
ಹುದ್ದೆಗಳ ವಿವರ
ವೈದ್ಯಾಧಿಕಾರಿಗಳು : 235
ಶುಶ್ರೂಷಕಿ/ಶುಶ್ರೂಷಕರು :235
ಪ್ರಯೋಗಶಾಲಾ ತಂತ್ರಜ್ಞರು : 235
ನಾಲ್ಕನೇ ದರ್ಜೆ ನೌಕರರು : 235
ಒಟ್ಟು ಹುದ್ದೆಗಳು: 930
ವಿದ್ಯಾರ್ಹತೆ
ವೈದ್ಯಾಧಿಕಾರಿಗಳು : ಎಂಬಿಬಿಎಸ್
ಶುಶ್ರೂಷಕಿ/ಶುಶ್ರೂಷಕರು : ಬಿಎಸ್ಸಿ
ಪ್ರಯೋಗಶಾಲಾ ತಂತ್ರಜ್ಞರು : ಡಿಪ್ಲೊಮ ಇನ್ ಪ್ರಯೋಗಶಾಲಾ ತಂತ್ರಜ್ಞಾನ (ಬಿಎಂಎಎಲ್‌ಟಿ), ಕಂಪ್ಯೂಟರ್ ಜ್ಞಾನ ಹೊಂದಿರಬೇಕು.
ನಾಲ್ಕನೇ ದರ್ಜೆ ನೌಕರರು : ಎಸ್‌ಎಸ್‌ಎಲ್‌ಸಿ ಅಥವಾ ತತ್ಸಮಾನ
ಸಂದರ್ಶನ ನಡೆಯುವ ದಿನಾಂಕ ಮತ್ತು ಸ್ಥಳ
ನೌಕರರ ಭವನ, ಬಿಬಿಎಂಪಿ, ಕೇಂದ್ರ ಕಛೇರಿ, ಎನ್ ಆರ್ ಚೌಕ.
ದಿನಾಂಕ : ಆಗಸ್ಟ್ 10, 11, 2022
ಸಮಯ: ಬೆಳಿಗ್ಗೆ 10-30 ಗಂಟೆಯಿಂದ ಸಂಜೆ 04-30 ಗಂಟೆಯವರೆಗೆ.