Latest Videos

ಕರ್ನಾಟಕದಲ್ಲಿ 1,747 ಕೋಟಿ ಹೂಡಿಕೆಗೆ ಅಸ್ತು, 4,900 ಉದ್ಯೋಗ ಸೃಷ್ಟಿ, ಸಚಿವ ನಿರಾಣಿ

By Kannadaprabha NewsFirst Published Oct 23, 2022, 1:30 AM IST
Highlights

ಒಟ್ಟು 35 ಬೃಹತ್‌ ಮತ್ತು ಮಧ್ಯಮ ಯೋಜನೆಗಳಿಂದ 1747.47 ಕೋಟಿ ರು. ಬಂಡವಾಳ ಹೂಡಿಕೆಯಾಗಲಿದ್ದು, ಇದರಿಂದಾಗಿ 4904 ಉದ್ಯೋಗಗಳು ಸೃಷ್ಟಿಯಾಗಲಿವೆ: ಮುರುಗೇಶ್‌ ನಿರಾಣಿ 

ಬೆಂಗಳೂರು(ಅ.23):  ಕೈಗಾರಿಕೆಗಳ ಬೆಳವಣಿಗೆ ಮತ್ತು ಉದ್ಯೋಗ ಸೃಷ್ಟಿಗೆ ಹೆಚ್ಚಿನ ಉತ್ತೇಜನ ನೀಡಿರುವ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯು 1747.37 ಕೋಟಿ ರು. ಬಂಡವಾಳ ಹೂಡಿಕೆಯ 35 ಯೋಜನೆಗಳಿಗೆ ಅನುಮೋದನೆ ನೀಡಿದೆ. ಕರ್ನಾಟಕ ಉದ್ಯೋಗ ಮಿತ್ರ ಕಚೇರಿಯಲ್ಲಿ ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್‌ ನಿರಾಣಿ ಅಧ್ಯಕ್ಷತೆಯಲ್ಲಿ ನಡೆದ 135ನೇ ರಾಜ್ಯ ಮಟ್ಟದ ಏಕಾಗವಾಕ್ಷಿ ಅನುಮೋದನಾ ಸಮಿತಿ ಸಭೆಯಲ್ಲಿ ಬಂಡವಾಳ ಹೂಡಿಕೆಯ ಯೋಜನೆಗೆ ಅನುಮೋದನೆ ನೀಡಲಾಗಿದೆ.

ಈ ವೇಳೆ ಮಾತನಾಡಿದ ಸಚಿವ ಮುರುಗೇಶ್‌ ನಿರಾಣಿ, ಒಟ್ಟು 35 ಬೃಹತ್‌ ಮತ್ತು ಮಧ್ಯಮ ಯೋಜನೆಗಳಿಂದ 1747.47 ಕೋಟಿ ರು. ಬಂಡವಾಳ ಹೂಡಿಕೆಯಾಗಲಿದ್ದು, ಇದರಿಂದಾಗಿ 4904 ಉದ್ಯೋಗಗಳು ಸೃಷ್ಟಿಯಾಗಲಿವೆ. 50 ಕೋಟಿ ರು.ಗಿಂತ ಹೆಚ್ಚು ಬಂಡವಾಳ ಹೂಡಿಕೆಯ ಎಂಟು ಪ್ರಮುಖ ಬೃಹತ್‌ ಮತ್ತು ಮಧ್ಯಮ ಯೋಜನೆಗಳಿಗೆ ಅನುಮೋದನೆ ನೀಡಿದ್ದು, ಇವುಗಳಿಂದ 949.11 ಕೋಟಿ ರು. ಬಂಡವಾಳ ಹೂಡಿಕೆಯಾಗಿ ಸುಮಾರು 2461 ಜನರಿಗೆ ಉದ್ಯೋಗಾವಕಾಶ ಲಭ್ಯವಾಗಲಿದೆ ಎಂದು ಹೇಳಿದರು.

Rozgar Mela: ಉದ್ಯೋಗ ಮೇಳಕ್ಕೆ ಚಾಲನೆ ನೀಡಿದ ಮೋದಿ, 75 ಸಾವಿರ ಸಿಬ್ಬಂದಿಗೆ ನೇಮಕಾತಿ ಪತ್ರ ವಿತರಣೆ!

15 ಕೋಟಿ ರು.ನಿಂದ 50 ಕೋಟಿ ರು. ಒಳಗಿನ ಬಂಡವಾಳ ಹೂಡಿಕೆಯ 25 ಹೊಸ ಯೋಜನೆಗಳಿಗೆ ಸಮಿತಿಯು ಒಪ್ಪಿಗೆ ನೀಡಿದ್ದು, ಇವುಗಳಿಂದ 567.43 ಕೋಟಿ ರು. ಹೂಡಿಕೆ ಮತ್ತು 2443 ಜನರಿಗೆ ಉದ್ಯೋಗಾವಕಾಶ ಲಭ್ಯವಾಗಲಿದೆ. ಹೆಚ್ಚುವರಿ ಬಂಡವಾಳ ಹೂಡಿಕೆಯ ಎರಡು ಯೋಜನೆಗೆ ಅನುಮೋದನೆ ನೀಡಿದ್ದು, ಇದರಿಂದ 230.83 ಕೋಟಿ ರು. ಬಂಡವಾಳ ಹೂಡಿಕೆಯಾಗಲಿದೆ. ಮೇಲ್ಕಂಡ ಒಟ್ಟು 35 ಯೋಜನೆಗಳಿಂದ 1747.37 ಕೋಟಿ ರು. ಬಂಡವಾಳ ಹೂಡಿಕೆಯಾಗಲಿದ್ದು, ಇವುಗಳಿಂದ 4904 ಜನರಿಗೆ ಉದ್ಯೋಗಾವಕಾಶ ಲಭ್ಯವಾಗಲಿದೆ ಎಂದು ತಿಳಿಸಿದರು.

ಸಭೆಯಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಮಣರೆಡ್ಡಿ, ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ ಆಯುಕ್ತೆ ಗುಂಜನ್‌ ಕೃಷ್ಣ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಪ್ರಸ್ತಾವಿತ ಯೋಜನೆಗಳು

ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಮತ್ತು ರಾಮನಗರ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ಲಿ.
170 ಕೋಟಿ ರು. ಹೂಡಿಕೆ, 770 ಉದ್ಯೋಗ ಸೃಷ್ಟಿ
ಪ್ರಭಾರ್ಥಿ ಎಥೆನಾಲ್‌ ಪ್ರೈ.ಲಿ.
150 ಕೋಟಿ ರು. ಹೂಡಿಕೆ, 93 ಉದ್ಯೋಗ ಸೃಷ್ಟಿ
ಶ್ರೀವೇದ್‌ ಪ್ರಕಾಶ್‌ ಡಿಸ್ಟಿಲರಿ ಪೆಟ್ರೋ ಕೆಮಿಕಲ್ಸ್‌ ಪ್ರೈ.ಲಿ.
149 ಕೋಟಿ ರು. ಹೂಡಿಕೆ, 72 ಉದ್ಯೋಗ ಸೃಷ್ಟಿ
ಅವಂಟಿನಿಯಾ ಆಗ್ರೋವೆಟ್‌ ಪ್ರೈ.ಲಿ.
138.36 ಕೋಟಿ ರು. ಹೂಡಿಕೆ, 65 ಉದ್ಯೋಗ ಸೃಷ್ಟಿ
ಎಸ್‌.ಕೆ.ಸ್ಟೀಲ್ಟೆಕ್ಸ್‌ ಪ್ರೈ.ಲಿ.
120 ಕೋಟಿ ರು. ಹೂಡಿಕೆ, 190 ಉದ್ಯೋಗ ಸೃಷ್ಟಿ
ಬೆಂಗಳೂರು ಮೆಟಲರ್ಜಿಕಲ್ಸ್‌ ಪ್ರೈ. ಲಿ.
100.29 ಕೋಟಿ ರು. ಹೂಡಿಕೆ, 300 ಉದ್ಯೋಗ ಸೃಷ್ಟಿ
ಶ್ರೀಲಕ್ಷ್ಮಿ ಸ್ಟೀಲ್‌ ಸಪ್ಲೈಯರ್ಸ್‌
64.28 ಕೋಟಿ ರು. ಹೂಡಿಕೆ, 250 ಉದ್ಯೋಗ ಸೃಷ್ಟಿ
ಸೂರ್ಯ ಕೋಲ್ಡ್‌ ಸ್ಟೋರೇಜ್‌
56.38 ಕೋಟಿ ರು. ಹೂಡಿಕೆ, 70 ಉದ್ಯೋಗ ಸೃಷ್ಟಿ
ಗೋಪಾಲನ್‌ ಎಂಟರ್‌ಪ್ರೈಸಸ್‌ (ಲಾಜಿಸ್ಟಿಕ್ಸ್‌)
48.46 ಕೋಟಿ ರು. ಹೂಡಿಕೆ, 300 ಉದ್ಯೋಗ ಸೃಷ್ಟಿ
 

click me!