ಭ್ರಷ್ಟಾಚಾರದಲ್ಲಿ ಮುಳುಗಿದ ಕಾಗೆ ನೀವು ಸಿದ್ದರಾಮಯ್ಯನವರೇ. ಸಂಪೂರ್ಣ ಕಾಂಗೆಯೇ ಕಪ್ಪು, ನಾವು ಕಪ್ಪು ಚುಕ್ಕೆ ಎಲ್ಲಿಂದ ತೋರಿಸಬೇಕು ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಮೊದಲಿಸಿದರು.
ಮೈಸೂರು (ಆ.11): ಭ್ರಷ್ಟಾಚಾರದಲ್ಲಿ ಮುಳುಗಿದ ಕಾಗೆ ನೀವು ಸಿದ್ದರಾಮಯ್ಯನವರೇ. ಸಂಪೂರ್ಣ ಕಾಂಗೆಯೇ ಕಪ್ಪು, ನಾವು ಕಪ್ಪು ಚುಕ್ಕೆ ಎಲ್ಲಿಂದ ತೋರಿಸಬೇಕು ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಮೊದಲಿಸಿದರು. ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಶನಿವಾರ ಬಿಜೆಪಿ- ಜೆಡಿಎಸ್ ಆಯೋಜಿಸಿದ್ದ ಮೈಸೂರು ಚಲೋ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 187 ಕೋಟಿ ರೂ. ವಾಲ್ಮೀಕಿ ನಿಗಮದ ಹಣವನ್ನು ಲೂಟಿ ಹೊಡೆದಿದ್ದೀರಿ. ಮುಖ್ಯಮಂತ್ರಿಗಳು ನಮ್ಮ ಪ್ರಶ್ನೆಗೆ ಸದನದಲ್ಲಿ ಉತ್ತರ ಕೊಡಲಿಲ್ಲ. ನಾನು ನಿಷ್ಠಾವಂತ, ನನ್ನ ಮೇಲೆ ಕಪ್ಪು ಚುಕ್ಕೆ ಇಡುತ್ತಿರುವುದಾಗಿ ದೂರಿದ್ದಾರೆ. ನನ್ನದು ತೆರೆದ ಪುಸ್ತಕ ಎನ್ನುತ್ತೀರ. ಹಾಗಾದರೆ ಸದನದಿಂದ ಓಡಿ ಬಂದದ್ದು ಯಾಕೆ ಎಂದು ಪ್ರಶ್ನಿಸಿದರು.
ಇಂದು ದಲಿತರ ಮಾರಣ ಹೋಮ ನಡೆಯುತ್ತಿದೆ. ನಾನು ತಪ್ಪೆ ಮಾಡಿಲ್ಲ ಎಂದು ಹೇಳುವವರು ಸದನದಿಂದ ಆಚೆಗೆ ಬಂದದ್ದು ಯಾಕೆ? ನಾವು ಅಲ್ಲಿಂದ ಅಟ್ಟಿಸಿಕೊಂಡು ಮೈಸೂರಿಗೆ ಬಂದಿದ್ದೇವೆ. ದಲಿತರ ಮುಂದೆ ಪ್ರೀತಿ ನುಡಿ, ಹಿಂದಿನಿಂದ ಚಾಟಿ ಹೊಡಿ ಎಂಬಂತಿದೆ ನಿಮ್ಮ ನಡೆ. ರಾಜೀನಾಮೆ ಕೊಡುವವರೆಗೆ ನಾವು ಹೋರಾಟ ಮಾಡುತ್ತೇವೆ. ತಳ ಸಮುದಾಯಕ್ಕೆ ನ್ಯಾಯ ಕೊಟ್ಟಿದ್ದು ಅಂಬೇಡ್ಕರ್. ಅನ್ಯಾಯ ಮಾಡಿದವರ ಫೋಟೊ ಇಡುವುದಾದರೆ ನಿಮ್ಮ ಫೋಟೊ ಇಡಬೇಕು ಎಂದು ಟೀಕಿಸಿದರು.
ದೇವೇಗೌಡರ ವಯಸ್ಸಿಗೆ ಮರ್ಯಾದೆ ಕೊಡುವುದು ಕಲಿಯಬೇಕು: ಡಿಕೆಶಿಗೆ ನಿಖಿಲ್ ಕುಮಾರಸ್ವಾಮಿ ಟಾಂಗ್
ಮಾಜಿ ಸಚಿವ ಸಾ.ರಾ. ಮಹೇಶ್ ದಾಖಲೆಗಳನ್ನು ಬಿಡುಗಡೆಗೊಳಿಸಿ ಮಾತನಾಡಿ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಕುಟುಂಬದ ವಿರುದ್ಧ ಆಕ್ಷೇಪಾರ್ಹ ಪ್ಲೆಕ್ಸ್‌ಹಾಕಿದ್ದು, ಇದಕ್ಕೆ ಸಂಬಂಧಿಸಿದ ದಾಖಲಾತಿ ತೆಗೆದುಕೊಳ್ಳಿ. ಯಾರ ಹೆಸರಲ್ಲಿ ನಿವೇಶನ ಇದೆ. ಯಾರು ಶಿಫಾರಸ್ಸು ಪತ್ರ ನೀಡಿದೆ ನೋಡಿ ಎಂದು ಪ್ರಶ್ನಿಸಿದರು. ಶಿಫಾರಸ್ಸು ಪತ್ರ ನೀಡಿರುವುದು ನೀವು. ಆಗ ಉಪ ಮುಖ್ಯಮಂತ್ರಿ ಆಗಿದ್ದು ನೀವು. ನಾವು ಯಾರೂ ಅಲ್ಲ. ದಲಿತರ ಹೆಸರು ಹೇಳಿ ಅಧಿಕಾರಕ್ಕೆ ಬಂದು ಮೋಸ ಮಾಡಿದ್ದೀರಿ. ಫ್ಲೆಕ್ಸ್ ಗಳಲ್ಲಿ ಇಲ್ಲ ಸಲ್ಲದ ಆರೋಪ ಮಾಡಿ, ಇದಕ್ಕೆ ಸಿದ್ದರಾಮಯ್ಯ ಅವರೇ ಸಾಥ್ ನೀಡಿರುವುದು ನಾಚಿಕೆಗೇಡು. ನಗರ ಪಾಲಿಕೆ ಮತ್ತು ಪೊಲೀಸರನ್ನು ಕೈಗೊಂಬೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು.
ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಮಾತನಾಡಿ, ತನ್ನ ಮೇಲೆ ಒಂದೂ ಕಪ್ಪು ಚುಕ್ಕೆ ಇಲ್ಲ ಎನ್ನುವ ಸಿದ್ದರಾಮಯ್ಯ ಅವರೇ ನಿಮ್ಮ ಪೋಸ್ಟರ್‌ಗಳಲ್ಲಿ ಜನಾಂದೋಲನ ಎಂದು ಹಾಕಿದ್ದೀರಿ. ಅದು ಜನಾಂದೋಲನವಲ್ಲ. ಧನಾಂದೋಲನ ಎಂದು ಟೀಕಿಸಿದರು. ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಒಳಗೆ ಒಡೆದಾಟವಾಡಿ, ಹೊರಗೆ ಬಂದು ಸ್ನೇಹಿತರು ಅಂತಾರೆ. ನಾನು 14 ನಿವೇಶನಗಳನ್ನು ಹಿಂದಿರುಗಿಸಲು ಸಿದ್ಧ ಎಂದು ಹೇಳುತ್ತಾರೆ. ಅದನ್ನು ಹಿಂದಕ್ಕೆ ಕೊಟ್ಟರೆ ಕಳ್ಳನನ್ನ ಬಿಡಲಾಗುತ್ತದೆಯೇ? ಕಾನೂನು ಶಿಕ್ಷೆ ಆಗಬೇಕಲ್ಲವೇ? ಈ ಹಿಂದೆ ಮೈಸೂರು ಎಂದರೆ ರಾಜಮಹಾರಾಜರ ಒಳ್ಳೆಯ ಆಡಳಿತಕ್ಕೆ ಚರ್ಚೆ ಆಗುತಿತ್ತು.
ದೇವೇಗೌಡರ ವಯಸ್ಸಿಗೆ ಮರ್ಯಾದೆ ಕೊಡುವುದು ಕಲಿಯಬೇಕು: ಡಿಕೆಶಿಗೆ ನಿಖಿಲ್ ಕುಮಾರಸ್ವಾಮಿ ಟಾಂಗ್
ಈಗ ಭ್ರಷ್ಟಾಚಾರದ ಬಗ್ಗೆ ಚರ್ಚೆ ಆಗುತ್ತಿದೆ. ಹಿಂದುಳಿದವನ ಟಾರ್ಗೆಟ್ ಎಂಬ ಛತ್ರಿ ಹಿಡಿದುಕೊಂಡು ಹೋಗಲು ಬಿಡಲ್ಲ. ಕಾಂಗ್ರೆಸ ಪಕ್ಷದಲ್ಲೇ ಭ್ರಷ್ಟಾಚಾರದ ಡಿಎನ್ಎ ಇದೆ ಎಂದು ಟೀಕಿಸಿದರು. ಕಾಂಗ್ರೆಸ್‌ಇತಿಹಾಸದಲ್ಲಿ ಒಬ್ಬರೇ ಒಬ್ಬರು ಹಿಂದುಳಿದವರನ್ನು ಪ್ರಧಾನಿ ಮಾಡಿಲ್ಲ. ಆದರೆ ಹಿಂದುಳಿದವರಾದ ಪ್ರಧಾನಿ ನರೇಂದ್ರ ಮೋದಿ ಅವರು 10 ವರ್ಷ ಪೂರೈಸಿ, 11ನೇ ವರ್ಷದಲ್ಲಿ ಮುನ್ನಡೆಯುತ್ತಿದ್ದಾರೆ. ನಾವು ತಮ್ಮ ವಿರುದ್ಧ ರಾಜಕೀಯವಾಗಿ ಮತ್ತು ಕಾನೂನಾತ್ಮಕವಾಗಿಯೂ ಹೋರಾಟ ಮಾಡುತ್ತೇವೆ ಎಂದರು.